Connect with us

    LATEST NEWS

    ಬಾಲಕನ ಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತಮ್ಮನನ್ನೇ ಕೊಂದ ಅಣ್ಣ; ಮೊಬೈಲ್ ನಿಂದ ಹೋಯ್ತು ಪ್ರಾಣ!

    Published

    on

    ಬೆಂಗಳೂರು : ಆ ಬಾಲಕ ಅಜ್ಜಿ ಮನೆಯಲ್ಲಿದ್ದುಕೊಂಡು ಓದುತ್ತಿದ್ದ. ಬೇಸಿಗೆ ರಜೆಯ ಹಿನ್ನೆಲೆ ತಂದೆ – ತಾಯಿ, ಅಣ್ಣನೊಂದಿಗೆ ಸಮಯ ಕಳೆಯಲು ಬಂದಿದ್ದ. ಆದರೆ ವಿಧಿಯಾಟ ಬೇರೆಯಾಗಿತ್ತು. ರಜೆಯ ಸಂಭ್ರಮದಲ್ಲಿ ಬಂದಿದ್ದವನಿಗೆ ಅಣ್ಣನೇ ಪರಲೋಕದ ದಾರಿ ತೋರಿಸಿದ್ದ.

    ಪ್ರಕರಣಕ್ಕೆ ಟ್ವಿಸ್ಟ್ , ಅಣ್ಣನೇ ಹಂ*ತಕ:


    ಆನೇಕಲ್ ತಾಲೂಕಿನ ನೆರಿಗಾ ಗ್ರಾಮ ಅಂದು ಬೆಚ್ಚಿ ಬಿದ್ದಿತ್ತು. ಬಹಿರ್ದೆಸೆಗೆ ತೆರಳಿದ್ದ ಬಾಲಕ ಪ್ರಾಣೇಶ್(15) ಶ*ವವಾಗಿ ಪತ್ತೆಯಾಗಿದ್ದ. ಯಾರು ಈ ದುಷ್ಕೃತ್ಯ ಮೆರೆದವರು ಎಂದು ಪ್ರಕರಣ ಬೆಂಬತ್ತಿದ ಪೊಲೀಸರಿಗೆ ಸಾಕ್ಷಿಗಳು ಬಾಲಕನ ಅಣ್ಣನತ್ತ ಬೆಟ್ಟು ಮಾಡಿ ತೋರಿಸಿದ್ದವು.
    ತಮ್ಮನನ್ನೇ ಕೊ*ಲೆಗೈದಿದ್ದ ಅಣ್ಣ 18 ವರ್ಷದ ಅಣ್ಣ ಶಿವಕುಮಾರ್ ಪೊಲೀಸ್ ಬಲೆಗೆ ಬಿದ್ದಿದ್ದ. ಮೊಬೈಲ್ ಚಟವೇ ಈ ಕೊ*ಲೆಗೆ ಕಾರಣ ಎಂಬ ಸತ್ಯ ತನಿಖೆಯಿಂದ ಬಯಲಾಗಿದೆ.

    ಮೊಬೈಲ್ ನಿಂದಾಗಿ ಹೋಯ್ತು ಜೀವ:

    ಮೂಲತಃ ಆಂಧ್ರ ಮೂಲದ ಸೂಳೆಕೆರಿ ಗ್ರಾಮದ ಚನ್ನಮ್ಮ ಮತ್ತು ಬಸವರಾಜ್ ಎಂಬ ಕೂಲಿಕಾರ್ಮಿಕ ದಂಪತಿ 3 ತಿಂಗಳ ಹಿಂದೆ ಗಾರೇ ಕೆಲಸಕ್ಕೆಂದು ಆಂಧ್ರದಿಂದ ನೆರಿಗಾ ಗ್ರಾಮಕ್ಕೆ ಬಂದು ನೆಲೆಸಿದ್ದರು. ದೊಡ್ಡ ಮಗನಿಗೆ ವಿದ್ಯೆ ತಲೆಗೆ ಹತ್ತಲಿಲ್ಲ ಎಂದು ತಮ್ಮೊಂದಿಗೆ ಕರೆದುಕೊಂಡು ಬಂದು ಗಾರೇ ಕೆಲಸಕ್ಕೆ ಹಾಕಿದ್ದರು. ಚಿಕ್ಕ ಮಗನಿಗೆ ಓದಿನಲ್ಲಿ ಆಸಕ್ತಿ ಇದ್ದ ಕಾರಣ ಅಜ್ಜಿ ಮನೆಯಲ್ಲೇ ಬಿಟ್ಟು ಓದಿಸುತ್ತಿದ್ದರು. ಆಂಧ್ರದ ಕರ್ನೂಲ್​ನಲ್ಲಿ ಅಜ್ಜಿ ಮನೆಯಲ್ಲೇ ಇದ್ದುಕೊಂಡು ಸರ್ಕಾರಿ ಶಾಲೆಯಲ್ಲಿ ಪ್ರಾಣೇಶ್ ಏಳನೇ ತರಗತಿ ಓದುತ್ತಿದ್ದ. ಶಾಲೆಗೆ ಬೇಸಿಗೆ ರಜೆ ಹಿನ್ನೆಲೆ ತಂದೆ ತಾಯಿ ಇದ್ದ ನೆರಿಗಾ ಗ್ರಾಮಕ್ಕೆ ಬಂದಿದ್ದ.

