Connect with us

    LATEST NEWS

    ಈ ತಾರೀಖಿನಂದು ಜನಿಸಿದ ಮಕ್ಕಳು ಓದಿನಲ್ಲಿ ಬಹಳ ಚುರುಕು..!

    Published

    on

    ಮಂಗಳೂರು: ಈ ತಾರೀಖಿನಂದು ಜನಿಸಿದ ಮಕ್ಕಳಿಗೆ ಓದುವುದು ಎಂದರೆ ಎಲ್ಲಿಲ್ಲದ ಆಸಕ್ತಿ. ಸದಾ ಚಟುವಟಿಕೆಯಿಂದ ಕೂಡಿರುವ ಓದಿನಲ್ಲಿ ಅಪಾರ ಆಸಕ್ತಿ ಇರುವ ಮಕ್ಕಳ ಬಗ್ಗೆ ಇಲ್ಲಿ ಹೇಳಲಾಗಿದೆ.

    ಯಾವುದೇ ತಿಂಗಳ 3, 12, 21 ಅಥವಾ 30 ರಂದು ಜನಿಸಿದವರು ರಾಡಿಕ್ಸ್ ನಂಬರ್ 3ನ್ನು ಹೊಂದಿರುತ್ತಾರೆ. ಈ ದಿನಾಂಕದಂದು ಜನಿಸಿದ ಮಕ್ಕಳು ಬಹಳ ಬುದ್ಧಿವಂತರು, ಬಾಲ್ಯದಿಂದಲೂ ಇವರಿಗೆ ಓದಿನಲ್ಲಿ ಬಹಳ ಆಸಕ್ತಿ.

    ವಿದ್ಯಾಭ್ಯಾಸ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಈ ಮಕ್ಕಳು ಬಹಳ ಚುರುಕಾಗಿರುತ್ತಾರೆ. ಈ ತಾರೀಖಿನಂದು ಜನಿಸಿದ ಮಕ್ಕಳು ಬಹಳ ಸೃಜನಶೀಲರು, ಕಲಾತ್ಮಕತೆ ಹೊಂದಿರುತ್ತಾರೆ. ಈ ಮಕ್ಕಳು ಎಲ್ಲಿ ಹೋದರೂ ಅದೃಷ್ಟ ಅವರಿಗೆ ಬೆಂಗಾವಲಾಗಿ ನಿಂತಿರುತ್ತದೆ.

    ಇನ್ನು ಈ ಸಂಖ್ಯೆಯಲ್ಲಿ ಜನಿಸಿದ ಬಹುತೇಕ ಮಕ್ಕಳು ಬಡತನದಲ್ಲಿ ಹುಟ್ಟಿ ನಂತರ ತಮ್ಮ ಕಾಲ ಮೇಲೆ ನಿಲ್ಲುತ್ತಾರೆ. ಯಾರಿಂದಲೂ ಸಹಾಯ ಬಯಸದ ಇವರು ಸ್ವಂತ ಪರಿಶ್ರಮದಿಂದಲೇ ಹಣ, ಹೆಸರು ಗಳಿಸುತ್ತಾರೆ.

    LATEST NEWS

    ಕಿತ್ತೋದ ಕಾಮಾಗಾರಿ..! ಸ್ಮಾರ್ಟ್‌ ಸಿಟಿಗೆ ಎಷ್ಟು ವರ್ಷ ಗ್ಯಾರೆಂಟಿ..?

    Published

    on

    ಮಂಗಳೂರು : ಮಂಗಳೂರು ನಗರದಲ್ಲಿ ಸ್ಮಾರ್ಟ್‌ ಸಿಟಿ ಕಾಮಾಗಾರಿಯ ಒಂದೊಂದೆ ಕರ್ಮಾಕಾಂಡ ಈಗ ಹೊರ ಬರುತ್ತಿದೆ. ಹಂಪನಕಟ್ಟೆಯ ಕಾರ್ ಪಾರ್ಕಿಂಗ್ ಕಟ್ಟಡ ಕಾಮಾಗಾರಿ ನೆನೆಗುದಿಗೆ ಬಿದ್ದಿದ್ರೆ, ಮುಳಿಹಿತ್ಲಿನ ರಿವರ್ ಫ್ರಂಟ್‌ ತಡೆಗೋಡೆ ಕುಸಿತವಾಗಿದೆ. ಇದೀಗ ನೆಲ್ಲಿಕಾಯಿ ರಸ್ತೆಯಲ್ಲಿ ಪಾದಾಚಾರಿ ರಸ್ತೆಯಲ್ಲಿ ಚರಂಡಿಯ ಮುಚ್ಚಳವೊಂದು ಜನರನ್ನು ಬಲಿ ಪಡೆಯಲು ಕಾದು ನಿಂತಿದೆ.

