Connect with us

LATEST NEWS

ಉಡುಪಿ ಜಿಲ್ಲೆಗಳಲ್ಲಿ ಮನೆಗಳು ಜಲಾವೃತ- ಅಗ್ನಿ ಶಾಮಕ ತಂಡದಿಂದ ರಕ್ಷಣೆ

Published

on

ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಬಿರುಸು ಪಡೆದಿದ್ದು, ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಬರುತ್ತಿದೆ. ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದ್ದು, ಹೆಚ್ಚಿನ ಮಳೆಯಾಗುವ ಸೂಚನೆ ನೀಡಿದೆ.

ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಬಿರುಸು ಪಡೆದಿದ್ದು, ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಬರುತ್ತಿದೆ. ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದ್ದು, ಹೆಚ್ಚಿನ ಮಳೆಯಾಗುವ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ ಹೊರಡಿಸಿದ್ದಾರೆ.

ಬಲವಾದ ಗಾಳಿ ಬೀಸುತ್ತಿರುವುದರಿಂದ ಹಲವು ಕಡೆ ಮರಗಳು ಉರುಳಿ ಬಿದ್ದಿವೆ.

ಇದರಿಂದಾಗಿ ಕೆಲವೆಡೆ ರಸ್ತೆ ಸಂಪರ್ಕ ಕಡಿತ, ವಿದ್ಯುತ್‌ ಸಂಪರ್ಕ ಕಡಿತವಾಗಿದ್ದು, ಮನೆಗಳಿಗೂ ಹಾನಿಯಾಗಿದೆ.

ಕಾಪು, ಬೈಂದೂರು, ಗಂಗೊಳ್ಳಿ ಮುಂತಾದ ಕಡೆ ಕಡಲಕೊರೆತ ಜಾಸ್ತಿಯಾಗಿದೆ.

ಜಿಲ್ಲೆಯ ಕೊಡಂಕೂರು ಭಾಗದಲ್ಲಿ ಕೆಲವು ಮನೆಗಳು ಜಲಾವೃತಗೊಂಡು ದ್ವೀಪದಂತಾಗಿವೆ.

ಇದರಿಂದ ಹಲವು ಮನೆಗಳು ಅಪಾಯದಲ್ಲಿವೆ. ಅಗ್ನಿಶಾಮಕ ದಳದವರು ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಿದ್ದಾರೆ.

ಕರಾವಳಿ ಬೈಪಾಸ್ ಪರಿಸರದಲ್ಲಿಯೂ ಹಲವಾರು ಮನೆಗಳ ಸುತ್ತ ನೀರು ತುಂಬಿದ್ದು, ಜನರು ನಡುಗಡ್ಡೆಯಲ್ಲಿ ಸಿಲುಕಿ ಅಪಾಯದಲ್ಲಿದ್ದಾರೆ.

ಕಾರ್ಕಳ ತಾಲೂಕಿನಲ್ಲಿ ಜಡಿಮಳೆಯಿಂದಾಗಿ ಸ್ವರ್ಣಾ ನದಿ ಉಕ್ಕಿ ಹರಿಯುತ್ತಿದೆ.

ಪಶ್ಚಿಮಘಟ್ಟದ ತಪ್ಪಲು ಪ್ರದೇಶವಾಗಿರುವ ಮಾಳ ಮಲ್ಲಾರುನಲ್ಲಿ ಉಗಮಿಸುವ ಸ್ವರ್ಣಾ ನದಿಯಲ್ಲಿ ಮಳೆಯಿಂದಾಗಿ ಒಳ ಹರಿವು ಹೆಚ್ಚಿದೆ.

