32 ಕೆಜಿ ಗಾಂಜಾ ನಾಶಪಡಿಸಿದ ಉಡುಪಿ ಪೊಲೀಸರು
32 ಕೆಜಿ ಗಾಂಜಾ ನಾಶಪಡಿಸಿದ ಉಡುಪಿ ಪೊಲೀಸರು
ಉಡುಪಿ: ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 32 ಕೆಜಿ ಗಾಂಜಾವನ್ನ ಉಡುಪಿ ಪೊಲೀಸರು ನಾಶ ಪಡಿಸಿದ್ದಾರೆ.
ಉಡುಪಿಯ ಸೆನ್ ಠಾಣೆ, ಮಣಿಪಾಲ, ಉಡುಪಿ ಠಾಣೆಗಳಲ್ಲಿ ವಶವಾದ 17 ಪ್ರಕರಣಗಳ ಒಟ್ಟು 32.883 ಕಿಲೋ ಗಾಂಜಾಕ್ಕೆ ಬೆಂಕಿ ಕೊಟ್ಟು ಪೊಲೀಸರು ನಾಶಗೊಳಿಸಿದ್ದಾರೆ.
ಎಸ್ ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಈ ಅಮಲು ಪದಾರ್ಥಗಳ ನಾಶ ಕಾರ್ಯ ನಡೆದಿದ್ದು, ಇದರಲ್ಲಿ ಹೆರಾಯಿನ್, ಮಾಫಿನ್ , ಚರಾಸ್ ಗಳು ಇದ್ದವು ಎಂಬ ಮಾಹಿತಿ ಇದೆ. ಇನ್ನು ಗಾಂಜಾ ನಾಶ ಸಂದರ್ಭ ವಿಷಯುಕ್ತ ಅನಿಲ ಬಿಡುಗಡೆಯಾಗುವ ಸಾಧ್ಯತೆ ಹಿನ್ನಲೆ ಪೊಲೀಸರು ಬಹಳ ಮುನ್ನೆಚ್ಚರಿಕಾ ಕ್ರಮ ಬಳಸಿದ್ದಾರೆ. ಇನ್ನು ಈ ಕಾರ್ಯಾಚರಣೆಯಲ್ಲಿ ಸೆನ್ ಠಾಣೆ, ಮಣಿಪಾಲ, ಉಡುಪಿ ಠಾಣಾ ಪೊಲೀಸರು ಭಾಗಿಯಾಗಿದ್ದರು.
LATEST NEWS
ಹೈಕೋರ್ಟ್ ನ್ಯಾಯಾದೀಶರ ಹೇಳಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಎಂಟ್ರಿ..!
ಮಂಗಳೂರು/ ನವದೆಹಲಿ : ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾದೀಶರ ವಿವಾದಾತ್ಮಕ ಹೇಳಿಕೆಯ ವಿಚಾರವನ್ನು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾದೀಶರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾದೀಶರ ಪೀಠವು ಈ ವಿಚಾರ ಕೈಗೆತ್ತಿಕೊಂಡಿದೆ.
ಇತ್ತೀಚೆಗೆ ವಿಚಾರಣೆಯ ವೇಳೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಬೆಂಗಳೂರಿನಲ್ಲಿ ಮುಸ್ಲಿಂ ಪ್ರಾಬಲ್ಯ ಇರುವ ಪ್ರದೇಶವನ್ನು “ಪಾಕಿಸ್ತಾನ” ಎಂದು ಕರೆದು ಇದೇ ಸತ್ಯ ಎಂದು ಹೇಳಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನ್ಯಾಯಮೂರ್ತಿಯ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಭೂ ಮಾಲೀಕ ಹಾಗೂ ಹಿಡುವಳಿದಾರರ ಜಮೀನು ವಿವಾದದ ಕುರಿತಾದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಶ್ರೀಶಾನಂದ ಅವರು ಈ ಹೇಳಿಕೆಯನ್ನು ನೀಡಿದ್ದರು. ಇಷ್ಟೇ ಅಲ್ಲದೆ ಮಹಿಳಾ ವಕೀಲರ ವಿರುದ್ಧ ಸ್ತ್ರೀ ದ್ವೇಷದ ಹೇಳಿಕೆ ಕೂಡ ನೀಡಿದ್ದರು.
ಸುಪ್ರೀಂ ಕೋರ್ಟ್ ಈ ವಿಚಾರವಾಗಿ ಹೇಳಿದ್ದೇನು ?
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾದೀಶರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ನ್ಯಾಯಾಂಗದ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದೆ. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿನ ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಸ್ಥಾಪಿಸುವ ಅಗತ್ಯವನ್ನು ಒತ್ತಿಹೇಳಿತು.
