DAKSHINA KANNADA
ಉಬಾರ್ ಮೀನಿಗೂ ಬಂತು ಭಾರೀ ಬೇಡಿಕೆ..!
ಉಡುಪಿ: ಕರಾವಳಿಯಲ್ಲಿ ಕಳೆದ ನಾಲೈದು ದಿನಗಳಿಂದ ಮುಂಗಾರು ಪೂರ್ವ ಮಳೆ ಜೋರಾಗಿ ಆರ್ಭಟಿಸುತ್ತಿದ್ದು ನದಿ, ಹಳ್ಳ ಕೆರೆ, ತೊರೆ, ತೋಡು ಮತ್ತು ಗದ್ದೆಗಳಲ್ಲಿ ನೀರು ಸರಾಗವಾಗಿ ಹರಿಯಲಾರಂಭಿಸಿದೆ. ವಿವಿಧೆಡೆಗಳಲ್ಲಿ ಸಾಂಪ್ರದಾಯಿಕ ಉಬರ್ ಫಿಶಿಂಗ್ ಕೂಡ ಜೋರಾಗಿ ನಡೆಯುತ್ತಿದೆ.
ಕಾಪು ತಾಲೂಕಿನ ಶಂಕರಪುರ ಕಟಪಾಡಿ ಪಾಂಗಾಳ, ಇನ್ನಂಜೆ, ಕುರ್ಕಾಲು, ಮಣಿಪುರ ಸಹಿತ ವಿವಿಧೆಡೆಗಳಲ್ಲಿನ ಪ್ರದೇಶಗಳ ಗದ್ದೆಗಳಲ್ಲಿ ಮತ್ತು ತೋಡುಗಳ ಬದಿಯಲ್ಲಿ ಕಳೆದ ಎರಡು ದಿನಗಳಿಂದ ಉಬರ್ ಮೀನುಗಾರಿಕೆ ನಡೆದಿದೆ. ಸಾಮಾನ್ಯವಾಗಿ ಏಡಿಗಳು ಹತ್ತಾರು ಅಡಿಗಳಷ್ಟು ಆಳದ ಬಿಲ ಕೊರೆದು ಅವುಗಳಲ್ಲಿ ಸುರಕ್ಷಿತವಾಗಿರುತ್ತವೆ, ಮೀನುಗಳು ಗಟ್ಟಿ ಕೆಸರಿನಲ್ಲಿ ಅವಿತು ಕುಳಿತಿರುತ್ತವೆ. ಮೊದಲ ಮಳೆ ಬೀಳುತ್ತಿದ್ದಂತೆ ಮೊಟ್ಟೆಯಿಡಲು ಸುರಕ್ಷಿತ ಜಾಗ ಹುಡುಕಿಕೊಂಡು ನೀರು ಕಡಿಮೆ ಇರುವ ಬಯಲು ಪ್ರದೇಶ, ಗದ್ದೆಗಳಿಗೆ ಮತ್ತು ಸಮತಟ್ಟು ಪ್ರದೇಶಗಳತ್ತ ಬಂದು ಮೊಟ್ಟೆ ಇಡುತ್ತವೆ.
Read More..; ಲಂಕೇಶ್ ಪುತ್ರನ ಜೊತೆ ಭರ್ಜರಿ ಸ್ಟೆಪ್ ಹಾಕಿದ ಶ್ರೇಯಾಂಕ ಪಾಟೀಲ್..! ಫುಲ್ ಫಿದಾ ಆದ ನೆಟ್ಟಿಗರು
ಆದ್ದರಿಂದ ಗದ್ದೆ ಪ್ರದೇಶದಲ್ಲಿ ಹೆಚ್ಚಾಗಿ ಈ ಮೀನು ಕಾಣಸಿಗುತ್ತದೆ ಎನ್ನುತ್ತಾರೆ ಮೀನುಗಾರರು. ಒಟ್ಟಿನಲ್ಲಿ ಉಬಾರ್ ಮೀನು ಭಾರೀ ಪ್ರಮಾಣದಲ್ಲಿ ಬರುತ್ತಿರುವುದು ಮೀನು ಪ್ರಿಯರಿಗೆ ಖುಷಿ ಕೊಟ್ಟಿದೆ. ಉಬಾರ್ ಮೀನು ಹಿಡಿಯುವ ವಿಡಿಯೋ ಎಲ್ಲಾ ಮೊಬೈಲ್ ಗಳಲ್ಲಿ ವೈರಲಾಗುತ್ತಿದೆ.
