Connect with us

    BELTHANGADY

    ನಿವೃತ್ತ ಶಿಕ್ಷಕನ ಕೊ*ಲೆ ಆರೋಪದಲ್ಲಿ ಇಬ್ಬರ ಬಂಧನ; ಕೊ*ಲೆಗೆ ದ್ವೇಶವೇ ಕಾರಣವಾಯಿತಾ..!!

    Published

    on

    ಬೆಳ್ತಂಗಡಿ:  ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ.20 ರಂದು ನಡೆದಿದ್ದ ನಿವೃತ್ತ ಶಿಕ್ಷಕನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

    83 ವಯಸ್ಸಿನ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್‌ ಅವರನ್ನು ನಡು ಮಧ್ಯಾಹ್ನವೇ ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಆರಂಭದಲ್ಲಿ ಇದೊಂದು ಆಸ್ತಿ ವಿಚಾರವಾಗಿ ನಡೆದ ಕೊಲೆ ಎಂದು ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಮೃತ ಬಾಲಕೃಷ್ಣ ಭಟ್‌ ಅವರ ಪುತ್ರನ ವಿಚಾರಣೆ ಕೂಡಾ ನಡೆಸಲಾಗಿತ್ತು. ಈ ವೇಳೆ ಸಿಕ್ಕ ಕೆಲವೊಂದು ಸುಳಿವು ಆಧರಿಸಿ ತನಿಖೆ ನಡೆಸಿದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಮಾರಕಾಸ್ತ್ರದಿಂದ ಕಡಿದು ನಿವೃತ್ತ ಶಿಕ್ಷಕನ ಬರ್ಬರ ಕೊ*ಲೆ..!

    ಆರೋಪಿಗಳಲ್ಲಿ ಓರ್ವ ಕೇರಳದ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣದ ಆರೋಪಿಯಾಗಿದ್ದು, ಇನ್ನೋರ್ವನ ಸಹಾಯದಿಂದ ಈ ಕೃತ್ಯ ನಡೆಸಿರುವುದು ಗೊತ್ತಾಗಿದೆ. ಜಮೀನು ವಿಚಾರದಲ್ಲಿ ಇದ್ದ ತಕರಾರಿನ ಹಿನ್ನೆಲೆಯಲ್ಲಿಯೇ ಈ ಕೊಲೆ ನಡೆಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆರೋಪಿಗಳಿಂದ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ವಿಚಾರಣೆ ಮುಂದುವರೆಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

    BELTHANGADY

    ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ

    Published

    on

    ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸ್ಮರಣೆಯೊಂದಿಗೆ 24 ವರ್ಷದ ಹಿಂದೆ ಲಾರಿಯೊಂದನ್ನು ಖರೀದಿಸಿದ್ದ ವ್ಯಕ್ತಿಯೊಬ್ಬರು ಮುಂದೆ ಉದ್ಯಮಿಯಾಗಿ ಬೆಳೆದು ಇದೀಗ ಮೊದಲ ಬಾರಿಗೆ ಖರೀದಿ ಮಾಡಿದ್ದ ಲಾರಿಯನ್ನೇ ಧರ್ಮಸ್ಥಳದ ಸೇವೆಗೆ ಸಮರ್ಪಣೆ ಮಾಡಿದ್ದಾರೆ.

    ಧರ್ಮಸ್ಥಳ ಕ್ಷೇತ್ರದ ಪರಮ ಭಕ್ತರಾಗಿರುವ ಸಿದ್ಧಾಪುರದ ಬಿ. ನಾಗು ಕುಲಾಲ ಅವರು 2000ರಲ್ಲಿ ದೇವರನ್ನು ಸ್ಮರಿಸಿ, ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಒಂದು ಲಾರಿಯನ್ನು ಖರೀದಿಸಿದ್ದರು. ಅದಕ್ಕೆ ಶ್ರೀ ಮಂಜುನಾಥ ಎಂದು ಹೆಸರು ಇಟ್ಟಿದ್ದರು.

