Thursday, April 22, 2021

 ಕಾರಲ್ಲಿದ್ದ ಅಕ್ರಮ ಗೋ ಸಾಗಾಟಕ್ಕೆ ತಡೆ ಹಾಕಿ ಗೋವು ರಕ್ಷಣೆ ಮಾಡಿದ ಉಡುಪಿ ಪೊಲೀಸರು..!

 ಕಾರಲ್ಲಿದ್ದ ಅಕ್ರಮ ಗೋ ಸಾಗಾಟಕ್ಕೆ ತಡೆ ಹಾಕಿ ಗೋವು ರಕ್ಷಣೆ ಮಾಡಿದ ಉಡುಪಿ ಪೊಲೀಸರು..!

ಉಡುಪಿ :  ಉಡುಪಿ ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಟಕ್ಕೆ ತಡೆ ಹಾಕಿದ್ದು, ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ.

ಕಾರ್ಕಳದ ಪಳ್ಳಿ‌ಕಡೆಯಿಂದ ವೇಗವಾಗಿ ಬಂದ ಕಾರನ್ನು ನೋಡಿ ಅನುಮಾನದಿಂದ ಪೋಲಿಸರು ತಡೆಯಲು ಪ್ರಯತ್ನಿಸಿದರು.

ಆದ್ರೆ ಕಾರು ಚಾಲಕ ಕಾರು‌ ನಿಲ್ಲಿಸದೆ ವೇಗವಾಗಿ ಹೋದಾಗ ಕಾರನ್ನು ಹಿಂಬಾಲಿಸಿದ ಪೊಲೀಸರು ಕಟ್ಟಿಂಗೇರಿ ನಾಲ್ಕು ಬೀದಿ ಜಂಕ್ಷನ್‌ನಲ್ಲಿ ಕಾರನ್ನು ಅಡ್ಡ ಹಾಕಿದ್ರು. ಆದ್ರೆ ಕಾರಿನಲ್ಲಿದ್ದ ನಾಲ್ವರು ಜಾನುವಾರು ಕಳ್ಳರು ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಪರಾರಿಯಾಗಿದ್ದಾರೆ.

ಕಾರಿನಲ್ಲಿ ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿತ್ತು. ಜಾನುವಾರುಗಳ ಕಾಲು ಕಟ್ಟಿ ದುಷ್ಕರ್ಮಿಗಳು ಸಾಗಾಟ ಮಾಡುತ್ತಿದ್ದರು.

ಸಧ್ಯ ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಕಾರು ಉಮ್ಮರ್ ಮೊಯಿದ್ದೀನ್ ಎಂಬವನಿಗೆ ಸೇರಿದ್ದು, ಆರೋಪಿಗಳಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ. ಶಿರ್ವ ಪೋಲಿಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...