DAKSHINA KANNADA
ಚಿಕ್ಕಮೇಳದ ಹೆಸರಿನಲ್ಲಿ ಯಕ್ಷಗಾನ ಕಲೆಗೆ ಅಪಚಾರ ಮಾಡದಿರಿ; ಒಕ್ಕೂಟ ಮನವಿ
ಮಂಗಳೂರು: ಇಂದು ದೇಶ, ವಿದೇಶಗಳಲ್ಲಿ ಯಕ್ಷಗಾನದ ಹಿರಿಮೆ ಸಾರಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಲೆಯ ಹೆಸರಿನಲ್ಲಿ ಕಲೆಯ ಗಂಧಗಾಳಿ ಇಲ್ಲದವರು ಕೂಡಾ ಯಕ್ಷ ಕಲೆಯನ್ನು ವಿರೂಪಗೊಳಿಸುತ್ತಿವುದು ವಿಷಾದನೀಯ ಸಂಗತಿ. ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ತಿರುಗಾಟದ ಇಲ್ಲದ ಸಂದರ್ಭದಲ್ಲಿ ಮನೆ ಮನೆಗೆ ಚಿಕ್ಕ ಮೇಳಗಳು ಹೊರಡುತ್ತವೆ. ಆದರೆ ಯಕ್ಷಗಾನದ ಬಾಲಪಾಠವೂ ಆಗದವರಿಂದ ಚಿಕ್ಕ ಮೇಳ ಎಂದು ಹೆಸರಿಟ್ಟುಕೊಂಡು ಅದೊಂದು ದಂಧೆಯಾಗಿ ವ್ಯಾಪಕವಾಗಿರುವುದು ನೋವಿನ ಸಂಗತಿ ಎಂದು ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರ ಸಮಿತಿ ದೂರಿದೆ.
ಸಂಪ್ರದಾಯಕ್ಕೆ ಬದ್ಧವಾಗಿ, ಶಿಸ್ತುಬದ್ಧವಾಗಿ ಯಕ್ಷಗಾನ ಮಾಡಲು ಕಲಾವಿದರಲ್ಲಿ ಒಟ್ಟು ಮಾಡಿಕೊಂಡು ತೆಂಕುತಿಟ್ಟು ಚಿಕ್ಕಮೇಳ ಹೆಸರಿನಲ್ಲಿ ತಿರುಗಾಟವನ್ನು ಆರಂಭಿಸಲಾಗಿದೆ. ಒಕ್ಕೂಟದ ಪರವಾನಿಗೆ ಇದ್ದವರಿಗೆ ಮಾತ್ರ ಮನೆಯಲ್ಲಿ ಆಟವಾಡಿಸಲು ಜನತೆ ಅನುವು ಮಾಡಿಕೊಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ನಿಜವಾದ ಕಲಾವಿದರಿಗೆ ಅನ್ಯಾಯವಾಗಬಾರದು ಎನ್ನುವ ನಿಟ್ಟಿನಲ್ಲಿ ಒಕ್ಕೂಟವನ್ನು ರಚನೆ ಮಾಡಲಾಗಿದೆ. ಒಕ್ಕೂಟದ ಅಧಿಕೃತ ಪರವಾಣಿಗೆ ಪಡೆದು ತಿರುಗಾಟ ಮಾಡುವವರು ಸಂಜೆ 6ರಿಂದ ರಾತ್ರಿ 10.30ರವರೆಗೆ ಕನ್ನಡ ಇಲ್ಲವೇ ತುಳುಭಾಷೆಗಳ ಗರಿಷ್ಠ 20 ನಿಮಿಷಗಳ ಸಂದೇಶ ಇರುವ ಸನ್ನಿವೇಶದ ಪ್ರದರ್ಶನ ಮಾಡಲಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರಮೇಶ ಕುಲಶೇಖರ, ಕುಮಾರ್ ಮಾಲೆಮಾರ್, ದಿವಾಕರ ದಾಸ್, ಕಡಬ ದಿನೇಶ ರೈ ಮೊದಲಾದವರಿದ್ದರು.
DAKSHINA KANNADA
ಉಪ್ಪಿನಂಗಡಿ: ಮಹಿಳೆ ಸಾ*ವಿನಲ್ಲಿ ಅನುಮಾನ; ಕೊ*ಲೆ ಶಂಕೆ
ಉಪ್ಪಿನಂಗಡಿ : ಇಲ್ಲಿನ ಪೆರ್ನೆ ಬಳಿಯ ಬಿಳಿಯೂರು ದರ್ಖಾಸ್ ಎಂಬಲ್ಲಿ ಮಹಿಳೆಯೋರ್ವರು ಮೃ*ತಪಟ್ಟಿದ್ದು ಕೊ*ಲೆ ಶಂಕೆ ವ್ಯಕ್ತವಾಗಿದೆ. ಹೇಮಾವತಿ (37) ಮೃ*ತ ಮಹಿಳೆ.
