Connect with us

    DAKSHINA KANNADA

    ಸಾರಿಗೆ ಅಧಿಕಾರಿಗಳು ಖಾಸಗಿ ಬಸ್ ಮಾಲಕರ ಅಡಿಯಾಳಾದರೆ ತೀವ್ರ ಹೋರಾಟ- ಬಿ.ಕೆ. ಇಮ್ತಿಯಾಝ್

    Published

    on

    ರಾಜ್ಯ ಸರಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಅವಳಿ ಜಿಲ್ಲೆಯ ಬಡ ಮಹಿಳೆಯರಿಗೂ ಸಿಗುವಂತಾಗಲು ಜಿಲ್ಲೆಯ ಮೂಲೆ ಮೂಲೆಗೂ ಸರಕಾರಿ ಬಸ್ಸು ಓಡಬೇಕು ಎಂದು ಡಿವೈಎಫ್ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಝ್  ಒತ್ತಾಯಿಸಿದ್ದಾರೆ.

    ಮಂಗಳೂರು: ರಾಜ್ಯ ಸರಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಅವಳಿ ಜಿಲ್ಲೆಯ ಬಡ ಮಹಿಳೆಯರಿಗೂ ಸಿಗುವಂತಾಗಲು ಜಿಲ್ಲೆಯ ಮೂಲೆ ಮೂಲೆಗೂ ಸರಕಾರಿ ಬಸ್ ಓಡಬೇಕು.


    ವಿಪರ್ಯಾಸ ಎಂದರೆ ಜನರ ತೆರಿಗೆಯ ದುಡ್ಡಿನಿಂದ ಸರಕಾರದ ಸಂಬಳ ಪಡೆಯುವ ಅವಳಿ ಜಿಲ್ಲೆಯ ಸಾರಿಗೆ ಅಧಿಕಾರಿಗಳು ಖಾಸಗಿ ಬಸ್ಸು ಮಾಲಕರ ಅಡಿಯಾಳಂತೆ ವರ್ತಿಸುತ್ತಿರುವ ಅಧಿಕಾರಿಗಳ ಜನವಿರೋಧಿ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಡಿವೈಎಫ್ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಎಚ್ಚರಿಕೆ ನೀಡಿದರು.

    ಅವರು ಜು.14ರಂದು ನಗರದ ಕ್ಲಾಕ್ ಟವರ್ ಬಳಿ ಜಿಲ್ಲೆಯ ವಿವಿಧ ಭಾಗಗಳಿಗೆ ಸರಕಾರಿ ಬಸ್ ಓಡಾಟ ನಡೆಸಲು ಒತ್ತಾಯಿಸಿ ಹಾಗೂ ವಿವಿಧ ಸಾರಿಗೆ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಡಿವೈಎಫ್ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

    ಸುರತ್ಕಲ್ ಟೋಲ್ ಗೇಟ್ ಮುಚ್ಚಿ ಎಂಟು ತಿಂಗಳಾದರೂ ಟೋಲ್ ಹೆಸರಿನಲ್ಲಿ ಪ್ರಯಾಣಿಕರ ಟಿಕೆಟ್ ಮೇಲೆ 5 ರೂಪಾಯಿ ಸುಲಿಗೆ ಮಾಡುತ್ತಿರುವ ಖಾಸಗಿ ಬಸ್ಸು ಮಾಲಕರ ವಿರುದ್ಧ ಕ್ರಮ ಕೈಗೊಳ್ಳದೆ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆ ನಡೆಸದೆ ಜಿಲ್ಲಾಡಳಿತ ಲೂಟಿಯ ಪರವಾಗಿ ನಿಂತಿರುವುದನ್ನು ಖಂಡಿಸಿದರು.

    ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ದರ್ಬಾರನ್ನು ಕೊನೆಗೊಳಿಸಲು ಜಿಲ್ಲೆಯ ಜನರು ಪ್ರತಿ ಗ್ರಾಮಗಳಿಗೆ ಸರಕಾರಿ ಬಸ್ಸಿನ ಬೇಡಿಕೆ ಸಲ್ಲಿಸಬೇಕೆಂದು ಕರೆ ನೀಡಿದರು.

    ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ನಗರಕ್ಕೆ ಈಗಾಗಲೇ 68 ಮಂಜೂರಾಗಿರುವ ಸರಕಾರಿ ನರ್ಮ್ ಬಸ್ಸಿನಲ್ಲಿ 35 ಬಸ್ಸಷ್ಟೇ ಓಡಾಟ ಮಾಡುತ್ತಿದ್ದೆ ಬಾಕಿ ಸಂಚರಿಸಲು ಸರಕಾರಿ ಬಸ್ಸುಗಳ ಕೊರತೆ ನೀಗಿಸಲು ಕೆಎಸ್ಆರ್ಟಿಸಿ ಸಂಸ್ಥೆ ಸರಕಾರದ ಮುಂದಿಟ್ಟಿದ್ದೆ ಅದನ್ನು ಸರಕಾರ ಕೂಡಲೇ ಈ ಜಿಲ್ಲೆಗೆ ಹೊಸ ಬಸ್ಸುಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು.

