Connect with us

    LATEST NEWS

    ಉಗ್ರ ವಿರೋಧಿ ಕಾರ್ಯಾಚರಣೆ; ವಿಶೇಷ ಪಾತ್ರ ವಹಿಸಿದ ಬಿಸ್ಕೇಟ್ ಗಳು

    Published

    on

    ಮಂಗಳೂರು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉನ್ನತ ಮಟ್ಟದ ಎಲ್ ಇಟಿ ಕಮಾಂಡರ್‌ನ ಹತ್ಯೆಗೆ ಕಾರಣವಾದ ಯಶಸ್ವಿ ಕಾರ್ಯಾಚರಣೆ ಕಾರ್ಯತಂತ್ರದ ಯೋಜನೆಯಲ್ಲಿ ಬಿಸ್ಕತ್ತುಗಳು ವಿಶೇಷ ಪಾತ್ರ ವಹಿಸಿವೆ.

    ಪಾಕಿಸ್ಥಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಮಾಂಡರ್ ಉಸ್ಮಾನ್ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಬೀದಿ ನಾಯಿಗಳು ಒಡ್ಡಿದ ಸವಾಲನ್ನು ತಡೆಯುವಲ್ಲಿ ಬಿಸ್ಕತ್ತುಗಳ ಮಹತ್ವವನ್ನು ಹಿರಿಯ ಅಧಿಕಾರಿಗಳು ಎತ್ತಿ ತೋರಿಸಿದ್ದಾರೆ.

    ಶ್ರೀನಗರದ ಡೌನ್‌ಟೌನ್‌ನ ಜನನಿಬಿಡ ಖಾನ್ಯಾರ್ ಪ್ರದೇಶದಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಉಸ್ಮಾನ್ ಹತ್ಯೆಯಾಗಿದ್ದಾನೆ. ಎರಡು ವರ್ಷಗಳ ನಂತರ ಶ್ರೀನಗರದಲ್ಲಿ ನಡೆದ ಮೊದಲ ಮಹತ್ವದ ಗುಂಡಿನ ಚಕಮಕಿಯಾಗಿದೆ.
    ಸ್ಥಳದಲ್ಲಿದ್ದ ಉಗ್ರನ ಬೇಟೆಗಿಳಿದ ವೇಳೆ ಭದ್ರತಾ ಪಡೆಗಳಿಗೆ ಸವಾಲಾಗಿದ್ದೇ ಬೀದಿ ನಾಯಿಗಳು. ಭದ್ರತಾ ಪಡೆಗಳನ್ನು ಕಂಡ ತತ್ ಕ್ಷಣ ಜೋರಾಗಿ ಬೊಗಳಿ ಉಗ್ರರು ಅಡಗಿಕೊಳ್ಳಲು ಕಾರಣವಾಗುತ್ತಿತ್ತು. ಇದನ್ನು ಎದುರಿಸಲು, ನಾಯಿಗಳು ಹತ್ತಿರ ಸಮೀಪಿಸುತ್ತಿದ್ದಂತೆ ಅವುಗಳಿಗೆ ಶೋಧ ತಂಡಗಳು ಬಿಸ್ಕತ್ತುಗಳನ್ನು ಹಾಕಿ ಸದ್ದಡಗಿಸುವಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆಯಲ್ಲೂ ಯಶಸ್ಸು ಕಂಡಿದೆ.

    ಭದ್ರತಾ ಪಡೆಗಳು 30 ಮನೆಗಳ ಸಮೂಹವನ್ನು ಸುತ್ತುವರೆದು ಗುಂಡಿನ ಚಕಮಕಿ ನಡೆಸಿವೆ. ಉಸ್ಮಾನ್ ನನ್ನ ಹತ್ಯೆಗೈದು AK-47, ಪಿಸ್ತೂಲ್ ಮತ್ತು ಹಲವಾರು ಗ್ರೆನೇಡ್‌ಗಳನ್ನು ವಶಕ್ಕೆ ಪಡೆದಿವೆ.

    ಭಾರೀ ಗುಂಡಿನ ಕಾಳಗದಲ್ಲಿ ಕೆಲವು ಗ್ರೆನೇಡ್‌ಗಳು ಸ್ಫೋಟಗೊಂಡು ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅದು ಹತ್ತಿರದ ಮನೆಗಳಿಗೆ ಹರಡುವುದನ್ನು ತಡೆಯಲು ಭದ್ರತಾ ಸಿಬಂದಿ ತ್ವರಿತ ಕಾರ್ಯಾಚರಣೆ ನಡೆಸಿದರು.
    ಹಲವಾರು ಗಂಟೆಗಳ ತೀವ್ರ ಗುಂಡಿನ ಚಕಮಕಿಯ ನಂತರ ಉಸ್ಮಾನ್ ನನ್ನ ತಟಸ್ಥಗೊಳಿಸಲಾಯಿತು. ಕಾರ್ಯಾಚರಣೆಯಲ್ಲಿ ನಾಲ್ವರು ಭದ್ರತಾ ಸಿಬಂದಿಗೆ ಗಾಯಗಳಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಮಕ್ಕಳು ಅಪ್ಪ – ಅಮ್ಮನ ಮುಂದೆ ಸುಳ್ಳು ಹೇಳಲು ಮುಖ್ಯ ಕಾರಣಗಳೇನು ಗೊತ್ತಾ ??

