Connect with us

    BIG BOSS

    ಚೈತ್ರಾ ಕುಂದಾಪುರ ವಿಚಿತ್ರ ಪೂಜೆಗೆ ಬಿಗ್‌ಬಾಸ್ ಮನೆಯ ಎಲ್ರೂ ಶಾಕ್‌; ವಿಡಿಯೋ!

    Published

    on

    ಬಿಗ್ ಬಾಸ್ ಸೀಸನ್‌ 11ರ ಆಟದ ಶೈಲಿ ಬದಲಾಗಿದೆ. ವಾರಗಳು ಕಳೆದಂತೆ ಒಬ್ಬೊಬ್ಬರು ತಮ್ಮದೇ ಗೇಮ್ ಪ್ಲಾನ್ ಮಾಡುತ್ತಾ, ಮನೆಯ ಸದಸ್ಯರಿಗೆ ಟಫ್ ಫೈಟ್ ನೀಡುತ್ತಿದ್ದಾರೆ. ಬಿಗ್‌ಬಾಸ್ ಟಾಸ್ಕ್ ಮತ್ತು ಪೈಪೋಟಿಯ ಮಧ್ಯೆ ಪ್ರತಿಯೊಬ್ಬ ಸ್ಪರ್ಧಿಗಳ ಅಸಲಿ ಮುಖವಾಡ ಬಯಲಾಗುತ್ತಿದೆ.

    5ನೇ ವಾರದಲ್ಲಿ ಬಿಗ್‌ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳು ಜಿದ್ದಾಜಿದ್ದಿಗೆ ಇಳಿದಿದ್ದಾರೆ. ಕಳೆದ 4 ವಾರದಲ್ಲಿ ಆದ ತಪ್ಪುಗಳನ್ನು ಸರಿ ಪಡಿಸಿಕೊಂಡಿರುವ ಸ್ಪರ್ಧಿಗಳು ಆಟ ಆಡುವುದನ್ನ ಕಲಿತಿದ್ದಾರೆ. ಸೀಸನ್ 11ರ ಸ್ಪರ್ಧಿಗಳು ತಮ್ಮ ಎದುರಾಳಿಗಳಿಗೆ ಟಕ್ಕರ್ ಕೊಡೋಕೆ ಶುರು ಮಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿರುವ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಅವರು ಈಗ ತಮ್ಮ ವರಸೆ ಬದಲಾಯಿಸಿದ್ದಾರೆ. ಪಟ, ಪಟ ಅಂತ ಮಾತನಾಡುತ್ತಿದ್ದ ಚೈತ್ರಾ ಅವರು ಆಟದಲ್ಲಿ ಈಗ ಚಿತ್ರ, ವಿಚಿತ್ರ ಪಟ್ಟು ಹಾಕಿದ್ದಾರೆ. ಚೈತ್ರಾ ಕುಂದಾಪುರ ಅವರ ಆಟದ ಶೈಲಿ ಬದಲಾಗಿರೋದಕ್ಕೆ ಈ ಪೂಜಾ ಶೈಲಿಯೇ ಸಾಕ್ಷಿಯಾಗಿದೆ.

    ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ತನಗೆ ತಾನೇ ಪೂಜೆ ಮಾಡಿಕೊಂಡಿದ್ದು ವಿಶೇಷವಾಗಿದೆ. ದೇವರ ಪಕ್ಕದಲ್ಲಿ ನಿಂತು ಐ ಆ್ಯಮ್ ಗಾಡ್‌, ಗಾಡ್ ಈಸ್ ಗ್ರೇಟ್ ಅನ್ನೋ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಿ ಮುಂದೆ ತನಗೆ ತಾನೇ ಪೂಜೆ ಮಾಡಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರನ್ನು ಶಿಶಿರ್ ನೋಡಿ ಫುಲ್ ಶಾಕ್ ಆಗಿದ್ದಾರೆ. ಚೈತ್ರಾ ಅವರ ವಿಚಿತ್ರ ಪೂಜೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

    bangalore

    ಎರಡನೇ ಪತ್ನಿಯನ್ನು ಕೊಂ*ದು ಮೂರನೇ ಮದುವೆಗೆ ಸಿದ್ದತೆ ಮಾಡುತ್ತಿದ್ದವನಿಗೆ ಪೊಲೀಸರ ಶಾಕ್ !

