FILM
ಅವಳಿಗೋಸ್ಕರ ಚೆನ್ನೈ ಬಿಟ್ಟು ಮುಂಬೈಗೆ ಶಿಫ್ಟ್ ಆಗಿದ್ದೇನೆ; ನಟ ಸೂರ್ಯ ಯಾಕೆ ಹೀಗಂದ್ರು ಗೊತ್ತಾ ..?
Published
4 weeks agoon
ಮಂಗಳೂರು/ಚೆನ್ನೈ: ತಮಿಳು ಸ್ಟಾರ್ ನಟ ಸೂರ್ಯ ಪ್ರಪಂಚದ ಬಹುತೇಕ ಕಡೆಗಳಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಟಾರ್ ಜೋಡಿ ಎಂದೇ ಖ್ಯಾತಿ ಪಡೆದಿರುವ ನಟ ಸೂರ್ಯ ಹಾಗೂ ಜ್ಯೋತಿಕಾ ಸದ್ಯ ಚೆನ್ನೈ ತೊರೆದು ಮುಂಬೈನಲ್ಲಿ ನೆಲೆಸಿದ್ದಾರೆ. ಯಾಕೆ ಈ ಕಪಲ್ಸ್ ಚೆನ್ನೈ ಬಿಟ್ಟು ಹೋಗಿದ್ದು? ಯಾಕೆ ಮುಂಬೈ ಸೇರಿಕೊಂಡು ಅಲ್ಲಿ ಜೀವನ ನಡೆಸುತ್ತಿರುವುದು ಎಂದು ಹಲವರು ಹುಬ್ಬೇರಿಸಿದ್ದಾರೆ. ಈ ಬಗ್ಗೆ ಹಲವರು ಟೀಕೆ ಸಹ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಈ ಕುರಿತು ‘ಸ್ಟಾರ್ ನಟರಾಗಿರುವ ಸೂರ್ಯ ಅವರಿಗೆ ತಮಿಳುನಾಡು ಹಾಗೂ ಚೆನ್ನೈ ಎಲ್ಲವನ್ನೂ ಕೊಟ್ಟಿದೆ. ಆದರೆ ಅವರು ಈ ನಲೆವನ್ನೇ ಬಿಟ್ಟು ಮುಂಬೈಗೆ ಶಿಫ್ಟ್ ಆಗಿ ತಾಯ್ನೆಲಕ್ಕೇ ದ್ರೋಹವೆಸಗಿದ್ದಾರೆ’ ಎಂದು ಕುಟುಕಿದ್ದಾರೆ. ಇನ್ನೂ ಕೆಲವರು ತಮಿಳು ಸಿನಿಮಾವನ್ನೇನೂ ಬಿಟ್ಟಿಲ್ಲ. ಆದರೆ, ಮನೆಯನ್ನು ಮುಂಬೈಗೆ ಶಿಫ್ಟ್ ಮಾಡಿದ್ದಾರೆ ಅಷ್ಟೇ. ಅದರಲ್ಲೇನು ಪ್ರಾಬ್ಲಂ..?’ ಎಂದು ನಟ ಸೂರ್ಯ ಪರವಾಗಿ ಬ್ಯಾಟ್ ಬೀಸಿದ್ದಾರೆ.
ತಮಿಳು ನಟ ಸೂರ್ಯ ಅವರು ನಿಜವಾಗಿಯೂ ಯಾಕೆ ತಮಿಳುನಾಡು ಬಿಟ್ಟು ಮುಂಬೈ ಸೇರಿಕೊಂಡಿದ್ದಾರೆ ಎಂಬುದು ಅವರಿಗಷ್ಟೇ ಗೊತ್ತು ಎಂಬುದು ಹಲವರಿಗೆ ಅರ್ಥವಾಗಿಲ್ಲ. ಬೇರೆಯವರು ಆ ಬಗ್ಗೆ ಊಹೆ ಮಾಡಬಹುದು, ಕಲ್ಪನೆ ಮಾಡಿಕೊಂಡು ಏನೇನೋ ಹೇಳಬಹುದು. ಆದರೆ ಸತ್ಯ ಸಂಗತಿ ಗೊತ್ತಿರೋದು ಶಿಫ್ಟ್ ಆಗಿರುವ ಅವರಿಗೆ ಮಾತ್ರ ಅಲ್ಲವೇ? ಹೀಗಾಗಿ ಆ ಬಗ್ಗೆ ಅವರನ್ನೇ ಕೇಳುವುದು ಒಳ್ಳೆಯದು ಎಂದು ಯಾಕೆ ಹಲವರಿಗೆ ಅನ್ನಿಸಿಲ್ಲ ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಈ ಕುರಿತು ಸಂದರ್ಶನವೊಂದರಲ್ಲಿ ಒಬ್ಬರು ಕೇಳಿರುವ ಪ್ರಶ್ನೆಗೆ ಸ್ವತಃ ಸ್ಟಾರ್ ನಟ ಸೂರ್ಯ ಅವರೇ ಉತ್ತರಿಸಿದ್ದಾರೆ. ’25 ವರ್ಷದ ಹಿಂದೆ ಅವಳು (ಜ್ಯೋತಿಕಾ) ನನಗೋಸ್ಕರ ತನ್ನ ಕೆರಿಯರ್, ಫ್ರಂಡ್ಸ್ ಮತ್ತು ಸಂಬಂಧಿಕರನ್ನು ಬಿಟ್ಟು ನನಗೋಸ್ಕರ ಮುಂಬೈನಿಂದ ಚೆನ್ನೈಗೆ ಬಂದಳು. ಈಗ ನಾನು ಅವಳಿಗೋಸ್ಕರ ಚೆನ್ನೈ ಬಿಟ್ಟು ಮುಂಬೈಗೆ ಶಿಫ್ಟ್ ಆಗಿದ್ದೇನೆ’ ಎಂದಿದ್ದಾರೆ.
