BIG BOSS
BBK11: ಬಿಗ್ಬಾಸ್ನಲ್ಲಿ ಹೊಸ ಲವ್ ಕಹಾನಿ.. ತ್ರಿವಿಕ್ರಮ್ ಪ್ರೀತಿ ಬಲೆಗೆ ಬಿದ್ರಾ ಈ ಸ್ಪರ್ಧಿಗಳು..?
Published
1 month agoon
By
NEWS DESK2ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ 11ರ ಸೀಸನ್ 4 ವಾರಗಳನ್ನ ಮುಗಿಸಿ 5ನೇ ವಾರದತ್ತ ಸಾಗುತ್ತಿದೆ. ಕಳೆದ ವಾರ ಕಿಚ್ಚ ಸುದೀಪ್ ಅವರ ಅನುಪಸ್ಥಿತಿ ಬಿಗ್ ಬಾಸ್ ಪ್ರೇಕ್ಷಕರಿಗೆ ಕಾಡಿತ್ತು. ಸದ್ಯ ಅವರು ವಾರದ ಪಂಚಾಯತಿಗೆ ಆಗಮಿಸಿ ಕೆಲ ಸ್ಪರ್ಧಿಗಳಿಗೆ ಮಾತಿನ ಏಟು ಕೊಟ್ಟಿದ್ದು ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದ ಹನುಮಂತಗೆ ಕ್ಲಾಪ್ ಮಾಡಿದ್ದಾರೆ. ಇದೆಲ್ಲದರ ನಡುವೆ ಇಂದಿನ ಪಂಚಾಯತಿ ಫುಲ್ ತಮಾಷೆ, ನಗುವಿನಲ್ಲೇ ಕಳೆಯಬಹುದು.
ಬಿಗ್ಬಾಸ್ನಲ್ಲಿ ಲವ್ ಕಹಾನಿ ನಡೆಯುತ್ತಿದೆ. ಅದು ಒಬ್ಬರನ್ನೇ ಇಬ್ಬರು ಪ್ರೀತಿ ಮಾಡಬೇಕು ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಸದ್ಯ ಇದರ ಗಮ್ಮತ್ತು ಏನೆಂಬುದು ಇಲ್ಲಿದೆ. ಮಂಜು ಅವರು ಭವ್ಯ ರೀತಿಯಲ್ಲಿ, ಅದರಂತೆ ಧನರಾಜ್ ಅವರು ಭನ್ಯಾ ರೀತಿಯಲ್ಲಿ ತ್ರಿವಿಕ್ರಮ್ರನ್ನ ಲವ್ ಮಾಡಬೇಕು ಎಂದು ತಮಾಷೆಯಾಗಿ ಕಿಚ್ಚ ಹೇಳಿದ್ದರು. ಇದಕ್ಕೆ ಮಸ್ತ್ ಕಾಮಿಡಿ ಮಿಕ್ಸ್ ಮಾಡಿ ಪರ್ಫಾಮೆನ್ಸ್ ನೀಡಿರುವ ಮಂಜು, ಧನರಾಜ್ ತ್ರಿವಿಕ್ರಮ್ಗೆ ಕೀಟಲೆ ಕೊಟ್ಟಿದ್ದಾರೆ.
ತ್ರಿವಿಕ್ರಮ್ಗಾಗಿ ಧನರಾಜ್ ಹಾಗೂ ಮಂಜು ಕಿತ್ತಾಡುವುದು ಸಖತ್ ಮಜವಾಗಿ ಇದೆ. ನಾನು ಇಲ್ಲಿವರೆಗೂ ಒಂದು ವಿಷ್ಯ ಹೇಳಿಲ್ಲ. ಹೊಟ್ಟೆಯಲ್ಲಿ ಒಂದು ಮಗು ಇದೆ ಎಂದು ಧನರಾಜ್ ಹೇಳುತ್ತಿದ್ದಂತೆ ಎಲ್ಲ ಸ್ಫರ್ಧಿಗಳು ಹೊಟ್ಟೆ ಹುಣ್ಣು ಆಗುವಂತೆ ನಕ್ಕಿದ್ದಾರೆ. ಇದಕ್ಕೆ ಪ್ರತಿಯಾಗಿ ತ್ರಿವಿಕ್ರಮ್ ಹೊಟ್ಟೆಯಲ್ಲಿರುವುದು ನಂದೇ ಸರ್ ಎಂದು ನಗುತ್ತಲೇ ಸುದೀಪ್ ಅವರಿಗೆ ಹೇಳಿದ್ದಾರೆ. ಇದಕ್ಕೆ ಸಖತ್ ಟಾಂಗ್ ಕೊಟ್ಟ ಸುದೀಪ್ ಹೊಟ್ಟೆಯಲ್ಲಿ ಇರೋದು ನಂದೇ ಎಂದು ಕೈ ಎತ್ತಿದ್ರಿ, ಆದರೆ ಪಕ್ಕದಲ್ಲಿ ಹಿಡಿದಿರೋ ಕೈ ಮಾತ್ರ ಬಿಡುತ್ತಿಲ್ಲ ಅಂತ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಒಂದಂತೂ ನಿಜ ಇವತ್ತಿನ ಎಪಿಸೋಡ್ ಸಖತ್ ಕಾಮಿಡಿಯಿಂದ ಕೂಡಿರಲಿದೆ ಎಂದು ರಿಲೀಸ್ ಆದ ವಿಡಿಯೋ ಹೇಳುತ್ತಿದೆ.
