ಉಡುಪಿ: ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ಅನ್ಯಧರ್ಮದ ಕುಟುಂಬವೊಂದು ದೇವಸ್ಥಾನ ಮತ್ತು ನಾಗಬನದ ಸಮೀಪ ಮಾಂಸದೂಟ ತಯಾರಿಸುತ್ತಿದ್ದ ವೇಳೆ ಶ್ರೀರಾಮ ಸೇನೆ ಕಾರ್ಯಕರ್ತರು ಆಗಮಿಸಿ ತರಾಟೆಗೆ ತೆಗೆದುಕೊಂಡ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಸೋಮೇಶ್ವರ ಸೀತಾನದಿ ತಟದಲ್ಲಿ ನಡೆದಿದೆ.
ನಾಗಬನ ಮತ್ತು ಮಂದಿರದ ಪಾವಿತ್ರ್ಯತೆ ಹಾಳುಮಾಡುತ್ತಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಆಗಮಿಸಿದ ಕಾರ್ಯಕರ್ತರು ನಾಗಬನ ಮಂದಿರ ಇರುವುದನ್ನು ಗಮನಿಸಿ ಕೂಡ ಈ ರೀತಿ ಮಾಡಿರುವ ಕುರಿತು ಆಕ್ರೋಶವನ್ನು ವ್ಯಕ್ತಪಡಿಸಿದರು.