    Published

    on

    ಮಕ್ಕಳು ಏನೇ ವಿಷಯಗಳಿದ್ದರೂ ಅದನ್ನು ತಂದೆ – ತಾಯಿಯ ಬಳಿ ಹೇಳಲು ಬಯಸುತ್ತಾರೆ. ಆದರೆ, ಹೀಗೆ ಹೇಳಲು ಬಂದ ಮಕ್ಕಳ ಮೇಲೆ ಕೆಲವೊಮ್ಮೆ ಪೋಷಕರು ರೇಗುವುದುಂಟು. ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಅರಿವಿಲ್ಲದೆ ಮಾಡುವ ಈ ತಪ್ಪು ಮುಂದೆ ಪೋಷಕರಿಗೇ ಸಮಸ್ಯೆಯಾಗಬಹುದು.

    ಅಮ್ಮನ ಅಡುಗೆ ರುಚಿಯ ವಿಚಾರ ಇರಬಹುದು, ಸಹೋದರ ಸಹೋದರಿಯರ ನಡುವಿನ ಜಗಳ ಇರಬಹುದು, ಶಾಲೆಯಲ್ಲಿ ನಡೆದಿರುವ ಅದ್ಯಾವುದೋ ಸಂತಸದ ಅಥವಾ ಬೇಸರದ ಸಂಗತಿ ಇರಬಹುದು, ಪೋಷಕರು ವ್ಯವಧಾನದಿಂದ ಕೇಳಿಸಿಕೊಳ್ಳಬೇಕು. ಅದರ ಬದಲಾಗಿ ಮಕ್ಕಳು ಅದೇನೋ ಹೇಳಲು ಬಂದಾಗ ಅಸಹನೆ, ಸಿಟ್ಟು ಪ್ರದರ್ಶಿಸಿದರೆ ಮಕ್ಕಳ ಮೃದು ಮನಸಿಗೆ ಘಾಸಿ ಉಂಟಾಗುವ ಅಪಾಯ ಇದೆ. ಇದು ಪೋಷಕರನ್ನು ಮೆಚ್ಚಿಸಲು ಅಥವಾ ಗಮನವನ್ನು ತಮ್ಮತ್ತ ಸೆಳೆಯಲು ಮಕ್ಕಳು ಸುಳ್ಳಿನ ದಾರಿ ಹಿಡಿಯಲು ಅವಕಾಶ ಮಾಡಿಕೊಡುವ ಅಪಾಯ ಇದೆ.
    ಇನ್ನು ಮಕ್ಕಳೇನೋ ಮಾಡಬೇಕು ಎಂಬ ತುಡಿತವನ್ನು ಪೋಷಕರ ಮುಂದೆ ವ್ಯಕ್ತಪಡಿಸಿದಾಗ ಗದರಿಸಿ ಸುಮ್ಮನಿರುವಂತೆ ಮಾಡುವುದು ಕೂಡ ಅವರ ಭವಿಷ್ಯವನ್ನು ಚಿವುಟಿದಂತೆ. ಇದರಿಂದ ತಮ್ಮ ಕನಸನ್ನು ಪೋಷಕರು ಕಮರಿ ಹಾಕಿದ್ರು ಎಂಬ ಅಸಮಾಧಾನ ಮಕ್ಕಳ ಮನಸಿನ ಮೂಲೆಯಲ್ಲಿ ಕೂತು ಬಿಡುತ್ತದೆ. ಇದು ಮುಂದೆ ಬೆಳೆದು ದೊಡ್ಡವರಾದ ಮಕ್ಕಳಲ್ಲಿ ಪೋಷಕರು ತಮಗೇನು ಮಾಡಿಲ್ಲ ಎಂಬ ಭಾವ ಮೂಡಿಸುವ ಸಾಧ್ಯತೆ ಕೂಡ ಇದೆ. ತಾನು ಮಾಡಬೇಕು ಅಂದುಕೊಂಡಿದ್ದನ್ನು ಮನೆಯಲ್ಲಿ ಸುಳ್ಳು ಹೇಳಿ ಮಾಡಲು ಆರಂಭಿಸಿ ಮುಂದೆ ಸುಳ್ಳು ಹೇಳುವುದನ್ನೇ ಮೈಗೂಡಿಸುವ ಮನಸ್ಥಿತಿಗೆ ಮಕ್ಕಳು ಬರಬಹುದು.
    ಹುಟ್ಟಿದ ಮಗುವಿನ ಲಾಲನೆ ಪಾಲನೆ ಮಾಡುವ ಪೋಷಕರು ಮಗುವಿಗೆ ನಡೆಯುವುದರಿಂದ ಹಿಡಿದು ಮಾತನಾಡುವುದು, ತಿನ್ನುವುದು ಎಲ್ಲವನ್ನೂ ಕಲಿಸುತ್ತಾರೆ. ಆದರೆ, ಮಕ್ಕಳು ಬೆಳೆಯುತ್ತಾ ಹೋದಂತೆ ಕೆಲವೊಂದು ಬಾರಿ ಮಕ್ಕಳು ಕೇಳುವ ಪ್ರಶ್ನೆಗಳು, ಮಾಡುವ ಹಠಗಳು, ಹಾಗೂ ಅವರ ಬೇಡಿಕೆಗಳು ಕಿರಿಕಿರಿ ಅನಿಸಿ ಬಿಡುತ್ತದೆ. ಮಕ್ಕಳಿಗೆ ಏನು ಬೇಕು, ಏನು ಬೇಡ ಎಂಬುವುದು ಪೋಷಕರಿಗೆ ಗೊತ್ತಿರುತ್ತದೆಯಾದ್ರೂ ಕೆಲವೊಂದು ವಿಚಾರವನ್ನು ಮಕ್ಕಳಿಗೆ ನವಿರಾಗಿ ವಿವರಿಸಿ ಅರ್ಥೈಸಬೇಕು. ಆದ್ರೆ, ಎಲ್ಲವನ್ನೂ ನವಿರಾಗಿ ನಿರಾಕರಿಸುತ್ತಾ ಹೋದರೆ ನನ್ನ ಹೆತ್ತವರು ನನಗಾಗಿ ಏನೂ ಮಾಡುತ್ತಿಲ್ಲ ಎಂಬ ಭಾವ ಮಕ್ಕಳಲ್ಲಿ ಮೂಡಬಹುದು. ತಮ್ಮ ಕನಸಿಗೆ ಪೋಷಕರೇ ಅಡ್ಡಿ ಎಂಬ ಸಣ್ಣದೊಂದು ಅಸಹನೆ ಇಲ್ಲಿಂದಲೇ ಆರಂಭವಾಗಬಹುದು.

