Connect with us

    LATEST NEWS

    ಉಡುಪಿ: ಅಂಪಾರು ಮನೆಯಲ್ಲಿ ಕಳವು; ಆರೋಪಿ ಬಾಲಕನ ಬಂಧನ

    Published

    on

    ಉಡುಪಿ: ಅಂಪಾರಿನ ಮನೆಯೊಂದರಲ್ಲಿ ಕೆಲವು ದಿನಗಳ ಹಿಂದೆ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಬಾಲಕನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

    ಅಂಪಾರು ಗ್ರಾಮದ ಅಕ್ಕಯ್ಯ ಎಂಬವರು ತನ್ನ ಮಗಳೊಂದಿಗೆ ದಸರಾ ರಜೆ ಪ್ರಯುಕ್ತ ತಾಯಿ ಮನೆಗೆ ತೆರಳಿದ್ದರು. ವಾಪಾಸ್ಸು ಅಂಪಾರು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿತ್ತು.

    ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತನಿಂದ ಎರಡು ಮೊಬೈಲ್ ಪೋನ್ ಗಳು, 2,500ರೂ. ನಗದು, ಕಿವಿ ಓಲೆಗಳು, ಉಂಗುರಗಳು, ಬೆಳ್ಳಿಯ ಸರಗಳು, 5 ಕಾಲುಂಗುರಗಳು ಸೇರಿ ಒಟ್ಟು 87ಸಾವಿರದ 890ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ. ಕಾನೂನು ಸಂಘ ರ್ಷಕ್ಕೆ ಒಳಗಾದ ಬಾಲಕನನ್ನು ಉಡುಪಿ ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದೆ.

    LATEST NEWS

    ಜೋತುಬಿದ್ದ ವಿದ್ಯುತ್ ತಂತಿ ತಗುಲಿ ಸವಾರರು ಮೃ*ತ್ಯು ..!

    Published

    on

    ಮಂಗಳೂರು/ಚಾಮರಾಜನಗರ: ಮಳೆಯಿಂದ ಜೋತು ಬಿದ್ದ ವಿದ್ಯುತ್ ತಂತಿ ಕರೆಂಟ್ ಹೊಡೆದು ಬೈಕ್ ಸವಾರರಿಬ್ಬರು ದಾ*ರಣ ಅಂ*ತ್ಯ ಕಂಡ ಘಟನೆ ಚಾಮರಾಜನಗರ ದಲ್ಲಿ ನಡೆದಿದೆ.

     

    ಚಾಮರಾಜನಗರದ ಅಯ್ಯನಪುರ ಗ್ರಾಮದ ನಿವಾಸಿಗಳಾದ ನಾಗೇಂದ್ರ (48) ಮತ್ತು ಮಲ್ಲೇಶ್ (40) ಮೃ*ತ ದು*ರ್ದೈವಿಗಳು.

    ಬುಧವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಅಯ್ಯನಪುರ-ಹಿತ್ತಲಗುಡ್ಡೆ ರಸ್ತೆಯಲ್ಲಿ ತೆರಳುತ್ತಿದ್ದಾಗ, ಭಾರಿ ಮಳೆಯ ಕಾರಣ ವಿದ್ಯುತ್ ಕಂಬದ ಕೆಳಭಾಗದಲ್ಲಿ ಜೋತುಕೊಂಡಿದ್ದ ತಂತಿ ತಗುಲಿ ಇಬ್ಬರು ಸ್ಥಳದಲ್ಲೆ ಮೃ*ತಪಟ್ಟಿರುತ್ತಾರೆ.

    ಸ್ಥಳಕ್ಕೆ ಪೂರ್ವ ಪೊಲೀಸ್‌ ಠಾಣೆ ಪೊಲೀಸರು ಭೇಟಿ ನೀಡಿದ್ದು , ಪ್ರಕರಣ ದಾಖಲು ಮಾಡಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ಚೆಸ್ಕಾಂ ನ್ನು ಮೃ*ತರ ಸಂಬಂಧಿಕರು ಆಗ್ರಹಿಸಿದ್ದಾರೆ.