    Published

    on

    ಮಂಗಳೂರು/ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪದೇ ಪದೇ ಹಲ್ಲೆ ಮಾಡುತ್ತಿದ್ದ ಆರೋಪಿಯು ಪತ್ನಿಯನ್ನು ಕೊ*ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಅನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ.


    ಈ ಘಟನೆ ಕಳೆದ ತಿಂಗಳು ನಡೆದಿದ್ದು, ಸರ್ಜಾಪುರ ಪೊಲೀಸರ ಕಾರ್ಯಾಚರಣೆಯಿಂದ ಪತ್ನಿಯನ್ನು ಕೊಂ*ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಿಹಾರ ಮೂಲದ ಮಹಮ್ಮದ್ ನಸೀಮ್ (39) ಬಂಧಿತ ಆರೋಪಿಯಾಗಿದ್ದು, ಬಿಹಾರ ಮೂಲದ ರುಮೇಶ್ ಖಾತುನ್ (22) ಕೊ*ಲೆಯಾದ ಮಹಿಳೆಯಾಗಿದ್ದಾಳೆ.

    ಇದನ್ನೂ ಓದಿ: ಕ್ರಿಕೆಟ್ ದೇವರ ಮಗನಾದರೂ ಯಾರಿಗೂ ಬೇಡವಾದ ಅರ್ಜುನ್ ತೆಂಡೂಲ್ಕರ್ !

    ಕೊಲೆ ಮಾಡಿದ ಬಳಿಕ ಆರೋಪಿ, ಪತ್ನಿಯ ಶ*ವವನ್ನು ವಿವಸ್ತ್ರಗೊಳಿಸಿ ಹಗ್ಗದಿಂದ ಕೈ ಕಾಲು ಕಟ್ಟಿ ಯಾರಿಗೂ ಅನುಮಾನ ಬಾರದಂತೆ ಚರಂಡಿಗೆ ಎಸೆದು ಬಿಹಾರಕ್ಕೆ ಎಸ್ಕೇಪ್ ಆಗಿದ್ದನು. ಶವ ಕೊಳೆತು ದುರ್ವಾಸನೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

    ಕೊಲೆ ಪ್ರಕರಣ ದಾಖಲಿಸಿಕೊಂಡ ಸರ್ಜಾಪುರ ಪೊಲೀಸರು ತನಿಖೆ ಮುಂದುವರಿಸಿದರು. ಆರೋಪಿಯ ಜಾಡು ಹಿಡಿದು ಬಿಹಾರಕ್ಕೆ ತೆರಳಿದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಆರೋಪಿ ಮಹಮ್ಮದ್ ನಸೀಮ್ ಮೂರನೇ ಮದುವೆ ಸಂಭ್ರಮದಲ್ಲಿದ್ದ. ಪೊಲೀಸರು ಮದುವೆ ಮನೆಯಲ್ಲಿಯೇ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

    Continue Reading

    BIG BOSS

    BBK11: ಮೋಕ್ಷಿತಾಗೆ ಬಿಗ್​​ಬಾಸ್​ ನೇರ ಎಚ್ಚರಿಕೆ; ಇವತ್ತು ಮನೆಯಿಂದ ಆಚೆ ಕಳಿಸಿಬಿಡ್ತಾರಾ?

    Published

    on

    ಬಿಗ್​ಬಾಸ್ ಸಾಮ್ರಾಜ್ಯದ ಮಹಾರಾಜ-ಯುವರಾಣಿ ನಡುವಿನ ಕಿತ್ತಾಟದ ಮುನಿಸು ಈ ವಾರವೂ ಕಂಟಿನ್ಯೂ ಆಗಿದೆ. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಮೋಕ್ಷಿತಾ, ಗೌತಮಿ ಮೇಲೆ ಜಿದ್ದಿಗೆ ಬಿದ್ದಿದ್ದಾರೆ. ಇದನ್ನು ಮನಗಂಡಿರುವ ಬಿಗ್​​ಬಾಸ್​, ಮೋಕ್ಷಿತಾಗೆ ಕಡೆಯ ಎಚ್ಚರಿಕೆ ನೀಡಿದ್ದಾರೆ.

    ಏನಿದು ಕತೆ..?