bangalore
ಎರಡನೇ ಪತ್ನಿಯನ್ನು ಕೊಂ*ದು ಮೂರನೇ ಮದುವೆಗೆ ಸಿದ್ದತೆ ಮಾಡುತ್ತಿದ್ದವನಿಗೆ ಪೊಲೀಸರ ಶಾಕ್ !
Published
10 hours agoon
05/12/2024By
NEWS DESK3ಮಂಗಳೂರು/ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪದೇ ಪದೇ ಹಲ್ಲೆ ಮಾಡುತ್ತಿದ್ದ ಆರೋಪಿಯು ಪತ್ನಿಯನ್ನು ಕೊ*ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಅನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ.
ಈ ಘಟನೆ ಕಳೆದ ತಿಂಗಳು ನಡೆದಿದ್ದು, ಸರ್ಜಾಪುರ ಪೊಲೀಸರ ಕಾರ್ಯಾಚರಣೆಯಿಂದ ಪತ್ನಿಯನ್ನು ಕೊಂ*ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಿಹಾರ ಮೂಲದ ಮಹಮ್ಮದ್ ನಸೀಮ್ (39) ಬಂಧಿತ ಆರೋಪಿಯಾಗಿದ್ದು, ಬಿಹಾರ ಮೂಲದ ರುಮೇಶ್ ಖಾತುನ್ (22) ಕೊ*ಲೆಯಾದ ಮಹಿಳೆಯಾಗಿದ್ದಾಳೆ.
ಇದನ್ನೂ ಓದಿ: ಕ್ರಿಕೆಟ್ ದೇವರ ಮಗನಾದರೂ ಯಾರಿಗೂ ಬೇಡವಾದ ಅರ್ಜುನ್ ತೆಂಡೂಲ್ಕರ್ !
ಕೊಲೆ ಮಾಡಿದ ಬಳಿಕ ಆರೋಪಿ, ಪತ್ನಿಯ ಶ*ವವನ್ನು ವಿವಸ್ತ್ರಗೊಳಿಸಿ ಹಗ್ಗದಿಂದ ಕೈ ಕಾಲು ಕಟ್ಟಿ ಯಾರಿಗೂ ಅನುಮಾನ ಬಾರದಂತೆ ಚರಂಡಿಗೆ ಎಸೆದು ಬಿಹಾರಕ್ಕೆ ಎಸ್ಕೇಪ್ ಆಗಿದ್ದನು. ಶವ ಕೊಳೆತು ದುರ್ವಾಸನೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಕೊಲೆ ಪ್ರಕರಣ ದಾಖಲಿಸಿಕೊಂಡ ಸರ್ಜಾಪುರ ಪೊಲೀಸರು ತನಿಖೆ ಮುಂದುವರಿಸಿದರು. ಆರೋಪಿಯ ಜಾಡು ಹಿಡಿದು ಬಿಹಾರಕ್ಕೆ ತೆರಳಿದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಆರೋಪಿ ಮಹಮ್ಮದ್ ನಸೀಮ್ ಮೂರನೇ ಮದುವೆ ಸಂಭ್ರಮದಲ್ಲಿದ್ದ. ಪೊಲೀಸರು ಮದುವೆ ಮನೆಯಲ್ಲಿಯೇ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
BIG BOSS
BBK11: ಮೋಕ್ಷಿತಾಗೆ ಬಿಗ್ಬಾಸ್ ನೇರ ಎಚ್ಚರಿಕೆ; ಇವತ್ತು ಮನೆಯಿಂದ ಆಚೆ ಕಳಿಸಿಬಿಡ್ತಾರಾ?