    ಕುಟುಂತ್ತಾ ಸಾಗಿದ್ದ ಸ್ಮಾರ್ಟ್‌ ಸಿಟಿ ಕಾಮಾಗಾರಿಯಿಂದ ಮಂಗಳೂರು ಅಂದವಾಗುವುದು ಬಿಟ್ಟು ಅಂದಗೆಟ್ಟು ಹೋಗಿದೆ ಎನ್ನಬಹುದು. ಕೇವಲ ನಾಲ್ಕೈದು ಸರ್ಕಲ್‌, ಮೂರ್ನಾಲ್ಕು ಕೆರೆ ಹಾಗೂ ಒಂದೆರಡು ಪಾರ್ಕ್‌ಗಳನ್ನು ಅಭಿವೃದ್ದಿ ಮಾಡಿ ಇದೇ ಸ್ಮಾರ್ಟ್‌ ಸಿಟಿ ಅಂತ ಜನರನ್ನು ನಂಬಿಸುವ ಕೆಲಸ ಆಗಿದೆ. ಆದ್ರೆ ಅಸಲಿಗೆ ಆಗಬೇಕಾದ ಅಗತ್ಯ ಕೆಲಸಗಳು ಹಳ್ಳ ಹಿಡಿದಿದೆ ಅನ್ನೋದು ಸುಳ್ಳಲ್ಲ. ಇನ್ನು ಪೂರ್ಣಗೊಂಡಿರುವ ಕದ್ರಿ ಪಾರ್ಕ್‌ ಅಂಗಡಿ ಮಳಿಗೆಗಳು ಪಾಳು ಬೀಳುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.
    ಇದರ ನಡುವೆ ಅಲ್ಲಲ್ಲಿ ಅಗೆದು ಹಾಕಲಾದ ಜಲ ಸಿರಿ ಯೋಜನೆಯ ಕಾಮಾಗಾರಿಗಳು ದ್ವಿಚಕ್ರವಾಹನ ಸವಾರರನ್ನು ಯಾವಾಗ ಬಲಿ ಪಡೆಯಲಿದೆಯೋ ಗೊತ್ತಿಲ್ಲ. ಇದೆಲ್ಲದರ ನಡುವೆ ಪಾದಾಚಾರಿಗಳು ನಡೆದಾಡುವ ಫುಟ್‌ಪಾತ್‌ ಕೂಡಾ ಕಳಪೆ ದರ್ಜೆಯಲ್ಲಿ ಮಾಡಿದ್ದಾರೆ ಅನ್ನೋದು ನೆಲ್ಲಿಕಾಯಿ ರಸ್ತೆಯಲ್ಲಿ ಸಂಚರಿಸಿದ್ರೆ ಗೊತ್ತಾಗುತ್ತದೆ. ಇಲ್ಲಿನ ಇಂಟರ್‌ ಲಾಕ್ ಕಿತ್ತು ಹೋಗುತ್ತಿರುವುದು ಮಾತ್ರವಲ್ಲದೆ ದುಬಾರಿ ಬೆಲೆಯ ಚರಂಡಿ ಮುಚ್ಚಳ ತುಂಡಾಗಿ ಜನರ ಜೀವ ಬಲಿಗೆ ಕಾದು ನಿಂತಿದೆ.