    Continue Reading

    LATEST NEWS

    ದೀಪಾವಳಿಯಂದು ಈ ಜೀವಿಗಳನ್ನು ನೋಡಿದ್ರೆ ನಿಮ್ಮ ಲಕ್ ಚೇಂಜ್!

    Published

    on

    2024 ರ, ದೀಪಾವಳಿ ಹಬ್ಬವು ಅಕ್ಟೋಬರ್ 31 ರಂದು ಬಂದಿದೆ. ಈ ದಿನದಂದು ಕಾಣಿಸಿಕೊಳ್ಳುವ ಅನೇಕ ವಿಷಯಗಳು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಕೆಲವು ಜೀವಿಗಳನ್ನು ನೋಡುವುದರಿಂದ ಮುಂದಿನ ದಿನಗಳಲ್ಲಿ ನಿಮಗೆ ಹಣದ ಕೊರತೆಯಾಗುವುದಿಲ್ಲ ಎಂಬ ನಂಬಿಕೆಯಿದೆ.

    ದೀಪಾವಳಿಯ ರಾತ್ರಿ ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಕೆಲವು ಜೀವಿಗಳು ಕಾಣಿಸಿಕೊಂಡರೆ, ಅದು ಲಕ್ಷ್ಮಿ ಆಗಮನದ ಸೂಚನೆಯಂದು ಪರಿಗಣಿಸಲಾಗುತ್ತದೆ. ಲಕ್ಷೀದೇವಿ ಸಂಪನ್ನಗೊಂಡು ನಿಮ್ಮನ್ನು ಆರ್ಥಿಕ ಸಮಸ್ಯೆಯಿಂದ ಮುಕ್ತಿ ನೀಡಿ ಸಂತೋಷ ನೀಡುತ್ತಾಳೆ ಎಂದು ಶಕುನ ಶಾಸ್ತ್ರ ಹೇಳುತ್ತೆ.

    ದೀಪಾವಳಿಯ ದಿನದಂದು ನೀವು ಮನೆಯಲ್ಲಿ ಹಲ್ಲಿಯನ್ನು ನೋಡಿದರೆ, ಶುಭ ಶಕುನ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಹಲ್ಲಿಯನ್ನು ಓಡಿಸಬೇಡಿ. ದೀಪಾವಳಿ ಹಬ್ಬದಂದು ಹಲ್ಲಿಯನ್ನು ನೋಡುವುದು ಮುಂದಿನ ದಿನಗಳಲ್ಲಿ ನಿಮಗೆ ಹಣದ ಕೊರತೆಯಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ.

    ದೀಪಾವಳಿಯ ರಾತ್ರಿ ನೀವು ಗೂಬೆಯನ್ನು ನೋಡಿದರೆ, ಅದನ್ನು ತುಂಬಾ ಮಂಗಳಕರ ಎಂಬ ನಂಬಿಕೆಯಿದೆ. ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನ ಎಂದೂ ಪರಿಗಣಿಸಲಾಗುತ್ತದೆ. ದೀಪಾವಳಿಯ ರಾತ್ರಿ ಗೂಬೆಯನ್ನು ಕಂಡರೆ ನಿಮ್ಮ ಮನೆಗೆ ಲಕ್ಷ್ಮಿ ದೇವಿ ಬರಲಿದ್ದಾಳೆ ಎಂದರ್ಥ.

     

     

    ಧರ್ಮಗ್ರಂಥಗಳ ಪ್ರಕಾರ ದೀಪಾವಳಿಯಂದು ನಿಮ್ಮ ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಹೆಗ್ಗಣ ಕಂಡರೆ ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ನೀವು ತುಂಬಾ ಅದೃಷ್ಟವಂತರು ಮತ್ತು ಹಣಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳಲಿವೆ ಎಂಬ ನಂಬಿಕೆಯಿದೆ.