Published
15 hours agoon
05/12/2024By
NEWS DESK2ಬಿಗ್ಬಾಸ್ ಸಾಮ್ರಾಜ್ಯದ ಮಹಾರಾಜ-ಯುವರಾಣಿ ನಡುವಿನ ಕಿತ್ತಾಟದ ಮುನಿಸು ಈ ವಾರವೂ ಕಂಟಿನ್ಯೂ ಆಗಿದೆ. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಮೋಕ್ಷಿತಾ, ಗೌತಮಿ ಮೇಲೆ ಜಿದ್ದಿಗೆ ಬಿದ್ದಿದ್ದಾರೆ. ಇದನ್ನು ಮನಗಂಡಿರುವ ಬಿಗ್ಬಾಸ್, ಮೋಕ್ಷಿತಾಗೆ ಕಡೆಯ ಎಚ್ಚರಿಕೆ ನೀಡಿದ್ದಾರೆ.
ಏನಿದು ಕತೆ..?
ಅಂದ್ಹಾಗೆ ಬಿಗ್ಬಾಸ್ ಮನೆಯಲ್ಲಿ ಇದೀಗ ಮುಂದಿನ ವಾರಕ್ಕೆ ನಾಯಕನ ಆಯ್ಕೆಯ ಟಾಸ್ಕ್ಗಳು ಶುರುವಾಗಿದೆ. ಬಿಗ್ಬಾಸ್ ನೀಡಿರುವ ಟಾಸ್ಕ್ಗಳಲ್ಲಿ ಯಶಸ್ವಿ ಆಗಿರುವ ಕೆಲವು ಸದಸ್ಯರು ಕ್ಯಾಪ್ಟನ್ ಆಗಲು ಅರ್ಹತೆ ಪಡೆದುಕೊಂಡಿದ್ದಾರೆ. ಅವರಲ್ಲಿ ಮೋಕ್ಷಿತಾ ಕೂಡ ಒಬ್ಬರು.
ಅಂತೆಯೇ ಈ ವಾರ ನಾಯಕನ ಆಯ್ಕೆ ಸಂಬಂಧ ಬಿಗ್ಬಾಸ್ ಟಾಸ್ಕ್ ನೀಡಿದ್ದಾರೆ. ನಿಯಮದಂತೆ, ಕ್ಯಾಪ್ಟನ್ಸಿ ಓಟದಲ್ಲಿರುವ ಅಭ್ಯರ್ಥಿಗಳು ತಮ್ಮ ಸಹಾಯಕ್ಕಾಗಿ ಉಳಿದ ಸದಸ್ಯರು ಆಡುವಂತೆ ಮನವೊಲಿಸಬೇಕು ಎಂದಾಗಿರುತ್ತದೆ. ಅದರಂತೆ ಕ್ಯಾಪ್ಟನ್ಸಿ ಅಭ್ಯರ್ಥಿ ಹನುಮಂತ ಕೆಲವು ಸ್ಪರ್ಧಿಗಳ ಜೊತೆ ಮನವಿ ಮಾಡಿಕೊಂಡಿದ್ದಾರೆ.
ಆದರೆ, ಮೋಕ್ಷಿತಾ ಅವರು ಗೌತಮಿಯನ್ನು ಮನವೊಲಿಸಲು ಒಪ್ಪಿಕೊಳ್ಳುವುದಿಲ್ಲ. ಬಿಗ್ಬಾಸ್ ಟಾಸ್ಕ್ನ ನಿಯಮ ಘೋಷಣೆ ಮಾಡ್ತಿದ್ದಂತೆಯೇ, ನಾನು ಗೌತಮಿ ಹತ್ತಿರ ಕೇಳಲ್ಲ. ಅವರಿಂದ ನಾನು ಕ್ಯಾಪ್ಟನ್ ಆಗಬೇಕು ಅಂತಿದ್ದರೆ ನಾನು ಆಡೋದೇ ಇಲ್ಲ. ನನಗೆ ಆತ್ಮ ಗೌರವದ ಮುಂದೆ ಯಾವುದೂ ದೊಡ್ಡದಲ್ಲ. ನನ್ನ ಕಳಿಸಿದ್ರೆ ನಾಳೆಯೇ ಹೋಗ್ತೇನೆ ಎಂದಿದ್ದಾರೆ.
ಅದಕ್ಕೆ ಬಿಗ್ಬಾಸ್ ಮೋಕ್ಷಿತಾಗೆ ಎಚ್ಚರಿಕೆ ನೀಡಿದ್ದು, ದೊಡ್ಡ ದೊಡ್ಡ ನಿರ್ಧಾರದ ಜೊತೆಗೆ ಅದಕ್ಕೆ ತಕ್ಕಂತೆ ಬೆಲೆನೂ ಕಟ್ಟಬೇಕಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಬೆನ್ನಲ್ಲೇ ಮೋಕ್ಷಿತಾ ವಿರುದ್ಧ ಬಿಗ್ಬಾಸ್ ಯಾವ ರೀತಿಯ ಕ್ರಮ ತೆಗೆದುಕೊಳ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಅವರನ್ನ ಇವತ್ತೇ ಮನೆಯಿಂದ ಆಚೆ ಕಳುಹಿಸುತ್ತಾರಾ ಎಂಬ ಅನುಮಾನ ಕೂಡ ಶುರುವಾಗಿದೆ. ಇನ್ನು ಬಿಗ್ಬಾಸ್ ಘೋಷಣೆ ಬೆನ್ನಲ್ಲೇ, ಗೌತಮಿ ಜಾಧವ್ ಹಾಗೂ ತ್ರಿವಿಕ್ರಮ್ ನಕ್ಕಿದ್ದಾರೆ. ಮಂಜು ಅವರು ಚಪ್ಪಾಳೆ ತಟ್ಟಿದ್ದಾರೆ.
