Connect with us

    LATEST NEWS

    ಉಡುಪಿ: ಲೈಂಗಿಕ ದೌರ್ಜನ್ಯ-10 ವರ್ಷ ಕಠಿಣ ಸಜೆ ವಿಧಿಸಿದ ಕೋರ್ಟ್‌

    Published

    on

    ಉಡುಪಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೊಕ್ಸೋ ತ್ವರಿತ ವಿಶೇಷ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನಿನ್ನೆ ತೀರ್ಪು ನೀಡಿದೆ.


    ವೆಂಕಟೇಶ್ (30) ಶಿಕ್ಷೆಗೆ ಗುರಿಯಾಗಿರುವ ಆರೋಪಿ. 2018ರಲ್ಲಿ ತನ್ನ ಮನೆಗೆ ಆಟ ಆಡಲು ಬಂದ ನೆರೆಮನೆಯ ಸಂತ್ರಸ್ತ ಬಾಲಕಿ ಮೇಲೆ ವೆಂಕಟೇಶ್ ಲೈಂಗಿಕ ದೌರ್ಜನ್ಯ ಎಸಗಿದ್ದನೆನ್ನಲಾಗಿದೆ.

    ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

    ಅಂದಿನ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
    ನ್ಯಾಯಾಲಯ ಒಟ್ಟು 19 ಮಂದಿ ಸಾಕ್ಷಿಗಳ ಪೈಕಿ 12 ಮಂದಿಯ ವಿಚಾರಣೆ ನಡೆಸಿದ್ದು, ವೈದ್ಯಕೀಯ ದಾಖಲೆಗಳು, ನೊಂದ ಬಾಲಕಿ ಹಾಗೂ ಇತರ ಸಾಕ್ಷಿಗಳು ಹೇಳಿದ ಸಾಕ್ಷ್ಯಾಧಾರಗಳು ಅಭಿಯೋಜನೆ ಪರವಾಗಿದ್ದವು.

    ಅದರಂತೆ ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯ ಪಟ್ಟ ನ್ಯಾಯಾಧೀಶ ಎರ್ಮಾಳ್ ಕಲ್ಪನಾ, ಆರೋಪಿಗೆ ಪೊಕ್ಸೋ ಕಾಯ್ದೆಯಡಿ 10 ವರ್ಷ ಕಠಿಣ ಸಜೆ 20 ಸಾವಿರ ರೂ. ದಂಡ (ಈ ಮೊತ್ತದಲ್ಲಿ 15 ಸಾವಿರ ರೂ. ಸಂತ್ರಸ್ತೆಗೆ, 5 ಸಾವಿರ ಸರಕಾರಕ್ಕೆ) ಮತ್ತು ಸಂತ್ರಸ್ತೆಗೆ 75 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ನೀಡಿದರು.
    ಉಡುಪಿಯ ಪೊಕ್ಸ್ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಶಬರಿಮಲೆಯ 18 ಮೆಟ್ಟಿಲುಗಳ ಮೇಲೆ ನಿಂತು ಫೋಟೋಶೂಟ್ ಮಾಡಿಸಿದ ಪೊಲೀಸರಿಗೆ ಬಿಗ್‌ಶಾಕ್

    Published

    on

    Sabarimala Temple: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯ 18 ಮೆಟ್ಟಿಲುಗಳ ಮೇಲೆ ನಿಂತು ಪೊಲೀಸರು ಫೋಟೋಶೂಟ್ ಮಾಡಿಸಿರುವುದು ಇದೀಗ ತೀವ್ರ ವಿವಾದಕ್ಕೀಡಾಗಿದೆ. ಈ ಘಟನೆ ಕುರಿತು ಕೇರಳದ ಎಡಿಜಿಪಿ, ದೇವಸ್ಥಾನದ ವಿಶೇಷ ಅಧಿಕಾರಿ ಬಳಿ ವರದಿ ಕೇಳಿದ್ದಾರೆ.

    ದೇವಸ್ಥಾನದಲ್ಲಿ ತಮ್ಮ ಕರ್ತವ್ಯದ ನಂತರ ಮೊದಲ ಬ್ಯಾಚ್‌ನ ಪೊಲೀಸರು 18 ಮೆಟ್ಟಿಲುಗಳ ಮೇಲೆ ನಿಂತು ಕ್ಯಾಮೆರಾಗೆ ಪೋಸ್ ನೀಡಿದರು. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಕ್ತರಿಂದ ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ ವಿವಾದ ಭುಗಿಲೆದ್ದಿದೆ. ಸರ್ಕಾರಕ್ಕೆ ಭಕ್ತರ ಬಿಸಿ ತಟ್ಟುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ದೇವಸ್ಥಾನದ ಆಡಳಿತ ಮಂಡಳಿಯ ಬಳಿ ವರದಿ ಕೇಳಿದೆ.

