DAKSHINA KANNADA
ನೀರಿನ ದರ ಏರಿಕೆ ಚರ್ಚೆ; ಪಾಲಿಕೆಯಲ್ಲಿ ಆಡಳಿತ-ವಿರೋಧ ಪಕ್ಷದ ಸದಸ್ಯರ ಗದ್ದಲ..
ನೀರಿನ ದರ ಏರಿಕೆ ಚರ್ಚೆ; ಪಾಲಿಕೆಯಲ್ಲಿ ಆಡಳಿತ-ವಿರೋಧ ಪಕ್ಷದ ಸದಸ್ಯರ ಗದ್ದಲ..!
ಮಂಗಳೂರು: ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ ವಿದ್ಯುತ್ ಕಂಬಗಳಲ್ಲಿ ಇತರ ಕೇಬಲ್, ಇಂಟರ್ನೆಟ್ಗಳ ಕೇಬಲ್ ಅಳವಡಿಸಿರುವುದರಿಂದ ಸಮಸ್ಯೆ ಎದುರಾಗುತ್ತಿದೆ ಎಂದು ಮಂಗಳೂರು ನಗರ ಪಾಲಿಕೆ ಸದಸ್ಯ ಪ್ರವೀಣ್ಚಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಕೇಬಲ್ಗಳನ್ನು ತೆರವುಗೊಳಿಸಲು ಕ್ರಮ ಕ್ಐಗೊಳ್ಳಬೇಕು ಎಂದು ಪಾಲಿಕೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದ್ದಾರೆ. ಇನ್ನು ಪಾಲಿಕೆಯಲ್ಲಿ ನೀರಿನ ದರವನ್ನು ಏರಿಕೆ ಮಾಡಿರುವ ವಿಚಾರವೂ ಮಾತಿನ ಸಮರಕ್ಕೆ ಕಾರಣವಾಯಿತು.
ನೀರಿನ ದರ ಪರಿಷ್ಕರಣೆ ಮಾಡಿದಾಗ ಇಷ್ಟೊಂದು ಹೊರೆ ಹೊರಿಸಿರಲಿಲ್ಲ ಎಂದು ಕಾಂಗ್ರೆಸ್ ಸದಸ್ಯ ಶಶಿಧರ ಹೆಗ್ಡೆ ಹೇಳಿದಾಗ, ಅಸಮಾಧಾನ ವ್ಯಕ್ತಪಡಿಸಿದ ಸುಧೀರ್ ಶೆಟ್ಟಿ, ನೀರಿನ ದರ ಪರಿಷ್ಕರಣೆ ಮಾಡುವುದು ಅನಿವಾರ್ಯ ಎಂದರು ನಾವು ಇಷ್ಟೊಂದು ಸಾಲ ತಂದು ನೀರಿನ ವ್ಯವಸ್ಥೆಯನ್ನು ಸುಧಾರಿಸುವಾಗ ಸರಕಾರವೇ ದರ ಪರಿಷ್ಕರಣೇ ಮಾಡಿದೆ. ಪಾಲಿಕೆ ಮಾಡಿಲ್ಲ ಎಂದಾಗ ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ನೀರಿನ ಬಿಲ್ ಏರಿಕೆಯಿಂದ ಜನಸಾಮಾಣ್ಯರು ಕಂಗೆಟ್ಟಿದ್ದು ಕೂಡಲೇ ದರ ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಅಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯಿಂದ ಜನ ಕಂಗೆಟ್ಟಿದ್ದು ಕೂಡಲೇ ವೇಗವಾಗಿ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಸದಸ್ಯ ಎ ಸಿ ವಿನಯರಾಜ್ ಆಗ್ರಹಿಸಿದರು.
