Connect with us

LATEST NEWS

ಆ.18ರಿಂದ ‘ಅಬತರ’ ತುಳು ಸಿನಿಮಾ-15 ಚಿತ್ರಮಂದಿರಗಳಲ್ಲಿ ತೆರೆಗೆ

Published

on

ಉಡುಪಿ: ಬೊಳ್ಳಿ ಮೂವೀಸ್ ಮತ್ತು ಅವಿಕ ಪ್ರೊಡಕ್ಷನ್‌ನಲ್ಲಿ ಅರ್ಜುನ್ ಕಾಪಿಕಾಡ್ ನಿರ್ದೇಶನದಲ್ಲಿ ತಯಾರಾದ ಬಹು ನಿರೀಕ್ಷೆಯ ತುಳು ಸಿನಿಮಾ “ಅಬತರ” ಅಗಸ್ಟ್ 18 ರಂದು ಗುರುವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ತಿಳಿಸಿದರು.


ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಬತರ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಮಾಲ್, ಸಿನಿಪೊಲಿಸ್, ಪಿವಿಆರ್, ಮೂಡಬಿದ್ರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್ ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಉಡುಪಿಯಲ್ಲಿ ಕಲ್ಪನಾ, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಐನಾಕ್ಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಾಣಲಿದೆ. ಒಟ್ಟು 15 ಚಿತ್ರ ಮಂದಿರಗಳಲ್ಲಿ ಸಿನಿಮಾ ಏಕ ಕಾಲಕ್ಕೆ ತೆರೆ ಕಾಣಲಿದೆ’ ಎಂದರು.


ತದನಂತರ ಮುಂಬೈ, ಬೆಂಗಳೂರು, ಕಾಸರಗೋಡು, ಮುಳ್ಳೇರಿಯ, ಸಕಲೇಶಪುರ, ಶುಂಠಿಕೊಪ್ಪ, ತೀರ್ಥಹಳ್ಳಿ, ಕುಂದಾಪುರ, ಶಿವಮೊಗ್ಗ ಮೊದಲಾದ ಕಡೆಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ. ಆಗಸ್ಟ್ 16 ಮತ್ತು 17 ರಂದು ಮಂಗಳೂರು, ಮೂಡಬಿದ್ರೆ, ಪುತ್ತೂರು, ಉಡುಪಿ, ಪಡುಬಿದ್ರೆ, ಕಿನ್ನಿಗೋಳಿ, ಗುರುಪುರ, ಕುಲಶೇಖರ ಮೊದಲಾದ ಅನಾಥಶ್ರಮದಲ್ಲಿರುವ ಮಕ್ಕಳಿಗೆ ಸಿನಿಮಾವನ್ನು ಉಚಿತವಾಗಿ ಪ್ರದರ್ಶಿಸಲಾಗುವುದು ಎಂದು ದೇವದಾಸ್ ಕಾಪಿಕಾಡ್ ತಿಳಿಸಿದರು.

ಈ ಸಿನಿಮಾಕ್ಕೆ ಮಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕೋವಿಡ್ ನಿಂದಾಗಿ ಚಿತ್ರ ತೆರೆಗೆ ಬರುವುದು ಸ್ವಲ್ಪ ವಿಳಂಬವಾಗಿದೆ. ಈಗ ಸಿನಿಮಾವನ್ನು ಆಗೋಸ್ಟ್ 18 ಗುರುವಾರ ಕರಾವಳಿ ಜಿಲ್ಲೆಯಾದ್ಯಂತ ಅಬತರ ಬಿಡುಗಡೆಗೊಳಿಸಲಾಗುತ್ತದೆ.

ಪ್ರೇಕ್ಷಕರು ಇಷ್ಟ ಪಡುವಂತೆ ಇದು ಸಂರ್ಪೂ ಹಾಸ್ಯ ಚಿತ್ರದ ಪ್ಯಾಕೇಜ್. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನೂ ನೀಡಲಾಗಿದೆ ಎಂದು ನಟ ಅರ್ಜುನ್ ಕಾಪಿಕಾಡ್ ತಿಳಿಸಿದರು.

