Connect with us

    LATEST NEWS

    Udupi: ಪ್ರಶ್ನೆ ಪತ್ರಿಕೆ ತಿರುಚಿ ವೈರಲ್ – ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ

    Published

    on

    ಎಸ್ಎಂಎಸ್ ಶಿಕ್ಷಣ ಸಂಸ್ಥೆಯ ಪ್ರಶ್ನೆ ಪತ್ರಿಕೆಯನ್ನು ಕಿಡಿಗೇಡಿಗಳು ವೈರಲ್‌ ಮಾಡುವ ಮೂಲಕ ಶಾಲೆಯಲ್ಲಿ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ ಎಂದು ಅಪವಾದವನ್ನು ಹುಟ್ಟುಹಾಕಿದ್ದಾರೆ.

    ಉಡುಪಿ: ಎಸ್ಎಂಎಸ್ ಶಿಕ್ಷಣ ಸಂಸ್ಥೆಯ ಪ್ರಶ್ನೆ ಪತ್ರಿಕೆಯನ್ನು ಕಿಡಿಗೇಡಿಗಳು ವೈರಲ್‌ ಮಾಡುವ ಮೂಲಕ ಶಾಲೆಯಲ್ಲಿ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ ಎಂದು ಅಪವಾದವನ್ನು ಹುಟ್ಟುಹಾಕಿದ್ದಾರೆ.

    ಎಸ್ಎಂಎಸ್ ಬ್ರಹ್ಮಾವರ ಶಿಕ್ಷಣ ಸಂಸ್ಥೆಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅಕ್ರೋಶ ವ್ಯಕ್ತವಾಗಿದೆ.

    ಮೊದಲ ಕಿರುಪರೀಕ್ಷೆಯ ಸಮಾಜಶಾಸ್ತ್ರ ಪ್ರಶ್ನೆ ಪತ್ರಿಕೆಯನ್ನು ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ.

    ಇಲ್ಲಿ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿ ಬಗೆಗೆ ಮಾತ್ರ ಕೇಳಲಾಗಿರುವ ಪ್ರಶ್ನೆಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.

    ಸಂಸ್ಥೆಯ ಆಡಳಿತ ಮಂಡಳಿಯ‌ ಕೋಮಿಗೂ ಪ್ರಶ್ನೆ ಪತ್ರಿಕೆಗೂ ಸಂಬಂಧ ಕಲ್ಪಿಸಿ ವೈರಲ್ ಮಾಡಲಾಗಿದೆ.

    ಇಲ್ಲಿ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ ಎಂದು ಇದೀಗ ಸಾರ್ವಜನಿಕರು ಟೀಕಿಸತೊಡಗಿದ್ದಾರೆ. ಸಾಮಾಜಿಕ ಜಾಲತಾಣಗಳ ವೈರಲ್ ಕಂಟೆಂಟ್ ಗೆ ಎಸ್ಎಂಎಸ್ ಶಿಕ್ಷಣ ಮಂಡಳಿ ಸ್ಪಷ್ಡನೆ ನೀಡಿದ್ದು, ಸತ್ಯಾಂಶಗಳನ್ನು ತಿರುಚಿದ ಸಂದೇಶಗಳ ಬಗ್ಗೆ ಖಂಡನೆ ವ್ಯಕ್ತಪಡಿಸಿದೆ.

    ಮಾಸಾಂತ್ಯದಲ್ಲಿ ನಡೆದ ಮೊದಲ ಕಿರುಪರೀಕ್ಷೆಯ ಪ್ರಶ್ನೆ ಪತ್ರಿಕೆ ಇದಾಗಿದ್ದು, ಮೊದಲ ಕಿರುಪರೀಕ್ಷೆಗೆ ಸಮಾಜಶಾಸ್ತ್ರದ ಎರಡು ಪಾಠಗಳನ್ನು ಆಧರಿಸಿ ಪ್ರಶ್ನೆ ಕೇಳಲಾಗಿತ್ತು.

