Connect with us

PUTTUR

ನೇತ್ರಾವತಿ ನದಿಯಲ್ಲಿ ಮುಳುಗುತ್ತಿದ್ದವನಿಗೆ ಮರುಜೀವ ನೀಡಿದ ಪುತ್ತೂರು ತಹಶೀಲ್ದಾರ್..!

Published

on

ನೇತ್ರಾವತಿ ನದಿಯಲ್ಲಿ ಮುಳುಗುತ್ತಿದ್ದವನಿಗೆ ಮರುಜೀವ ನೀಡಿದ ಪುತ್ತೂರು ತಹಶೀಲ್ದಾರ್..!

ಪುತ್ತೂರು : ಪುತ್ತೂರು ತಹಶೀಲ್ದಾರ್ ನೇತೃತ್ವದ ಪ್ರವಾಹ ರಕ್ಷಣಾ ತಂಡ ರಕ್ಷಣಾ ಕಾರ್ಯಚರಣೆ ನಡೆಸಿ ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಮುಳುಗುವ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕಾಪಾಡಿದ್ದಾರೆ.

ಇಂದು ಮದ್ಯಾಹ್ನ 11:30ರ ವೇಳೆ ಸದಾನಂದ ಶಟ್ಟಿ ಎಂಬ ವ್ಯಕ್ತಿ ಮೈಮೇಲೆ ವಸ್ತ್ರಧರಿಸದೆ ಬರ್ಬುಂಡ ಚಡ್ಡಿ ಧರಿಸಿ ದೇವಾಲಯದ ಸುತ್ತ ಮುತ್ತ ತಿರುಗಾಡುತ್ತಿದ್ದರು. ಬಳಿಕ ಸ್ಥಾನಘಟ್ಟದ ಬಳಿ ನೀರಿಗೆ ಇಳಿಯಲು ಮುಂದಾಗಿದ್ದರು.

ಈ ವೇಳೆಗೆ ಅಲ್ಲಿ ಕರ್ತವ್ಯದಲ್ಲಿದ್ದ ಪ್ರವಾಹರಕ್ಷಣಾ ಗೃಹರಕ್ಷಕರು ಹಾಗೂ ಈಜುಗಾರರು ಈ ವೇಳೆಗೆ ನೀರಿಗೆ ತೆರಳಬೇಡಿ ಅಪಾಯ ಇದೆ ಎಂದಿದ್ದರು.

ಆದ್ರೆ ಮಾತು ಧಿಕ್ಕರಿಸಿ ನದಿಗೆ ಇಳಿದ ಸದಾನಂದ ಶಟ್ಟಿ ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗುತ್ತಿದ್ದರು.

ಸ್ಥಳದಲ್ಲೇ ಇದ್ದ ಪುತ್ತೂರು ತಹಶೀಲ್ದಾರ್ ನೇತೃತ್ವದ ಗೃಹರಕ್ಷಕದಳದ ಪ್ರವಾಹರಕ್ಷಣಾ ತಂಡ ಹಾಗೂ ಈಜುಗಾರರು ದೋಣಿಯಲ್ಲಿ ಹುಟ್ಟು ಹಾಕುತ್ತಾ ನದಿ ಮದ್ಯಕ್ಕೆ ತೆರಳಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಧಾವಿಸಿದರು.

ನೀರಿನ ಸೆಳೆದ ಜಾಸ್ತಿ ಇದ್ದಿದ್ದರಿಂದ ವ್ಯಕ್ತಿಯನ್ನು ದೋಣಿಯಲ್ಲಿ ಕುಳ್ಳಿರಿಸಿ ಕಡವಿನ ಬಾಗಿಲಿನ ದಡಕ್ಕೆ ತಲುಪಿ, ಬಳಿಕ ಅಲ್ಲಿಂದ ಓಬಿಎಂ ಯಂತ್ರದ ಮೂಲಕ ದೇವಾಲಯದ ಮುಂಬಾಗದಲ್ಲಿ ತಂದು ಬಿಡಲಾಯಿತು.

ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ,, ಗೃಹರಕ್ಷಕ ವಸಂತ.ಕೆ, ಈಜುಗಾರರಾದ ಸುದರ್ಶನ್, ಚೆನ್ನಪ್ಪ, ವಿಶ್ವನಾಥ್ ಶೆಟ್ಟಿಗಾರ್, ಹಾಜಿ ಇಸ್ಮಾಯಿಲ್ ಕಾರ್ಯಪ್ರವೃತ್ತರಾಗಿ ಜೀವ ಉಳಿಸಿದ್ದಾರೆ.