ಅಬತರ ಹಾಸ್ಯ ಸಿನಿಮಾದ ಕತೆಯನ್ನು ಡಾ| ದೇವದಾಸ್ ಕಾಪಿಕಾಡ್ ರಚಿಸಿ, ಅಭಿನಯಿಸಿ ತುಳುನಾಡ ಆಕ್ಷನ್ ಕಿಂಗ್ “ಅರ್ಜುನ್ ಕಾಪಿಕಾಡ್” ಅಭಿನಯದ ಜೊತೆಗೆ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ನವೀನ್ ಡಿ ಪಡಿಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿ ಕೃಷ್ಣ, ಶನಿಲ್ ಗುರು, ಚೇತನ್ ರೈ ಮಾಣಿ ,ಲಕ್ಷ್ಮೀಶ್, ಸುನಿಲ್ ಚಿತ್ರಾಪುರ ಮತ್ತು ನಾಯಕನಟಿಯಾಗಿ ಗಾನ ಭಟ್, ಕ್ರಿಸ್ಟಿನಾ ನಟಿಸಿದ್ದಾರೆ.

ಛಾಯಾಗ್ರಾಹಕರಾಗಿ ವಿಷ್ಣು ಪ್ರಸಾದ್, ಜೇಕೋಬ್, ಕಾರ್ಯಕಾರಿ ನಿರ್ಮಾಪಕರಾಗಿ ಸಂದೀಪ್ ಶೆಟ್ಟಿ ಕೆಲಸ ಮಾಡಿದ್ದಾರೆ. ನಿಖಿಲ್ ಸಾಲ್ಯಾನ್ ನಿರ್ಮಾಪಕರಾಗಿದ್ದು, ವೀರಾಜ್ ಅತ್ತಾವರ ಸಹ ನಿರ್ಮಾಪಕರಾಗಿದ್ದಾರೆ. ಅಬತರ ಸಿನಿಮಾದಲ್ಲಿರುವ ‘ಬಿನ್ನೆರ್ ಬೈದಿನ ಹಾಡು’ ಚಿತ್ರ ಬಿಡುಗಡೆಗೂ ಮುನ್ನವೇ ಯೂಟ್ಯೂಬ್ ನಲ್ಲಿ 5 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯಾಗಿ, ಜನಪ್ರಿಯವಾಗಿದೆ.

ಚಿತ್ರ ತಂಡದಲ್ಲಿರುವ ಹಿರಿಯ ಕಲಾವಿದರಾದ ನವೀನ್ ಡಿ ಪಡೀಲ್ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ ಮೊದಲಾದವರ ಹಿರಿಯ ಕಲಾವಿದರ ಸಹಕಾರದಿಂದ ಮತ್ತು ದೇವದಾಸ್ ಕಾಪಿಕಾಡ್ ಅವರ ಆಶೀರ್ವಾದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದು ನಟ, ನಿರ್ದೇಶಕ ಅರ್ಜುನ್ ಕಾಪಿಕಾಡ್ ತಿಳಿಸಿದ್ದಾರೆ. ಅರ್ಜುನ್ ಕಾಪಿಕಾಡ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ.‌

DAKSHINA KANNADA

ಮಂಗಳೂರು : ಮೇ 25 ರಂದು ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ

Published

on

ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.), ಮಂಗಳೂರು ಮತ್ತು ನಾರಾಯಣ ಗುರು ಕಾಲೇಜು ಇದರ ಆಶ್ರಯದಲ್ಲಿ ಕೆ.ಎಮ್.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಸಹಕಾರದಿಂದ ಹಿಂದುಳಿದ ಸಮಾಜದ ಸಾಮಾಜಿಕ ಕ್ರಾಂತಿಯ ಹರಿಕಾರ ದಿ.ದಾಮೋದರ ಆರ್.ಸುವರ್ಣ ಜನ್ಮಶತಾಬ್ದಿ ಪ್ರಯುಕ್ತ ಮೇ 25 ರಂದು ಕುದ್ರೋಳಿ ನಾರಾಯಣ ಗುರು ಕಾಲೇಜಿನ ದಾಮೋದರ ಆರ್.ಸಭಾಂಗಣದಲ್ಲಿ ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆ ತನಕ ಈ ಕಾರ್ಯಕ್ರಮ ನಡೆಯಲಿದೆ.


ವೈದ್ಯಕೀಯ ಶಿಬಿರದಲ್ಲಿ ಕಣ್ಣು, ಕಿವಿ, ಮೂಗು, ಗಂಟಲು, ಎಲುಬು, ಕೀಲು ಮತ್ತು ಸಾಮಾನ್ಯ ರೋಗ ತಪಾಸಣೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ರೀಡಿಂಗ್ ಕನ್ನಡಕ ಅಗತ್ಯ ಇದ್ದವರಿಗೆ ಉಚಿತವಾಗಿ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವವರಿಗೆ ಕೆ.ಎಮ್.ಸಿ.ಯ ಹಸಿರು ಕಾರ್ಡ್ ನೀಡಲಾಗುವುದು.