    ಅಂದ್ಹಾಗೆ ಬಿಗ್​​ಬಾಸ್​ ಮನೆಯಲ್ಲಿ ಇದೀಗ ಮುಂದಿನ ವಾರಕ್ಕೆ ನಾಯಕನ ಆಯ್ಕೆಯ ಟಾಸ್ಕ್​​ಗಳು ಶುರುವಾಗಿದೆ. ಬಿಗ್​ಬಾಸ್ ನೀಡಿರುವ ಟಾಸ್ಕ್​​ಗಳಲ್ಲಿ ಯಶಸ್ವಿ ಆಗಿರುವ ಕೆಲವು ಸದಸ್ಯರು ಕ್ಯಾಪ್ಟನ್ ಆಗಲು ಅರ್ಹತೆ ಪಡೆದುಕೊಂಡಿದ್ದಾರೆ. ಅವರಲ್ಲಿ ಮೋಕ್ಷಿತಾ ಕೂಡ ಒಬ್ಬರು.

    ಅಂತೆಯೇ ಈ ವಾರ ನಾಯಕನ ಆಯ್ಕೆ ಸಂಬಂಧ ಬಿಗ್​​ಬಾಸ್ ಟಾಸ್ಕ್ ನೀಡಿದ್ದಾರೆ. ನಿಯಮದಂತೆ, ಕ್ಯಾಪ್ಟನ್ಸಿ ಓಟದಲ್ಲಿರುವ ಅಭ್ಯರ್ಥಿಗಳು ತಮ್ಮ ಸಹಾಯಕ್ಕಾಗಿ ಉಳಿದ ಸದಸ್ಯರು ಆಡುವಂತೆ ಮನವೊಲಿಸಬೇಕು ಎಂದಾಗಿರುತ್ತದೆ. ಅದರಂತೆ ಕ್ಯಾಪ್ಟನ್ಸಿ ಅಭ್ಯರ್ಥಿ ಹನುಮಂತ ಕೆಲವು ಸ್ಪರ್ಧಿಗಳ ಜೊತೆ ಮನವಿ ಮಾಡಿಕೊಂಡಿದ್ದಾರೆ.

    ಆದರೆ, ಮೋಕ್ಷಿತಾ ಅವರು ಗೌತಮಿಯನ್ನು ಮನವೊಲಿಸಲು ಒಪ್ಪಿಕೊಳ್ಳುವುದಿಲ್ಲ. ಬಿಗ್​ಬಾಸ್ ಟಾಸ್ಕ್​ನ ನಿಯಮ ಘೋಷಣೆ ಮಾಡ್ತಿದ್ದಂತೆಯೇ, ನಾನು ಗೌತಮಿ ಹತ್ತಿರ ಕೇಳಲ್ಲ. ಅವರಿಂದ ನಾನು ಕ್ಯಾಪ್ಟನ್ ಆಗಬೇಕು ಅಂತಿದ್ದರೆ ನಾನು ಆಡೋದೇ ಇಲ್ಲ. ನನಗೆ ಆತ್ಮ ಗೌರವದ ಮುಂದೆ ಯಾವುದೂ ದೊಡ್ಡದಲ್ಲ. ನನ್ನ ಕಳಿಸಿದ್ರೆ ನಾಳೆಯೇ ಹೋಗ್ತೇನೆ ಎಂದಿದ್ದಾರೆ.

    ಅದಕ್ಕೆ ಬಿಗ್​ಬಾಸ್ ಮೋಕ್ಷಿತಾಗೆ ಎಚ್ಚರಿಕೆ ನೀಡಿದ್ದು, ದೊಡ್ಡ ದೊಡ್ಡ ನಿರ್ಧಾರದ ಜೊತೆಗೆ ಅದಕ್ಕೆ ತಕ್ಕಂತೆ ಬೆಲೆನೂ ಕಟ್ಟಬೇಕಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಬೆನ್ನಲ್ಲೇ ಮೋಕ್ಷಿತಾ ವಿರುದ್ಧ ಬಿಗ್​​ಬಾಸ್ ಯಾವ ರೀತಿಯ ಕ್ರಮ ತೆಗೆದುಕೊಳ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಅವರನ್ನ ಇವತ್ತೇ ಮನೆಯಿಂದ ಆಚೆ ಕಳುಹಿಸುತ್ತಾರಾ ಎಂಬ ಅನುಮಾನ ಕೂಡ ಶುರುವಾಗಿದೆ. ಇನ್ನು ಬಿಗ್​ಬಾಸ್ ಘೋಷಣೆ ಬೆನ್ನಲ್ಲೇ, ಗೌತಮಿ ಜಾಧವ್ ಹಾಗೂ ತ್ರಿವಿಕ್ರಮ್ ನಕ್ಕಿದ್ದಾರೆ. ಮಂಜು ಅವರು ಚಪ್ಪಾಳೆ ತಟ್ಟಿದ್ದಾರೆ.