LATEST NEWS

ನಾನು ಚುನಾವಣಾ ರಾಜಕೀಯದಿಂದ ದೂರ…ರಾಜಕೀಯದಿಂದಲ್ಲ : ಸದಾನಂದ ಗೌಡ

Published

on

ಪುತ್ತೂರು : ನಾನು ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ. ಆದರೆ ರಾಜಕೀಯದಿಂದ ದೂರ ಉಳಿಯಲ್ಲ ಎಂದು ಪುತ್ತೂರಿನಲ್ಲಿ ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.  ಅವರು ಭಾನುವಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ‌ ನೀಡಿ  ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ನರೇಂದ್ರ ಮೋದಿಯವರದ್ದು, ಸ್ವಾರ್ಥರಹಿತ ರಾಜಕಾರಣ. ನರೇಂದ್ರ ಮೋದಿಯವರನ್ನು ಫಾಲೋ ಮಾಡಿಕೊಂಡು ಉಳಿದವರು ಮುಂದುವರಿಯಬೇಕು. ನರೇಂದ್ರ ಮೋದಿಯವರು ದೆಹಲಿಯಲ್ಲಿ ಮಾತ್ರ ಸೀಮಿತವಾದ್ರೆ ಆಗೋದಿಲ್ಲ. ಎಲ್ಲಾ ರಾಜ್ಯಗಳಲ್ಲೂ ನರೇಂದ್ರ ಮೋದಿಯವರಂತೆ ಉಳಿದವರು ಕೆಲಸ ಮಾಡಬೇಕು.ನರೇಂದ್ರ ಮೋದಿ ಹೇಳಿದಂತೆ ಪರಿವಾರದಿಂದ ಮುಕ್ತರಾಗಬೇಕು, ಭ್ರಷ್ಟಾಚಾರದಿಂದ ಮುಕ್ತರಾಗಬೇಕು ಎಂದು ನುಡಿದರು.

ಜಾತಿವಾದದಿಂದ ಮುಕ್ತರಾಗಬೇಕೆಂಬುದು ನರೇಂದ್ರ ಮೋದಿಯವರ ಪರಿಕಲ್ಪನೆ. ಈ ಚುನಾವಣೆಯಲ್ಲೇ ನರೇಂದ್ರ ಮೋದಿಯವರ ಪರಿಕಲ್ಪನೆ ಆಗಬೇಕಿತ್ತು. ಆದ್ರೆ ರಾಜ್ಯದಲ್ಲಿರುವಂತಹ ಜವಾಬ್ದಾರಿ ಹೊತ್ತ ಕೆಲವರು ನರೇಂದ್ರ ಮೋದಿಯ ಈ ಮೂರು ಪರಿಕಲ್ಪನೆಗೆ ಸರಿಹೊಂದಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿಯನ್ನು ಶುದ್ಧೀಕರಣ ಮಾಡುವ ಕೆಲಸ ಮಾಡುತ್ತೇನೆ. ಈಗ ನರೇಂದ್ರ ಮೋದಿಯವರ ಚುನಾವಣೆ ಮಾತ್ರ ನಮ್ಮ‌ಮುಂದಿದೆ ಎಂದರು.

Continue Reading

DAKSHINA KANNADA

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಒಂದೇ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಆರೋಪಿಗಳು ಕೋರಿದ ಅರ್ಜಿ ವಜಾ

Published

on

ಮಂಗಳೂರು: ಬಿಜೆಪಿ ಕಾರ್ಯಕರ್ತ, ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳು ತಮಗೆ ಜೀವ ಭಯ ಹಾಗೂ ವಕೀಲರೊಂದಿಗೆ ಚರ್ಚಿಸಲು ಒಂದೇ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಅಬ್ದುಲ್ ಬಶೀರ್ ಸಹಿತ ರಾಜ್ಯದ ವಿವಿಧ ಜೈಲುಗಳಲ್ಲಿರುವ 10 ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ಼. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.  ಇದೇ ವೇಳೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ಖೈದಿಗಳೊಂದಿಗೆ ವಕೀಲರು ಸಂಭಾಷಣೆ ನಡೆಸಲು ಅತ್ಯುತ್ತಮ ವೀಡಿಯೋ ಕಾನ್ಫರೆನ್ಸ್ಂಗ್ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಸರಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ.

ವಕೀಲರು ಹಾಗೂ ಕುಟುಂಬ ಸದಸ್ಯರೊಂದಿಗೆ ನಡೆಸುವ ಸಂಭಾಷಣೆ ಮತ್ತೊಬ್ಬರಿಗೆ ತಿಳಿಯದಂತೆ ಗೌಪ್ಯತೆ ಕಾಪಾಡಲು ಹೆಡ್‌ಫೋನ್ ಗಳನ್ನು ಒದಗಿಸಬೇಕು. ಇದರಿಂದ ಗೌಪ್ಯತೆ ಉಲ್ಲಂಘನೆಯಾಗುವ ಆರೋಪ ಕಂಡು ಬರುವುದಿಲ್ಲ.