ಈಕೆ ತಾಯಿ, ಅಕ್ಕನ ಮಗನೊಂದಿಗೆ ಮನೆಯಲ್ಲಿದ್ದ ವೇಳೆ ಭಾನುವಾರ(ಜೂ.16) ರಾತ್ರಿ ಕೃತ್ಯ ನಡೆದಿದೆ. ಮೊದಲಿಗೆ ಪರಿಸರದಲ್ಲಿ ಹೃದಯಾಘಾ*ತವೆಂಬ ಸುದ್ದಿ ಹರಡಿತ್ತು. ಆದರೆ ಬಳಿಕ ಈ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ : ಕಡಬ : ವಿದ್ಯುತ್ ಶಾಕ್ ಹೊಡೆದು ಯುವಕ ಸಾ*ವು
ವಿಚಾರಣೆಗಾಗಿ ಮೃ*ತಳ ಅಕ್ಕನ ಮಗ ಎಸ್ ಎಸ್ ಎಲ್ ಸಿ ಓದುತ್ತಿರುವ ಅಪ್ರಾಪ್ತ ಬಾಲಕನನ್ನು, ಆತನ ತಂದೆ ಶಂಕರ ಎಂಬವರನ್ನು ಕರೆದೊಯ್ದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಉಪ್ಪಿನಂಗಡಿ ಪೊಲೀಸರ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಷ್ಟೇ. ಮೃ*ತರು ಹೊಟೇಲ್ ಕಾರ್ಮಿಕೆಯಾಗಿದ್ದರು.
DAKSHINA KANNADA
ಕಡಬ : ವಿದ್ಯುತ್ ಶಾಕ್ ಹೊಡೆದು ಯುವಕ ಸಾ*ವು
ಕಡಬ : ವಿದ್ಯುತ್ ತಗುಲಿ ಯುವಕ ಸಾ*ವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಪಂಜದಲ್ಲಿ ನಡೆದಿದೆ. ಬೆಳ್ತಂಗಡಿಯ ಮೊಗ್ರು ಸಮೀಪದ ನಡುಎರ್ಮಲ್ ನ ಪ್ರಕಾಶ್(29) ಮೃ*ತಪಟ್ಟವರು.
ಅಲೆಕ್ಕಾಡಿ ಸಮೀಪದ ಪಿಜಾವ್ ನಲ್ಲಿ ವಿದ್ಯುತ್ ಕಂಬ ಏರಿ ಕೆಲಸ ನಿರ್ವಹಿಸುತ್ತಿದ್ದಾಗ ದುರಂ*ತ ಸಂಭವಿಸಿದೆ. ಪ್ರಕಾಶ್ ಗುತ್ತಿಗೆದಾರರ ಅಡಿಯಲ್ಲಿ ವಿದ್ಯುತ್ ಸರಿಪಡಿಸುತ್ತಿದ್ದರು.
ಇದನ್ನೂ ಓದಿ : ಪ್ರತಿಭಟನೆ ವೇಳೆ ಸುಸ್ತಾದ ಬಿಜೆಪಿಯ ಹಿರಿಯ ನಾಯಕ ಭಾನುಪ್ರಕಾಶ್ ನಿಧನ
ಈ ವೇಳೆ ಪ್ರಕಾಶ್ ಗೆ ವಿದ್ಯುತ್ ಶಾ*ಕ್ ಹೊಡೆದಿದ್ದು, ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- LATEST NEWS4 days ago
ಅಡುಗೆ ಮನೆಯಿಂದ ಹಲ್ಲಿಗಳನ್ನು ಓಡಿಸಲು ಈ ಟಿಪ್ಸ್ ಅನುಸರಿಸಿ
- LATEST NEWS5 days ago
ಅಡುಗೆಯಲ್ಲಿ ಉಪ್ಪು ಜಾಸ್ತಿ ಆಯ್ತಾ? ಯೋಚನೆ ಬೇಡ, ಈ ಟಿಪ್ಸ್ ಫಾಲೋ ಮಾಡಿ
- FILM5 days ago
ಡ್ರೋನ್ ಪ್ರತಾಪ್ ಹುಟ್ಟು ಹಬ್ಬಕ್ಕೆ ಸಿಕ್ತು ಬ್ಯೂಟಿಫುಲ್ ಗಿಫ್ಟ್
- LATEST NEWS6 days ago
ನಿಲ್ಲಿಸಿದ್ದ ಕಂಟೈನರ್ ಗೆ ಎಕ್ಸ್ ಪ್ರೆಸ್ ಬಸ್ ಡಿಕ್ಕಿ..; ಚಾಲಕ ಸಹಿತ 20ಕ್ಕೂ ಅಧಿಕ ಮಂದಿಗೆ ಗಾಯ