Connect with us

    LATEST NEWS

    ಪ್ರಾಚೀನ ಸ್ಮಾರಕಕ್ಕೆ ಟ್ರಕ್ ಡಿಕ್ಕಿ; ಭಾಗಶಃ ಹಾನಿ

    Published

    on

    ಮೂಡುಬಿದ್ರಿ ಅರಮನೆ ಬಾಗಿಲು ಬಳಿ ಇರುವ ಪ್ರಾಚೀನ ಸ್ಮಾರಕಕ್ಕೆ ತಮಿಳುನಾಡು ನೋಂದಾಯಿತ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಮಾರಕಕ್ಕೆ ಭಾಗಶಃ ಹಾನಿಯಾಗಿದೆ.

    ಟ್ರಕ್ ಚಾಲಕನಿಗೆ ಮೂಡುಬಿದ್ರಿ ಪೊಲೀಸ್ ಠಾಣೆಯಿಂದ ಕೇಸು ದಾಖಲಾಗಿದೆ. 700 ವರ್ಷಕ್ಕೂ ಅಧಿಕ ಪ್ರಾಚೀನ ಸ್ಮಾರಕವು ಚೌಟರ ಮನೆತನದ ಆಧೀನದಲ್ಲಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಆಸ್ತಿ ವಿಚಾರಕ್ಕೆ ತಂಗಿಯನ್ನೇ ಕ್ರೂರ*ವಾಗಿ ಹತೈ*ಗೈದ ಅಣ್ಣ

    Published

    on

    ಮಂಗಳೂರು/ಗದಗ: ‘ಆಸ್ತಿ’ ಎಂಬ ಒಂದು ವಿಚಾರ ಬಂದಾಗ ಅಣ್ಣ-ತಂಗಿ, ಅಕ್ಕ-ತಮ್ಮ ಎಂಬುವುದನ್ನೇ ಮರೆತು ಮೃ*ಗಗಳಂತೆ ವರ್ತಿಸುವ ಸಮಾಜದಲ್ಲಿ ನಾವಿದ್ದೇವೆ. ಅಂತಹದ್ದೇ ಒಂದು ಅಮಾ*ನುಷ ಘಟನೆ ಗದಗದಲ್ಲಿಯೂ ನಡೆದಿದೆ.


    ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಅನ್ನದಾನೀಶ್ವರ ನಗರದಲ್ಲಿ ಆಸ್ತಿ ವಿವಾದ ಹಿನ್ನೆಲೆ ಅಣ್ಣನೇ ತಂಗಿಯನ್ನು ಚಾಕು*ವಿನಿಂದ ಇರಿ*ದು ಕೊಂದು ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ತಂಗಿ ಕಾಳಮ್ಮ (35) ಜೊತೆ ಇಂದು (ಸೆ.24) ಆಸ್ತಿ ವಿಚಾರವಾಗಿ ಜಗಳ ಶುರುವಾಗಿ, ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಈಶ್ವರಪ್ಪ ಕ್ಯಾದಿಗೇಹಳ್ಳಿ ತಂಗಿಯ ಹೊಟ್ಟೆ*ಗೆ ಚಾಕುವಿ*ನಿಂದ ಇರಿದು ಹ*ತೈ ಮಾಡಿದ್ದಾನೆ.
    ಘಟನೆ ಹಿನ್ನಲೆ:
    ಮೃ*ತ ಮಹಿಳೆ 14 ವರ್ಷದ ಹಿಂದೆ ಕಟಿಂಗ್ ಸಲೂನ್ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದು, ಬಳಿಕ 2020 ರಲ್ಲಿ‌ ಮೈಬೂಬ್ ಬೆಟಗೇರಿ ಎಂಬಾತನ ಜೊತೆ ಎರಡನೇ ಮದುವೆಯಾಗಿದ್ದಾರೆ. ಜೀವನ ನಿರ್ವಹಣೆಗಾಗಿ ಅಣ್ಣನ 15 ಎಕರೆ ಜಮೀನಿನಲ್ಲಿ ಅವಳು ಪಾಲಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಳು.
    ಕೇಸ್ ವಾಪಸ್ ಪಡೆಯುವಂತೆ ಇಂದು ಬೆಳಿಗ್ಗೆ ಅಣ್ಣನು ಮನೆಗೆ ಬಂದು ಒತ್ತಾಯ ಮಾಡಿದ್ದ. ಅವನ ಮಾತು ಕೇಳದಾಗ ಸಿಟ್ಟು ನೆತ್ತಿಗೇರಿ ಸಿಕ್ಕ ಸಿಕ್ಕಲ್ಲಿ ಮನಬಂದಂತೆ ಚಾ*ಕು ಇ*ರಿದು, ಕುತ್ತಿ*ಗೆ ಮೇಲೆ ಕಾಲಿಟ್ಟು ಉ*ಸಿರುಗಟ್ಟಿಸಿ ಕೊ*ಲೆ ಮಾಡಿದ್ದಾನೆ. ನಂತರ ತಾನೇ ಮುಂಡರಗಿ ಪೊಲೀಸರಿಗೆ ಶರಣಾಗಿದ್ದಾನೆ.
    ಸ್ಥಳಕ್ಕೆ ಗದಗ ಹೆಚ್ಚುವರಿ ಎಸ್‌.ಪಿ ಎಂ.ಬಿ.ಸಂಕದ ಹಾಗೂ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    FILM

    ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ “ಸ್ವಾತಂತ್ರ್ಯ ವೀರ್ ಸಾವರ್ಕರ್” ಸಿನೆಮಾ

    Published

    on

    ಮುಂಬೈ/ಮಂಗಳೂರು: ಬಾಲಿವುಡ್ ನಟ ರಣ್‌ದೀಪ್‌ ಹೂಡಾ ನಟಿಸಿ ನಿರ್ದೇಶಿಸಿರುವ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾವೂ ಅಧಿಕೃತವಾಗಿ 2025ರ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಈ ಜೀವನಚರಿತ್ರೆಯಾಧಾರಿತ ಸಿನಿಮಾವೂ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನಗಾಥೆಯನ್ನು ಹೊಂದಿದ್ದು, ಈ ಸಿನಿಮಾದಲ್ಲಿ ರಣ್‌ದೀಪ್ ಹೂಡಾ ಜೊತೆ ಬಾಲಿವುಡ್ ನಟಿ ಅಂಕಿತಾ ಲೋಖಂಡೆ ನಟಿಸಿದ್ದಾರೆ.

    savarkar

    ಸಂದೀಪ್ ಸಿಂಗ್ ಅವರು ಈ ಸಿನಿಮಾದ ನಿರ್ಮಾಣ ಮಾಡಿದ್ದು, ಈ ಸಿನಿಮಾವೀಗ ಆಸ್ಕರ್‌ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಈ ಖುಷಿಯ ವಿಚಾರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್  ಮಾಡಿ ಸಂತಸದ ಜೊತೆ ಹೆಮ್ಮೆ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

    2025ರ ಆಸ್ಕರ್‌ಗೆ ನಾಮ ನಿರ್ದೇಶನಗೊಂಡ ‘ಲಾಪತಾ ಲೇಡಿಸ್’ ಚಿತ್ರ

    ಕೆಲ ವಾರಗಳ ಹಿಂದಷ್ಟೇ ರಣ್‌ದೀಪ್ ಹೂಡಾ ಅವರಿಗೆ ಮುಂಬೈನಲ್ಲಿ ಪ್ರತಿಷ್ಠಿತ ಸ್ವಾತಂತ್ರ್ಯವೀರ ಸಾವರ್ಕರ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯ್ತು. ಸ್ವಾತಂತ್ರ್ಯ ಹೋರಾಟಗಾರ ಜೀವನಚರಿತ್ರೆಯನ್ನು ಅದ್ಭುತವಾಗಿ ತೆರೆಗೆ ತಂದಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. ಸ್ವಾತಂತ್ರ್ಯ ಹೋರಾಟದ ವೇಳೆ ಭಾರತದ ಯುವ ಸಮೂಹದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದ ವಿವಾದಿತ ಹಾಗೂ ಪ್ರಭಾವಶಾಲಿ ನಾಯಕ ವೀರ್ ಸಾವರ್ಕರ್ ಆಗಿದ್ದಾರೆ. ಮಾರ್ಚ್‌ 22 ರಂದು ಹಿಂದಿ ಹಾಗೂ ಮಾರಾಠಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.

    Continue Reading

    bangalore

    ಆಟೋದಲ್ಲಿ ಆಫೀಸ್ ಚೇರ್; ಏನಿದು ವಿಚಿತ್ರ ?

    Published

    on

    ಮಂಗಳೂರು/ಬೆಂಗಳೂರು : ಬೆಂಗಳೂರಿನ ಆಟೋ ಚಾಲಕರೊಬ್ಬರು ತನ್ನಲ್ಲಿರುವ ಸ್ಮಾರ್ಟ್ವಾಚ್ನಲ್ಲಿ ಯುಪಿಐ ಕ್ಯೂಆರ್ ಕೋಡ್ ಬಳಸಿ ಗ್ರಾಹಕರಿಂದ ಆನ್ಲೈನ್ ಪೇಮೆಂಟ್ ಸ್ವೀಕರಿಸಿರುವ ಫೋಟೋ ಇತ್ತೀಚೆಗೆ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಮತ್ತೊಬ್ಬ ಆಟೋ ಚಾಲಕನ ಕ್ರಿಯೇಟಿವ್ ಐಡಿಯಾವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ತನ್ನ ಡ್ರೈವರ್ ಸೀಟನ್ನೇ ಆಫೀಸ್ ಚೇರ್ ಆಗಿ ಅಪ್ಗ್ರೇಡ್ ಮಾಡಿದ್ದ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.


    @shivaniiiiiii_ ಎಂಬ ಟ್ವಿಟರ್ ಖಾತೆಯಲ್ಲಿ ಆಟೋ ಚಾಲಕನ ಈ ಫೋಟೋ ಸೆಪ್ಟೆಂಬರ್ 23ರಂದು ಹಂಚಿಕೊಂಡಿದ್ದು, ಈ ಪೋಸ್ಟ್ ಒಂದೇ ದಿನದಲ್ಲಿ 76 ಸಾವಿರಕ್ಕೂ ಹೆಚ್ಚು ಜನರನ್ನು ತಲುಪಿದೆ. ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
    ಎಷ್ಟೇ ಟ್ರಾಫಿಕ್ ಇದ್ದರೂ ಕೂಡ ಆರಾಮಾಗಿ ಅಟೋದಲ್ಲಿ ಕುಳಿತುಕೊಳ್ಳಲು ಆಗುವಂತೆ ಆಫೀಸ್ ಚೇರ್ ಫಿಟ್ ಮಾಡಿರುವುದನ್ನು ಕಾಣಬಹುದು. ಸದ್ಯ ಈ ಆಟೋ ಚಾಲಕನ ಕ್ರಿಯೇಟಿವ್ ಐಡಿಯಾಗೆ ಜನರು ಪೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಜನರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

    Continue Reading

    LATEST NEWS

    Trending