Connect with us

    LATEST NEWS

    ಇಂದು ಪಾಕ್ – ಇಂಡಿಯಾ ಹೈ ವೋಲ್ಟೇಜ್‌ ಮ್ಯಾಚ್‌..! ನ್ಯೂಯಾರ್ಕ್‌ನಲ್ಲಿ ಪಂದ್ಯಾಟ

    Published

    on

    ಅಮೆರಿಕಾ/ಮಂಗಳೂರು:  ಐಸಿಸಿ ಟಿ20 ವಿಶ್ವಕಪ್ 2024ರ ಲೀಗ್ ಹಂತದ ಪಂದ್ಯದಲ್ಲಿ ಇಂದು(ಜೂ.9)ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ತೀವ್ರ ಹಣಾಹಣಿ ನಡೆಯಲಿದೆ. ನ್ಯೂಯಾರ್ಕ್‌ನ ನಸ್ಸೌ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಪಂದ್ಯ ನಡೆಯಲಿದ್ದು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ರಾತ್ರಿ ಸಾಂಪ್ರಾದಾಯಿಕ ಎದುರಾಳಿಗಳಾದ ಭಾರತ- ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

    ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡೂ ವಿಭಾಗದಲ್ಲೂ ಬಲಿಷ್ಠವಾಗಿದ್ದರೆ, ಪಾಕಿಸ್ತಾನದ ಶಕ್ತಿ ಬೌಲಿಂಗ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಟ್ ಮತ್ತು ಬಾಲ್ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬರಲಿದೆ. ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ನೇತೃತ್ವದ ತಂಡಗಳು ಮಹತ್ವದ ಪಂದ್ಯ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ತುದಿಗಾಲಲ್ಲಿ ನಿಂತಿವೆ.

    ಮುಂದೆ ಓದಿ..;  ಪಾಕಿಸ್ತಾನದ ಜೊತೆ ಭಾರತ ಕ್ರಿಕೆಟ್ ಆಡಬಾರದು ಎಂದ ಖಾದರ್..!!

    ಗ್ರೂಪ್ ಎನಲ್ಲಿ ನಡೆಯಲಿರುವ 19 ನೇ ಪಂದ್ಯ ಇದಾಗಿದ್ದು, ಈಗಾಗಲೇ ಪಾಕ್ ವಿರುದ್ಧ ಗೆದ್ದಿರುವ ಅಮೆರಿಕಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಐರ್ಲೆಂಡ್ ವಿರುದ್ಧ ಗೆದ್ದಿರುವ ಭಾರತ ಉತ್ತಮ ಪ್ರದರ್ಶನ ತೋರುತ್ತಿದ್ದರೆ, ಅಮೆರಿಕ ವಿರುದ್ಧ ಸೋತಿರುವ ಪಾಕಿಸ್ತಾನ ತಂಡದಲ್ಲಿ ನಿರಾಸೆಯಲ್ಲಿದ್ದು, ಇಂದಿನ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದೆ.

    ಭಾರತ ತಂಡದ ಆಟಗಾರರು:

    ಇನ್ನು ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ(ನಾಯಕ) ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯಲಿದ್ದಾರೆ.

    ಪಾಕಿಸ್ತಾನ ತಂಡದ ಆಟಗಾರರು:

    ಪಾಕಿಸ್ತಾನ ತಂಡದಲ್ಲಿ ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಬಾಬರ್ ಅಜಮ್(ಸಿ), ಇಫ್ತಿಕರ್ ಅಹ್ಮದ್, ಶಾಹೀನ್ ಶಾ ಆಫ್ರಿದಿ, ಇಮಾದ್ ವಾಸಿಮ್, ಹ್ಯಾರಿಸ್ ರೌಫ್, ಮೊಹಮ್ಮದ್ ಅಮೀರ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಉಸ್ಮಾನ್ ಕಣಕ್ಕಿಳಿಯಲಿದ್ದಾರೆ.

    DAKSHINA KANNADA

    ಅಕ್ರಮ ಮರಳುಗಾರಿಕೆಯ ವಿರುದ್ಧ ಸಿಡಿದೆದ್ದ ಮಂಗಳೂರಿಗರು..! ಬೃಹತ್ ಪ್ರತಿಭಟನೆ..!

    Published

    on

    ಮಂಗಳೂರು :  ಅಕ್ರಮ ಮರಳು ದಂಧೆಯ ವಿರುದ್ಧ ಮಂಗಳೂರಿನ ಜನರ ಆಕ್ರೋಶ ಮುಗಿಲು ಮುಟ್ಟಿದೆ ಅನ್ನೋದಿಕ್ಕೆ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಾಕ್ಷಿಯಾಗಿದೆ. ಪಾವೂರು ಉಳಿಯ, ಉಳ್ಳಾಲ ಪೊಯ್ಯೆ ಮೊದಲಾದ ದ್ವೀಪ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ.

