LATEST NEWS
ಕಟಪಾಡಿ ವಾರದ ಸಂತೆ ಸ್ಥಳದಲ್ಲಿ ಉರುಳಿ ಬಿದ್ದ ಮರ- ವಾಹನಗಳು ಜಖಂ
ಉಡುಪಿ ಕಟಪಾಡಿಯಲ್ಲಿ ಶನಿವಾರ ಸಂಜೆ ಸುರಿದ ಭಾರೀ ಮಳೆಗೆ ವಾರದ ಸಂತೆ ನಡಿತಾ ಇದ್ದ ಸ್ಥಳದಲ್ಲಿದ್ದ ಬೃಹತ್ ಗಾತ್ರ ಮರವೊಂದು ಉರುಳಿ ಬಿದ್ದ ಘಟನೆ ನಡೆದಿದೆ.
ಉಡುಪಿ: ಉಡುಪಿ ಕಟಪಾಡಿಯಲ್ಲಿ ಶನಿವಾರ ಸಂಜೆ ಸುರಿದ ಭಾರೀ ಮಳೆಗೆ ವಾರದ ಸಂತೆ ನಡಿತಾ ಇದ್ದ ಸ್ಥಳದಲ್ಲಿದ್ದ ಬೃಹತ್ ಗಾತ್ರ ಮರವೊಂದು ಉರುಳಿ ಬಿದ್ದ ಘಟನೆ ನಡೆದಿದೆ.
ಮರ ಬಿದ್ದ ರಭಸಕ್ಕೆ ಮರದಡಿ ಇದ್ದ ಹಲವು ವಾಹನಗಳು ಜಖಂಗೊಂಡಿವೆ.
ಆದರೆ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ.
ಇದರಿಂದಾಗಿ ಕೆಲ ಹೊತ್ತು ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು.
ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಕಾಪು ಠಾಣೆಯ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
DAKSHINA KANNADA
ಮನೆಯ ಯಜಮಾನನ್ನು ಕಟ್ಟಿ ಹಾಕಿ ನಗ, ನಗದು ದರೋಡೆ- 6 ಜನ ಬಂಧನ..!
ಪುತ್ತೂರು: ಮನೆ ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ ದರೋಡೆಕೋರರ ತಂಡವೊಂದು ಮನೆ ಮಂದಿಯನ್ನು ಕಟ್ಟಿ ಹಾಕಿ ನಗ-ನಗದು ದರೋಡೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಡಗನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ಸೆ. 7ರಂದು ನಡೆದಿದ್ದು, ಇದೀಗ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸುಧೀರ್ ಪೆರುವಾಯಿ, ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಪಚ್ಚಂಬಳ ರವಿ, ಕಿರಣ್, ವಸಂತ, ಫಸಲ್, ನಿಝಾರ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕ್ರಿಮಿನಲ್ ಹಿನ್ನಲೆಯುಳ್ಳ ಆರೋಪಿಗಳಾಗಿದ್ದಾರೆ.
ಪಚ್ಚಂಬಳ ರವಿಯು ಮಂಗಳೂರಿನ ತಾಲೂಕು ಪಂಚಾಯತ್ ಅಧ್ಯಕ್ಷ ಜಬ್ಬಾರ್ ಹತ್ಯೆಯ ಆರೋಪಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದ ಆರೋಪಿಯಾಗಿದ್ದಾನೆ.
ಪೆರೋಲ್ ಮೂಲಕ ಜೈಲಿನಿಂದ ಹೊರಗೆ ಬಂದು ಕಳ್ಳವು ಕೃತ್ಯ ನಡೆಸಿದ್ದಾನೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು, ಚಿನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡಗನ್ನೂರು ಗ್ರಾಮಪಂಚಾಯತ್ ನ ಮಾಜಿ ಸದಸ್ಯರಾಗಿರುವ ಗುರುಪ್ರಸಾದ್ ರೈ ಯವರ ಮನೆಯಲ್ಲಿ ಈ ದರೋಡೆ ಕೃತ್ಯ ನಡೆದಿತ್ತು.