    ಇದು ಯಾವ ರೀತಿಯ ಸ್ಮಾರ್ಟ್‌ ಸಿಟಿ ಕಾಮಾಗಾರಿ ಅನ್ನೋದನ್ನು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಹೇಳಬೇಕಾಗಿದೆ. ಕೋಟ್ಯಾಂತರ ರೂಪಾಯಿ ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಕೆಲಸದ ಮೂಲಕ ಪೂಲು ಮಾಡುವ ಈ ಸ್ಮಾರ್ಟ್‌ ಸಿಟಿ ಬೇಕಿತ್ತಾ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ. ತಕ್ಷಣ ನೆಲ್ಲಿಕಾಯಿ ರಸ್ತೆಯ ಫುಟ್‌ ಪಾತ್ ದುರಸ್ಥಿ ಮಾಡದೇ ಇದ್ರೆ ಕತ್ತಲಿನಲ್ಲಿ ಯಾರಾದ್ರೂ ಬಿದ್ದು ಅಪಾಯ ಸಂಭವಿಸುವುದು ಗ್ಯಾರೆಂಟಿ ಅಂತ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    Continue Reading

    LATEST NEWS

    ಅಯೋಧ್ಯೆ ಸೋಲಿಗೆ ಪ್ರತಿಕಾರ..? ಸಂತನಿಗೆ ನೀಡಿದ್ದ ಗನ್‌ ಮ್ಯಾನ್ ವಾಪಾಸ್‌..!

    Published

    on

    ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಆಗಿರುವ ಸೋಲಿಗೆ ಬಿಜೆಪಿ ನಾಯಕರು ಪರಾಮರ್ಶೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಅಯೋಧ್ಯೆಯ ಹನುಮಾನ್‌ಘಡಿಯ ಸಂತ ಮಹಂತ್ ರಾಜ್‌ ದಾಸ್‌ ಅವರಿಗೆ ನೀಡಲಾದ ಭದ್ರತೆಯನ್ನು ಕಿತ್ತು ಹಾಕಲಾಗಿದೆ. ಇದು ಉತ್ತರ ಪ್ರದೇಶದ ರಾಜಕೀಯ ವಲಯದಲ್ಲಿ ಚರ್ಚಗೆ ಗ್ರಾಸವಾಗಿದ್ದು, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ ಈ ನಡೆಯನ್ನು ಖಂಡಿಸಿದ್ದಾರೆ.

    ಈ ವಿಚಾರದ ಬಗ್ಗೆ ರಾಜ್ಯ ಸಂಘಟನೆ ಮಾಹಿತಿ ಕೇಳಿದ್ದು, ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೂ ವಿಚಾರ ಹೋಗಿದೆ. ಆದ್ರೆ ಮಹಂತ್ ರಾಜ್‌ ದಾಸ್ ಅವರಿಗೆ ನೀಡಲಾದ ಭದ್ರತೆ ಹಿಂಪಡೆದ ವಿಚಾರದಲ್ಲಿ ಅಖಿಲೇಶ್ ಯಾದವ್ ಟ್ವಿಟ್ ಮಾಡಿದ್ದಾರೆ. ಅಯೋಧ್ಯೆಯ ಸಂತರ ವಿರುದ್ಧ ಬಿಜೆಪಿ ಸೇಡು ತೀರಿಸಿಕೊಳ್ಳಬಾರದು. ಸಜ್ಜನರಿಗೆ ಭದ್ರತೆಯನ್ನು ಒದಗಿಸಬೇಕು ಎಂದು ಟ್ವಿಟ್ ಮಾಡಿದ್ದಾರೆ.

    ಅಯೋಧ್ಯೆಯಲ್ಲಿನ ಸೋಲಿನ ಪರಾಮರ್ಶೆ ನಡೆಸುತ್ತಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕರು ಕರೆದಿದ್ದ ಸಭೆಯಲ್ಲಿ ಅಯೋಧ್ಯೆಯ ಜಿಲ್ಲಾಧಿಕಾರಿ ನಿತೀಶ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದನ್ನೇ ವಿಷಯವಾಗಿಟ್ಟುಕೊಂಡ ಜಿಲ್ಲಾಧಿಕಾರಿ ಮಹಾಂತ್ ಅವರಿಗಿದ್ದ ಗನ್ ಮ್ಯಾನ್‌ ಕಿತ್ತು ಹಾಕಿದ್ದಾರೆ. ಈ ವೇಳೆ ಯೋಗಿ ಸರ್ಕಾರದ ಇಬ್ಬರು ಸಚಿವರಾದ ಸೂರ್ಯ ಪ್ರತಾಪ್ ಶಾಹಿ ಮತ್ತು ಜೈವೀರ್ ಸಿಂಗ್ ಉಪಸ್ಥಿತರಿದ್ದರು. ಅಯೋಧ್ಯೆ ಉಸ್ತುವಾರಿ ಸಚಿವ ಸೂರ್ಯ ಪ್ರತಾಪ್ ಶಾಹಿ ಅವರ ಕರೆಯ ಮೇರೆಗೆ ಮಹಂತ್ ರಾಜು ದಾಸ್ ಅವರು ಪರಿಶೀಲನಾ ಸಭೆಗೆ ತೆರಳಿದ್ದರು. ಈ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮಹಂತ್ ರಾಜು ದಾಸ್ ನಡುವೆ ಚಕಮಕಿ ನಡೆದಿದ್ದು, ಸಂಪುಟ ಸಚಿವ ಜೈವೀರ್ ಸಿಂಗ್ ಅವರು ಇದಕ್ಕೆ ಸಾಕ್ಷಿಯಾಗಿದ್ದರು.