    ಅದೇ ರೀತಿ ನಗರದ ಸ್ಟೇಟ್ ಬ್ಯಾಂಕ್ ನಿಂದ ಈ ಹಿಂದೆ ಸಂಚರಿಸುತ್ತಿದ್ದ ನರ್ಮ್ ಬಸ್ ಓಡಾಡುವಂತೆ ನೋಡಿಕೊಳ್ಳಬೇಕು.

    ಪುತ್ತೂರು, ಬೆಳ್ತಂಗಡಿ ನಡುವೆ ಸರಕಾರಿ ಬಸ್ಸು ಓಡಾಡುವಂತೆ ಮಂಗಳೂರು ಮೂಡಬಿದ್ರೆ ಕಾರ್ಕಳ ನಡುವೆಯೂ ಸರಕಾರಿ ಬಸ್ಸು ಓಡಾಡಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ್ ನಾಯಕ್ ಪ್ರತಿಭಟನಾ ಸ್ಥಳಕ್ಕಾಗಮಿಸಿ ಮನವಿಯನ್ನು ಸ್ವೀಕರಿಸಿದರು ಹಾಗೂ ಪ್ರತಿಭಟನಾಕಾರರು ಸಲ್ಲಿಸಿದ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ನಗರ ಅಧ್ಯಕ್ಷರಾದ ಜಗದೀಶ್ ಬಜಾಲ್, ನಗರ ಕೋಶಾಧಿಕಾರಿ ತಯ್ಯೂಬ್ ಬೆಂಗರೆ, ಸೈಫರ್ ಆಲಿ, ರಫೀಕ್ ಹರೇಕಳ, ಹನೀಫ್ ಬೆಂಗರೆ, ಮುಸ್ತಫಾ ಕಲ್ಲಕಟ್ಟೆ, ಮನೋಜ್ ಉರ್ವಸ್ಟೋರ್, ರಿಹಾಬ್, ನಾಸಿರ್ , ಜೆರಾಲ್ಡ್ ಟವರ್ ಮುಂತಾದವರು ಉಪಸ್ಥಿತರಿದ್ದರು.

    DAKSHINA KANNADA

    ಮಂಗಳೂರು: ಟ್ರಾಯ್‌ನಿಂದ ಕರೆ; 1.71 ಕೋ.ರೂ ವಂಚನೆ

    Published

    on

    ಮಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್‌ ಸಿಮ್‌ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಕುರಿತು ಆರೋಪಿಸಿ 1.71 ಕೋ.ರೂ ವಂಚಿಸಿರುವ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

    ನ.11 ರಂದು ಅಪರಿಚಿತ ವ್ಯಕ್ತಿಯೋರ್ವರು ಟ್ರಾಯ್‌ ಪ್ರತಿನಿಧಿ ಎಂದು ಕರೆ ಮಾಡಿದ್ದು, ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್‌ ನಂಬರ್‌ ರಿಜಿಸ್ಟರ್‌ ಆಗಿದೆ, ಮುಂಬೈನ ಅಂಧೇರಿ ಯ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆದಿದೆ . ಮಾರ್ಕೆಟಿಂಗ್‌ ನೆಪದಲ್ಲಿ ಈ ನಂಬರ್‌ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿರುವ ಕುರಿತು ಎಫ್‌ಐಆರ್‌ ದಾಖಲಾಗಿದೆ. ಈಗಲೇ ನೀವು ಅಂಧೇರಿ ಠಾಣೆಯನ್ನು ಸಂಪರ್ಕ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಎರಡು ಮೊಬೈಲ್‌ ಸೇವೆಯನ್ನು ಕೊನೆಗಳಿಸಲಾಗುವುದು’ ಎಂದು ಹೇಳಿದ್ದಾರೆ.

    ಅನಂತರ ವಾಟ್ಸಪ್‌ ಮೂಲಕ ವೀಡಿಯೋ ಕರೆ ಮಾಡಿದ್ದು, ನ.13 ರಿಂದ 19 ರ ನಡುವೆ 53 ಲಕ್ಷ, 74 ಲಕ್ಷ ರೂ, 44 ಲಕ್ಷ ರೂ, ಹೀಗೆ ಒಟ್ಟು 1.71 ಕೋ.ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ದೂರುದಾರರು ಅಮೆರಿಕಾದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ವಾಪಾಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್‌ ಒಂದನ್ನು ಖರೀದಿ ಮಾಡಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ವಾಸ ಮಾಡುತ್ತಿದ್ದರು. ಉದ್ಯೋಗದ ಮೂಲಕ ಉಳಿತಾಯ ಮಾಡಿದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ.

    Continue Reading

    DAKSHINA KANNADA

    ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?

    Published

    on

    ಮಂಗಳೂರು/ಆಂಧ್ರಪ್ರದೇಶ: ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೀರು, ಚಂದನ ಅಥವಾ ಗಂಧದ ಅಭಿಷೇಕ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಶ್ರೀ ಶಿವದತ್ತ ಸ್ವಾಮಿಜಿ ಭಕ್ತರಿಂದ ಮೆಣಸಿನ ಪುಡಿ ಅಭಿಷೇಕ ಮಾಡಿಸಿಕೊಂಡಿರುವ ಸುದ್ಧಿ ಫುಲ್ ವೈರಲ್ ಆಗುತ್ತಿದೆ.


    ಆಂಧ್ರಪ್ರದೇಶದ ಪ್ರತ್ಯಂಗಿರ ಆಶ್ರಮದಲ್ಲಿ ಈ ವಿಶಿಷ್ಟವಾದ ಅಭಿಷೇಕ ನಡೆದಿದ್ದು, ಸುಮಾರು 100 ಕೆಜಿ ಮೆನಸಿನಕಾಯಿಯನ್ನು ಬಳಸಲಾಗಿದ್ದು, ಇದನ್ನು ಮಾಡುವುದರಿಂದ ಭಕ್ತರ ಕಷ್ಟಗಳು ದೂವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ದೇವಿಯ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗಿದ್ದು, ಇದನ್ನು ‘ಕರಂ ಅಭಿಷೇಕ’ ಎಂದು ಕೂಡ ಕರೆಯಲಾಗುತ್ತದೆ.

    ಇದನ್ನು ಓದಿ:ಯೂಟ್ಯೂಬ್​ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ

    ಕಳೆದ 14 ವರ್ಷಗಳಿಂದ ಪ್ರತ್ಯಂಗಿರ ಆಶ್ರಮದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರುತ್ತಿದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮೆಣಸಿನ ಪುಡಿ ಸಮರ್ಪಿಸುತ್ತಾರೆ. ಈ ಕ್ರಮ ಭಕ್ತರ ನಂಬಿಕೆಯೋ, ದೇವರ ಪವಾಡವೋ ಗೋತ್ತಿಲ್ಲ, ಆದರೆ ಇಂತಹ ಆಚರಣೆ ಆಧುನಿಕ ಯುಗದಲ್ಲಿ ಎಷ್ಟು ಸರಿ ಎಂಬುವುದು ಚಿಂತಾದಾಯಕ ವಿಷಯವಾಗಿದೆ.

    Continue Reading

    bangalore

    ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?

    Published

    on

    ಮಂಗಳೂರು/ಬೆಂಗಳೂರು: ಕಾಂಗ್ರೇಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಸ್ಟಾಪ್ ಆಗುತ್ತಾ ಅನ್ನುವಂತಹ ಭಯ ಯಜಮಾನಿಯರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ, ರಾಜ್ಯದಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ.


    ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಬಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ರದ್ದಾದರೆ ಅಥವಾ ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ವರ್ಗಾವಣೆಯಾದರೆ 2000 ರೂ. ಬರುತ್ತೋ, ಇಲ್ಲವೋ ಎಂಬುವುದು ರಾಜ್ಯದ ಮಹಿಳೆಯರ ತಲೆನೋವಿಗೆ ಕಾರಣವಾಗಿದೆ.

    ಇದನ್ನು ಓದಿ :ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಬಿಪಿಎಲ್ ಗೆ ಅರ್ಹವಲ್ಲದ ಸುಮಾರು 80,000 ಕಾರ್ಡುಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಯಾವುದೇ ರೀತಿಯ ಗೊಂದಲ ಪಡುವುದು ಬೇಡ. ಅಕ್ರಮ ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿಯರ ಖಾತೆಗೆ 2000 ರೂ. ಹಣ ಜಮೆ ಆಗುವುದು. ತೆರಿಗೆ ಪಾವತಿಸುವವರಿಗೆ ಮಾತ್ರ 2000 ರೂ. ಹಣ ಬರುವುದಿಲ್ಲ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾದರೂ ಹಣ ಬರುತ್ತದೆ, ಆದರೆ ಅಂತವರು ತೆರಿಗೆ ಪಾವತಿಸದಿದ್ದರೆ ಮಾತ್ರ ಬರುವುದು ಎಂದು ಹೇಳಿದ್ದಾರೆ.

    Continue Reading

    LATEST NEWS

    Trending