    ಸಣ್ಣ ಪ್ರಾಯದಲ್ಲಿ ಮಕ್ಕಳು ದೂರು ಹೇಳುವ ಪ್ರಮುಖ ಕಾರಣಗಳು :

    ಗಮನವನ್ನು ತನ್ನತ್ತ ಸೆಳೆಯಲು:

    ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದು, ಒಬ್ಬರ ಕಡೆ ಹೆಚ್ಚಿನ ಗಮನ ನೀಡುತ್ತಾರೆ ಅಂತ ಮಗುವಿನ ಮನಸಿನಲ್ಲಿ ಮೂಡಿದಾಗ ಗಮನ ತನ್ನತ್ತ ಸೆಳೆಯಲು ಸುಳ್ಳು ದೂರುಗಳನ್ನು ಹೇಳಲು ಆರಂಭಿಸುತ್ತಾರೆ. ಇದು ಶಾಲೆಯಲ್ಲೂ , ಕುಟುಂಬ ಸದಸ್ಯರ ಮುಂದೆಯೂ ನಡೆಯುವ ಮೂಲಕ ಪೋಷಕರನ್ನು ಮುಜುಗರಕ್ಕೆ ಸಿಲುಕಿಸಬಹುದು. ತನ್ನನ್ನು ಯಾರೂ ಪ್ರೀತಿಸುತ್ತಿಲ್ಲ ಎಂಬ ಮನೋಭಾವನೆಯಿಂದ ಮಕ್ಕಳು ಸಣ್ಣ ಸಣ್ಣ ವಿಚಾರಗಳಲ್ಲೂ ಜಗಳ ಆಡುವುದು, ಸುಳ್ಳು ಹೇಳುವುದು ಮಾಡಬಹುದು. ಇಂತಹ ವಿಚಾರ ಬಂದಾಗ ಮಕ್ಕಳ ಜಗಳವನ್ನು ನಾಜೂಕಾಗಿ ಪರಿಹರಿಸಬೇಕು.
    ಅಸಹನೆ , ಸಿಟ್ಟು, ಜಗಳ , ದೂರುಗಳು ಇವುಗಳನ್ನು ನಿರ್ಲಕ್ಷ್ಯ ಮಾಡಬೇಡಿ.
    ಮಕ್ಕಳು ಪದೇಪದೇ ಸಿಟ್ಟಾಗುವುದು, ಅಸಹನೆಯಿಂದ ಒಂಟಿಯಾಗಿ ಕೂರುವುದು, ಸ್ನೇಹಿತರ ಜೊತೆ ಜಗಳ ಮಾಡುವುದು, ದೂರುಗಳನ್ನು ಹೇಳಿಕೊಂಡು ಬರುತ್ತಾರೆ ಅಂದ್ರೆ ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಇದು ಯಾಕಾಗಿ ಹೀಗೆ ಎಂಬುವುದನ್ನು ಮೊದಲು ತಮ್ಮಲ್ಲೇ ಪ್ರಶ್ನೆ ಮಾಡಿಕೊಳ್ಳಿ. ಪೋಷಕರಾಗಿ ತಮ್ಮಿಂದೇನು ತಪ್ಪಾಗಿಲ್ಲ ಎಂದರೆ ಒಂದು ಬಾರಿ ತಜ್ಞ ವೈದ್ಯರನ್ನು ಸಂಪರ್ಕಿಸಿ.