    ಸಮಯ ಸಿಕ್ಕಾಗಲೆಲ್ಲ ಅಣ್ಣ ಶಿವಕುಮಾರ್​ನ ಮೊಬೈಲ್​ ತೆಗೆದುಕೊಂಡು ಆಟ ಆಡ್ತಿದ್ದ. ಇದು ಶಿವಕುಮಾರ್​ಗೆ ಕೋಪ ತರಿಸಿತ್ತು. ಹೀಗಾಗಿ ಮೇ 15 ರಂದು ತಮ್ಮ ಬಹಿರ್ದೆಸೆಗೆ ಹೋದಾಗ ಅವನನ್ನು ಹಿಂಬಾಲಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪ್ರಾಣೇಶ್​ನ ತಲೆ, ಹೊಟ್ಟೆ ಭಾಗಕ್ಕೆ ಹೊಡೆದು ಹ*ತ್ಯೆ ಮಾಡಿದ್ದಾನೆ. ಬಳಿಕ ಮನೆಗೆ ಬಂದು ತನಗೆ ಏನು ಗೊತ್ತಿಲ್ಲ ಎಂಬಂತೆ ಓಡಾಡಿಕೊಂಡಿದ್ದ.

    ನಾಟಕವಾಡಿದ್ದ ಶಿವಕುಮಾರ್ :

    ತಂದೆ ತಾಯಿ ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಚಿಕ್ಕ ಮಗ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಎಲ್ಲೆಡೆ ಹುಡುಕಾಡಿದ್ದಾರೆ. ಈ ವೇಳೆ ತಮ್ಮನ ಶ*ವ ಬಿದ್ದಿದೆ ಎಂದು ಓಡೋಡಿ ಬಂದು ಶಿವಕುಮಾರ ಪೋಷಕರಿಗೆ ಕೊಲೆಯಾಗಿದೆ ಎಂದು ತಿಳಿಸಿದ್ದಾನೆ. ಪೋಷಕರು ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಇದನ್ನೂ ಓದಿ : ಐದು ಮಕ್ಕಳಿದ್ದಾರೆಂದು ಚಿಂತೆಗೊಳಗಾದ ತಂದೆ..! ಅಕ್ಕನಿಂದಲೇ ಇಬ್ಬರು ಸಹೋದರಿಯರ ಕೊ*ಲೆ..!

    ಈ ವೇಳೆ ತಮ್ಮನ ಶವವನ್ನ ನಾನೇ ಮೊದಲು ನೋಡಿದ್ದೆ ಎಂದು ಹೇಳುತ್ತಿದ್ದ ಶಿವಕುಮಾರನ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಠಾಣೆಗೆ ಕರೆದು ಕೊಂಡು ಹೋಗಿ ಬಾಯಿ ಬಿಡಿಸಿದ್ದಾರೆ. ಈ ವೇಳೆ ಸತ್ಯಾಂಶ ಬಯಲಾಗಿದೆ. ಅಲ್ಲದೇ,  ಆರೋಪಿ ಶಿವಕುಮಾರ್, ನಿರ್ಮಾಣ ಹಂತದ ಕಟ್ಟಡದಿಂದ ಸುತ್ತಿಗೆ ತಂದಿದ್ದ. ಸುತ್ತಿಗೆಯನ್ನ ಜೇಬಿನಲ್ಲಿ ಇಟ್ಟುಕೊಳ್ಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಒಬ್ಬ ಮಗ ಇಹಲೋಕ ತ್ಯಜಿಸಿದ, ಇನ್ನೊಬ್ಬ ಮಗ ಜೈಲು ಪಾಲಾದ ನೋವಿನಿಂದ ಪೋಷಕರು ಕಣ್ಣೀರು ಹಾಕ್ತಿದ್ದಾರೆ.