ಇದನ್ನೂ ಓದಿ : ಟಿ 20 ವಿಶ್ವಕಪ್ ಗೆ ಲಗ್ಗೆಯಿಟ್ಟ ‘ನಂದಿನಿ’; ಕ್ರಿಕೆಟಿಗರ ಜೆರ್ಸಿಯಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌

ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಬೇಕು. ಅದೇ ರೀತಿ ರಕ್ತದಾನದಲ್ಲೂ ಸ್ವಯಂ ಸ್ಪೂರ್ತಿಯಿಂದ ಭಾಗವಹಿಸಬೇಕೆಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Continue Reading

LATEST NEWS

ಒಂದೇ ಒಂದು ಸೊಳ್ಳೆಗಳಿಲ್ಲದ ವಿಚಿತ್ರ ದೇಶವಿದು..!

Published

on

ಐಸ್‌ಲ್ಯಾಂಡ್: ಬಿಸಿಲು, ಮಳೆ ಎರಡೂ ಕಾಣಿಸಿಕೊಂಡಾಗ ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತದೆ. ಸೊಳ್ಳೆ ಕಚ್ಚುವುದರಿಂದ ಮಲೇರಿಯಾ, ಡೆಂಗ್ಯೂನಂತಹ ಮಾರಣಾಂತಿಕ ಕಾಯಿಲೆಗಳು ಬರಬಹುದು. ಸೊಳ್ಳೆಗಳಿಂದ ಹರಡುವ ರೋಗದಿಂದ ಪ್ರತಿವರ್ಷ ಲಕ್ಷಾಂತರ ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಪ್ರಪಂಚದಾದ್ಯಂತ ಒಟ್ಟು 3 ಸಾವಿರ ಜಾತಿಯ ಸೊಳ್ಳೆಗಳಿವೆ. ಆದರೆ ಒಂದೇ ಒಂದು ಸೊಳ್ಳೆಗಳೂ ಇಲ್ಲದ ವಿಶಿಷ್ಟ ದೇಶವೊಂದಿದೆ. ಹೌದು ಅದುವೇ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಐಸ್‌ಲ್ಯಾಂಡ್ ದೇಶ. ಇದು ಹಾವು ಮುಕ್ತ ಮಾತ್ರವಲ್ಲ, ಸೊಳ್ಳೆ ಮುಕ್ತ ದೇಶವೂ ಆಗಿದೆ.

ಐಸ್‌ಲ್ಯಾಂಡ್ ವಿಪರೀತ ಚಳಿ ಇರುವ ಪ್ರದೇಶವಾಗಿದೆ. ಅಲ್ಲಿನ ಶೀತ ವಾತಾವರಣದಲ್ಲಿ ಸೊಳ್ಳೆಗಳು ಬದುಕಲು ಸಾಧ್ಯವಿಲ್ಲ. ಐಸ್‌ಲ್ಯಾಂಡ್ ಹವಾಮಾನವು ಬಹಳ ವೇಗವಾಗಿ ಬದಲಾಗುತ್ತದೆ. ಹವಾಮಾನದಲ್ಲಿನ ತ್ವರಿತ ಬದಲಾವಣೆಯ ಕಾರಣ ಸೊಳ್ಳೆಗಳು ತಮ್ಮ ಜೀವನಚಕ್ರ ಸಾಗಿಸಲು ಸಾಧ್ಯವಿಲ್ಲ.

ಐಸ್‌ಲ್ಯಾಂಡ್ ತಾಪಮಾನ ಇಳಿಕೆ ಆರಂಭವಾದಾಗ ನೀರು ಮಂಜುಗಡ್ಡೆ ರೂಪ ತಾಳುತ್ತದೆ. ನೀರು ಸಂಪೂರ್ಣವಾಗಿ ಹೆಪ್ಪುಗಟ್ಟುವ ಕಾರಣ ಪ್ಯೂಪಾ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಐಸ್‌ಲ್ಯಾಂಡ್‌ನಲ್ಲಿ ತಾಪಮಾನವು ಮೈನಸ್ 38 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಅಂತಹ ಕಡಿಮೆ ತಾಪಮಾನದಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವುದು ಅಸಾಧ್ಯ.

