Connect with us

    DAKSHINA KANNADA

    ಬಹುನಿರೀಕ್ಷಿತ “ತುಡರ್” ತುಳು ಸಿನಿಮಾ ಜೂನ್ 14 ರಂದು ತೆರೆಗೆ

    Published

    on

    ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ “ತುಡರ್” ತುಳು ಸಿನಿಮಾ ಜೂನ್ 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.

    ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಾಣಲಿದೆ ಎಂದು ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿತು.

    ಚಿತ್ರದ ಬಗ್ಗೆ ಮಾತಾಡಿದ ಮೋಹನ್ ರಾಜ್ ಅವರು, “2019ರಲ್ಲಿ ಚಿತ್ರಕ್ಕೆ ಕಥೆ ಬರೆದಿದ್ದು ತುಳು ಚಿತ್ರರಂಗದಲ್ಲಿ ಹೊಸತನ ತರಲು ನಿರ್ಮಾಪಕರು ನೆರವಾಗಿದ್ದಾರೆ. ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಕೂಡ ನಮ್ಮ ಪ್ರಯತ್ನವನ್ನು ಮೆಚ್ಚಿದ್ದಾರೆ. ಸುಮುಖ ಬ್ಯಾನರ್ ನಲ್ಲಿ ಬಂದಿರುವ ಮೊದಲ ಸಿನಿಮಾ ಇದಾಗಿದ್ದು ಎಲ್ಲರೂ ಸಿನಿಮಾವನ್ನು ಹೊಗಳಿದ್ದಾರೆ. ಇದು ನಮ್ಮ ಕೆಲಸಕ್ಕೆ ಇನ್ನಷ್ಟು ಸ್ಫೂರ್ತಿಯನ್ನು ನೀಡಿದೆ” ಎಂದರು.

    ಬಳಿಕ ಮಾತಾಡಿದ ನಾಯಕನಟ ಸಿದ್ಧಾರ್ಥ್ ಶೆಟ್ಟಿ ಅವರು, “ಒಂದೇ ಕುಟುಂಬ ಎನ್ನುವಂತೆ ನಾವೆಲ್ಲರೂ ಒಟ್ಟಿಗೆ ಸೇರಿ ಸಿನಿಮಾವನ್ನು ಮಾಡಿದ್ದೇವೆ. ಸಿನಿಮಾ ಕಥೆ, ಪ್ರತಿಯೊಬ್ಬರ ನಟನೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಎಲ್ಲ ತುಳುವರು ಜೂ.14ರಂದು ಸಿನಿಮಾ ನೋಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ” ಎಂದರು.

    ನಿರ್ದೇಶಕ ತೇಜೇಶ್ ಪೂಜಾರಿ ಮಾತನಾಡಿ, “ನಾನು ಬಾಲಿವುಡ್ ನಲ್ಲಿ ಕಳೆದ 25 ವರ್ಷಗಳಿಂದ ಸಿನಿಮಾಗಳಲ್ಲಿ ತೊಡಗಿದ್ದೇನೆ. ತುಳು ಚಿತ್ರರಂಗದ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಆದರೆ ಸಹ ನಿರ್ದೇಶಕ ಎಲ್ಟನ್ ನನ್ನನ್ನು ಇಲ್ಲಿಗೆ ಕರೆತಂದರು. ಈ ಸಿನಿಮಾವನ್ನು ಪ್ರೀತಿಯಿಟ್ಟು ಮಾಡಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಹರಸಿ” ಎಂದರು.

    ಈಗಾಗಲೇ ತುಡರ್ ಸಿನಿಮಾ ವಿದೇಶ ಸಹಿತ ಮಂಗಳೂರು, ಉಡುಪಿ, ಪುತ್ತೂರು, ಸುರತ್ಕಲ್, ಪಡುಬಿದ್ರೆಯಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಂಡು ಪ್ರೇಕ್ಷಕರ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಉತ್ತಮ ಚಿತ್ರಕತೆಯನ್ನೊಳಗೊಂಡ ಸಿನಿಮಾ ಕುಟುಂಬ ವರ್ಗದವರನ್ನು ಆಕರ್ಷಿಸಿದೆ. ನಾಯಕ ನಟ ಸಿದ್ದಾಥ್೯ ಶೆಟ್ಟಿ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ‌.

    ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ವಿಲ್ಸನ್ ರೆಬೆಲ್ಲೋ, ವಿದ್ಯಾ, ಸಂಪತ್, ಹರೀಶ್ ಶೆಟ್ಟಿ, ನಟ ಸಿದ್ಧಾರ್ಥ್ ಶೆಟ್ಟಿ, ವಿಕಾಸ್ ಪುತ್ರನ್, ಉದಯ್ ಪೂಜಾರಿ, ಮೋಹನ್ ರಾಜ್, ನಿರ್ದೇಶಕ ತೇಜೇಶ್ ಪೂಜಾರಿ, ಹಂಚಿಕೆದಾರ ಸಚಿನ್ ಎಸ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ ತಂಡ:

    ಸಿನಿಮಾಕ್ಕೆ ವಿಲ್ಸನ್ ರೆಬೆಲ್ಲೊ, ಹರೀಶ್ ಶೆಟ್ಟಿ, ವಿದ್ಯಾ ಸಂಪತ್ ಬಂಡವಾಳ ಹೂಡಿದ್ದಾರೆ. ತೇಜೇಶ್ ಪೂಜಾರಿ ಎಲ್ಟನ್ ಮಸ್ಕರೇನಸ್ ನಿರ್ದೇಶಕರಾಗಿದ್ದು ಕಥೆ, ಚಿತ್ರಕಥೆ, ಸಂಭಾಷಣೆ ಸಾಹಿತ್ಯ: ಮೋಹನ್ ರಾಜ್. ಸಂಗೀತ: ಪ್ಯಾಟ್ಟ್ಸನ್ ಪಿರೇರಾ , ಸಾಯೀಶ್ ಭಾರದ್ವಾಜ್ ಛಾಯಾಗ್ರಹಣ: ಚಂತೂ ಮೆಪ್ಪಯುರು, ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ, ನೃತ್ಯ ಸಂಯೋಜಕ ವಿಜೇತ್ R ನಾಯಕ್, ಸಂಕಲನ ಗಣೇಶ್ ನೀರ್ಚಾಲ್, ಪ್ರಚಾರ ವಿನ್ಯಾಸ ದೇವಿ ನಿರ್ವಹಿಸಿದ್ದಾರೆ.

    ತುಡರ್ ಸಿನಿಮಾಕ್ಕೆ ಮಂಗಳೂರು ಮತ್ತು ಉಡುಪಿಯ ಆಸುಪಾಸಿನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ತಾರಾಗಣದಲ್ಲಿ ಸಿದ್ಧಾರ್ಥ್ ಎಚ್ ಶೆಟ್ಟಿ, ದೀಕ್ಷಾ ಭಿಷೇ, ಅರವಿಂದ ಬೋಳಾರ್, ರೂಪ ವರ್ಕಾಡಿ, ಸದಾಶಿವ ಅಮೀನ್, ನಮಿತಾ ಕೂಳೂರು, ಎಲ್ಟನ್ ಮಶ್ಚರೇನ್ಹಸ್, ವಿಕಾಸ್ ಪುತ್ರನ್, ಪ್ರಜ್ವಲ್ ಶೆಟ್ಟಿ, ಹರ್ಷಿತಾ ಶೆಟ್ಟಿ, ರಾಧೇಶ್ ಶೆಣೈ ಅನ್ವಿತಾ ಸಾಗರ್, ಜಯಶೀಲ, ಉಮೇಶ್ ಮಿಜಾರ್, ಅಶೋಕ್ ಕುಮಾರ್ , ಉದಯ ಪೂಜಾರಿ, ಮೋಹನ್ ರಾಜ್ ಇದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    3 ದಿನದಲ್ಲಿ 60 ಜನರನ್ನು ಮದುವೆಯಾದ ಮಹಿಳೆ