    LATEST NEWS

    ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆ ಸೆರೆ

    Published

    on

    ಉಡುಪಿ : ಉಡುಪಿ ಜಿಲ್ಲೆಯ ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಚಿರತೆಯ ಕಾಟ ಜೋರಾಗಿದೆ. ಆಹಾರ ಅರಸಿ ಬರುವ ಚಿರತೆಗಳು ಗ್ರಾಮಸ್ಥರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿವೆ.

    ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬಳಿಯ ಬಾಗಿ ಎನ್ನುವವರ ಮನೆಯ ಬಾವಿಗೆ ರಾತ್ರಿ ಚಿರತೆಯೊಂದು ಬಿದ್ದಿತ್ತು. ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆಯನ್ನು ಮೇಲಕ್ಕೆ ಬರುವಂತೆ ಮಾಡಲು, ಅರಣ್ಯ ಇಲಾಖೆ ಹರ ಸಾಹಸ ಪಡುವಂತಾಯ್ತು.

    ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಬೋನಿನ ಮೂಲಕ ಚಿರತೆ  ಸೆರೆ ಹಿಡಿಯುವಲ್ಲಿ ಅರಣ್ಯ  ಇಲಾಖೆ  ಸಿಬ್ಬಂದಿ ಯಶಸ್ಸು ಕಂಡಿದ್ದಾರೆ. ಅರಣ್ಯ ಇಲಾಖೆಯ ಕಾರ್ಯ ದಕ್ಷತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

     

    Continue Reading

    LATEST NEWS

    ಕದ್ದ ಚಿನ್ನಾಭಾರಣಗಳನ್ನು ಮನೆಯ ಜಗಲಿಯ ಮೇಲೆ ಇಟ್ಟು ಹೋದ ಕಳ್ಳರು !

    Published

    on

    ಮಂಗಳೂರು/ಮಂಡ್ಯ: ರಾಜ್ಯದಲ್ಲಿ ಕಳ್ಳತನ ಎನ್ನುವುದು ಸಾಮಾನ್ಯವಾಗಿದೆ. ಕಳ್ಳರು ಕದ್ದ ಚಿನ್ನಾಭಾರಣಗಳನ್ನು ಎಲ್ಲಿಯಾದರೂ ಮಾರಿ ಬಿಡುತ್ತಾರೆ. ಆದರೆ ಕಳ್ಳರಲ್ಲೂ ಪ್ರಾಮಾಣಿಕತೆ ಇದೆ ಎಂದು ಮಂಡ್ಯದಲ್ಲಿ ಸಾಕ್ಷಿಯಾಗಿದೆ.

     

     

    ಈ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದೇಗೌಡ ಎಂಬುವವರ ಕುಟುಂಬ ಮನೆದೇವರ ಪೂಜೆಗೆಂದು ಹೋಗಿದ್ದರು. ಈ ವೇಳೆ ಮನೆಯ ಹೆಂಚುಗಳನ್ನು ತೆಗೆದು ಒಳನುಗ್ಗಿದ್ದ ಕಳ್ಳರು ಬೀರುವನ್ನು ಒಡೆದು ಕಳ್ಳತನ ಮಾಡಿದ್ದರು. ಈ ವೇಳೆ 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂನ ಮೂರು ಜೊತೆ ಓಲೆಗಳು ಸೇರಿ ಒಟ್ಟು 75 ಗ್ರಾಂನಷ್ಟು ಚಿನ್ನಾಭರಣ ಕದ್ದಿದ್ದರು.

    ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ 


    ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಕಳ್ಳರಿಗೆ ಪೊಲೀಸರ ಭಯವೋ ಅಥವಾ ಮನೆದೇವರ ಆಶೀರ್ವಾದವೋ ಗೊತ್ತಿಲ್ಲ, ಪೊಲೀಸರಿಗೆ ದೂರು ನೀಡಿದ ಎರಡು ದಿನಗಳ ನಂತರ ಕಳ್ಳರು ಮನೆಯ ಮುಂಭಾಗದ ಜಗಲಿಯ ಮೇಲೆ ಚಿನ್ನಾಭರಣಗಳನ್ನು ಇಟ್ಟು ಹೋಗಿದ್ದಾರೆ.
    ಚಿನ್ನಾಭರಣ ವಾಪಸ್ಸು ಸಿಕ್ಕ ಖುಷಿಯಲ್ಲಿ ಸಿದ್ದೇಗೌಡರ ಕುಟುಂಬ ನಿರಾಳವಾಗಿದೆ.