     

    ಇದಲ್ಲದೇ ದೀಪಾವಳಿಯಂದು ಕೇಸರಿ ಬಣ್ಣದ ಹಸು, ಬೆಕ್ಕನ್ನು ನೋಡುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಲಕ್ಷ್ಮಿ ದೇವಿಯ ಆಗಮನದ ಸೂಚಕವೆಂದು ಪರಿಗಣಿಸಲಾಗಿದೆ.

    Continue Reading

    FILM

    ಸಲ್ಮಾನ್ ಖಾನ್ ಗೆ ಜೀ*ವ ಬೆ*ದರಿಕೆ; ತರಕಾರಿ ಮಾರುವ ಯುವಕನ ಬಂಧನ

    Published

    on

    ಮಂಗಳೂರು/ ಮುಂಬೈ : ಸಲ್ಮಾನ್ ಖಾನ್ ಗೆ ಜೀ*ವ ಬೆದರಿ*ಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ.

    ಜಾರ್ಖಂಡ್ ನ ಜೆಮ್ ಶೆಡ್ ಪುರ ಮೂಲದ ತರಕಾರಿ ಮಾರಾಟಗಾರ ಶೇಖ್ ಹುಸೇನ್ ಮೌಸೀನ್(24) ಬಂಧಿತ ಆರೋಪಿ.  ನಗರ ಸಂಚಾರ ನಿಯಂತ್ರಣ ಕೊಠಡಿಯ ವಾಟ್ಸ್ ಆ್ಯಪ್ ಸಹಾಯವಾಣಿಗೆ ಕಳೆದ ವಾರ 5 ಕೋಟಿ ಬೇಡಿಕೆಯ ಬೆದರಿಕೆ ಸಂದೇಶ ಬಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅನೇಕ ತಂಡ ರಚಿಸಿ ವಿವಿಧ ರಾಜ್ಯಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಿದ್ದರು.

    ಅಲ್ಲದೆ, ಸಂಚಾರ ಪೊಲೀಸರ ವಾಟ್ಸ್ ಆ್ಯಪ್ ಸಹಾಯವಾಣಿಗೆ ಸೋಮವಾರ ಕ್ಷಮೆಯಾಚನೆಯ ಸಂದೇಶ ಬಂದಿದೆ. ಬೆದರಿಕೆ ಸಂದೇಶ ಕಳುಹಿಸಿದ್ದ ಮೊಬೈಲ್ ಫೋನ್ ಸಂಖ್ಯೆಯಿಂದಲೇ ಕ್ಷಮೆಯಾಚನೆಯ ಸಂದೇಶ ಬಂದಿದೆ ಎಂದು ಪೊಲೀಸರು ತಿಳಿಸಿದ್ದರು.

    ಸಲ್ಮಾನ್ ಖಾನ್ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದ ತಂಡದ ಶಾರ್ಪ್ ಶೂಟರ್ ಒಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದರು.  ಹರಿಯಾಣದ ಸುಖ್ಬೀರ್ ಸಿಂಗ್  ಎಂಬಾತನನ್ನು ಬಂಧಿಸಲಾಗಿತ್ತು.

    ಇದನ್ನೂ ಓದಿ :ಕಲರ್ಸ್​ ಶೋಗೆ ಮರಳಿದ ಲಾಯರ್ ಜಗದೀಶ್; ಫ್ಯಾನ್ಸ್​ಗೆ ಗುಡ್ ನ್ಯೂಸ್

    ಸಲ್ಮಾನ್ ಖಾನ್ ಖಾನ್ ಗೆ ಈ ಹಿಂದೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಿಂದ ಬೆದರಿಕೆ ಕರೆಗಳು ಬಂದಿದ್ದು, ಸದ್ಯ ಸಲ್ಮಾನ್ ಖಾನ್ ಗೆ ಭದ್ರತೆ ಒದಗಿಸಲಾಗಿದೆ. ಅಲ್ಲದೇ, ಸಲ್ಮಾನ್ ಖಾನ್ ಹೊಸ ಬುಲೆಟ್ ಪ್ರೂಫ್ ಕಾರನ್ನೂ ಖರೀದಿಸಿದ್ದಾರೆ.

    Continue Reading

    LATEST NEWS

    Trending