ದುರ್ಗ ಗ್ರಾಮದ ಬಲ್ಮಗುಂಡಿಯ ಅಣೆಕಟ್ಟಿನ ಎಲ್ಲಾ ಬಾಗಿಲುಗಳನ್ನು ತೆರೆಯಲಾಗಿದ್ದು, ಇದರಿಂದ ಕೃತಕ ನೆರೆಗೆ ಅವಕಾಶ ಸಿಗದೆ  ಸ್ವರ್ಣಾ ನದಿಯ ನೀರು ಉಡುಪಿಯ ಹಿರಿಯಡ್ಕದ ಬಜೆ ಅಣೆಕಟ್ಟಿಗೆ ಸೇರುತ್ತಿದೆ. ಸದ್ಯ ಉಡುಪಿ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಬರುತ್ತಿದೆ.

ಉಡುಪಿ ಜಿಲ್ಲೆಯ 7 ತಾಲೂಕುಗಳಲ್ಲಿ ಇಂದು ಬೆಳಗ್ಗೆ 8.30 ವರೆಗಿನ 24 ತಾಸುಗಳಲ್ಲಿ ಸರಾಸರಿ 198 ಮಿಲಿ ಮೀಟರ್ ಮಳೆಯಾಗಿದೆ.

ಕಾಪು ಮತ್ತು ಕಾರ್ಕಳ ತಾಲೂಕುಗಳಲ್ಲಿ ಗರಿಷ್ಠ ಮಳೆ ಬಂದಿದೆ.

ಕಾಪು 242  ಮಿಲಿ ಮೀಟರ್‌, ಕಾರ್ಕಳ 228 ಮಿಲಿ ಮೀಟರ್‌, ಬ್ರಹ್ಮಾವರ 206 ಮಿಲಿ ಮೀಟರ್‌, ಉಡುಪಿ 196 ಮಿಲಿ ಮೀಟರ್‌, ಹೆಬ್ರಿ 179 ಮಿಲಿ ಮೀಟರ್‌, ಕುಂದಾಪುರ 170 ಮಿಲಿ ಮೀಟರ್‌, ಬೈಂದೂರು 164 ಮಿಲಿ ಮೀಟರ್‌ ಮಳೆ ಬಂದಿದೆ.

 

 

Click to comment

Leave a Reply

Your email address will not be published. Required fields are marked *

LATEST NEWS

ಒಂದೇ ಒಂದು ಸೊಳ್ಳೆಗಳಿಲ್ಲದ ವಿಚಿತ್ರ ದೇಶವಿದು..!

Published

on

ಐಸ್‌ಲ್ಯಾಂಡ್: ಬಿಸಿಲು, ಮಳೆ ಎರಡೂ ಕಾಣಿಸಿಕೊಂಡಾಗ ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತದೆ. ಸೊಳ್ಳೆ ಕಚ್ಚುವುದರಿಂದ ಮಲೇರಿಯಾ, ಡೆಂಗ್ಯೂನಂತಹ ಮಾರಣಾಂತಿಕ ಕಾಯಿಲೆಗಳು ಬರಬಹುದು. ಸೊಳ್ಳೆಗಳಿಂದ ಹರಡುವ ರೋಗದಿಂದ ಪ್ರತಿವರ್ಷ ಲಕ್ಷಾಂತರ ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಪ್ರಪಂಚದಾದ್ಯಂತ ಒಟ್ಟು 3 ಸಾವಿರ ಜಾತಿಯ ಸೊಳ್ಳೆಗಳಿವೆ. ಆದರೆ ಒಂದೇ ಒಂದು ಸೊಳ್ಳೆಗಳೂ ಇಲ್ಲದ ವಿಶಿಷ್ಟ ದೇಶವೊಂದಿದೆ. ಹೌದು ಅದುವೇ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಐಸ್‌ಲ್ಯಾಂಡ್ ದೇಶ. ಇದು ಹಾವು ಮುಕ್ತ ಮಾತ್ರವಲ್ಲ, ಸೊಳ್ಳೆ ಮುಕ್ತ ದೇಶವೂ ಆಗಿದೆ.

