Connect with us

    LATEST NEWS

    ಮಂಗಳೂರು : ಅಮೆಜಾನ್‌ ಕಂಪನಿಗೆ ವಂಚನೆ – ಇಬ್ಬರ ಸೆರೆ

    Published

    on

    ಮಂಗಳೂರು: ಅಮೆಜಾನ್‌ ಕಂಪನಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಮಂಗಳೂರಿನ ಉರ್ವಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಧೋಪುರ್ ಜಿಲ್ಲೆಯ ರಾಜಕುಮಾರ್ ಮೀನಾ (23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತರು.

    ಆರೋಪಿಗಳು ಅಮೆಜಾನ್​ನಲ್ಲಿ ವಿವಿಧ ರೀತಿಯ ಬೆಲೆಬಾಳುವ ಸಾಮಗ್ರಿಗಳನ್ನು ಆರ್ಡರ್​​ ಮಾಡುತ್ತಿದ್ದರು. ವಸ್ತುಗಳ ಡಿಲೇವರಿ ಪಡೆಯಲು ಎರಡನೇ ಹಂತದ ನಗರಗಳ ಲೋಕೆಷನ್ ಆಯ್ಕೆ ಮಾಡುತ್ತಿದ್ದರು. ಬುಕ್ ಮಾಡಿದ ವಸ್ತುಗಳನ್ನು ಡೆಲಿವರಿ ಪಡೆಯಲು ಆರೋಪಿಗಳು ವಿಮಾನದಲ್ಲಿ ಹೋಗುತ್ತಿದ್ದರು. ವಸ್ತುವಿನ ಬಾಕ್ಸ್​ ಮೇಲಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿ ಅಮೆಜಾನ್ ಸಂಸ್ಥೆಗೆ ವಂಚಿಸುತಿದ್ದರು ಎನ್ನಲಾಗಿದೆ.

    ವಸ್ತುಗಳು ಡೆಲೆವರಿಯಾದ ಬಳಿಕ ಅದರ ಮೇಲಿನ ಟ್ರ್ಯಾಕಿಂಗ್ ಲೇಬಲ್​ಗಳನ್ನು ಅದೇ ರೀತಿಯ ಕಡಿಮೆ ಬೆಲೆಯ ವಸ್ತುಗಳ ಬಾಕ್ಸ್​​ ಮೇಲೆ ಹಚ್ಚುತ್ತಿದ್ದರು. ನಂತರ, ರಿಟರ್ನ್​​ ಮಾಡುತ್ತಿದ್ದರು. ದುಬಾರಿ ಬೆಲೆಯ ವಸ್ತುಗಳನ್ನು ತಮ್ಮಲ್ಲೇ ಇಟ್ಟುಕೊಂಡು ವಂಚಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ದುಬಾರಿ ಬೆಲೆಯ ವಸ್ತುಗಳನ್ನು ಸೆಕೆಂಡ್ ಹ್ಯಾಂಡ್​ಗೆ ಮಾರಾಟ ಮಾಡುತ್ತಿದ್ದರು. ಐಟಂ ರಿಟರ್ನ್ ಆದ ಬಳಿಕ ಆರ್ಡರ್​ಗೆ ಬಳಸಿದ ಸಿಮ್ ಕಿತ್ತೆಸೆಯುತ್ತಿದ್ದರು. ವಸ್ತು ಅಮೆಜಾನ್ ಗೋಡಾನ್ ತಲುಪಿದ ಬಳಿಕ ವಂಚನೆ ಬೆಳಕಿಗೆ ಬರುತ್ತಿತ್ತು.

    ಆರೋಪಿಗಳು ಕಳೆದ‌ ಐದು ವರ್ಷಗಳಿಂದಲೂ ಈ ರೀತಿ ವಂಚನೆ ಮಾಡುತ್ತಿದ್ದಾರೆ. ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ನೆಲೆಸಿ ವಂಚನೆ ಮಾಡಿದ್ದಾರೆ. ಉರ್ವ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಕಾರಿನೊಳಗೆ ಆಡುತ್ತಿರುವಾಗ ಅಕಸ್ಮಾತ್ ಡೋರ್ ಲಾಕ್; 4 ಮಕ್ಕಳ ದು*ರ್ಮರಣ

