Connect with us

    LATEST NEWS

    ಉಡುಪಿ ಗಾಂಜಾ ಮಾರಾಟ ಪ್ರಕರಣ- ಇಬ್ಬರು ಆರೋಪಿಗಳಿಗೆ 2 ವರ್ಷ ಕಠಿಣ ಶಿಕ್ಷೆ..!

    Published

    on

    ಗಾಂಜಾ ಮಾರಾಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದೆ.

    ಉಡುಪಿ : ಗಾಂಜಾ ಮಾರಾಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದೆ.

    ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹೈದರಬಾದ್ ಮೂಲದ ಮಪಾಲ ಸರಳೇಬೆಟ್ಟು ನಿವಾಸಿಯಾಗಿರುವ 21 ವರ್ಷದ ತಿಪಿರ್ ನೇನಿ ಆದಿತ್ಯ ಹಾಗೂ ತೆಲಂಗಾ ಣ ರಾಜ್ಯದ ಖಾನಪುರಂ ಮೂಲದ ಮಪಾಲ ಈಶ್ವರನಗರ ನಿವಾಸಿ 20 ವರ್ಷದ ಮೊಗಿಲಿ ಹೇಮಂತ್ ರೆಡ್ಡಿ ಎಂಬವರು ಶಿಕ್ಷೆಗೆ ಒಳಗಾಗಿರುವ ಆರೋಪಿಗಳಾಗಿದ್ದಾರೆ.

    2019ರ ಅಕ್ಟೋಬರ್ 27ರಂದು ಉಡುಪಿ ನಗರದ ಶಂಕರನಾರಾಯಣ ದೇವಸ್ಥಾನದ ಬಳಿ ಆರೋಪಿಗಳಿಬ್ಬರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು.

    ಈ ಬಗ್ಗೆ ಖಚಿತ ಲಭಿಸಿದ ಹಿನ್ನಲೆಯಲ್ಲಿ ದಾಳಿ ನಡೆಸಿದ ಜಿಲ್ಲಾ ಸೆನ್ ಅಪರಾಧ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

    ದಾಳಿ ವೇಳೆ ಆರೋಪಿಗಳಿಂದ 4ಕೆ.ಜಿ. 034ಗ್ರಾಂ ತೂಕದ ಗಾಂಜಾ ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದರು. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಆಗಿನ ಸೆನ್ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ಪ್ರಕರಣದ ತನಿಖೆ ನಡೆಸಿದ್ದು, ನಂತರ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಎಫ್‌ಎಸ್ಎಲ್ ವರದಿಯನ್ನು ಸ್ವೀಕರಿಸಿ ಆರೋಪಿಗಳ ವಿರುದ್ಧ ಅಕ್ಟೋಬರ್ 13ರಂದು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ, ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು, ಇಬ್ಬರು ಆರೋಪಿಗಳಿಗೆ ಎರಡು ವರ್ಷ ಕಠಿಣ ಜೈಲುಶಿಕ್ಷೆ ಮತ್ತು ತಲಾ 50ಸಾವಿರ ರೂ. ದಂಡ ಹಾಗೂ ದಂಡ ವಿಧಿಸಲು ತಪ್ಪಿದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಆದೇಶ ನೀಡಿದ್ದಾರೆ.

    ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕಿ ಶಾಂತಿಬಾಯಿ ವಿಚಾರಣೆ ನಡೆಸಿದ್ದು, ಸರಕಾರಿ ಅಭಿಯೋಜಕ ಜಯರಾಮ್ ಶೆಟ್ಟಿ ವಾದ ಮಂಡಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಅಡುಗೆ ಮಾಡುವಾಗ ಕೈ ಸುಟ್ಟುಕೊಂಡರೆ ಮನೆಯಲ್ಲಿ ಹೀಗೆ ಮಾಡಿ..!

    Published

    on

    ಮಂಗಳೂರು: ಅಡುಗೆ ಮಾಡುವಾಗ ಗಡಿ ಬಿಡಿಯಲ್ಲಿ ಮಹಿಳೆಯರು ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳಿಂದ ಬಿಸಿ ಎಣ್ಣೆ, ಬಿಸಿ ನೀರೋ ಕೈ ಅಥವಾ ಮೈ ಮೇಲೆ ಚೆಲ್ಲುತ್ತದೆ. ಇಲ್ಲದಿದ್ದರೆ ಬಿಸಿ ಪಾತ್ರೆಯನ್ನು ಮುಟ್ಟುವುದರಿಂದ ಕೈ ಚರ್ಮ ಸುಡುತ್ತದೆ. ಇದರಿಂದ ಉಂಟಾಗುವ ಉರಿ ಹಾಗೂ ನೋವು ತೀವ್ರವಾಗಿರುತ್ತದೆ. ಹೀಗಾಗಿ ಗ್ಯಾಸ್ ಅಥವಾ ಒಲೆಯ ಮುಂದೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲುವುದಿಲ್ಲ.