    ಮೊದಲ ಪಾಠ ಮೇಜರ್ ಡೆವಲಪ್ಮೆಂಟ್ಸ್ ಇನ್ ದ ವರ್ಲ್ಡ್ ಹಾಗೂ ಎರಡನೇ ಪಾಠ ಬಿಗಿನಿಂಗ್ ಆಫ್ ಮಾರ್ಡನ್ ಏಜ್. ಇದರಲ್ಲಿ ಕ್ರಿಶ್ಚಿಯಾನಟಿ, ಇಸ್ಲಾಂ, ಕ್ರೊಸೆಡ್, ದ ಮಂಗೋಲ್ಸ್, ಟರ್ಕಿಸ್ ಕಲಿಸಬೇಕಾದ ಪಾಠಗಳು ಇದದು, ಈ ಪಠ್ಯಾಂಶವನ್ನೇ ಆಕರವಾಗಿಟ್ಟುಕೊಂಡು ರಚಿತಗೊಂಡಿದ್ದ ಪ್ರಶ್ನೆ ಪತ್ರಿಕೆ ನೀಡಲಾಗಿದೆ.

    ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ. ಪಠ್ಯಾಂಶಗಳ ಕುರಿತೆ ಪ್ರಶ್ನೆ ಪತ್ರಿಕೆ ರಚಿಸಿದ್ದೇವೆ. ನಮ್ಮಲ್ಲಿ ಯಾವುದೇ ಧರ್ಮ ಶಿಕ್ಷಣ ನೀಡುತ್ತಿಲ್ಲ.

    ಮುಂದಿನ ಪಠ್ಯಗಳಲ್ಲಿ ಹಿಂದೂ ಧರ್ಮ, ದಾಸ ಪರಂಪರೆ ಇತ್ಯಾದಿ ಪಠ್ಯಗಳು ಬರಲಿವೆ.

    ಆಡಳಿತ ಮಂಡಳಿಯ ಕೋಮಿಗೂ ಪ್ರಶ್ನೆ ಪತ್ರಿಕೆಗೂ ಯಾವುದೇ ಸಂಬಂಧವಿಲ್ಲ.

    ಆದರೆ ನಮ್ಮ ಸಂಸ್ಥೆಯ ತೇಜೋವದೆ ಮಾಡಿ ಪೋಷಕರಲ್ಲಿ ಆತಂಕ ಮೂಡಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.

    DAKSHINA KANNADA

    ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಗೆ ಗೌರವ ಡಾಕ್ಟರೇಟ್ ಪ್ರದಾನ

    Published

    on

    ಮಂಗಳೂರು : ಕರಾವಳಿ ಮೂಲದ ಕನ್ನಡ ಚಲನ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.

    ಬೆಂಗಳೂರು ವಿವಿಯು ಈ ಗೌರವ ಡಾಕ್ಟರೇಟ್ ನೀಡಿ ಗುರುಕಿರಣ್ ಅವರನ್ನು ನೀಡಿ ಗೌರವಿಸಿದೆ. ಸೆಪ್ಟಂಬರ್ 10 ರಂದು ನಡೆದಿದ್ದ ವಿವಿ ಘಟಿಕೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

    ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬೆಂಗಳೂರು ವಿವಿಯ ಈ ಪ್ರಶಸ್ತಿಯಿಂದ  ಗುರು ಕಿರಣ್ ಇನ್ನು ಮುಂದೆ ಡಾಕ್ಟರ್ ಗುರುಕಿರಣ್ ಆಗಲಿದ್ದಾರೆ.

    Continue Reading

    LATEST NEWS

    ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ

    Published

    on

    ಮಂಗಳೂರು/ಉತ್ತರ ಪ್ರದೇಶ : ಇತ್ತೀಚೆಗೆ ಅಪಹರಣ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಆಕ್ರೋಶ ಕೇಳಿ ಬರುತ್ತಿದೆ. ಆದರೂ ಅತ್ಯಾಚಾ*ರ ಪ್ರಕರಣಗಳು ನಿಂತಿಲ್ಲ. ಇದೀಗ ಉತ್ತರ ಪ್ರದೇಶದಲ್ಲಿ ಅಂತಹುದ್ದೇ ಮತ್ತೊಂದು ಪ್ರಕರಣ ದಾಖಲಾಗಿದೆ.

    8 ಮಂದಿ ಯುವಕರು ನೃತ್ಯ ಮಾಡಲು ನಿರಾಕರಿಸಿದ ಯುವತಿಯರ ಮೇಲೆ ಅತ್ಯಾಚಾ*ರ ಎಸಗಿರುವ ಅಮಾನವೀಯ ಘಟನೆ ನಡೆದಿದೆ.