ನಸುಕಿನ ಜಾವ ಸುಮಾರು 2 ಗಂಟೆಗೆ ಮನೆಯ ಮುಂದಿನ ಬಾಗಿಲ ಮೂಲಕ ಮನೆಯೊಳಗೆ ನುಗ್ಗಿದ ಸುಮಾರು 8 ಜನರಿದ್ದ ಮುಸುಕುಧಾರಿಗಳ ತಂಡ ಗುರುಪ್ರಸಾದ್ ಅವರನ್ನು ಕಟ್ಟಿ ಹಾಕಿ, ಕುತ್ತಿಗೆಗೆ ಚಾಕು ಹಿಡಿದು ಕಪಾಟಿನಲ್ಲಿದ್ದ ಸುಮಾರು 40 ಸಾವಿರ ರೂಪಾಯಿ ಮತ್ತು ಸುಮಾರು 15 ಪವನ್ ನಷ್ಟು ಚಿನ್ನವನ್ನು ದರೋಡೆ ಮಾಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ವಿಶೇಷ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು.
DAKSHINA KANNADA
ಲೈಂಗಿಕವಾಗಿ ಬಳಸಿಕೊಂಡು ಬ್ಲಾಕ್ ಮೇಲ್ ಮಾಡಿದ ಭಟ್- ಪ್ರಕರಣ ದಾಖಲು..!
ಪುತ್ತೂರು: ಬಣ್ಣದ ಮಾತುಗಳಿಂದ ವಿಶ್ವಾಸಗಳಿಸಿ ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಪುತ್ತೂರಿನ ವ್ಯಕ್ತಿಯೊಬ್ಬ ಕೊನೆಗೆ ಮಹಿಳೆಯನ್ನೇ ಬ್ಲಾಕ್ ಮೇಲ್ ಮಾಡಿ ಹಣ ಕೀಳಲು ಯತ್ನಿಸಿದ ಬಗ್ಗೆ ಕಾರವಾರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರಿನ ಆರ್ಲಪದವು ಮೂಲದ ಪ್ರಶಾಂತ ಭಟ್ ಮಾಣಿಲ ಪ್ರಕರಣದ ಆರೋಪಿ.
ದೂರು ನೀಡಿದ ಮಹಿಳೆಯು ಸಂಗೀತದಲ್ಲಿ ಆಸಕ್ತಿ ಇದ್ದು, ಕ್ಲಬ್ ಹೌಸ್ ಆ್ಯಪ್ ನಲ್ಲಿ ಹಾಡುತ್ತಿದ್ದಳು.
2020 ರಲ್ಲಿ ಆ್ಯಪ್ ಮೂಲಕವೇ ಆರೋಪಿಯ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಕ್ರಮೇಣ ಪರಸ್ಪರ ಇಷ್ಟಪಟ್ಟಿದ್ದಾರೆ.
2023 ರ ಜನವರಿ ತಿಂಗಳಲ್ಲಿ ಆರೋಪಿಯು ಮಹಿಳೆಯನ್ನು ಭೇಟಿಯಾಗಲು ಬಂದು ಖಾಸಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿದ್ದಾನೆ.
ಅಲ್ಲಿ ಮಹಿಳೆಯ ಮೇಲೆ ಆರೋಪಿಯು ಲೈಂಗಿಕ ಹಲ್ಲೆ ನಡೆಸಿದ್ದಾನೆ.
ಅಲ್ಲದೇ ಅದೇ ಲಾಡ್ಜಿನಲ್ಲಿ ಘಟನೆಯು ಮತ್ತೊಮ್ಮೆ ನಡೆದಿದೆ ಎಂದು ಮಹಿಳೆಯು ದೂರಿನಲ್ಲಿ ದಾಖಲಿಸಿದ್ದಾರೆ.
ಈ ವೇಳೆ ಆರೋಪಿಯು ಮಹಿಳೆಯೊಂದಿಗಿರುವ ಖಾಸಗಿ ಕ್ಷಣಗಳ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ.