    ಮರಳು ಮಾಫಿಯಾದಿಂದ ದ್ವೀಪಗಳು ನಾಶವಾಗುತ್ತಿದೆ ಅಂತ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಹಲವಾರು ಪ್ರತಿಭಟನೆಗಳನ್ನೂ ಕೂಡಾ ನಡೆಸಲಾಗಿತ್ತು. ಆದ್ರೆ ಇದ್ಯಾವುದಕ್ಕೂ ಜಗ್ಗದ ಅಕ್ರಮ ದಂಧೆಕೋರರು ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ನಡೆಸಿದ್ದರು. ಜಿಲ್ಲಾಡಳಿತ , ಗಣಿ ಇಲಾಖೆ ಕೂಡಾ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬ ರೀತಿ ವರ್ತಿಸಿತ್ತು. ಇದೀಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಕ್ಕ ಪಾಠ ಕಲಿಸಲು ಜನರೇ ಮುಂದಾಗಿದ್ದು, ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನರು ಅಕ್ರಮ ಮರಳುಗಾರಿಕೆಯ ವಿರುದ್ಧ ಸಿಡಿದೆದ್ದಿದ್ದಾರೆ.

    ಈ ಹೋರಾಟ ಕೇವಲ ದ್ವೀಪ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಿಸದೆ ಜಿಲ್ಲೆಯ ಎಲ್ಲೆಡೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧದ ಹೋರಾಟವಾಗಿದೆ. ಜಿಲ್ಲಾಡಳಿತ, ಹಾಗೂ ಜಿಲ್ಲೆಯ ಎರಡೂ ಪ್ರಭಲ ರಾಜಕೀಯ ಪಕ್ಷಗಳು ಈ ಅಕ್ರಮದಲ್ಲಿ ಭಾಗಿಯಾದವರನ್ನು ರಕ್ಷಣೆ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಇನ್ನೂ ಅಕ್ರಮ ಮರಳುಗಾರಿಕೆ ನಡೆದಲ್ಲಿ ಪೊಲೀಸ್ ಠಾಣೆಯ ಮುಂಬಾಗದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಪ್ರತಿಭಟನೆಯಲ್ಲಿ ನೀಡಲಾಗಿದೆ. ಮಂಗಳೂರು ಕ್ಯಾಥೋಲಿಕ್ ಸಭಾ, ಸಮಾನ ಮನಸ್ಕ ಸಂಘಟನೆ ಹಾಗೂ ಜಾತಿ, ಧರ್ಮ, ಪಕ್ಷಾತೀತ ನಿಲುವಿನ ಜನರ ಜೊತೆ ಸೇರಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

    Continue Reading

    DAKSHINA KANNADA

    300 ಕೋಟಿ ವಂಚನೆ..!ಮಥುರಾ ಕೃಷ್ಣ ದೇವಸ್ಥಾನದಲ್ಲಿದ್ದ ಆರೋಪಿಯ ಬಂಧನ..!

    Published

    on

    ಮಂಗಳೂರು/ಮುಂಬೈ : ಮಥುರಾ ಕೃಷ್ಣ ಗೋಪಾಲ ದೇವಸ್ಥಾನದ ವೃಂದಾವನದ ಮಹಾಂತ ಎಂದು ಜನರನ್ನು ವಂಚಿಸಿ 300 ಕೋಟಿ ರೂಪಾಯಿ ಪಂಗನಾಮ ಹಾಕಿದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮಥುರಾ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆಯಲ್ಲಿ ಮಂಹಾಂತನ ಸೋಗಿನಲ್ಲಿದ್ದ ಆರೋಪಿ ವಿಶ್ವನಾಥ ಶಿಂಧೆಯನ್ನು ಬಂಧಿಸಲಾಗಿದೆ.

    ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಿವಾಸಿಯಾಗಿದ್ದ ವಿಶ್ವನಾಥ ಶಿಂಧೆ, ಜಿಜಾವು ಮಾಸಾಹೇಬ್‌ ಮಲ್ಟಿ ಸ್ಟೇಟ್ ಬ್ಯಾಂಕ್‌ ನ ಠೇವಣಿದಾರರಿಗೆ 300 ಕೋಟಿ ವಂಚಿಸಿ ತಲೆಮರೆಸಿಕೊಂಡಿದ್ದ. ಈ ನಕಲಿ ಮಹಾಂತ ಶಿಂಧೆಗಾಗಿ ಅನೇಖ ದಿನದಿಂದ ಬೀಡ್ ಪೊಲೀಸರು ಹುಡುಕಾಟ ನಡೆಸಿದ್ದರು. ಈ ವೇಳೆ ಉತ್ತರ ಪ್ರದೇಶದ ಮಥುರಾ ಕೃಷ್ಣ ಗೋಪಾಲ ದೇವಸ್ಥಾನದಲ್ಲಿ ಇದ್ದಾನೆ ಎಂಬ ಸುಳಿವು ಸಿಕ್ಕಿತ್ತು. ಮಥುರಾದ ಶಿವಾಜಿನಗರ ಪೊಲೀಸರ ಸಹಾಯ ಪಡೆದ ಬೀಡ್ ಪೊಲೀಸರು ದೇವಸ್ಥಾನಕ್ಕೆ ದಾಳಿ ನಡೆಸಿದ್ದು ಈ ವೇಳೆ ಕೊಠಡಿಯೊಂದರಲ್ಲಿ ವಿಶ್ವನಾಥ ಶಿಂಧೆ ಅಡಗಿ ಕುಳಿತಿದ್ದ. ಆತ ಬಂಧನದ ಬಳಿಕ ಮಥುರಾ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಟ್ರಾನ್ಸಿಟ್ ವಾರೆಂಟ್ ಪಡೆದುಕೊಂಡು ಆರೋಪಿಯನ್ನು ಮುಂಬೈಗೆ ಕರೆತರಲಾಗಿದೆ. ಆರೋಪಿಯು ಈ ಹಿಂದೆ ಕೂಡಾ ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    Continue Reading

    LATEST NEWS

    ಯುರೋಪ್ ದೇಶಕ್ಕೂ ಕಾಲಿಟ್ಟ ಯಕ್ಷಧ್ರುವ ಪಟ್ಲ ಫೌಂಡೇಶನ್

    Published

    on

    ಮಂಗಳೂರು: ಇತ್ತೀಚೆಗೆ ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಅಮೆರಿಕಾದಲ್ಲಿ ಪಸರಿಸಿ ಅಲ್ಲಿನ ಜನರಿಗೆ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಾಡಿತ್ತು. ಪಟ್ಲ ಸತೀಶ್ ಸೇರಿದಂತೆ ತಂಡದ 9 ಕಲಾವಿದರು ಸುಮಾರು 75 ದಿನಗಳ ಕಾಲ ಅಮೆರಿಕಾದ ವಿವಿಧ ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನದ ಜೊತೆ ಕಾರ್ಯಾಗಾರ ನಡೆಸಿದ್ದರು.

    ಇದೀಗ ಯಕ್ಷಧ್ರುವ ಪಟ್ಲ ಫೌಂಡೇಶನ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದ್ದು, ಯುರೋಪ್ ದೇಶದಲ್ಲಿ ತನ್ನ ಘಟಕವನ್ನು ಆರಂಭಿಸುತ್ತಿದೆ. ಅಕ್ಟೋಬರ್ 3 ರಂದು ಜರ್ಮನಿಯ ಮ್ಯೂನಿಕ್ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಯೂರೋಪ್ ಘಟಕ ಉದ್ಘಾಟನೆಗೊಳ್ಳಲಿದೆ.

    ಮ್ಯೂನಿಕ್ನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ರಾಜೀವ್ ಚಿತ್ಕರ್, ನಿವೃತ್ತ ಎಮಿನೆಂಟ್ ಇಂಡೋಲಜಿಯ ಪ್ರೋಫೆಸರ್ ಡಾ.ರೋಬಾರ್ಟ್, ಸನಾತನ ಅಕಾಡೆಮಿಯ ಸಂಸ್ಥಾಪಕರಾದ ಡಾ.ಅನೂಷ್ ನಾಗರಾಜ್ ಶಾಸ್ತ್ರಿ , ಸಿರಿಗನ್ನಡ ಕೂಟ ಮ್ಯೂನಿಕ್ ಇದರ ಅಧ್ಯಕ್ಷರಾದ ಶ್ರೀಧರ್ ಲಕ್ಷ್ಮಾಪುರ್, ಹಾಗೂ ರೈನ್ ಮೈನ್ ಕನ್ನಡ ಸಂಘ ಜರ್ಮನಿ ಇದರ ಅಧ್ಯಕ್ಷರಾದ ವೇದಮೂರ್ತಿ ಕುಮಾರ್ ಅವರು ಈ ಜರ್ಮನಿ ಘಟಕದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಮಕ್ಕಳ ತಂಡದಿಂದ ಮಾಯಾಮೃಗ ಎಂಬ ಕಥಾ ಪ್ರಸಂಗದ ಪ್ರದರ್ಶನ ಕೂಡಾ ಆಯೋಜಿಸಲಾಗಿದೆ. ಜೊತೆಗೆ ಯಕ್ಷಗಾನದ ಬಣ್ಣಗಾರಿಕೆ, ನೃತ್ಯ, ಹಿಮ್ಮೇಳದ ಬಗ್ಗೆ ಪ್ರಾತಿಕ್ಷಿಕೆ ಕೂಡಾ ನಡೆಸಲಾಗುವುದು.

    Continue Reading

    LATEST NEWS

    Trending