ಮಂಗಳೂರು/ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ ರೋಚಕ ಘಟ್ಟ ತಲುಪುತ್ತಿದೆ.
ಈಗಾಗೀ ಸ್ಪರ್ಧಿಗಳ ನಡುವೆ ಸದ್ಯ ಬಿಗ್ ಬಾಸ್ ಮನೆ ಎರಡು ಟಿವಿ ವಾಹಿನಿಗಳಾಗಿ ಪರಿವರ್ತನೆ ಆಗಿದೆ. ಎರಡು ವಾಹಿನಿಗಳ ಉದ್ಯೋಗಿಗಳು ಎದುರಾಳಿಗಳಿಗೆ ಟಕ್ಕರ್ ನೀಡುವ, ಕಾಲೆಳೆಯುವ ಟಾಸ್ಕ್ ಜೋರಾಗಿ ನಡೆಯುತ್ತಿದೆ.
ಇದರ ನಡುವೆ ದೊಡ್ಮನೆಯಲ್ಲಿ ನಾಮಿನೇಷನ್ ಕಾವು ಜೋರಾಗಿದೆ. ಬಿಗ್ ಬಾಸ್ ಇಂದು ನಾಮಿನೇಷನ್ ಗೆ ಸಂಬಂಧಿಸಿದ ಟಾಸ್ಕ್ ನೀಡಿದ್ದಾರೆ. ಈ ಸಲದ ನಾಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿದ್ದು, ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಸದಸ್ಯರನ್ನು ಆರಿಸಿ, ಬೆನ್ನಿಗೆ ಚೂರಿಯನ್ನು ಚುಚ್ಚಬೇಕು ಎಂಬ ಟಾಸ್ಕ್ ನೀಡಲಾಗಿದೆ.
ಇದನ್ನೂ ಓದಿ: ಮುಖ್ಯಶಿಕ್ಷಕನಿಂದಲೇ ಬ*ಲತ್ಕಾರಕ್ಕೊಳಗಾದ 5ನೇ ತರಗತಿ ವಿದ್ಯಾರ್ಥಿನಿ !
ಈ ಟಾಸ್ಕ್ ನಲ್ಲಿ ಎಲ್ಲಾ ಸ್ಪರ್ಧಿಗಳು ಮಂಜು ಬೆನ್ನಿಗೆ ಚುರಿ ಚುಚ್ಚಿದ್ದಾರೆ. ಎಂಟು ಮಂದಿ ಸ್ಪರ್ಧಿಗಳ ಚೂರಿಗಳು ಮಂಜು ಬೆನ್ನಿಗೆ ಬಿದ್ದಿದೆ. ಮಂಜು ಅವರಿಗೆ ಐಶ್ವರ್ಯ ಚೂರಿ ಚುಚ್ಚುವ ವೇಳೆ ನೀಡಿರುವ ಕಾರಣ, ಮಂಜು ಅವರನ್ನು ಕೆರಳಿಸುವಂತೆ ಮಾಡಿದೆ.
ಇಬ್ಬರು ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ನೀವು ಮಾನಸಿಕವಾಗಿ ನನ್ನನ್ನು ಕುಗ್ಗಿಸಲು ನೋಡಿದ್ರೆ, ನಾನು ಕುಗ್ಗುವಂತಹ ಮಗಳೇ ಅಲ್ಲ. ಅದು ಏನೇನು ಚುಚ್ಚಿ ಮಾತನಾಡ್ತಿರೋ ಆಡಿ ಎಂದು ಐಶ್ವರ್ಯ ಸವಾಲ್ ಹಾಕಿದ್ದಾರೆ.
ಅದಕ್ಕೆ ಮಂಜು ಅವರು ಯಾವ ರೀತಿ ಕೌಂಟರ್ ನೀಡುತ್ತಾರೆ ? ಅದು ಅಲ್ಲದೆ ಇವರಿಬ್ಬರ ನಡುವೆ ಬೆಂಕಿ ಹೊತ್ತಿಕೊಳ್ಳಲು ನಿಜವಾದ ಕಾರಣ ಏನು ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.