Thursday, December 2, 2021

ದ.ಕ.-ಕಾಸರಗೋಡು ನಡುವೆ ಸಂಚಾರ ನಿರ್ಬಂಧ: ಕೇಂದ್ರ- ರಾಜ್ಯಕ್ಕೆ ಹೈಕೋರ್ಟ್‌ ನೋಟಿಸ್‌..!

ದ.ಕ.-ಕಾಸರಗೋಡು ನಡುವೆ ಸಂಚಾರ ನಿರ್ಬಂಧ: ಕೇಂದ್ರ- ರಾಜ್ಯಕ್ಕೆ ಹೈಕೋರ್ಟ್‌ ನೋಟಿಸ್‌..!

ಬೆಂಗಳೂರು : ಕೇರಳದ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೆ ಸಾರ್ವಜನಿಕರ ಸಂಚಾರ ನಿರ್ಬಂಧಿಸಿರುವ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಕಾಸರಗೋಡಿನ ವಕೀಲ ಬಿ.ಸುಬ್ಬಯ್ಯ ರೈ ಸಲ್ಲಿಸಿರುವ ಅರ್ಜಿಯು ಮುಖ್ಯ ನ್ಯಾ. ಎ.ಎಸ್‌.ಓಕ್‌ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅರ್ಜಿ ಕುರಿತು ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಕೇಂದ್ರ ಗೃಹ ಸಚಿವಾಲಯ, ರಾಜ್ಯ ಆರೋಗ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಕೋವಿಡ್‌-19 ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್‌ ಅನ್ನು ಕೇಂದ್ರ ಸರಕಾರ ಹಂತ ಹಂತವಾಗಿ ತೆರವು ಮಾಡಿದೆ.

2021ರ ಜ. 27ರಂದು ಅನ್‌ಲಾಕ್‌ 4.0 ಮಾರ್ಗ ಸೂಚಿಗಳನ್ನು ಹೊರಡಿಸಿದೆ. ಅದರಲ್ಲಿ ಜನರ ಮತ್ತು ಪ್ರಯಾಣಿಕರ ಅಂತರ ರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ.

ಆದರೆ, ಫೆ.18ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯು ಕೇರಳದ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೆ ಸಾರ್ವಜನಿಕರ ಸಂಚಾರ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಈ ಆದೇಶವು ಕೇಂದ್ರ ಸರಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...