    ಅಂದಿನಿಂದ ಅವರ ಅದೃಷ್ಟ ಖುಲಾಯಿಸಿತು. ಕೆಂಪು ಕಲ್ಲು ಕೋರೆಯಲ್ಲಿ ಕಲ್ಲು ಕಡಿಯುವ ಕೆಲಸ ಮಾಡುತ್ತಿದ್ದ ನಾಗು ಕುಲಾಲ ಅವರು ಸ್ವಂತ ಕಲ್ಲು ಕೋರೆ ಆರಂಭಿಸಿದರು. ತಮ್ಮ ಶ್ರಮದ ಫಲವಾಗಿ ಇಂದು 4 ಲಾರಿ ಮತ್ತು 2 ಜೆಸಿಬಿ ಸೇರಿದಂತೆ 6 ವಾಹನ ಹೊಂದಿದ್ದಾರೆ. ಇದೀಗ ಉತ್ತಮ ಸ್ಥಿತಿಯಲ್ಲಿರುವ ಮೊದಲ ಲಾರಿಯನ್ನು ಸಂಪೂರ್ಣವಾಗಿ ಪೈಟಿಂಗ್‌ ಮಾಡಿ, ದೀಪಾವಳಿಯ ಅಮವಾಸ್ಯೆಯಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕೊಡುಗೆ ನೀಡಿದ್ದಾರೆ.

    Continue Reading

    BELTHANGADY

    ಬೆಂಗಳೂರಿನಲ್ಲಿ ಬೈಕ್ ಅಪಘಾತ; ಬೆಳ್ತಂಗಡಿ ಮೂಲದ ವಿದ್ಯಾರ್ಥಿ ಸಾ*ವು

    Published

    on

    ಬೆಂಗಳೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಬೆಳ್ತಂಗಡಿ ಮೂಲದ ವಿದ್ಯಾರ್ಥಿಯೊಬ್ಬ ಮೃ*ತ ಪಟ್ಟಿದ್ದು ಮತ್ತೋರ್ವ ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬೆಳ್ತಂಗಡಿ ತಾಲೂಕಿನ ಇಂದಬೆಟ್ಟ ಗ್ರಾಮದ ನಿವಾಸಿಯಾಗಿರುವ ತುಷಾರ್ ಮೃತ ವಿದ್ಯಾರ್ಥಿಯಾಗಿದ್ದಾರೆ. ಇವರು ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಬಿಕಾಂ ಮುಗಿಸಿ ಉನ್ನತ ವ್ಯಾಸಾಂಗಕ್ಕಾಗಿ ಬೆಂಗಳೂರಿನ ರಾಮಯ್ಯ ಕಾಲೇಜಿಗೆ ಸೇರಿದ್ದರು. ಇಂದು ಮುಂಜಾನೆ ಬೈಕ್‌ನಲ್ಲಿ ಬೆಳ್ತಂಗಡಿಯ ಬೆಳಾಲ್‌ ನಿವಾಸಿಯಾಗಿರುವ ಇನ್ನೋರ್ವ ಯುವಕನ ಜೊತೆ ಕಾಲೇಜಿಗೆ ಹೋಗುತ್ತಿದ್ದಾಗ ದುರ್ಘಟನೆ ನಡೆದ ಬಗ್ಗೆ ವರದಿಯಾಗಿದೆ.

    ಅಪಘಾತದಲ್ಲಿ ತುಷಾರ್ ಮೃತ ಪಟ್ಟಿದ್ದರೆ ಮತ್ತೋರ್ವ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ತುಷಾರ್ ತಾಯಿ ಉಜಿರೆಯ ಅನುಗ್ರಹ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    Continue Reading

    BELTHANGADY

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ: ಪ್ರಸಕ್ತ ಸಾಲಿನ ಸೇವೆಯಾಟ ಆರಂಭ

    Published

    on

    ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ಸೇವೆಯಾಟವು ಶ್ರೀ ಮಂಜುನಾಥ ಸ್ವಾಮಿ ಹಾಗೂ ಛತ್ರ ಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮೇಳದ ಯಜಮಾನ ಹರ್ಷೇಂದ್ರ ಕುಮಾರ್‌ ಅವರ ಶುಭಾಶೀರ್ವಾದಗಳೊಂದಿಗೆ ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್‌ ಅವರು ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಶುಭಾರಂಭಗೊಂಡಿತು.

    ವ್ಯವಸ್ಥಾಪಕ ಗಿರೀಶ್‌ ಹೆಗ್ಡೆ ಮತ್ತು ಸಿಬಂದಿ ಉಪಸ್ಥಿತರಿದ್ದರು. ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ ತಿರುಗಾಟದ ಪ್ರಥಮ ಸೇವೆಯಾಟ ನಡೆಯಿತು.

    Continue Reading

    LATEST NEWS

    Trending