ಇದಕ್ಕೆ ಬಿಜೆಪಿಯ ರಾಧಾಕೃಷ್ಣ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲಾ ರಸ್ತೆಗಳನ್ನು ಒಮ್ಮೆಲೇ ಮುಚ್ಚಿದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಮುಗಿಸಿ ಎಂದು ಶಶಿಧರ ಹೆಗ್ಡೆ ಒತ್ತಾಯಿಸಿದರು.
ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ್ ಅವಧಿಯ ಕೊನೆ ಸಭೆ ಇದಾಗಿದ್ದು, ಸದಸ್ಯರು ಮೇಯರ್ ಅವರನ್ನು ಇದೇ ಸಂದರ್ಭ ಅಭಿನಂದಿಸಿದರು.
DAKSHINA KANNADA
ಮತದಾನದ ವೇಳೆ ಮತಗಟ್ಟೆಗೆ ಮೊಬೈಲ್ ಕೊಂಡುಯ್ಯುತ್ತೀರಾ? ಹಾಗಿದ್ರೆ ಇದನ್ನು ಗಮನಿಸಿ
ಮಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಕರ್ನಾಟಕದ 14 ಕ್ಷೇತ್ರಗಳಲ್ಲಿ ಎ.26ರಂದು ಮತದಾನ ನಡೆಯಲಿದೆ. ಈ ಬಾರಿ ಚುನಾವಣೆಯ ಸಂದರ್ಭ ಮೊಬೈಲ್ ಫೋನ್ಗಳನ್ನು ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವ ಮೊದಲು ಯೋಚಿಸಿ. ಏಕೆಂದರೆ, ಬೂತ್ಗಳ ಆವರಣದಲ್ಲಿ ಅವುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಬೂತ್ಗಳಿಗೆ ಹೋಗುವ ಜನರನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುವುದು. ಮತದಾರರು ಮತ ಚಲಾಯಿಸಲು ಹೋಗುವ ಮೊದಲು ಫೋನ್ಗಳನ್ನು ಇಡಲು ವಿಶೇಷ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಮತಗಟ್ಟೆಗೆ ಮೊಬೈಲ್ ಕೊಂಡೊಯ್ದು ಫೊಟೊ ಹಾಗೂ ವೀಡಿಯೋಗಳನ್ನು ಮಾಡಿದ್ದ ಘಟನೆ ನಡೆದಿತ್ತು. ಹಾಗಾಗಿ ಈ ಬಾರಿ ಮೊಬೈಲ್ ಫೋನ್ ಗಳನ್ನು ಮತಗಟ್ಟೆಯ ಒಳಗಡೆ ಪ್ರವೇಶಿಸುವ ಮೊದಲು ಪ್ರಿಸೈಡಿಂಗ್ ಆಫೀಸರ್ ಬಳಿ ಟ್ರೇಯಲ್ಲಿ ಇಡುವ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಆ ಟ್ರೇಯನ್ನು ಪೊಲೀಸರು ಅಥವಾ ಚುನಾವಣಾ ಅಧಿಕಾರಿಗಳು ಕಾವಲು ಕಾಯುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂದೆ ಓದಿ..; ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ
ಮತದಾನ ಮಾಡುವಾಗ ಫೋನ್ಗಳನ್ನು ಟ್ರೇನಲ್ಲಿ ಇಡಲು ಸೂಚಿಸಬೇಕೇ ಅಥವಾ ಅವುಗಳನ್ನು ಸೈಲೆಂಟ್ ಮೋಡ್ನಲ್ಲಿ ಇಡುವಂತೆ ಹೇಳಬೇಕೇ ಎಂಬ ನಿರ್ಧಾರ ಕೈಗೊಳ್ಳುವುದನ್ನು ಪ್ರಿಸೈಡಿಂಗ್ ಆಫೀಸರ್ ವಿವೇಚನೆಗೆ ಬಿಡಲಾಗಿದೆ. ಕೆಲವು ಸಂದರ್ಭಗಳಲ್ಲಿ, ಮತಗಟ್ಟೆಯೊಳಗೆ ಫೋನ್ಗಳನ್ನು ಅನುಮತಿಸದಿರಲು ಚುನಾವಣಾಧಿಕಾರಿಗಳು ನಿರ್ಧರಿಸಿದ್ದಾರೆ. ಇದು ಕೆಲವೇ ಸೆಕೆಂಡುಗಳ ವಿಷಯವಷ್ಟೆ. ಮತದಾನದ ಸಮಯದಲ್ಲಿ ಗೋಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮತದಾರರು ಮತದಾನ ಮಾಡುವಾಗ ಅವುಗಳನ್ನು ಬಳಸಬಾರದು ಎಂದು ಮಾತ್ರ ನಾವು ಹೇಳುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಸಿಇಒ, ಜಿಲ್ಲಾಧಿಕಾರಿಗಳು ಮತ್ತು ಇತರ ಚುನಾವಣಾಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
BELTHANGADY
ಸಾಕುನಾಯಿಯನ್ನು ಹೊತ್ತೊಯ್ದ ಚಿರತೆ..!! ಭಯ ಭೀತರಾದ ಜನತೆ
ಬೆಳ್ತಂಗಡಿ: ಇತ್ತೀಚೆಗೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರೋದು ಕಾಮನ್ ಆಗಿ ಬಿಟ್ಟಿದೆ. ಹೆಚ್ಚಾಗಿ ಕಾಡಾನೆಗಳು ಊರಿಗೆ ಬಂದು ಕೃಷಿಗಳನ್ನು ನಾಶ ಮಾಡ್ತಾಇತ್ತು. ಆದರೆ ಈಗೀಗ ಹುಲಿ ಚಿರತೆಗಳು ಕೂಡ ನಾಡಿನತ್ತ ಮುಖ ಮಾಡ್ತಾ ಇದೆ.
ಮುಂದೆ ಓದಿ..; ಕಾಗೆ ನಿಜಕ್ಕೂ ನಮ್ಮ ಪಿತೃನಾ..?
ಬೆಳ್ತಂಗಡಿಯ ವೇಣೂರು ಪಚ್ಚೇರಿ ಪರಿಸರದಲ್ಲಿ ಚಿರತೆಯೊಂದು ರಾತ್ರಿ ಹೊತ್ತು ಓಡಾಡುವುದು ಕಂಡು ಬಂದಿದೆ. ಈ ಘಟನೆಯಿಂದ ಊರಿನ ಜನ ಭಯಭೀತರಾಗಿದ್ದಾರೆ. ಹಚ್ಚೇರಿ ಗೋಳಿದಡ್ಕ ನಿವಾಸಿ ಕೃಷ್ಣಾನಂದ ಭಟ್ ಅವರ ಸಾಕುನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣಾನಂದ ಅವರು ಚಿರತೆಯಿಂದ ರಕ್ಷಣೆ ಕೋರಿ ವೇಣೂರು ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
BANTWAL
ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ
ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.
ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ
ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.
- DAKSHINA KANNADA6 days ago
“ಸೆಕ್ಸ್” ನನ್ನ ಸಾಮರ್ಥ್ಯದ ರಹಸ್ಯ…! ಮಾಜಿ ಸಂಸದೆಯ ಹೇಳಿಕೆ ವೈರಲ್..!
- DAKSHINA KANNADA6 days ago
ಕೊರಗಜ್ಜನ ಫೋಟೋವನ್ನು ಮನೆಯಲ್ಲಿ ಇಟ್ಟು ಆರಾಧಿಸಬಹುದಾ?
- LATEST NEWS5 days ago
ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!
- DAKSHINA KANNADA6 days ago
ಕಾರ್ಪೋರೇಟರ್ ಮಗಳ ಹ*ತ್ಯೆ..! ಒಂಬತ್ತು ಬಾರಿ ಇರಿದ ಪಾಪಿ…!