    Continue Reading

    BIG BOSS

    ಐಶ್ವರ್ಯ-ಮಂಜು ನಡುವೆ ಹೊತ್ತಿಕೊಂಡ ಬೆಂಕಿ !

    Published

    on

    ಮಂಗಳೂರು/ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ ರೋಚಕ ಘಟ್ಟ ತಲುಪುತ್ತಿದೆ.

    ಈಗಾಗೀ ಸ್ಪರ್ಧಿಗಳ ನಡುವೆ ಸದ್ಯ ಬಿಗ್ ಬಾಸ್ ಮನೆ ಎರಡು ಟಿವಿ ವಾಹಿನಿಗಳಾಗಿ ಪರಿವರ್ತನೆ ಆಗಿದೆ. ಎರಡು ವಾಹಿನಿಗಳ ಉದ್ಯೋಗಿಗಳು ಎದುರಾಳಿಗಳಿಗೆ ಟಕ್ಕರ್ ನೀಡುವ, ಕಾಲೆಳೆಯುವ ಟಾಸ್ಕ್ ಜೋರಾಗಿ ನಡೆಯುತ್ತಿದೆ.

    ಇದರ ನಡುವೆ ದೊಡ್ಮನೆಯಲ್ಲಿ ನಾಮಿನೇಷನ್ ಕಾವು ಜೋರಾಗಿದೆ. ಬಿಗ್ ಬಾಸ್ ಇಂದು ನಾಮಿನೇಷನ್ ಗೆ ಸಂಬಂಧಿಸಿದ ಟಾಸ್ಕ್ ನೀಡಿದ್ದಾರೆ. ಈ ಸಲದ ನಾಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿದ್ದು, ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಸದಸ್ಯರನ್ನು ಆರಿಸಿ, ಬೆನ್ನಿಗೆ ಚೂರಿಯನ್ನು ಚುಚ್ಚಬೇಕು ಎಂಬ ಟಾಸ್ಕ್ ನೀಡಲಾಗಿದೆ.

    ಇದನ್ನೂ ಓದಿ: ಮುಖ್ಯಶಿಕ್ಷಕನಿಂದಲೇ ಬ*ಲತ್ಕಾರಕ್ಕೊಳಗಾದ 5ನೇ ತರಗತಿ ವಿದ್ಯಾರ್ಥಿನಿ !

    ಈ ಟಾಸ್ಕ್ ನಲ್ಲಿ ಎಲ್ಲಾ ಸ್ಪರ್ಧಿಗಳು ಮಂಜು ಬೆನ್ನಿಗೆ ಚುರಿ ಚುಚ್ಚಿದ್ದಾರೆ. ಎಂಟು ಮಂದಿ ಸ್ಪರ್ಧಿಗಳ ಚೂರಿಗಳು ಮಂಜು ಬೆನ್ನಿಗೆ ಬಿದ್ದಿದೆ. ಮಂಜು ಅವರಿಗೆ ಐಶ್ವರ್ಯ ಚೂರಿ ಚುಚ್ಚುವ ವೇಳೆ ನೀಡಿರುವ ಕಾರಣ, ಮಂಜು ಅವರನ್ನು ಕೆರಳಿಸುವಂತೆ ಮಾಡಿದೆ.
    ಇಬ್ಬರು ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ನೀವು ಮಾನಸಿಕವಾಗಿ ನನ್ನನ್ನು ಕುಗ್ಗಿಸಲು ನೋಡಿದ್ರೆ, ನಾನು ಕುಗ್ಗುವಂತಹ ಮಗಳೇ ಅಲ್ಲ. ಅದು ಏನೇನು ಚುಚ್ಚಿ ಮಾತನಾಡ್ತಿರೋ ಆಡಿ ಎಂದು ಐಶ್ವರ್ಯ ಸವಾಲ್ ಹಾಕಿದ್ದಾರೆ.

    ಅದಕ್ಕೆ ಮಂಜು ಅವರು ಯಾವ ರೀತಿ ಕೌಂಟರ್ ನೀಡುತ್ತಾರೆ ? ಅದು ಅಲ್ಲದೆ ಇವರಿಬ್ಬರ ನಡುವೆ ಬೆಂಕಿ ಹೊತ್ತಿಕೊಳ್ಳಲು ನಿಜವಾದ ಕಾರಣ ಏನು ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

     

    Continue Reading

    LATEST NEWS

    Trending