    Published

    on

    ಇಲ್ಲೊಬ್ಬ ಮಹಿಳೆ ಮದುವೆಯ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಲೇ ಒಬ್ಬರನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುವುದನ್ನು ನೋಡಿ ಬೇಸತ್ತಿದ್ದಾಳೆ. ಇದರಿಂದ ತಾನು ಮದುವೆ ವಿಚಾರದಲ್ಲಿ ಏನಾದರೂ ಭಿನ್ನವಾಗಿರುವುದನ್ನು ಮಾಡಬೇಕೆಂದು 3 ದಿನ ಮದುವೆ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಬರೋಬ್ಬರಿ 60 ಜನರನ್ನು ಮದುವೆ ಮಾಡಿಕೊಂಡಿದ್ದಾಳೆ.

    ಹೌದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಛಾಯಾಗ್ರಾಹಕಿ ಆಗಿರುವ ಈ ಮಹಿಳೆ ಮದುವೆ ಸಮಾರಂಭಗಳಲ್ಲಿ ಎಲ್ಲರೂ ಒಟ್ಟಿಗೆ ಸೇರುವುದು, ಹಾಡು, ಕುಣಿತ, ಪಾರ್ಟಿ ಮಾಡುವುದನ್ನು ಕಂಡಿದ್ದಾಳೆ. ಇದರಿಂದ ತಾನು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಬೇಕು ಎಂದು ಉದ್ದೇಶ ಹೊಂದಿದ್ದಳು. ಮುಂದುವರೆದು ಮದುವೆ ಆಗುವುದನ್ನು ಇನ್ನೂ ವಿಶೇಷವಾಗಿ ಆಚರಣೆ ಮಾಡಬೇಕು ಎಂದು ತನಗೆ ಗೊತ್ತಿರುವ ಎಲ್ಲ ಸ್ನೇಹಿತರಿಗೂ ಮದುವೆ ಆಮಂತ್ರಣ ಪತ್ರವನ್ನು ನೀಡಿದ್ದಾಳೆ.

    ಆದರೆ, ಮದುವೆ ಗಂಡು ಯಾರೆಂದು ಯಾರಿಗೂ ಹೇಳಿಲ್ಲ. ಆದರೆ, ತಾನು ಮದುವೆ ಮಾಡಿಕೊಳ್ಳುವವರಿಗೆ ಮಾತ್ರ ನಮ್ಮಿಬ್ಬರ ಮದುವೆಗೆ ಸಿದ್ಧವಾಗಿ ಬನ್ನಿ ಎಂದು ಹೇಳಿದ್ದಾಳೆ. ಹೀಗೆ, ಒಂದು ಮದುವೆ ಹೆಣ್ಣನ್ನು ಮದುವೆಯಾಗಲು ಬರೋಬ್ಬರಿ 60 ಜನರು ವೇದಿಕೆಯ ಬಳಿ ಬಂದಿದ್ದಾರೆ. ಆದರೆ, ಯಾರನ್ನೂ ನಿರಾಕರಿಸದೇ ಮೂರು ದಿನಗಳಲ್ಲಿ ಎಲ್ಲರನ್ನೂ ಮದುವೆ ಆಗಿದ್ದಾಳೆ. ಈ ಮೂಲಕ ತಾನು ‘ಒಬ್ಬ ವ್ಯಕ್ತಿಯನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಇಷ್ಟವಿಲ್ಲ, ನನ್ನ ಇಡೀ ಜೀವನವನ್ನು ಒಬ್ಬ ವ್ಯಕ್ತಿಗೆ ಮೀಸಲಿಡಲು ಇಷ್ಟ ಪಡುವುದಿಲ್ಲ’ ಹೀಗಾಗಿ, 60 ಜನರನ್ನು ಮದುವೆ ಮಾಡಿಕೊಂಡಿದ್ದಾಳೆ. ಈಗ ಈಕೆಯ ಮದುವೆಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