    Continue Reading

    LATEST NEWS

    WATCH : ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ

    Published

    on

    ಮಂಗಳೂರು/ಕಾನ್ಪುರ : ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ರೈಲು ಹತ್ತುವ ವೇಳೆ ಅಥವಾ ಇಳಿಯುವ ವೇಳೆ ಆಯತಪ್ಪಿ ಬಿದ್ದ ಘಟನೆಗಳು ಸಂಭವಿಸಿವೆ. ಕೆಲವೊಮ್ಮೆ ಅದೃಷ್ಟವಶಾತ್, ಪಾರಾಗಿರುವುದಿದೆ. ರೈಲ್ವೇ ಸಿಬ್ಬಂದಿ ರಕ್ಷಿಸಿರುವ ಘಟನೆಗಳೂ ಇವೆ. ಇಂತಹ ಹಲವು ವೀಡಿಯೋಗಳು ವೈರಲ್ ಆಗಿವೆ. ಇದೀಗ ಮತ್ತೊಂದು ಅಂತಹುದೇ ವೀಡಿಯೋ ವೈರಲ್ ಆಗಿದೆ.


    ರೈಲು ಬಂದು ನಿಂತಿತ್ತು. ಮಹಿಳೆ ರೈಲು ಹತ್ತಿದ್ದರು. ಆದರೆ, ಮಕ್ಕಳು ಪ್ಲಾಟ್ ಫಾರ್ಮ್ ನಲ್ಲಿಯೇ ಉಳಿದಿದ್ದರು.  ಮಕ್ಕಳು ಅಲ್ಲೇ ಇರುವುದನ್ನು  ನೋಡಿ ಮಹಿಳೆ ಮಕ್ಕಳನ್ನು ಕರೆದಿದ್ದಾರೆ. ಅವರು ಬರದೇ ಇದ್ದಾಗ ರೈಲಿನಿಂದ ಕೆಳಗೆ ಹಾರಲು ಯತ್ನಿಸಿದ್ದಾರೆ. ಈ ವೇಳೆ  ಆಯತಪ್ಪಿ ರೈಲು ಹಾಗೂ ಪ್ಲಾರ್ಟ್ ಫಾರ್ಮ್ ನಡುವೆ ಸಿಲುಕಿಕೊಂಡಿದ್ದಾರೆ. ತಕ್ಷಣ ರೈಲ್ಬೇ ಪೊಲೀಸರು ಆಕೆಯನ್ನು ರಕ್ಷಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.

    ಸದ್ಯ ಘಟನೆಯ ವೀಡಿಯೋ ವೈರಲ್ ಆಗಿದ್ದು, ಇದು ಕಾನ್ಪುರ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.  ಮಹಿಳೆಯನ್ನು ಜಿಆರ್‌ಪಿ ಸಬ್‌ಇನ್ಸ್‌ಪೆಕ್ಟರ್ ಶಿವ ಸಾಗರ್ ಶುಕ್ಲಾ ಮತ್ತು ಕಾನ್‌ಸ್ಟೇಬಲ್ ಅನೂಪ್ ಕುಮಾರ್ ಪ್ರಜಾಪತಿ ರಕ್ಷಿಸಿದ್ದಾರೆ.

    ಇದನ್ನೂ ಓದಿ : ಚಾರ್ಜರ್ ಕೇಬಲ್ ಗೆ ಗಮ್ ಟೇಪ್ ಸುತ್ತಿ ಚಾರ್ಜ್ ಮಾಡುವವರು ಇದನ್ನು ಓದಲೇ ಬೇಕು !

    11 ಸೆಕೆಂಡುಗಳಈ ವೀಡಿಯೋದಲ್ಲಿ ಇಬ್ಬರು ರೈಲ್ವೆ ಸಿಬ್ಬಂದಿ ರೈಲಿನಿಂದ ಜಿಗಿದ ಮಹಿಳೆಯನ್ನು ರಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ. ಆಕೆ ಬಿದ್ದ ಕೆಲವೇ ಕ್ಷಣಗಳಲ್ಲಿ ಜಿಆರ್‌ಪಿ ಸಿಬ್ಬಂದಿ ಆಕೆಯನ್ನು ಹಿಡಿದು ರಕ್ಷಿಸಿದ್ದು, ವ್ಯಾಪಕ ಮೆಚ್ಚುಗೆ ಗಳಿಸಿದೆ.

    Continue Reading

    LATEST NEWS

    Trending