ಸಾಮಾಜಿಕ ಮಾಧ್ಯಮಗಳು ನ್ಯಾಯಾಲಯದ ಕಲಾಪಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅದನ್ನು ಹಂಚಿಕೊಳ್ಳುತ್ತಿದೆ. ಹೀಗಾಗಿ ನ್ಯಾಯಾಂಗದ ಹೇಳಿಕೆಗಳು ನ್ಯಾಯಾಲಯದ ಪ್ರಚಲಿತ ವಿಚಾರಗಳ ಜೊತೆ ಹೊಂದಿಕೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು ತುರ್ತು ಎಂದು ಪೀಠವು ಹೇಳಿದೆ.
ಇದನ್ನೂ ಓದಿ : ಗಂಭೀರ ಆರೋಪದ ಸುಳಿಯಲ್ಲಿ ಸಿಕ್ಕ ಬಿಜೆಪಿ ಶಾಸಕ ಮುನಿರತ್ನ ಮತ್ತೆ ಅರೆಸ್ಟ್
“ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳು ಮಾಡಿದ ಕಾಮೆಂಟ್ಗಳ ಮಾಧ್ಯಮ ವರದಿಗಳ ಬಗ್ಗೆ ಗಮನ ಸೆಳೆಯಲಾಗಿದೆ. ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಿಂದ ಸೂಚನೆಗಳನ್ನು ಪಡೆದ ನಂತರ ವರದಿಯನ್ನು ಸಲ್ಲಿಸುವಂತೆ ನಾವು ಕರ್ನಾಟಕ ಹೈಕೋರ್ಟ್ಗೆ ವಿನಂತಿಸುತ್ತೇವೆ” ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದ್ದಾರೆ.
LATEST NEWS
ಗಂಭೀರ ಆರೋಪದ ಸುಳಿಯಲ್ಲಿ ಸಿಕ್ಕ ಬಿಜೆಪಿ ಶಾಸಕ ಮುನಿರತ್ನ ಮತ್ತೆ ಅರೆಸ್ಟ್
ಮಂಗಳೂರು/ಬೆಂಗಳೂರು : ಗುತ್ತಿಗೆದಾರನಿಗೆ ಬೆದರಿ*ಕೆ, ಜಾತಿ ನಿಂದನೆ ಹಾಗೂ ಹಣದ ಆಮಿಷ ಒಡ್ಡಿದ ಆರೋಪದಲ್ಲಿ ಜೈಲು ಪಾಲಾಗಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ಆದ್ರೆ ಜಾಮೀನು ಪಡೆದು ಹೊರಬರುತ್ತಿದ್ದಂತೆ, ಶಾಸಕ ಹೊರಬರುತ್ತಿದ್ದಂತೆ ಅತ್ಯಾಚಾ*ರ ಪ್ರಕರಣದಲ್ಲಿ ರಾಮನಗರ ಪೊಲೀಸರು ಮುನಿರತ್ನರನ್ನ ಬಂಧಿಸಿದ್ದಾರೆ.
ಗುತ್ತಿಗೆದಾರನಿಗೆ ಜೀವ* ಬೆದರಿ*ಕೆ ಹಾಕಿದ ಪ್ರಕರಣದಲ್ಲಿ ಮುನಿರತ್ನ ಅಂದರ್ ಆಗುತ್ತಿದ್ದಂತೆ ಹಲವು ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿವೆ. ಅತ್ಯಾಚಾ*ರ, ಎದುರಾಳಿಗಳನ್ನು ಮಟ್ಟ ಹಾಕಲು ಅವರ ಖಾಸಗಿ ವಿಡಿಯೋಗಳ ದುರ್ಬಳಕೆ, ಹನಿಟ್ರ್ಯಾಪ್ನಲ್ಲಿ ಹೆಚ್ಐವಿ ಸೋಂಕಿತರ ಬಳಕೆ ಹೀಗೆ ಅನೇಕ ಆರೋಪಗಳು ಮುನಿರತ್ನ ಮೇಲೆ ಕೇಳಿ ಬಂದಿದೆ. ಅತ್ಯಾಚಾ*ರ ಹಾಗೂ ಬೆದರಿ*ಕೆ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಮುನಿರತ್ನರನ್ನು ಬಂಧಿಸಿದ್ದಾರೆ.
ಮುನಿರತ್ನ ಮೇಲೆ ಇರುವ ಗಂಭೀರ ಆರೋಪಗಳು :
ಅನೇಕ ಮಂದಿಯ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಮುನಿರತ್ನ ಬ್ಲ್ಯಾಕ್ಮೇಲ್ ಮಾಡುತ್ತಿದ್ದುದಲ್ಲದೆ, ರಾಜಕೀಯ ಎದುರಾಳಿಗಳನ್ನು ಮಣಿಸಲು ಅವುಗಳನ್ನು ಬಳಕೆ ಮಾಡುತ್ತಿದ್ದರು. ಅವರು ಈ ವಿಡಿಯೋಗಳನ್ನು ಇಟ್ಟುಕೊಂಡು ಬೆದರಿ*ಕೆ ಹಾಕುತ್ತಿದ್ದಾರೆ ಅಂತ ಅತ್ಯಾಚಾ*ರದ ಸಂತ್ರ*ಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೇ ಸಂ*ತ್ರಸ್ತೆಯ ವೀಡಿಯೋ ಇಟ್ಟುಕೊಂಡು ಹಲವರ ಹನಿಟ್ರ್ಯಾಪ್ಗೆ ಯತ್ನಿಸಿದ್ದರು ಮಾತ್ರವಲ್ಲದೆ ಹೆಚ್ಐವಿ ಸೋಂಕಿತರನ್ನೂ ಇದಕ್ಕಾಗಿ ಬಳಕೆ ಮಾಡಿದ್ದಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ : ಬಸ್ ಚಾಲನೆ ವೇಳೆಯೇ ಚಾಲಕನಿಗೆ ಹೃದಯಘಾತ,; ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು 45 ಜೀವ !