    ಕೇವಲ ಮೂರು ದಿನದಲ್ಲಿ ಬರೋಬ್ಬರಿ 60 ಜನರನ್ನು ಮದುವೆಯಾದ ಮಹಿಳೆ ಆಸ್ಟ್ರೇಲಿಯಾದ ಕಾರ್ಲಿ ಸಾರೆ (40). ತನ್ನ ಮದುವೆಯ ಬಗ್ಗೆ ಮಾತನಾಡಿದ ಕಾರ್ಲಿ ಸಾರೆ ಅವರು, ‘ನನಗೆ ನನ್ನ ನಿರ್ಧಾರದ ಬಗ್ಗೆ ಹೆಮ್ಮೆಯಿದೆ. ನನ್ನ ಜೀವನದಲ್ಲಿ ಇವರೆಲ್ಲರೂ ಬಹಳ ಮುಖ್ಯ. ಆದ್ದರಿಂದ ನನಗೆ ಬೇಕು ಎನಿಸಿದ ಎಲ್ಲ ಆಪ್ತರನ್ನೂ ಒಟ್ಟಿಗೆ ಮದುವೆಯಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾಳೆ.

    Continue Reading

    DAKSHINA KANNADA

    ಪರಿಯಾರಂನಲ್ಲಿ ಇಂಡಿಯಾನಾ ಆಸ್ಪತ್ರೆಯ ಮೊದಲ ಮಾಹಿತಿ ಕೇಂದ್ರ ಪ್ರಾರಂಭ

    Published

    on

    ಪರಿಯಾರಂ (ಕಣ್ಣೂರು) : ಗುಣಮಟ್ಟದ ವೈದ್ಯಕೀಯ ಸೇವೆಯ ಕ್ಷೇತ್ರದಲ್ಲಿ ಹದಿಮೂರು ವರ್ಷಗಳ ಸೇವೆಯೊಂದಿಗೆ ಮಂಗಳೂರಿನ ಅತ್ಯಂತ ಜನಪ್ರಿಯ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಾದ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯು ತನ್ನ ಮೊದಲ ಮಾಹಿತಿ ಕೇಂದ್ರವನ್ನು ಪರಿಯಾರಂನಲ್ಲಿ ಪ್ರಾರಂಭಿಸಿದೆ.


    ಕಲ್ಯಾಸ್ಸೆರಿ ಕ್ಷೇತ್ರದ ಶಾಸಕ ವಿಜಿನ್ ಎಂ, ಶ್ರೀಗಳ ಉಪಸ್ಥಿತಿಯಲ್ಲಿ ಇಂಡಿಯಾನಾ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು.
    ಚುರುಜಾಮ್ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣನ್ ಟಿ.ವಿ, ಸಾಮಾಜಿಕ ಕಾರ್ಯಕರ್ತ ನಜೀಮುದ್ದೀನ್, ಮಾಜಿ ಪಂಚಾಯತ್ ಕಾರ್ಯದರ್ಶಿ ಶಶಿಧರನ್, ರೋಟರಿ ಕ್ಲಬ್ ಪರಿಯಾರಂ ಆಡಳಿತ ಮಂಡಳಿ ಸದಸ್ಯ ಸುಗತನ್ ಪರಿಯಾರಂ, ನಿವೃತ್ತ ನೌಕಾಪಡೆ ಅಧಿಕಾರಿ ಸೂರಜ್ ಪಿಲಾತಾರ, ರೋಟರಿ ಕ್ಲಬ್ ಸದಸ್ಯ ಪ್ರಸನ್ನನ್ ಕೇದಾರಾಂ ಉಪಸ್ಥಿತರಿದ್ದರು.