ನಟ ಸೂರ್ಯ ಅವರು ತಮ್ಮ ಪತ್ನಿ ಜ್ಯೋತಿಕಾ ಆಸೆಯಂತೆ ಚೆನ್ನೈ ಬಿಟ್ಟು ಮುಂಬೈಗೆ ತಮ್ಮ ವಾಸ ಬದಲಿಸಿದ್ದಾರೆ ನಟ ಸೂರ್ಯ.ಇನ್ನಾದರೂ ಏನೇನೋ ಊಹಿಸಿ ಮಾತನಾಡುವ ಬಾಯಿಗಳು ಬಂದ್ ಆದರೆ ಒಳ್ಳೆಯದು ಅಂತಿದಾರೆ ನಟ ಸೂರ್ಯ ಹಾಗು ಜ್ಯೋತಿಕಾ ಫ್ಯಾನ್ಸ್! ಅದೇನೇ ಇರಲಿ, ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಅವರದು ಲವ್ ಮ್ಯಾರೇಜ್ ಎಂಬುದು ಹಲವರಿಗೆ ಗೊತ್ತು. ಕುಟುಂಬದ ಆಕ್ಷೇಪವನ್ನು ಬಿದಿಗಿಟ್ಟು ಅವರಿಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ. ಈಗ ಎರಡು ಮಕ್ಕಳ ಅಪ್ಪ-ಅಮ್ಮ ಆಗಿದ್ದಾರೆ.
FILM
ಅಮ್ಮ ಲೀಲಾವತಿಗಾಗಿ ಸ್ಮಾರಕ ನಿರ್ಮಿಸಿದ ವಿನೋದ್ ರಾಜ್
Published
10 hours agoon
05/12/2024By
NEWS DESK2ಹಿರಿಯ ನಟಿ ಡಾ.ಲೀಲಾವತಿ ಸ್ಮಾರಕ ಉದ್ಘಾಟನೆ ಇಂದು (ಡಿ.5) ಸೋಲದೇವನಹಳ್ಳಿಯಲ್ಲಿ ಜರುಗಿದೆ. ಸಚಿವ ಕೆ.ಎಚ್ ಮುನಿಯಪ್ಪ ಅವರಿಂದ ಲೀಲಾವತಿ ಸ್ಮಾರಕ ಉದ್ಘಾಟಿಸಿದ್ದಾರೆ.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ಅಮ್ಮನ ಸ್ಮಾರಕವನ್ನು ವಿನೋದ್ ರಾಜ್ ನಿರ್ಮಿಸಿದ್ದಾರೆ. ಅದಕ್ಕೆ ‘ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ’ ಎಂದು ವಿನೋದ್ ರಾಜ್ ಹೆಸರಿಟ್ಟಿದ್ದಾರೆ. ಇಂದು (ಡಿ.5) ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಬೆಳಗ್ಗೆ ಹೋಮ, ಹವನ ಮೂಲಕ ಪೂಜೆ ನೆರವೇರಿದೆ.