ರಾಜಕೀಯ ಎದುರಾಳಿಗಳ ಹಣಿಯಲು ಮುನಿರತ್ನ ಅಟ್ರಾಸಿಟಿ ಕೇಸ್ಗಳ ದುರ್ಬ*ಳಕೆ ಮಾಡುತ್ತಿದ್ದರು ಎಂಬ ಆರೋಪವೂ ಈಗ ಕೇಳಿಬಂದಿದೆ. ಮುನಿರತ್ನ ಅಟ್ರಾಸಿಟಿ ಕೇಸ್ಗಳನ್ನೇ ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದರು. ಹಣ ಕೊಟ್ಟು ಪ್ರಭಾವ ಬಳಸಿ ಅಟ್ರಾಸಿಟಿ ಕೇಸ್ಗಳನ್ನು ದಾಖಲಿಸುತ್ತಿದ್ದರು. ಈ ಹಿಂದೆ ಆರ್ಆರ್ ನಗರದಲ್ಲಿ ಹಲವರ ವಿರುದ್ಧ ಅಟ್ರಾಸಿಟಿ ಕೇಸ್ಗಳು ದಾಖಲಾಗಿದ್ದವು ಎಂದು ಮೂಲಗಳು ತಿಳಿಸಿವೆ.
bangalore
ಬಸ್ ಚಾಲನೆ ವೇಳೆಯೇ ಚಾಲಕನಿಗೆ ಹೃದಯಾಘಾತ,; ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು 45 ಜೀವ !
ಮಂಗಳೂರು/ಬೆಂಗಳೂರು: ಸರ್ಕಾರಿ ಬಸ್ ಚಾಲಕನಿಗೆ ಬಸ್ ಚಾಲನೆ ವೇಳೆಯೇ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಪೊಲೀಸರು ತೋರಿದ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 45 ಜನರ ಜೀವ ಉಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
BMTC ಬಸ್ ಡ್ರೈವರ್ ವೀರೇಶ್ ಅವರಿಗೆ ಗುರುವಾರ(ಸೆ.19) ಮಧ್ಯಾಹ್ನ ಶಾಂತಿನಗರದ ಡಬಲ್ ರೋಡ್ ಬಳಿ ಬಸ್ ರನ್ನಿಂಗ್ನಲ್ಲಿದ್ದ ವೇಳೆ ಏಕಾಏಕಿ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ. ವೇಗವಾಗಿ ಓಡುತ್ತಿದ್ದ ಬಸ್ ನಿಧಾನವಾಗ ತೊಡಗಿದ ವೇಳೆ ಅನುಮಾನಗೊಂಡ ಹಲಸೂರು ಟ್ರಾಫಿಕ್ ಪೊಲೀಸ್ ಎಎಸ್ಐ ಆರ್ . ರಘುಕುಮಾರ್ ಬಸ್ ಬಳಿ ಓಡಿ ಬಂದು ನೋಡಿದಾಗ ಎದೆಗೆ ಕೈ ಹಿಡಿದು ಬಸ್ ಚಾಲಕ ಒಂದು ಕಡೆಗೆ ವಾಲಿದ್ದನು.
ಹಾರ್ಟ್ ಅಟ್ಯಾಕ್ ಆಗಿರುವುದನ್ನ ಗಮನಕ್ಕೆ ಬಂದಿದ್ದು, ಟ್ರಾಫಿಕ್ ಎಎಸ್ಐ ತಕ್ಷಣ ಹ್ಯಾಂಡ್ ಬ್ರೇಕ್ ಹಾಕಿ ಚಾಲಕನನ್ನು ಕೆಳಗೆ ಇಳಿಸಿ ಆಂಬುಲೆನ್ಸ್ಗೂ ಕಾಯದೆ, ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯದಿಂದ ಬಸ್ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು.
ಅದೃಷ್ಟವಶಾತ್, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಚಾಲಕ ವೀರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಪೊಲೀಸರ ಸಮಯಪ್ರಜ್ಞೆ 45 ಜನರ ಪ್ರಾಣವನ್ನೂ ಉಳಿಸಿದೆ.