     

     

     

    Continue Reading

    LATEST NEWS

    ಜಮೀನಿಗಾಗಿ ಸ್ವಾಮೀಜಿಗಳ ಕಿತ್ತಾಟ..! ಹ*ಲ್ಲೆಗೆ ಓರ್ವ ಸ್ವಾಮೀಜಿ ಬ*ಲಿ

    Published

    on

    ಮಂಗಳೂರು ( ಕೋಲಾರ ) : ಎರಡು ಸ್ವಾಮೀಜಿಗಳ ಜಮೀನು ಗಲಾಟೆಯಲ್ಲಿ ನಡೆದ ಹೊಡೆದಾಟದಲ್ಲಿ ಓರ್ವ ಸ್ವಾಮೀಜಿ ಕೊ*ಲೆಯಾದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಮಾಲೂರು ತಾಲೂಕಿನ ಸಂತಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದ ‘ಆಚಾರ್ಯ ಚಿನ್ಮಯಾನಂದ’ (65) ಹ*ತ್ಯೆಯಾದ ಸ್ವಾಮೀಜಿ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆಚಾರ್ಯ ಧರ್ಮ ಪ್ರಾಣಾನಂದ ಅವರ ಗುಂಪಿನಿಂದ ಹ*ತ್ಯೆ ನಡೆದಿದೆ ಎನ್ನಲಾಗಿದೆ.

    ಆಶ್ರಮದ ಜಮೀನು ವಿಚಾರವಾಗಿ ಈ ಎರಡೂ ಸ್ವಾಮಿಗಳ ನಡುವೆ ಹಲವು ಸಮಯದಿಂದ ವಿವಾದ ನಡೆಯುತ್ತಿತ್ತು. ವಿವಾದ ಕೋರ್ಟ್‌ ಮೆಟ್ಟಿಲೇರಿದ್ರೂ ಇಬ್ಬರ ನಡುವೆ ವೈಮನಸ್ಸು ಹೆಚ್ಚಾಗಿತ್ತು. ಇಂದು ಕೋರ್ಟ್‌ಗೆ ದಾಖಲೆ ತೆಗೆದುಕೊಂಡು ಹೋಗುತ್ತಿದ್ದ ಆಚಾರ್ಯ ಚಿನ್ಮಯಾನಂದ ಸ್ವಾಮಿ ಮೇಲೆ ಆಚಾರ್ಯ ಧರ್ಮ ಪ್ರಾಣನಂದರ ಗುಂಪಿನಿಂದ ಹ*ಲ್ಲೆ ನಡೆಸಲಾಗಿತ್ತು. ಗಂಭೀರ ಗಾಯಗೊಂಡ ಚಿನ್ಮಾಯಾನಂದ ಅವರನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದ ಚಿನ್ಮಯಾನಂದ ಸ್ವಾಮಿ ಅಸುನೀಗಿದ್ದಾರೆ. ಇದೀಗ ಆರೋಪಿ ಸ್ವಾಮಿ ಆಚಾರ್ಯ ಧರ್ಮ ಪ್ರಾಣಾನಂದ ಹಾಗೂ ಅರುಣ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

    Continue Reading

    LATEST NEWS

    Trending