    ಹೆಚ್ಚಿನವರು ಬಿಸಿ ತಾಗಿದ ತಕ್ಷಣವೇ ಕೈಯನ್ನು ನೀರಿನಲ್ಲಿ ಅದ್ದಿ ಬಿಡುತ್ತಾರೆ, ಹೀಗೆ ಮಾಡಿದ್ದಲ್ಲಿ ಸುಟ್ಟ ಗಾಯವು ಗುಣಮುಖವಾಗಲು ಸಮಯ ತೆಗೆದುಕೊಳ್ಳುತ್ತದೆ. ಸಣ್ಣಪುಟ್ಟ ಗಾಯಗಳಾದರೆ ತೊಂದರೆಯಿಲ್ಲ, ಆದರೆ ತೀವ್ರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.

    1. ಗಾಯವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಐಸ್ ಅನ್ನು ಅನ್ವಯಿಸುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ಗುಳ್ಳೆಗಳೂ ಬರುವುದಿಲ್ಲ. ಇದು ಚರ್ಮದ ಮೇಲೆ ಕಪ್ಪು ಕಲೆಗಳು ಬರದಂತೆ ತಡೆಯುತ್ತದೆ.

    2. ಸುಟ್ಟ ಜಾಗಕ್ಕೆ ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ಹಚ್ಚುವುದು ಪರಿಣಾಮಕಾರಿಯಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ಉರಿ ಉಂಟಾದರೂ ನಂತರದಲ್ಲಿ ಕಡಿಮೆಯಾಗುತ್ತದೆ, ಗುಳ್ಳೆಗಳು ಬರುವುದಿಲ್ಲ.

    3. ಅಲೋವೆರಾ ಸಹ ಸುಟ್ಟಗಾಯವನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಗಾಯದ ಮೇಲೆ ತಕ್ಷಣವೇ ಅಲೋವೆರಾವನ್ನು ಹಚ್ಚಿದರೆ ಉರಿಯೂತವು ಕಡಿಮೆಯಾಗಿ, ಯಾವುದೇ ಗುಳ್ಳೆಗಳು ಕಾಣಿಸಿಕೊಳ್ಳುವುದಿಲ್ಲ.

    4. ಜೇನುತುಪ್ಪವು ಆಂಟಿ-ಸೆಪ್ಟಿಕ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಸುಟ್ಟ ಗಾಯದ ಮೇಲೆ ತಕ್ಷಣ ಜೇನುತುಪ್ಪವನ್ನು ಹಚ್ಚುವುದರಿಂದ ಉರಿಯೂತ ಶಮನವಾಗಿ, ಗುಳ್ಳೆಗಳು ಮೂಡದಂತೆ ತಡೆಯುತ್ತದೆ. ಜೇನು ತುಪ್ಪ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡುವುದರಿಂದ ಸುಟ್ಟಗಾಯಗಳು ತ್ವರಿತವಾಗಿ ಗುಣವಾಗುತ್ತವೆ.

    Continue Reading

    LATEST NEWS

    ಸಹೋದರರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್; ಸೂರಜ್‌ ಸಿಐಡಿ ಕಸ್ಟಡಿಗೆ, ಪ್ರಜ್ವಲ್‌ ನ್ಯಾಯಾಂಗ ಬಂಧನಕ್ಕೆ!

    Published

    on

    ಮಂಗಳೂರು/ಬೆಂಗಳೂರು : ಇದೊಂದು ಅಪರೂಪದ ಘಟನೆ. ಅದೇನೂಂದ್ರೆ ಇಂದು (ಜೂನ್ 24) ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್​ನಲ್ಲಿ ಮಾಜಿ ಸಚಿವ ಎಚ್​ಡಿ ರೇವಣ್ಣ ಪುತ್ರರ ಅರ್ಜಿ ವಿಚಾರಣೆ ನಡೆದಿದೆ.


    ಸಲಿಂಗ ಕಾಮ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಜೆಡಿಎಸ್​ ವಿಧಾನಪರಿಷತ್ ಸದಸ್ಯ ಸೂರಜ್‌ ರೇವಣ್ಣನನ್ನು ನ್ಯಾಯಾಲಯ 8 ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ತಮ್ಮ ಪ್ರಜ್ವಲ್​ ರೇವಣ್ಣಗೆ ಸಿಐಡಿ ಕಸ್ಟಡಿಯಿಂದ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ಈ ಎರಡು ಪ್ರಕರಣಗಳ ಪ್ರತ್ಯೇಕವಾಗಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್‌ ಅವರು ಸೂರಜ್‌ ಅವರನ್ನು ಜುಲೈ 1 ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದರೆ, ಪ್ರಜ್ವಲ್​ಗೆ ಜುಲೈ 8 ರ ವರೆಗೆ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ : WATCH : ಅಭಿಮಾನಿಯನ್ನು ತಳ್ಳಿ ಬೀಳಿಸಿದ ನಾಗಾರ್ಜುನ ಬಾಡಿಗಾರ್ಡ್; ವೀಡಿಯೋ ವೈರಲ್ ಆಗುತ್ತಿದ್ದಂತೆ ಏನಂದ್ರು ನಟ?

    ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ಆದೇಶ ಕಾಯ್ದಿರಿಸಿದೆ. ಜೂನ್ 26ಕ್ಕೆ ಜಾಮೀನು ಅರ್ಜಿ ಬಗ್ಗೆ ಆದೇಶ ನೀಡುವ ಸಾಧ್ಯತೆ ಇದೆ.

    Continue Reading

    FILM

    WATCH : ಅಭಿಮಾನಿಯನ್ನು ತಳ್ಳಿ ಬೀಳಿಸಿದ ನಾಗಾರ್ಜುನ ಬಾಡಿಗಾರ್ಡ್; ವೀಡಿಯೋ ವೈರಲ್ ಆಗುತ್ತಿದ್ದಂತೆ ಏನಂದ್ರು ನಟ?

    Published

    on

    ಮಂಗಳೂರು : ಸಿನಿಮಾ ನಟರು ಅಂದಾಕ್ಷಣ ಅಭಿಮಾನಿಗಳು ಮುಗಿಬೀಳೋದು ಸಹಜ. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು, ಸೆಲ್ಫಿ ಗಿಟ್ಟಿಸಿಕೋಬೇಕು ಅನ್ನೋ ಹೆಬ್ಬಯಕೆ ಸಹಜ. ಆದ್ರೆ, ಈ ರೀತಿ ಹೋದ ಅಭಿಮಾನಿಯೊಬ್ಬನನ್ನು ತಳ್ಳಿರೋ ಘಟನೆ ನಡೆದಿದೆ. ಘಟನೆಯ ವೀಡಿಯೋ ಸದ್ಯ ವೈರಲ್ ಆಗಿದೆ.


    ವೈರಲ್ ಆಗಿರೋ ವೀಡಿಯೋ ನಟ ನಾಗಾರ್ಜುನ ಅವರದು. ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಯೊಬ್ಬರು ಓಡೋಡಿ ಬಂದಿದ್ದಾರೆ. ಆದರೆ ಅವರನ್ನು ನಾಗಾರ್ಜುನ ಬಾಡಿಗಾರ್ಡ್​ ತಳ್ಳಿ ಬೀಳಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.

    ‘ನಿಮ್ಮ ಮಾನವೀಯತೆ ಎಲ್ಲಿ ಹೋಯಿತು ನಾಗಾರ್ಜುನ ಅವರೇ?’ ಎಂಬ ಕ್ಯಾಪ್ಷನ್​ನೊಂದಿಗೆ ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋವನ್ನು ಶೇರ್​ ಮಾಡಿಕೊಳ್ಳಲಾಗಿದೆ.

    ಇನ್ನು ವೀಡಿಯೋ ವೈರಲ್​ ಆಗುತ್ತಿದ್ದಂತೆ ಸ್ವತಃ ನಾಗಾರ್ಜುನ ಅವರು ಕ್ಷಮೆ ಕೇಳಿದ್ದಾರೆ. ‘ಇದು ಈಗ ತಾನೇ ನನ್ನ ಗಮನಕ್ಕೆ ಬಂತು. ಈ ರೀತಿ ಆಗಬಾರದಿತ್ತು. ಆ ವ್ಯಕ್ತಿಯಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇನ್ಮುಂದೆ ಎಚ್ಚರಿಕೆ ವಹಿಸುತ್ತೇನೆ. ಈ ರೀತಿ ಇನ್ನೆಂದೂ ಆಗುವುದಿಲ್ಲ’ ಎಂದಿದ್ದಾರೆ.

    ಇದನ್ನೂ ಓದಿ: ದರ್ಶನ್ ಹಾಕಿ ಚಿತ್ರ ಮಾಡೋರು ಇನ್ಮೇಲೆ ಇದನ್ನ ಗಮನಿಸಲೇಬೇಕು

    ಅಂದಹಾಗೆ ಈ ಘಟನೆ ನಡೆದಾಗ ನಾಗಾರ್ಜುನ ಜೊತೆ ಕಾಲಿವುಡ್​ ನಟ ಧನುಷ್​ ಕೂಡ ಇದ್ದರು. ಸಿನಿಮಾ ನಟರನ್ನು ಕಂಡಾಗ ಸಿನಿಪ್ರಿಯರು ಹತ್ತಿರ ಬರೋದು ಸಹಜ. ಈ ವೇಳೆ ಬಾಡಿಗಾರ್ಡ್ ಗಳು ನಟರ ಬಳಿ ಬರಲು ಬಿಡುವುದಿಲ್ಲ. ಇಲ್ಲೂ ಹಾಗೇ ಆಗಿದೆ.

    Continue Reading

    LATEST NEWS

    Trending