    ಪೊಲೀಸರ ಫೋಟೋಶೂಟ್ ವಿರುದ್ಧ ವಿಶ್ವ ಹಿಂದು ಪರಿಷತ್ ಹರಿಹಾಯ್ದಿದೆ. ಹದಿನೆಂಟು ಮೆಟ್ಟಿಲನ್ನು ಅಯ್ಯಪ್ಪ ಭಕ್ತರು ಆಶೀರ್ವಾದ ಎಂದು ಪರಿಗಣಿಸುತ್ತಾರೆ. ಒಂದೊಂದು ಮೆಟ್ಟಿಲಿಗೂ ಒಂದೊಂದು ಅರ್ಥವಿದೆ. 18 ಮೆಟ್ಟಿಲನ್ನು ಇಳಿಯುವಾಗಲೂ ಭಕ್ತರು ದೇವರಿಗೆ ಬೆನ್ನು ತೋರುವುದಿಲ್ಲ. ಪತಿತಂಪಾಡಿ ವಿಧಿವಿಧಾನದಲ್ಲಿರುವಾಗಲೂ ಅಯ್ಯಪ್ಪನಿಗೆ ಬೆನ್ನು ತೋರಿಸಿ ಅಯ್ಯಪ್ಪ ಭಕ್ತರು ಫೋಟೋಶೂಟ್ ಮಾಡುವಂತಿಲ್ಲ. ಹೀಗಿರುವಾಗ ಪೊಲೀಸರು ಈ ರೀತಿ ಮಾಡಬಹುದೇ ಎಂದು ವಿಶ್ವ ಹಿಂದು ಪರಿಷತ್ ಕೇರಳ ಘಟಕ ಸ್ಪಷ್ಟಪಡಿಸಿದೆ.

    ವಿಶ್ವ ಹಿಂದು ಪರಿಷತ್‌ ರಾಜ್ಯಾಧ್ಯಕ್ಷ ವಿ.ಜಿ.ತಂಪಿ, ಪ್ರಧಾನ ಕಾರ್ಯದರ್ಶಿ ವಿ.ಆರ್.ರಾಜಶೇಖರನ್‌ ಮಾತನಾಡಿ, ಪೊಲೀಸ್ ಅಧಿಕಾರಿಗಳಿಗೆ ಬೆಂಬಲ ನೀಡಿದ ಮುಖ್ಯಮಂತ್ರಿಗಳ ಮೊದಲ ಆರೋಪಿಯಾಗಿದ್ದಾರೆ ಎಂದು ಕಿಡಿಕಾರಿದರು. ಈ ಘಟನೆ ಕುರಿತು ವರದಿ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಕೇರಳದ ಎಡಿಜಿಪಿ ಸೂಚನೆ ನೀಡಿದ್ದಾರೆ.

    Continue Reading

    FILM

    ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ಹೀರೋ ಇವರೇ !

    Published

    on

    ಮಂಗಳೂರು : ಫೋರ್ಬ್ಸ್ ಇಂಡಿಯಾ ವರದಿಯ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ಹೀರೋ ಯಾರು ಎಂಬುದು ಬಹಿರಂಗಗೊಂಡಿದೆ.


    ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್ ಇದ್ದಾರೆ. ತಮಿಳಿನಲ್ಲಿ ದಳಪತಿ ವಿಜಯ್, ರಜನಿಕಾಂತ್ ಇದ್ದಾರೆ. ಇವರ ಕಾಲ್ ಶೀಟ್ ಪಡೆಯಬೇಕು ಎಂದರೆ 100 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಕೊಟ್ಟು ಕಾಲ್ ಶೀಟ್ ಪಡೆಯಬೇಕು. ಈಗ ಫೋರ್ಬ್ಸ್ ಇಂಡಿಯಾ ವರದಿಯ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋಗಳ ಪಟ್ಟಿ ಬಿಡುಗಡೆಗೊಳಿಸಿದೆ.

    ಇದನ್ನೂ ಓದಿ: ಮಂಗಳೂರು : ಮತ್ತೆ ಡ್ರಗ್ ಸೀಜ್; ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರ ಬಂಧನ
    ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋ ಎಂದು ಅಲ್ಲು ಅರ್ಜುನ್ ಅವರನ್ನು ಗುರುತಿಸಿದೆ. ಇನ್ನೂ ತಮಿಳಿನ ವಿಜಯ್ ತಮ್ಮ ಕೊನೆಯ ಚಿತ್ರಕ್ಕಾಗಿ 250 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಶಾರುಖ್ ಖಾನ್ ಪ್ರತಿ ಚಿತ್ರಕ್ಕೆ 150ರಿಂದ 250 ಕೋಟಿ ರೂಪಾಯಿ ಪಡೆಯುತ್ತಾರೆ. ಈ ಪಟ್ಟಿಯಲ್ಲಿ ಶಾರುಖ್ ಮೂರನೇ ಸ್ಥಾನ ಪಡೆದಿದ್ದಾರೆ.