    Continue Reading

    LATEST NEWS

    ಉಡುಪಿ : ಶೀರೂರು ಪರ್ಯಾಯಕ್ಕೆ ಬಾಳೆ ಮುಹೂರ್ತ ಸಂಪನ್ನ

    Published

    on

    ಉಡುಪಿ : ಪ್ರಥಮ ಬಾರಿಗೆ ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಪೀಠ ಏರಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಇಂದು ಬಾಳೆ ಮುಹೂರ್ತ ನೆರವೇರಿಸಿದರು.  ಪೂರ್ಣ ಪ್ರಜ್ಞ ಕಾಲೇಜು ಬಳಿಯ ಶೀರೂರು ಮಠದ ತೋಟದಲ್ಲಿ ಭಾವಿ ಪರ್ಯಾಯ ಶ್ರೀಗಳು ಬಾಳೆ ಸಸಿ ನೆಟ್ಟರು.

    ಮುಹೂರ್ತಕ್ಕೂ ಮುನ್ನ ಕೃಷ್ಣ, ಮುಖ್ಯ ಪ್ರಾಣ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.  ಬಳಿಕ ಶ್ರೀಗಳು ಶೀರೂರು ಮಠ, ಅನಂತೇಶ್ವರ, ಚಂದ್ರಮೌಳೀಶ್ವರನ ದರ್ಶನ ಪಡೆದರು.  ಮೆರವಣಿಗೆಯಲ್ಲಿ ಬಾಳೆ ಗಿಡಗಳನ್ನು ಹೊತ್ತು ಸಾಗಿ ಮುಹೂರ್ತ ಕಾರ್ಯ ನೆರವೇರಿಸಲಾಯಿತು.

    ಇದನ್ನೂ ಓದಿ : ಸೊಸೈಟಿಯಿಂದ ಹಣ ಡ್ರಾ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಯ ಶ*ವ ಪತ್ತೆ!

    ಈ ಬಾಳೆಯ ಎಲೆಗಳನ್ನು ಬಳಸಿಕೊಂಡು ಪರ್ಯಾಯ ಅವಧಿಯಲ್ಲಿ ಅನ್ನದಾಸೋಹ ಕಾರ್ಯ ನಡೆಯಲಿದೆ. ಇನ್ನು ಒಂದು ವರ್ಷಗಳ ಕಾಲ ಶೀರೂರು ಶ್ರೀ ದೇಶಾದ್ಯಂತ ತೀರ್ಥಕ್ಷೇತ್ರಗಳ ಸಂದರ್ಶನ ಮಾಡಲಿದ್ದಾರೆ.

    Continue Reading

    LATEST NEWS

    ಮಂಗಳೂರು: ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಗೆ ಬೆಂಕಿ

    Published

    on

    ಮಂಗಳೂರು: ಮನೆಯಲ್ಲಿ ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಅತ್ತಾವರದಲ್ಲಿ ಶುಕ್ರವಾರ(ಡಿ.6) ನಡೆದಿದೆ.

    ಮನೆ ಮಂದಿ ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ನ ರೇಗ್ಯುಲೇಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಮನೆಮಂದಿ ಮನೆಯಿಂದ ಹೊರ ಓಡಿ ಬಂದಿದ್ದಾರೆ.

    ಬಳಿಕ ಪಾಂಡೇಶ್ವರ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

    Continue Reading

    LATEST NEWS

    Trending