ಜತೆಗೆ ವಿಡಿಯೋ ಕಾಲ್ ಮಾಡಿ ಅಲ್ಲಿಯೂ ನಗ್ನ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ ಎಂದು ದೂರಲಾಗಿದೆ.
ಆರೋಪಿಯು ಮಹಿಳೆಯಿಂದ ಹಣಕ್ಕೂ ಬೇಡಿಕೆ ಇಟ್ಟಿದ್ದು, ಮಹಿಳೆಯು ಒಮ್ಮೆ 25 ಸಾವಿರ ಹಣ ನೀಡಿದ್ದಾಳೆ.
ಬಳಿಕ ಆರೋಪಿಯು ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಬೆದರಿಕೆ ನೀಡಿ ಏಳು ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾನೆ.
ಅಲ್ಲದೇ ಮಹಿಳೆಯ ತಾಯಿ ಹಾಗು ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಕಳುಹಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾರವಾರದ ಮಹಿಳಾ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
bengaluru
ಕಾಂತಾರ ಚಿತ್ರಕ್ಕೆ 1 ವರ್ಷ-ನಾಳೆ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್
ಜಗತ್ತೆ ನಿಬ್ಬೆರಗಾಗಿ ನೋಡಿದ ಕಾಂತಾರ ಸಿನೆಮಾ ರಿಲೀಸ್ ಆಗಿ ನಾಳೆಗೆ ಭರ್ತಿ 1 ವರ್ಷ. ಇದೇ ಖುಷಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೊಸ ಘೋಷಣೆಯಾಗಿದ್ದು ಸೆ.30ರಂದು ಕಾಂತಾರ ಚಿತ್ರದ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ.
ಜಗತ್ತೆ ನಿಬ್ಬೆರಗಾಗಿ ನೋಡಿದ ಕಾಂತಾರ ಸಿನೆಮಾ ರಿಲೀಸ್ ಆಗಿ ನಾಳೆಗೆ ಭರ್ತಿ 1 ವರ್ಷ.
ಇದೇ ಖುಷಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೊಸ ಘೋಷಣೆಯಾಗಿದ್ದು ಸೆ.30ರಂದು ಕಾಂತಾರ ಚಿತ್ರದ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ.
ಸಣ್ಣ ಬಜೆಟ್ ನಲ್ಲಿ ಕಾಂತಾರ ಸಿನೆಮಾ ನಿರ್ಮಾಣವಾಗಿದ್ದು ಚಿತ್ರ ಗಳಿಸಿದ್ದು ಮಾತ್ರ ಬರೋಬ್ಬರಿ 400 ಕೋಟಿಗಿಂತಲೂ ಅಧಿಕ ಮೊತ್ತ.
ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿ ಅನೇಕ ಕಲಾವಿದರು ಕಾಂತಾರ ಚಿತ್ರದಲ್ಲಿ ನಟಿಸಿ ಪ್ರತಿಯೊಬ್ಬ ಸಿನಿ ರಸಿಕರ ಮನದಲ್ಲಿ ಹಚ್ಚೊತ್ತಿದ್ರು.
ನಿರೀಕ್ಷೆಗೂ ಮೀರಿ ನೇಮು-ಫೇಮು ಎಲ್ಲವೂ ಸಿಕ್ಕಿತು.
ಇದೀಗ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಆಗಿದೆ. ಈ ಹಿನ್ನಲೆ ನಾಳೆ ಸೆ. 30 ರಂದು ಬೆಳಿಗ್ಗೆ ಕಾಂತಾರ ಚಿತ್ರದಲ್ಲಿ ಭರ್ಜರಿ ಯಶಸ್ಸು ಕಂಡ ‘ವರಾಹ ರೂಪಂ’ ಹಾಡಿನ ವಿಡಿಯೋ ವರ್ಷನ್ ರಿಲೀಸ್ ಆಗಲಿದೆ.
ಈ ಕುರಿತು ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.