ಇನ್ನು ಈ ಸೌಲಭ್ಯ ಜಾರಿಯಾಗದ ಜೈಲಿಗೆ ಕೂಡಲೇ ಸೌಲಭ್ಯ ಒದಗಿಸುವಂತೆ ಹಾಗೂ ಅದರಲ್ಲಿ ಯಾವುದೇ ದೋಷ-ಲೋಪ ಕಾಣದಂತೆ ಕಾರ್ಯನಿರ್ವಹಿಸಲು ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

Continue Reading

DAKSHINA KANNADA

PUTTUR : ಅಂಗನವಾಡಿಯಲ್ಲಿ ಆಮ್ಲೇಟ್‌ ತಯಾರಿ; ಆರೋಗ್ಯ ಕೇಂದ್ರದ ಸಿಸಿ ಟಿವಿ ಕದ್ದು ಪರಾರಿ; ಕಿಡಿಗೇಡಿಗಳ ಅನೈತಿಕ ಚಟುವಟಿಕೆಗೆ ಯಾವಾಗ ಬ್ರೇಕ್!?

Published

on

ಪುತ್ತೂರು : ನಗರದ ಹೃದಯಭಾಗದಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ಕಿಡಿಗೇಡಿಗಳು ಮಾಡಬಾರದ್ದು ಮಾಡಿ ಸಿಸಿ ಕ್ಯಾಮೆರಾ ಸಹಿತ ಪರಾರಿಯಾಗಿದ್ದಾರೆ. ಆದ್ರೆ, ಪ್ರಕರಣ ದಾಖಲಿಸಿ ಅಂತ ಪೊಲೀಸ್ ಠಾಣೆಗೆ ಹೋದ್ರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಮಕ್ಕಳಿಗೆ ಅಂತ ಇಟ್ಟಿದ್ದ ಮೊಟ್ಟೆಗಳನ್ನು ಆಮ್ಲೇಟ್ ಮಾಡಿ ತಿಂದಿರುವ ಕಿಡಿಗೇಡಿಗಳು, ಬಳಿಕ ಪಕ್ಕದಲ್ಲೇ ಇರೋ ಆರೋಗ್ಯ ಕೇಂದ್ರದಲ್ಲಿ ಏನಾದ್ರೂ ಸಿಗತ್ತದಾ ಎಂದು ತಡಕಾಡಿದ್ದಾರೆ. ಇನ್ನು ಇಲ್ಲೇ ಅನೈತಿಕ ಚಟುವಟಿಕೆ ನಡೆಸಿರುವುದಕ್ಕೆ ಸಾಕ್ಷಿ ಬಿಟ್ಟು ಹೋಗಿದ್ದಾರೆ. ಹೀಗಾಗಿ ಇದು ಕೇವಲ ಕಿಡಿಗೇಡಿಗಳ ಕೃತ್ಯ ಮಾತ್ರ ಆಗಿರದೆ ಅನೈತಿಕ ದಂಧೆಯವರೂ ಇದರ ಹಿಂದೆ ಇದ್ದಾರೆ ಅನ್ನೋ ಅನುಮಾನ ಸ್ಥಳಿಯರದ್ದು.

ಯಾಕಂದ್ರೆ ನಗರದ ನಡುವೆ ಇದ್ರೂ ಕೂಡಾ ರಾತ್ರಿಯಾದ ಮೇಲೆ ಇದೊಂದು ನಿರ್ಜನ ಪ್ರದೇಶವಾಗಿ ಜನ ಓಡಾಟ ಇರೋದು ಕಡಿಮೆ. ಹೀಗಾಗಿ ತಮ್ಮ ಅನೈತಿಕ ಚಟುವಟಿಕೆಗೆ ಈ ಜಾಗವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಸ್ಥಳಿಯರ ಅನುಮಾನ.

ಈ ಹಿಂದೆಯೂ ಅನೇಕ ಬಾರಿ ಇಂತಹ ಘಟನೆ ಇದೇ ಅಂಗನವಾಡಿ ಹಾಗೂ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಆಗಲೂ ಪೊಲೀಸರಿಂದ ಯಾವುದೇ ಕ್ರಮ ಆಗಿರಲಿಲ್ಲ. ಇತ್ತೀಚೆಗೆ ಇಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಈ ಬಾರಿ ಕಿಡಿಗೇಡಿಗಳು ಗುರುತು ಪತ್ತೆಯಾಗಬಾರದು ಅಂತ ಸಿಸಿಟಿವಿನ್ನೇ ಹೊತ್ತೊಯ್ದಿದ್ದಾರೆ.
ಶಾಲೆ ಹಾಗೂ ಆರೋಗ್ಯ ಕೇಂದ್ರ ಒಂದೇ ಕಡೆ ಇದ್ರೂ ಇದಕ್ಕೆ ಸೂಕ್ತ ಭದ್ರತೆ ಇಲ್ಲ. ಆವರಣ ಗೋಡೆಯೂ ಇಲ್ಲದೆ ಇರೋದ್ರಿಂದ ಇಂತಹ ಕಿಡಿಗೇಡಿಗಳಿಗೆ ಕೃತ್ಯ ನಡೆಸಲು ಅನುಕೂಲ ಆಗಿದೆ. ಆದ್ರೆ, ಪೊಲೀಸರು ಈ ಬಗ್ಗೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಬದಲಾಗಿ ಮೌನಕ್ಕೆ ಶರಣಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

LATEST NEWS

Trending