    ಇಂಡಿಯಾನಾ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಶಾ ಕೋಟ್ಯಾನ್ ಗಣ್ಯರಿಗೆ ಉಡುಗೊರೆಗಳನ್ನು ನೀಡಿದರು.
    ಆಪರೇಷನ್ಸ್ ಜನರಲ್ ಮ್ಯಾನೇಜರ್ ನಿಖಿಲ್ ಥಾಮಸ್, ಮಾರ್ಕೆಟಿಂಗ್ ಉಪ ವ್ಯವಸ್ಥಾಪಕ ವೈಶಾಖ್ ಸುರೇಶ್, ಡ್ಯೂಟಿ ಮ್ಯಾನೇಜರ್ ಶಾಮಲ್ ಭಾಸ್ಕರ್, ಜಿತಿನ್ ಲೂಕೋಸ್, ರವೀಂದ್ರನ್ ಕೆ, ಸರಿನ್ ಮತ್ತು ಅಬ್ದುಲ್ ಹಕೀಮ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಇದನ್ನೂ ಓದಿ  : ಬ್ಯಾಂಕ್ ಎಸಿಯೊಳಗೆ ಹೆಬ್ಬಾವಿನ ಮರಿ ಪ್ರತ್ಯಕ್ಷ!


    ಇಂಡಿಯಾನಾ ಮಾಹಿತಿ ಕೇಂದ್ರವು ರೋಗಿಗಳಿಗೆ ಎಲ್ಲಾ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸೆಗಳ ಬಗ್ಗೆ ನಿಖರವಾದ ಮಾಹಿತಿ ಮತ್ತು ಮಾರ್ಗದರ್ಶನ, ಇಂಡಿಯಾನಾ ಆಸ್ಪತ್ರೆಗಳಲ್ಲಿ ಲಭ್ಯವಿರುವ ವಿಮಾ ರಕ್ಷಣೆಯ ಮಾಹಿತಿ, ಕಾಯಿದೆ OP ಸಮಾಲೋಚನೆ (ಫಾಸ್ಟ್ ಟ್ರ್ಯಾಕ್ ಬುಕಿಂಗ್ ಸೌಲಭ್ಯ), ಸೂಪರ್ ಸ್ಪೆಷಾಲಿಟಿ ವಿಭಾಗಗಳಲ್ಲಿನ ವೈದ್ಯಕೀಯ ಶಿಬಿರಗಳು ಮುಂತಾದ ಉಪಯುಕ್ತ ಸೇವೆಗಳನ್ನು ಒದಗಿಸುತ್ತದೆ.
    24X7 ಸಹಾಯವಾಣಿ ಸಂಖ್ಯೆ : 9019021910

    Continue Reading

    DAKSHINA KANNADA

    ಶಿರಾಡಿಘಾಟ್ ನಲ್ಲಿ ಸರಣಿ ಅಪಘಾ*ತ; ರಾಜಹಂಸ, ಐರಾವತ ಬಸ್ ಮುಖಾಮುಖಿ ಡಿ*ಕ್ಕಿ

    Published

    on

    ಶಿರಾಡಿ : ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ನಲ್ಲಿ ಸರಣಿ ಅಪಘಾ*ತ ಸಂಭವಿಸಿದೆ. ರಾಜಹಂಸ ಹಾಗೂ ಐರಾವತ ಬಸ್ ಮುಖಾಮುಖಿ ಡಿ*ಕ್ಕಿಯಾಗಿದೆ.

    ಈ ವೇಳೆ ಅಪಘಾ*ತ ತಪ್ಪಿಸಲು ಹೋಗಿ ಟೆಂಪೋವೊಂದು ಚರಂಡಿಗೆ ಬಿದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

    ಇದನ್ನೂ ಓದಿ : ಜೀವ ಉಳಿಸಿದ ನಾಯಿಯ ನಿಯತ್ತು ಹಾಗೂ ಯುವಕನ ಸಮಯ ಪ್ರಜ್ಞೆ!

    ಇನ್ನು ರಸ್ತೆ ಸಂಚಾರ ಬಂದ್ ಮಾಡಿ, ಬಸ್ ಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಯಿತು.

    Continue Reading

    LATEST NEWS

    Trending