    Published

    on

    ಗುಜರಾತ್‌: ಕಾರಿನೊಳಗೆ ಆಟವಾಡಲು ಹೋಗಿದ್ದ ವೇಳೆ, ಅಕಸ್ಮಾತ್ ಬಾಗಿಲಿಗೆ ಬೀಗ ಬಿದ್ದ ಕಾರಣ ನಾಲ್ವರು ಮಕ್ಕಳು ಉ*ಸಿರುಗಟ್ಟಿ ಸಾ*ವನ್ನಪ್ಪಿರುವ ಧಾರುಣ ಘಟನೆ ಶನಿವಾರ (ನ.2) ಸಂಜೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

    ಕೆಲಸದ ನಿಮಿತ್ತ ಪೋಷಕರು ಜಮೀನಿಗೆ ಹೋಗಿದ್ದ ವೇಳೆ, ಮಾಲಕರ ಕಾರಿನಲ್ಲಿ ಮಕ್ಕಳು ಆಡಲು ಹೋಗಿದ್ದ ಸಂದರ್ಭ ಕೃ*ತ್ಯ ನಡೆದಿದೆ.

    ಘಟನೆಯ ಹಿನ್ನಲೆ :

    ಉಪ ಪೊಲೀಸ್ ವರಿಷ್ಠಾಧಿಕಾರಿ ಚಿರಾಗ್ ದೇಸಾಯಿ ನೀಡಿರುವ ಹೇಳಿಕೆಯಂತೆ, ಅಮ್ರೇಲಿಯ ರಂಧಿಯಾ ಗ್ರಾಮದಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳು ಮಧ್ಯಪ್ರದೇಶ ಮೂಲದ ಕೃಷಿ ಕಾರ್ಮಿಕ ದಂಪತಿಗೆ ಸೇರಿದವರು.

    ಮಕ್ಕಳ ಪಾಲಕರು ತಮ್ಮ ಏಳು ಮಕ್ಕಳನ್ನು ಬೆಳಗ್ಗೆ 7:30ರ ಸುಮಾರಿಗೆ ಮನೆಯಲ್ಲಿ ಬಿಟ್ಟು ಭರತ್ ಮಂದನಿ ಅವರ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದರು. ಏಳು ಮಕ್ಕಳಲ್ಲಿ ನಾಲ್ವರು ಆಟವಾಡಲು ಮನೆಯ ಬಳಿ ನಿಲ್ಲಿಸಿದ್ದ ತೋಟದ ಮಾಲೀಕರ ಕಾರಿನೊಳಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಚಾನಕ್‌ ಆಗಿ ಕಾರಿನ ಡೋರ್ ಲಾಕ್ ಆಗಿದ್ದು, ಮಕ್ಕಳು ಉ*ಸಿರುಗಟ್ಟಿ ಸಾ*ವನ್ನಪ್ಪಿದ್ದಾರೆ. ನಾಲ್ವರು ಮಕ್ಕಳ ವಯಸ್ಸು 2 ರಿಂದ 7 ವರ್ಷ ಎಂದು ಹೇಳಲಾಗಿದೆ.

    ಶನಿವಾರ ಸಂಜೆ ಮಕ್ಕಳ ಪೋಷಕರು ಮತ್ತು ತೋಟದ ಮಾಲೀಕರು ಹಿಂತಿರುಗಿದಾಗ ಕಾರಿನಲ್ಲಿದ್ದ ನಾಲ್ವರು ಮಕ್ಕಳ ಶ*ವಗಳನ್ನು ನೋಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅರ್ಮೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಪ್ರವಾಸಿಗರೇ ಗಮನಿಸಿ, ಚಿಕ್ಕಮಗಳೂರಿನ ಈ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ

    Published

    on

    ಮಂಗಳೂರು/ ಚಿಕ್ಕಮಗಳೂರು : ಶ್ರೀರಾಮಸೇನೆ ನೇತೃತ್ವದಲ್ಲಿ ದತ್ತಮಾಲಾ ಅಭಿಯಾನ ಆರಂಭವಾಗಿದೆ. ದತ್ತಮಾಲಾಧಾರಿಗಳು ಏಳು ದಿನಗಳ ಕಾಲ ಕಠಿಣ ವ್ರತದಲ್ಲಿದ್ದು, ಕೊನೆಯ ದಿನ (ನ. 10) ದತ್ತಪೀಠಕ್ಕೆ ಆಗಮಿಸುತ್ತಾರೆ. ಅಂದು, ದತ್ರಪೀಠದಲ್ಲಿ ಹೋಮಹವನ ನಡೆಯಲಿದೆ. ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪೊಲೀಸರು ನಗರದಲ್ಲಿ ಬಿಗಿ ಬಂದೋಬಸ್ತ್​​ ಮಾಡಿದ್ದಾರೆ.