ಐಸ್‌ಲ್ಯಾಂಡ್‌ನಲ್ಲಿ ಸೊಳ್ಳೆಗಳಿಗೆ ಸಂಬಂಧಿಸಿದ ಒಂದು ಸಿದ್ಧಾಂತವೆಂದರೆ ಈ ದೇಶದ ನೀರು, ಮಣ್ಣು ಮತ್ತು ಸಾಮಾನ್ಯ ಪರಿಸರ ವ್ಯವಸ್ಥೆಯು ರಾಸಾಯನಿಕ ಸಂಯೋಜನೆಯ ಸೊಳ್ಳೆ ಜೀವನವನ್ನು ಬೆಂಬಲಿಸುವುದಿಲ್ಲ. ಆದರೆ ಐಸ್‌ಲ್ಯಾಂಡ್‌ನ ನೆರೆಯ ದೇಶಗಳಾದ ನಾರ್ವೆ, ಡೆನ್ಮಾರ್ಕ್‌, ಸ್ಕಾಟ್ಲೆಂಡ್ ದೇಶಗಳಲ್ಲಿ ಸೊಳ್ಳೆಗಳಿವೆ.

Continue Reading

LATEST NEWS

ಟಿ 20 ವಿಶ್ವಕಪ್ ಗೆ ಲಗ್ಗೆಯಿಟ್ಟ ‘ನಂದಿನಿ’; ಕ್ರಿಕೆಟಿಗರ ಜೆರ್ಸಿಯಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌

Published

on

ಮಂಗಳೂರು : ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌ ಆದ ನಂದಿನಿ ಜಾಗತಿಕ ಬ್ರಾಂಡ್ ಆಗಿ ಲಗ್ಗೆ ಇಟ್ಟಿದೆ. ವಿಶ್ವಕಪ್ ಟಿ-ಟ್ವೆಂಟಿ ಪಂದ್ಯಕೂಟದಲ್ಲಿ ನಂದಿನಿ ಹೆಸರು ರಾರಾಜಿಸಲಿದೆ. ಹೌದು, ನಂದಿನಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ. ರಾಜ್ಯದ ಕೃಷಿಕರ ಶ್ರಮವನ್ನು ಹಾಗೂ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ವಿಶ್ವಕ್ಕೆ ಸಾರುವ ಯತ್ನದಲ್ಲಿದೆ.


ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಟೂರ್ನಿಯಲ್ಲಿ ನಂದಿನಿ :

ಜೂನ್ ೧ ರಿಂದ ಆರಂಭವಾಗಲಿರುವ ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಟೂರ್ನಿ ಅಮೆರಿಕದಲ್ಲಿ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರ ಜರ್ಸಿಯಲ್ಲಿ ಭಾರತೀಯ ಭಾಷೆಯೊಂದು ಪ್ರದರ್ಶಿಸಲಾಗುತ್ತಿದೆ. ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನ ಆಟಗಾರರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕೆಎಂಎಫ್‌ನ ನಂದಿನಿಯ ಲಾಂಛನವಿರುವ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದ್ದಾರೆ.


ಸಿಎಂ ಟ್ವೀಟ್ :

ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ ಟಿ೨೦ ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ.

ಇದನ್ನೂ ಓದಿ : ಅಂಜಲಿ ಹಂ*ತಕನ ಬಂಧನ; ರೈಲಿನಲ್ಲಿ ಪ್ರಯಾಣಿಸುತ್ತಿದ್ದವನ ಪೊಲೀಸರು ಬಂಧಿಸಿದ್ದು ಹೇಗೆ?!

ರಾಜ್ಯದ ಜನರ ಮನೆ-ಮನ ಗೆದ್ದಿರುವ ನಂದಿನಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಂದಿನಿ ಉತ್ಪನ್ನಗಳು ಕ್ರಿಕೆಟ್ ಆಟಗಾರರ ಹಾಗೂ ಕ್ರಿಕೆಟ್ ಪ್ರೇಮಿಗಳ ಮನ ಗೆಲ್ಲುವುದಂತು ನಿಜ ಸಂಗತಿ ಎಂದು ಬರೆದುಕೊಂಡಿದ್ದಾರೆ.

Continue Reading

LATEST NEWS

Trending