ಬಹುಭಾಷಾ ನಟಿಯಾಗಿ ಮಿಂಚಿದ ಲೀಲಾವತಿ ಅವರು ಕಳೆದ ವರ್ಷ ಡಿ.8ರಂದು ಇಹಲೋಕ ತ್ಯಜಿಸಿದರು. ಸದಾ ಅಮ್ಮನ ಜೊತೆಯೇ ಇದ್ದು ನೋಡಿಕೊಳ್ಳುತ್ತಿದ್ದ ವಿನೋದ್ ರಾಜ್ ಅವರು ಅಮ್ಮನಿಗಾಗಿ ದೇಗುಲ ಕಟ್ಟಿಸಿದ್ದಾರೆ. ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ 60ಕ್ಕೂ ಹೆಚ್ಚು ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿಸಲಾಗಿದೆ ಎಂಬುದು ವಿಶೇಷ.
ಮಂಗಳೂರು/ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ರೇಣುಕಾಸ್ವಾಮಿ ಕೊಲೆ ನಡೆದು ಆರು ತಿಂಗಳಾಗಿದೆ. ಈ ಪ್ರಕರಣದಲ್ಲಿ ಒಟ್ಟು 17 ಜನ ಆರೋಪಿಗಳ ಬಂಧನವಾಗಿತ್ತು. ಆದರೆ ಕೆಲವು ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ. ಅದರಲ್ಲಿ ಎ2 ಆರೋಪಿ ದರ್ಶನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಶೂಟಿಂಗ್ ಸೆಟ್ ನಲ್ಲಿ ಭದ್ರತಾ ಲೋಪ !
ಸದ್ಯ ಫಿಸಿಯೋ ಥೆರೆಪಿ ಮಾಡಿಸಲಾಗುತ್ತಿದ್ದು, ಶೀಘ್ರವೇ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಮಧ್ಯೆ ದರ್ಶನ್ ಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಒಂದು ಕಡೆ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗಲೇ ಅವರ ಮಧ್ಯಂತರ ಜಾಮೀನು ರದ್ದತಿ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಶುಕ್ರವಾರ(ಡಿ.6) ಅಥವಾ(ಡಿ.9) ಸೋಮವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಇನ್ನೂ ದರ್ಶನ್ ಗೆ ತೀವ್ರ ರಕ್ತದೊತ್ತಡ ಇರುವ ಕಾರಣದಿಂದ ಅವರು ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗುತ್ತಿಲ್ಲ. ಬಿಪಿ ಬಳಿಕ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಮಂಗಳೂರು/ಮುಂಬೈ: ನಟ ಸಲ್ಮಾನ್ ಖಾನ್ ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಿಂದ ಜೀವ ಬೆದರಿಕೆ ಇರೋದು ಗೊತ್ತೆ ಇದೆ. ಇದರ ನಡುವೆ ಸಲ್ಮಾನ್ ಖಾನ್ ಚಿತ್ರವೊಂದರ ಚಿತ್ರೀಕರಣದ ವೇಳೆ ಭಾರಿ ಭದ್ರತಾ ಲೋಪವಾಗಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈನ ದಾದರ್ ವೆಸ್ಟ್ ನಲ್ಲಿ, ಸಿನಿಮಾ ಶೂಟಿಂಗ್ ಸಂದರ್ಭ ಅಭಿಮಾನಿಯೊಬ್ಬರು ಚಿತ್ರೀಕರಣ ವೀಕ್ಷಿಸಲು ಬಯಸಿದ್ದಾರೆ. ಆದರೆ ಭದ್ರತಾ ಸಿಬ್ಬಂದಿ ಅವರನ್ನು ಪಕ್ಕಕ್ಕೆ ಸರಿಸಿದಾಗ ಅವರ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಎನ್.ಐ.ಎ ದಾಳಿ
ಆ ಬಳಿಕ ಕೋಪಗೊಂಡ ಆ ವ್ಯಕ್ತಿ ಲಾರೆನ್ಸ್ ಬಿಷ್ಣೋಯಿ ಹೆಸರು ಹೇಳಿದ್ದಾನೆ. ಇದರಿಂದ ಭದ್ರತಾ ಸಿಬ್ಬಂದಿ ತಕ್ಷಣವೇ ಪೊಲೀಸರನ್ನು ಕರೆಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆ ವ್ಯಕ್ತಿ ಮುಂಬೈ ನಿವಾಸಿ ಎಂಬುದು ತಿಳಿದುಬಂದಿದೆ.
ಇತ್ತೀಚೆಗೆ, ಅಕ್ಟೋಬರ್ 24ರಂದು ಮುಂಬೈ ಸಂಚಾರಿ ಪೊಲೀಸರಿಗೆ ಬಂದ ಸಂದೇಶದಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಹಅಕಿ 5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.
ನಂತರ ಆ ವ್ಯಕ್ತಿಯನ್ನು ಹಾವೇರಿಯಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.