ಐಸ್‌ಲ್ಯಾಂಡ್ ವಿಪರೀತ ಚಳಿ ಇರುವ ಪ್ರದೇಶವಾಗಿದೆ. ಅಲ್ಲಿನ ಶೀತ ವಾತಾವರಣದಲ್ಲಿ ಸೊಳ್ಳೆಗಳು ಬದುಕಲು ಸಾಧ್ಯವಿಲ್ಲ. ಐಸ್‌ಲ್ಯಾಂಡ್ ಹವಾಮಾನವು ಬಹಳ ವೇಗವಾಗಿ ಬದಲಾಗುತ್ತದೆ. ಹವಾಮಾನದಲ್ಲಿನ ತ್ವರಿತ ಬದಲಾವಣೆಯ ಕಾರಣ ಸೊಳ್ಳೆಗಳು ತಮ್ಮ ಜೀವನಚಕ್ರ ಸಾಗಿಸಲು ಸಾಧ್ಯವಿಲ್ಲ.

ಐಸ್‌ಲ್ಯಾಂಡ್ ತಾಪಮಾನ ಇಳಿಕೆ ಆರಂಭವಾದಾಗ ನೀರು ಮಂಜುಗಡ್ಡೆ ರೂಪ ತಾಳುತ್ತದೆ. ನೀರು ಸಂಪೂರ್ಣವಾಗಿ ಹೆಪ್ಪುಗಟ್ಟುವ ಕಾರಣ ಪ್ಯೂಪಾ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಐಸ್‌ಲ್ಯಾಂಡ್‌ನಲ್ಲಿ ತಾಪಮಾನವು ಮೈನಸ್ 38 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಅಂತಹ ಕಡಿಮೆ ತಾಪಮಾನದಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವುದು ಅಸಾಧ್ಯ.

ಐಸ್‌ಲ್ಯಾಂಡ್‌ನಲ್ಲಿ ಸೊಳ್ಳೆಗಳಿಗೆ ಸಂಬಂಧಿಸಿದ ಒಂದು ಸಿದ್ಧಾಂತವೆಂದರೆ ಈ ದೇಶದ ನೀರು, ಮಣ್ಣು ಮತ್ತು ಸಾಮಾನ್ಯ ಪರಿಸರ ವ್ಯವಸ್ಥೆಯು ರಾಸಾಯನಿಕ ಸಂಯೋಜನೆಯ ಸೊಳ್ಳೆ ಜೀವನವನ್ನು ಬೆಂಬಲಿಸುವುದಿಲ್ಲ. ಆದರೆ ಐಸ್‌ಲ್ಯಾಂಡ್‌ನ ನೆರೆಯ ದೇಶಗಳಾದ ನಾರ್ವೆ, ಡೆನ್ಮಾರ್ಕ್‌, ಸ್ಕಾಟ್ಲೆಂಡ್ ದೇಶಗಳಲ್ಲಿ ಸೊಳ್ಳೆಗಳಿವೆ.

Continue Reading

LATEST NEWS

ಟಿ 20 ವಿಶ್ವಕಪ್ ಗೆ ಲಗ್ಗೆಯಿಟ್ಟ ‘ನಂದಿನಿ’; ಕ್ರಿಕೆಟಿಗರ ಜೆರ್ಸಿಯಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌

Published

on

ಮಂಗಳೂರು : ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌ ಆದ ನಂದಿನಿ ಜಾಗತಿಕ ಬ್ರಾಂಡ್ ಆಗಿ ಲಗ್ಗೆ ಇಟ್ಟಿದೆ. ವಿಶ್ವಕಪ್ ಟಿ-ಟ್ವೆಂಟಿ ಪಂದ್ಯಕೂಟದಲ್ಲಿ ನಂದಿನಿ ಹೆಸರು ರಾರಾಜಿಸಲಿದೆ. ಹೌದು, ನಂದಿನಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ. ರಾಜ್ಯದ ಕೃಷಿಕರ ಶ್ರಮವನ್ನು ಹಾಗೂ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ವಿಶ್ವಕ್ಕೆ ಸಾರುವ ಯತ್ನದಲ್ಲಿದೆ.


ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಟೂರ್ನಿಯಲ್ಲಿ ನಂದಿನಿ :

ಜೂನ್ ೧ ರಿಂದ ಆರಂಭವಾಗಲಿರುವ ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಟೂರ್ನಿ ಅಮೆರಿಕದಲ್ಲಿ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರ ಜರ್ಸಿಯಲ್ಲಿ ಭಾರತೀಯ ಭಾಷೆಯೊಂದು ಪ್ರದರ್ಶಿಸಲಾಗುತ್ತಿದೆ. ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನ ಆಟಗಾರರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕೆಎಂಎಫ್‌ನ ನಂದಿನಿಯ ಲಾಂಛನವಿರುವ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದ್ದಾರೆ.


ಸಿಎಂ ಟ್ವೀಟ್ :

ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ ಟಿ೨೦ ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ.

ಇದನ್ನೂ ಓದಿ : ಅಂಜಲಿ ಹಂ*ತಕನ ಬಂಧನ; ರೈಲಿನಲ್ಲಿ ಪ್ರಯಾಣಿಸುತ್ತಿದ್ದವನ ಪೊಲೀಸರು ಬಂಧಿಸಿದ್ದು ಹೇಗೆ?!

ರಾಜ್ಯದ ಜನರ ಮನೆ-ಮನ ಗೆದ್ದಿರುವ ನಂದಿನಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಂದಿನಿ ಉತ್ಪನ್ನಗಳು ಕ್ರಿಕೆಟ್ ಆಟಗಾರರ ಹಾಗೂ ಕ್ರಿಕೆಟ್ ಪ್ರೇಮಿಗಳ ಮನ ಗೆಲ್ಲುವುದಂತು ನಿಜ ಸಂಗತಿ ಎಂದು ಬರೆದುಕೊಂಡಿದ್ದಾರೆ.

Continue Reading

LATEST NEWS

ಕೋವ್ಯಾಕ್ಸಿನಲ್ಲೂ ಇದೆ ಅಡ್ಡ ಪರಿಣಾಮ…ವರದಿಯಿಂದ ಬಯಲಾಯ್ತು ಸತ್ಯ..!

Published

on

ಮಂಗಳೂರು / ನವದೆಹಲಿ : ಸದ್ಯ ಕೊರೋನಾ ಲಸಿಕೆ ಪಡೆದವರಲ್ಲಿ ಆತಂಕ ಶುರುವಾಗಿದೆ. ಕೊರೋನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮ ಬೀರಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಇದರ ಬೆನ್ನಲ್ಲೇ ಕೋವ್ಯಾಕ್ಸಿನ್‌ ಕೂಡಾ ಅಡ್ಡ ಪರಿಣಾಮ ಬೀರಿದೆ ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಕೋವಿಶೀಲ್ಡ್‌ ಪಡೆದವರಲ್ಲಿ ಅಡ್ಡ ಪರಿಣಾಮ ಆಗಿದೆ ಅಂತ ಆಸ್ಟ್ರಾಜೆನೆಕಾ ಕಂಪೆನಿ ಒಪ್ಪಿಕೊಂಡಿತ್ತು. ಇದೀಗ ಭಾರತ್ ಬಯೋಟೆಕ್ ಕಂಪೆನಿ ಅಭಿವೃದ್ದಿ ಪಡಿಸಿರುವ ಕೋವ್ಯಾಕ್ಸಿನ್ ಕೂಡಾ ಅಡ್ಡ ಪರಿಣಾಮ ಬೀರುತ್ತದೆ ಎಂದು ವರದಿಯೊಂದು ಹೊರಬಿದ್ದಿದೆ. ಈ ಲಸಿಕೆ ಪಡೆದ ಒಂದು ವರ್ಷದ ಬಳಿಕ ಹಲವರಲ್ಲಿ ಅಡ್ಡ ಪರಿಣಾಮ ಕಾಣಿಸಿಕೊಂಡ ಬಗ್ಗೆ ವರದಿಯಲ್ಲಿ ಹೇಳಲಾಗಿದೆ.