    ಅಪಹರಿಸಿ ಕೃ*ತ್ಯ :

    ಆರ್ಕೆಸ್ಟ್ರಾ ನಡೆಯುತ್ತಿದ್ದ ಸಂದರ್ಭದಲ್ಲಿಆರೋಪಿಗಳು ನೃತ್ಯಗಾರ್ತಿಯರ ಹಣೆಗೆ ಬಂದೂಕಿಟ್ಟು ಅಪಹರಿಸಿ 10 ಕಿ.ಮೀ ದೂರಕ್ಕೆ ಕರೆದೊಯ್ದಿದ್ದಾರೆ. 2 ಜನ ನೃತ್ಯಗಾರ್ತಿಯರು ಬರ್ತ್ ಡೇ ಪಾರ್ಟಿಯಲ್ಲಿ ನೃತ್ಯ ಮಾಡಲು ನಿರಾಕರಿಸಿದ್ದಕ್ಕೆ ಸಾಮೂಹಿಕ ಅತ್ಯಾಚಾ*ರ ಎಸಗಿದ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ.

    ಆರೋಪಿಗಳಲ್ಲಿ ಒಬ್ಬನ ಮನೆಗೆ ಕರೆದೊಯ್ದು ಯುವತಿಯರ ಬಳಿ ನೃತ್ಯ ಮಾಡುವಂತೆ ಒತ್ತಾಯಿಸಿದಾಗ ಅವರ ನಿರಾಕರಣೆಯ ಸಹಿಸದೆ ಕುಡಿದ ಮತ್ತಿನಲ್ಲಿ ಅತ್ಯಾಚಾ*ರವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.. ಅಪರಾಧಕ್ಕೆ ಬಳಸಿದ್ದ ಎರಡು ಎಸ್ ಯು ವಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.  ಎಲ್ಲಾ ಆರೋಪಿಗಳು 30 ವರ್ಷಕ್ಕಿಂತ ಕೆಳ ವಯಸ್ಸಿನವರಾಗಿದ್ದಾರೆ.  ಆರೋಪಿಗಳನ್ನು ವಶಕ್ಕೆ ಪಡೆದಿದ್ದು ,ಯುವತಿಯರ ವೈದ್ಯಕೀಯ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ.

    ಎನ್ ಕೌಂಟರ್ ನಡೆಸಿ ಅರೆಸ್ಟ್ :

    ಸಪ್ಟೆಂಬರ್ 8 ರಾತ್ರಿ ಘಟನೆ ಕುರಿತು ಪೋಲಿಸರಿಗೆ ದೂರು ಬಂದಿತ್ತು. ನಾಗೇಂದ್ರ ಯಾಧವ್, ಆಸನ್ ಸಂಗ್, ಖ್ರಿಶ್ ತಿವಾರಿ, ಅರ್ಥಕ್ ಸಿಂಗ್ ಮತ್ತು ವಿವೆಕ್ ಸೇಠ್ ಎಂದು ಗುರುತಿಸಲಾಗಿದೆ. ಇತರ ಇಬ್ಬರು ಆರೋಪಿಗಳಾದ ನಿಸಾರ್ ಅನ್ಸಾರಿ ಮತ್ತು ಆದಿತ್ಯ ಸಾಹ್ನಿ ಸೆಪ್ಟೆಂಬರ್ 10 ರಂದು ಪೋಲಿಸರು ನಡೆಸಿದ ಎನ್ಕೌಂಟರ್ನಲ್ಲಿ ಸಿಕ್ಕಿಬಿದ್ದರು. ಇಬ್ಬರ ಕಾಲಿಗೂ ಗುಂಡು ತಗುಲಿದ್ದು ಪ್ರಥಮ  ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ವಿಚಾರಣೆ ನಡೆಸಿದ ಬಳಿಕ ತಮ್ಮ ಎಲ್ಲಾ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    Continue Reading