    ಚಿಕ್ಕಮಗಳೂರು ಜಿಲ್ಲಾದ್ಯಂತ ಏಳು ದಿನಗಳ ಕಾಲ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
    ಅಲ್ಲದೇ, ಮುಂಜಾಗ್ರತ ಕ್ರಮವಾಗಿ ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ ಮತ್ತು ಗಾಳಿಕೆರೆ ಸೇರಿದಂತೆ ಸುತ್ತಮುತ್ತಲಿನ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ನವೆಂಬರ್​ 9 ಬೆಳಗ್ಗೆ 6 ಗಂಟೆಯಿಂದ ನವೆಂಬರ್​ 11 ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಲಾಗಿದೆ.

     ಇದನ್ನೂ ಓದು : BBK11: ಬಿಗ್​ಬಾಸ್​ ಮನೆಯಿಂದ ಆಚೆ ಬರುತ್ತಿದ್ದಂತೆ ಮದ್ವೆ ಆಗ್ತಾರಂತೆ ಈ ಸ್ಪರ್ಧಿ; ಯಾರವರು?

    ದತ್ತ ಮಾಲಾಧಾರಿಗಳು ನವೆಂಬರ್​ 10ರಂದು ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ಭೇಟಿ ನೀಡಲಿದ್ದಾರೆ. ಕಳೆದ ವರ್ಷಕ್ಕಿಂತ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು ಬರುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ತಾಣಗಳಿಗೆ ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಆದೇಶ ಹೊರಡಿಸಿದ್ದಾರೆ.

    Continue Reading

    LATEST NEWS

    ನ.20ರಂದು ರಾಜ್ಯಾಧ್ಯಂತ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ‘ಮದ್ಯ ಮಾರಾಟ’ ಬಂದ್

    Published

    on

    ಬೆಂಗಳೂರು: ರಾಜ್ಯದಲ್ಲಿ ಮದ್ಯ ಮಾರಾಟಗಾರರು ಅಬಕಾರಿ ಇಲಾಖೆಯ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿದ್ದಾರೆ. ನವೆಂಬರ್.20ರಂದು ರಾಜ್ಯಾಧ್ಯಂತ ಮದ್ಯ ಮಾರಾಟವನ್ನು ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಲಾಗಿದೆ.

     

    ಈ ಬಗ್ಗೆ ಮದ್ಯ ಮಾರಾಟಗಾರರ ಸಂಘದಿಂದ ಮಾಹಿತಿ ನೀಡಲಾಗಿದ್ದು, ಅಬಕಾರಿ ಇಲಾಖೆಯ ಭ್ರಷ್ಟಾಚಾರ, ಅಬಕಾರಿ ಇಲಾಖೆಯ ಅಧಿಕಾರಿಗಳ ಕಿರುಕುಳವನ್ನು ವಿರೋಧಿಸಿ ನವೆಂಬರ್.20ರಂದು ರಾಜ್ಯಾಧ್ಯಂತ ಮದ್ಯ ಮಾರಾಟ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದೆ.

    ನವೆಂಬರ್.20ರಂದು ರಾಜ್ಯಾಧ್ಯಂತ ಮದ್ಯ ಮಾರಾಟ ಬಂದ್ ಮಾಡಿ ಮದ್ಯದಂಗಡಿಯ ಮಾಲೀಕರು ಪ್ರತಿಭಟನೆಗೆ ಇಳಿಯಲಿದ್ದಾರೆ. ಅದು ಬಹುತೇಕವಾಗಿ ಎಣ್ಣೆಪ್ರಿಯರಿಗೆ ಮದ್ಯ ಸಿಗೋದು ಡೌಟ್ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.

    Continue Reading

    LATEST NEWS

    Trending