ಹದಿ ಹರೆಯದ ಯುವಕ – ಯುವತಿಯರಲ್ಲಿ ಅಡ್ಡ ಪರಿಣಾಮ :

ಬನಾರಸ್ ಹಿಂದೂ ವಿಶ್ವ ವಿದ್ಯಾಲಯ ನಡೆಸಿದ ಈ ಅದ್ಯಯನ ಪ್ರಕಾರ ಕೋವ್ಯಾಕ್ಸಿನ್‌ ತೆಗೆದುಕೊಂಡ ಹದಿ ಹರೆಯದ ಯುವಕ – ಯುವತಿಯರಲ್ಲಿ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ. ಸುಮಾರು 1024 ಯವ ಜನತೆಯನ್ನು ಇದರ ಅಧ್ಯಯನಕ್ಕೆ ಒಳಪಡಿಸಿದಾಗ ಈ ಆಘಾತಕಾರಿ ವರದಿ ಲಭ್ಯವಾಗಿದೆ. ಈ ವರದಿ ಪ್ರಕಾರ ಶೇಕಡಾ 48 ಜನರಿಗೆ ಶ್ವಾಸನಾಳದ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಶೇಕಡಾ 10.5 ಜನರಲ್ಲಿ ಸಾಮಾನ್ಯ ಅಸ್ವಸ್ಥತೆ, 10.2 ಶೇಖಡಾ ಜನರಲ್ಲಿ ನರಮಂಡಲದ ಸಮಸ್ಯೆ, 4.7% ಜನರಲ್ಲಿ ನರ ಸಂಬಂಧಿ ಸಮಸ್ಯೆ ಹಾಗೂ 8.9% ಜನರಲ್ಲಿ ಸಾಮಾನ್ಯ ಸಮಸ್ಯೆಗಳು ಕಾಣಿಸಿದೆ. ಇದಲ್ಲದೆ, ಚರ್ಮ ರೋಗ, ಸ್ನಾಯಗಳಿಗೆ, ನರಗಳಿಗೆ ಮತ್ತು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡಿದೆ ಎಂದು ವರದಿ ಹೇಳಿದೆ.

ಯುವತಿಯರಲ್ಲಿ ಇದರ ಪರಿಣಾಮ ಹೆಚ್ಚಾಗಿ ಕಂಡು ಬಂದಿದ್ದು, ಶೇಕಡಾ 4.6% ಯುವತಿಯರಲ್ಲಿ ಮುಟ್ಟಿನ ಸಮಸ್ಯೆ ಕಂಡು ಬಂದಿದೆ. ಇನ್ನು ಯುವತಿಯರಲ್ಲಿ ಕಣ್ಣಿನ ಸಮಸ್ಯೆ, ಹಾಗೂ ಹೈಪೋ ಥೈರಾಯಿಡ್ ಕಾಣಸಲು ಈ ಕೋವಾಕ್ಸಿನ್ ಕಾರಣವಾಗಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ : ರಾಖಿ ಸಾವಂತ್ ಗೆ ಕ್ಯಾನ್ಸರ್!? ಮಾಜಿ ಪತಿ ಹೇಳಿದ್ದೇನು?

ಆದ್ರೆ, ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಬೇಕಾಗಿದ್ದು, ಸದ್ಯಕ್ಕೆ ಕೋವ್ಯಾಕ್ಸಿನ್ ಪಡೆದು ಒಂದು ವರ್ಷ ಆಗಿದ್ದವರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಹೀಗಾಗಿ ಇನ್ನಷ್ಟು ಅಧ್ಯಯನದ ಮೂಲಕ ಇದರಿಂದ ಆಗಿರುವ ಅಡ್ಡ ಪರಿಣಾಮವನ್ನು ಅಧ್ಯಯನ ಮಾಡಬೇಕಿದೆ.

Continue Reading

LATEST NEWS

Trending