    DAKSHINA KANNADA

    ಮಂಗಳೂರು : ತಾಯಿಯನ್ನು ರಕ್ಷಿಸಿದ ವಿದ್ಯಾರ್ಥಿನಿಗೆ ಜಿಲ್ಲಾಡಳಿತದಿಂದ ಸನ್ಮಾನ

    Published

    on

    ಮಂಗಳೂರು : ಆಟೋರಿಕ್ಷಾದಡಿಗೆ ಬಿದ್ದ ಅಮ್ಮನನ್ನು ರಕ್ಷಿಸಲು ಆಟೋರಿಕ್ಷಾವನ್ನೇ ಮೇಲಕ್ಕೆತ್ತಿ ಶೌರ್ಯ ಮೆರೆದ ಕಿನ್ನಿಗೋಳಿಯ ವೈಭವಿಗೆ ಇದೀಗ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಬಾಲಕಿಯ ಶೌರ್ಯವನ್ನು, ಸಕಾಲಿಕ ಪ್ರಜ್ಞೆಯನ್ನು ಕೊಂಡಾಡಿದ್ದರು.

    ಜೊತೆಗೆ ಜಿಲ್ಲಾಡಳಿತವೂ ಬಾಲಕಿಯ ಕಾರ್ಯ ಮೆಚ್ಚಿಕೊಂಡಿದೆ. ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳವಾರ(ಸೆ.10) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವೈಭವಿಯನ್ನು  ಸನ್ಮಾನಿಸಿದರು.  ಪೇಟ, ಹಾರ ತೊಡಿಸಿ ಸನ್ಮಾನಿಸಿದರಲ್ಲದೆ,  ಬಾಲಕಿಯ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿದರು.

    ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹೇಮಲತಾ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಮತ್ತು ವೈಭವಿಯ ಪಾಲಕರು ಉಪಸ್ಥಿತರಿದ್ದರು.

    ಪೊಲೀಸ್ ಕಮಿಷನರ್ ಸನ್ಮಾನ :

    ಬಾಲಕಿ ವೈಭವಿಯ ಕಾರ್ಯವನ್ನು ಮೆಚ್ಚಿರುವ ಕಮಿಷನರ್ ಅನುಪಮ್ ಅಗರ್‌ವಾಲ್ ಅವರೂ ಪ್ರಶಂಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ ಕಚೇರಿ ವತಿಯಿಂದ ಕಮಿಷನರ್ ಅನುಪಮ್ ಅಗರ್‌ವಾಲ್ ಅವರು ಬಾಲಕಿಯ ಸಮಯಪ್ರಜ್ಞೆಯನ್ನು ಕೊಂಡಾಡಿದರಲ್ಲದೇ, ಆಕೆಗೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದ್ದಾರೆ.

    ಇದನ್ನೂ ಓದಿ : ಪುತ್ತೂರು : ಖಾಸಗಿ ಆಸ್ಪತ್ರೆಯಲ್ಲಿ ಅ*ಗ್ನಿ ಅವಘ*ಡ

    ಏನಿದು ಘಟನೆ?

    ಸೆಪ್ಟೆಂಬರ್ 6ರಂದು ಸಂಜೆ ಕಿನ್ನಿಗೋಳಿ ರಾಮನಗರ ಎಂಬಲ್ಲಿ ಚೇತನಾ ಯಾನೆ ಶ್ವೇತಾ ಎಂಬವರು ರಸ್ತೆ ದಾಟುತ್ತಿದ್ದಾಗ ಆಟೋರಿಕ್ಷಾವೊಂದು ಡಿ*ಕ್ಕಿ ಹೊಡೆದಿತ್ತು. ಆಟೋರಿಕ್ಷಾ ಪಲ್ಟಿಯಾಗಿ ಚೇತನ ಅವರು ರಿಕ್ಷಾದಡಿಗೆ ಬಿದ್ದಾಗ ಅಲ್ಲೇ ಇದ್ದ 13 ವರ್ಷದ ಮಗಳು ವೈಭವಿ ಯಾರ ಸಹಾಯಕ್ಕೂ ಕಾಯದೇ, ತಕ್ಷಣ ಕಾರ್ಯಪ್ರವೃತ್ತಳಾಗಿ ಆಟೋವನ್ನು ಎತ್ತಿ ಅಮ್ಮನ ಪ್ರಾ*ಣ ಉಳಿಸಿದ್ದರು.

    Continue Reading

    LATEST NEWS

    Trending