    ಸೂಪರ್ ಸ್ಟಾರ್ ರಜನಿಕಾಂತ್ 125ರಿಂದ 200 ಕೋಟಿ ರೂಪಾಯಿ ಪಡೆದರೆ, ಆಮೀರ್ ಖಾನ್ ಪ್ರತಿ ಸಿನಿಮಾಕ್ಕೆ 100ರಿಂದ 200 ಕೋಟಿ ಪಡೆಯುತ್ತಾರೆ. ಈಗಾಗೀ ಇಬ್ಬರು ಅನುಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ. ಆರನೇ ಸ್ಥಾನದಲ್ಲಿರುವ ಪ್ರಭಾಸ್ ಅವರು 100 ಕೋಟಿ ಸಂಭಾವನೆ ಪಡೆಯುತ್ತಾರೆ. ಆ ಬಳಿಕ ಅಜಿತ್ ಕುಮಾರ್, ಸಲ್ಮಾನ್ ಖಾನ್, ಕಮಲ್ ಹಾಸನ್ ಹಾಗೂ ಅಕ್ಷಯ್ ಕುಮಾರ್ ಇದ್ದಾರೆ. ಟಾಪ್ 10ರ ಪೈಕಿ ಆರು ಹೀರೋಗಳು ಇದ್ದಾರೆ.

    ಅಲ್ಲು ಅರ್ಜುನ್ ಸಂಭಾವನೆ ವಿಚಾರದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ದಳಪತಿ ವಿಜಯ್, ರಜನಿಕಾಂತ್, ಪ್ರಭಾಸ್ ಎಲ್ಲರನ್ನು ಮೀರಿಸಿದ್ದಾರೆ. ಈಗ ಫೋರ್ಬ್ಸ್ ಇಂಡಿಯಾ ವರದಿ ಮಾಡಿರುವ ಪ್ರಕಾರ ಅಲ್ಲು ಅರ್ಜುನ್ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋ ಆಗಿದ್ದಾರೆ. ಅವರು ಪ್ರತಿ ಚಿತ್ರಕ್ಕೆ 300 ಕೋಟಿ ರೂಪಾಯಿ ಪಡೆಯುತ್ತಾರೆ.

    Continue Reading

    LATEST NEWS

    ಅಪಹರಣವಾದ 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ನವಜಾತ ಶಿಶು

    Published

    on

    ಕಲಬುರಗಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನರ್ಸ್‌ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರು, ನವಜಾತ ಗಂಡು ಶಿಶುವನ್ನು ಅಪಹರಿಸಿದ 36 ಗಂಟೆಗಳಲ್ಲಿ ಮಗು ಮತ್ತೆ ತಾಯಿಯ ಮಡಿಲು ಸೇರಿದೆ. ಜೊತೆಗೆ ಮಗುವನ್ನು ಕಳ್ಳತನ ಮಾಡಿ 50,000ಕ್ಕೆ ಮಾರಾಟ ಮಾಡಿದ್ದ ಮೂವರು ಕಳ್ಳಿಯರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.

    ಕಲಬುರಗಿಯ ಎಂಎಸ್‌ಕೆಮಿಲ್ ಬಡಾವಣೆಯಲ್ಲಿ ಉಮೇರಾ, ನಸರೀನ್ ಹಾಗೂ ಫಾತಿಮಾ ಬಂಧಿತರು. ಬಂಧಿತರು ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಯ ಮಗುವನ್ನು ಅಪಹರಿಸಿದ್ದರು.

    ಮೂವರು ಕಳ್ಳಿಯರ ತಂಡ ನವಜಾತ ಶಿಶುವನ್ನು ಮಾರಾಟ ಮಾಡಲೆಂದು ಅಪಹರಿಸಿತ್ತು. ಬಳಿಕ ಮಗುವನ್ನು ಖೈರುನ್‌ ಎಂಬ ಮಹಿಳೆಗೆ 50 ಸಾವಿರ ರೂ.ಗೆ ಮಾರಾಟ ಕೂಡ ಮಾಡಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ಕೂಡಲೇ, ಮಗುವನ್ನು ರಕ್ಷಿಸಿ, ಕಳ್ಳಿಯರನ್ನ ಬಂಧಿಸಿದ್ದಾರೆ. ಇನ್ನು ಮಗು ಖರೀದಿಸಿದ ಆರೋಪಿ ಖೈರುನ್ ಪರಾರಿಯಾಗಿದ್ದಾಳೆ. ಆಕೆಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending