Connect with us

    DAKSHINA KANNADA

    ಮಂಗಳೂರು ಏರ್ಪೋರ್ಟಿನಲ್ಲಿ ದುರಂತ – ಅಣಕು ಕಾರ್ಯಾಚರಣೆ

    Published

    on

    ಬಜಪೆ: ಕೇಂದ್ರ ಸರಕಾರದ ಗೃಹ ಸಚಿವಾಲಯದ ಸೂಚನೆಯಂತೆ ವಿಮಾನ ದುರಂತಕ್ಕೆ ಸಂಬಂಧಿಸಿದ ಅಣಕು ಕಾರ್ಯಾಚರಣೆ ಮಂಗಳೂರು ಏರ್ಪೋರ್ಟಿನಲ್ಲಿ ನಡೆಯಿತು.

    ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ ಇಲಾಖೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಎನ್‌ಡಿಆರ್‌ಎಫ್‌, ಜಿಲ್ಲಾಡಳಿತ ಆರೋಗ್ಯ ಸೇವೆಗಳ ವಿಭಾಗ, ಅಗ್ನಿಶಾಮಕ ದಳ, ಎಸ್ ಡಿ ಆರ್‌ ಎಫ್‌, ಬಜಪೆ ಠಾಣಾ ಪೊಲೀಸರು ಅಣಕು ಕಾರ್ಯಾಚರಣೇಯಲ್ಲಿ ಪಾಳ್ಗೊಂಡರು. ಎನ್‌ಡಿ ಆರ್ ಎಫ್‌ ತಂಡಕ್ಕೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದರು.

    ರನ್‌ವೇ ಮೂಲಕ ವಿಮಾನ ಜಾರಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ರಾಸಾಯನಿಕ ಸೋರಿಕೆ, ಪ್ರಯಾಣಿಕರ ರಕ್ಷಣೆ ಹೇಗೆ ಎಂಬಿತ್ಯಾದಿಯಾಗಿ ಮಾಹಿತಿ ನೀಡಲಾಯಿತು. ವಿಮಾನ ದುರಂತಗಳಾದ ಸಂಧರ್ಭದಲ್ಲಿ ಸೋಡಿಯಂ ಅಸಿಟೇಟ್ ರಾಸಾಯನಿಕ ಸೋರಿಕೆ ಭೀತಿ, ಸಮೀಪದ ಜನತೆಯ ಸುರಕ್ಷತೆ, ಯಾವುದೇ ರೀತಿಯಲ್ಲಿ ಅನಾಹುತಗಳಾಗದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಮೂಲಕ ಜಾಗೃತಿ ಮೂಡಿಸಲಾಯಿತು.

     

    ಕಾರ್ಯಾಚರಣೆಯಲ್ಲಿ 150 ಪ್ರಯಾಣಿಕರೊಂದಿಗೆ ದುಬೈನಿಂದ ಬಂದ ವಿಮಾನವು ಲ್ಯಾಂಡಿಂಗ್‌ ವೇಳೆ ಟೈರ್ ಸಿಡಿದ ಸಂದರ್ಭದಲ್ಲಾಗುವ ವೇಳೆ ವಹಿಸಿಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.

    DAKSHINA KANNADA

    ಉಪ್ಪಿನಂಗಡಿ: ಜನ್ಮ ದಿನ ಆಚರಣೆಗೆ ಕೊಡವಿ ಹತ್ಯೆ! ಅರಣ್ಯಾಧಿಕಾರಿಗಳ ದಾಳಿ

    Published

    on

    ಉಪ್ಪಿನಂಗಡಿ:  ಮಗನ ಬರ್ತಡೇಗಾಗಿ ರಕ್ಷಿಣಾರಣ್ಯದಿಂದ ಕಡವೆಯನ್ನು ಗುಂಡಿಕ್ಕಿ ಕೊಂದು ಅದರ ಮಾಂಸವನ್ನು ಫ್ರಿಡ್ಜ್ ನಲ್ಲಿ ದಾಸ್ತಾನು ಇರಿಸಲಾಗಿದ್ದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಹತ್ಯೆಗೆ ಬಳಸಲಾದ ಕೋವಿ ಮತ್ತು ಕಡವೆ ಮಾಂಸವನ್ನು ಸ್ವಾಧೀನಪಡಿಸಿಕೊಂಡಿದೆ.

    ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸುರೇಶ್‌ ಮತ್ತವರ ಸಹವರ್ತಿಗಳು ರಕ್ಷಿತಾರಣ್ಯದಲ್ಲಿದ್ದ ಕಡವೆಯೊಂದಕ್ಕೆ ಗುಂಡಿಕ್ಕಿ ಹತ್ಯೆಗೈದಿದ್ದರು. ಅದನ್ನು ಮಗನ ಹುಟ್ಟು ಹಬ್ಬದ ಔತಣ ಕೂಟಕ್ಕೆಂದು ಮಾಂಸ ಮಾಡಿ ಮನೆಯ ಪ್ರೀಝರ್‌ನಲ್ಲಿ ಇರಿಸಿದ್ದರು.

    ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ವಲಯ ಅರಣ್ಯಾಧಿ ಕಾರಿಗಳ ನಿರ್ದೇಶನದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಇಲಾಖಾ ಸಿಬಂದಿ ಸುನಿಲ್‌, ಶಿವಾನಂದ ಅ‌ವರ ತಂಡ ಸುರೇಶ್‌ ಮನೆಗೆ ದಾಳಿ ನಡೆಸಿ ಸಂಗ್ರಹಿಸಿಟ್ಟ ಮಾಂಸ ಹಾಗೂ ಹತ್ಯೆಗೆ ಬಳಸಲಾದ ಕೋವಿಯನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳು ಗುಂಡ್ಯ ಹೊಳೆಯನ್ನು ಈಜಿ ದಾಟುವ ಮೂಲಕ ಪರಾರಿಯಾಗಿದ್ದಾರೆ. ವಲಯಾಧಿಕಾರಿಯಿಂದ ತನಿಖೆ ಉಪ್ಪಿನಂಗಡಿ ವಲಯ ಅರಣ್ಯಾಧಿ ಕಾರಿ ರಾಘವೇಂದ್ರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಪಣಂಬೂರು: ಮೀನುಗಾರಿಕೆ ಜೆಟ್ಟಿ ಕಾಮಗಾರಿ ಪ್ರಗತಿಯಲ್ಲಿ

    Published

    on

    ಪಣಂಬೂರು: ಕುಳಾಯಿ ಮೀನುಗಾರಿಕೆ ಜೆಟ್ಟಿ ಕಾಮಗಾರಿ ಪ್ರಗತಿಯಲ್ಲಿದೆ. ದಕ್ಷಿಣ ಬ್ರೇಕ್‌ವಾಟರ್‌ ಮತ್ತು ಉತ್ತರ ಬ್ರೇಕ್‌ವಾಟರ್‌ ನಿರ್ಮಾಣ ನಡೆಯುತ್ತಿದ್ದು ದಕ್ಷಿಣ ಬ್ರೇಕ್‌ವಾಟರ್‌ನ ಉದ್ದ 262 ಮೀ. ಪೂರ್ಣಗೊಂಡಿದೆ. ಉತ್ತರದ 831 ಮೀ. ಉದ್ದದಲ್ಲಿ 560 ಮೀ. ವರೆಗೆ ಭಾಗಶಃ ಪೂರ್ಣಗೊಂಡಿದೆ.


    ದಕ್ಷಿಣದ ಬ್ರೇಕ್‌ವಾಟರ್‌ನಲ್ಲಿ ಟೆಟ್ರಾಪಾಡ್‌ಗಳನ್ನು ಇಡುವುದು ಗಣನೀಯವಾಗಿ ಪೂರ್ಣಗೊಂಡಿದೆ ಮತ್ತು ಉತ್ತರದ ಬ್ರೇಕ್‌ವಾಟರ್‌ನಲ್ಲಿ ಟೆಟ್ರಾಪಾಡ್‌ಗಳನ್ನು ಹಾಕಿ ಸುರಕ್ಷಿತಗೊಳಿಸಲಾಗಿದೆ. ಉತ್ತರದ ಬ್ರೇಕ್‌ ವಾಟರ್‌ ನಾಡದೋಣಿ ಮೀನುಗಾರಿಕೆಗೆ ಅನುಕೂಲಕರವಾಗಿಲ್ಲ. ಈ ನಿಟ್ಟಿನಲ್ಲಿ ವಿಸ್ತರಿಸುವಂತೆ ಮೀನುಗಾರರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸೂಕ್ತವಾಗಿ ಚರ್ಚಿಸಲು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರ ನಿರ್ದೇಶನದಂತೆ, ಎನ್‌ಎಂಪಿಎ ಅಧ್ಯಕ್ಷ ಡಾ| ಎ.ವಿ.ರಮಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

    ಸ್ಥಳೀಯ ಮೀನುಗಾರರ ಕುಂದು ಕೊರತೆಗಳಿಗೆ ಸಂಬಂಧಿಸಿ ಶಾಸಕರಾದ ಡಾ|ಭರತ್‌ ವೈ. ಶೆಟ್ಟಿ, ಯಶಪಾಲ್‌ ಸುವರ್ಣ, ಸ್ಥಳೀಯ ಮೀನುಗಾರ ಸಮುದಾಯ, ತಾಂತ್ರಿಕ ತಜ್ಞ ಏಜನ್ಸಿಯ ಪ್ರಮುಖರು, ಎನ್‌ಐಟಿಕೆ ಪರಿಣಿತರು ಉಪಸ್ಥಿತರಿದ್ದರು.

    ತಮ್ಮ ಬೇಡಿಕೆಯನ್ನು ಈಡೇರಿಸು ವವರೆಗೆ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಮೀನುಗಾರ ಮುಖಂಡರ ಆಗ್ರಹಿಸಿದ್ದಾರೆ. ಉತ್ತರದ 560 ಮೀಟರ್‌ ಬ್ರೇಕ್‌ ವಾಟರ್‌ಗೆ ಸೂಕ್ತ ರಕ್ಷಣೆ ಇಲ್ಲದೆ ಹೋದರೆ ಸಮುದ್ರದ ಅಲೆಗೆ ಕೊಚ್ಚಿಹೋಗುವ ಆತಂಕವಿದೆ ಎಂದು ಎನ್‌ಐಟಿಕೆ ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ನಡೆದಿರುವ ಬ್ರೇಕ್‌ ವಾಟರ್‌ ಭಾಗವನ್ನು ಟೆಟ್ರಾಪಾಡ್‌ ಹಾಕಿ ಸುರಕ್ಷಿತಗೊಳಿಸುವ ಅಗತ್ಯವಿದೆ ಎಂಬುದು ಪರಿಣಿತರು ವರದಿ ಮಂಡಿಸಿದ್ದಾರೆ.

    Continue Reading

    DAKSHINA KANNADA

    ಎಂಆರ್‌ಪಿಎಲ್‌ 2ನೇ ತ್ತೈಮಾಸಿಕ ಅವಧಿ ಫಲಿತಾಂಶ; ನಷ್ಟ ಎಷ್ಟು ಗೊತ್ತಾ ?

    Published

    on

    ಮಂಗಳೂರು: ಎಂಆರ್‌ಪಿಎಲ್‌ 2024-25ನೇ ಸಾಲಿನ 2ನೇ ತ್ತೈಮಾಸಿಕ ಅವಧಿ ಫಲಿತಾಂಶವನ್ನು ಪ್ರಕಟಿಸಿದ್ದು, ಕಂಪೆನಿ 682 ಕೋಟಿ ರೂ. ನಿವ್ವಳ ನಷ್ಟ ಗಳಿಸಿದೆ. ಕಂಪೆನಿಯು 2023-24ನೇ ಸಾಲಿನ ಇದೇ ಅವಧಿಯಲ್ಲಿ 1,059 ಕೋಟಿ ರೂ. ಲಾಭ ಗಳಿಸಿತ್ತು.


    ಕಂಪೆನಿಯ ಒಟ್ಟು ಆದಾಯವು ಹಿಂದಿನ ಸಾಲಿನಲ್ಲಿ 22,844 ಕೋಟಿ ರೂ. ಇದ್ದುದು 28,786 ಕೋಟಿ ರೂ.ಗೆ ಏರಿಕೆಯಾಗಿದೆ. ಅರ್ಧವಾರ್ಷಿಕ ಅವಧಿಯಲ್ಲಿ ನೋಡಿದಾಗ ಒಟ್ಟು ಆದಾಯವು ಹಿಂದಿನ ಅವಧಿಯ 47,669 ಕೋಟಿ ರೂ.ನಿಂದ 56,075 ಕೋಟಿ ರೂ.ಗೆ ಏರಿಕೆ ಕಂಡಿದೆ. ಒಟ್ಟು ಲಾಭವು 3,164 ಕೋಟಿ ರೂ. ಇದ್ದುದು ಈ ಅರ್ಧವಾರ್ಷಿಕ ಅವಧಿಗೆ 940 ಕೋಟಿ ರೂ. ನಷ್ಟ ಅನುಭವಿಸಿದೆ. ಹಿಂದಿನ ಅವಧಿಯಲ್ಲಿ 2,072 ಕೋಟಿ ರೂ. ನಿವ್ವಳ ಲಾಭವಿದ್ದರೆ, ಈ ಬಾರಿ 617 ಕೋಟಿ ರೂ. ನಷ್ಟ ಉಂಟಾಗಿದೆ.

    ಕಳೆದ ತ್ತೈಮಾಸಿಕದಲ್ಲಿ ಕಂಪೆನಿಯು ಅತ್ಯಧಿಕ ಕಚ್ಚಾತೈಲ ಸಂಸ್ಕರಣೆ ಮಾಡಿದೆ. ಅಲ್ಲದೆ ರಿಫೈನರಿ ಸಾಮರ್ಥ್ಯ ಬಳಕೆ ಈ ತ್ತೈಮಾಸಿಕದಲ್ಲಿ ಶೇ 118.3 ಆಗಿತ್ತು ಎಂದು ಪ್ರಕಟನೆ ತಿಳಿಸಿದೆ.

    Continue Reading

    LATEST NEWS

    Trending