Connect with us

    LATEST NEWS

    ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಶುದ್ಧೀಕರಣದ ಯಾಗ

    Published

    on

    ಅಮರಾವತಿ: ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಹಿನ್ನೆಲೆಯಲ್ಲಿ ತಿರುಪತಿ ದೇವಾಲಯ ಶುದ್ಧೀಕರಣ ಕಾರ್ಯ ನಡೆಯಿತು. ತಿರುಮಲದ ದೇವಾಲಯದ ಸುತ್ತ ಅರ್ಚಕರು ಸಂಪ್ರೋಕ್ಷಣೆ ಮಾಡಿ ಹಾಲು, ತುಪ್ಪ, ಮೊಸರು, ಗಂಜಲ, ಸಗಣಿ ಬಳಸಿ ದೇವಾಲಯ ಶುದ್ಧೀಕರಣ ಮಾಡಿದರು.

    ಇಂದಿನಿಂದ ತಿರುಪತಿ ತಿಮ್ಮಪ್ಪನ ದೇವಾಲಯದ ಶುದ್ಧೀಕರಣದ ಯಾಗ ನಡೆಯುತ್ತಿದೆ. ಶುದ್ದೀಕರಣ ಸಂದರ್ಭದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಪವಿತ್ರೋತ್ಸವ ಮುಗಿದ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

    ಬೆಳಗ್ಗೆ 6 ಗಂಟೆಯಿಂದ ದೇವಾಲಯ ಪವಿತ್ರೋತ್ಸವ, ಮಹಾಶಾಂತಿ ಯಾಗ ಆರಂಭವಾಯಿತು. ವಿವಿಧ ಪಂಡಿತರು, ವೇದಶಾಸ್ತ್ರ ವಿದ್ವಾಂಸರು ಶುದ್ಧೀಕರಣದಲ್ಲಿ ಭಾಗಿಯಾಗಿದ್ದರು. ತಿರುಪತಿ ತಿರುಮಲದ ಪ್ರಧಾನ ಅರ್ಚಕರು, ಆಗಮ ಪಂಡಿತರಿಂದ ಪವಿತ್ರೋತ್ಸವ ನೆರವೇರಿತು. ಭಕ್ತರ ಮನಸ್ಸಿನಲ್ಲಿರುವ ಅಪವಿತ್ರತೆ ಹೋಗಲಾಡಿಸಲು ಟಿಟಿಡಿಯಿಂದ ಯಾಗ ನಡೆಯಿತು.

    Click to comment

    Leave a Reply

    Your email address will not be published. Required fields are marked *

    LATEST NEWS

    WATCH : ಎಸಿ ಕೋಚ್ನಲ್ಲಿ ಟಿಕೇಟ್ ಇಲ್ಲದೆ ಪ್ರಯಾಣಿಸಿದ ಹಾವು; ವೀಡಿಯೋ ವೈರಲ್

    Published

    on

    ಮಂಗಳೂರು/ಜಬಲ್ಪುರ : ಸಾಮಾನ್ಯವಾಗಿ ನಾವೆಲ್ಲ ರೈಲಿನಲ್ಲಿ ಪ್ರಯಾಣಿಸುವಾಗ ಟಿಕೇಟ್ ಪಡೆಯುತ್ತೇವೆ. ಇಲ್ಲದಿದ್ದರೆ ದಂಡ ತೆರಬೇಕಾಗುತ್ತೆ ಅಲ್ವಾ? ಆದರೆ, ಇಲ್ಲೊಬ್ರು ಟಿಕೇಟ್ ಇಲ್ಲದೆ ಪ್ರಯಾಣಿಸಿದ್ದಾರೆ. ಹೌದು, ಜಬಲ್ಪುರ-ಮುಂಬೈ ಗರೀಬ್ ರಥ್ ಎಕ್ಸ್ಪ್ರೆಸ್ ರೈಲಿನ ಹವಾನಿಯಂತ್ರಿತ ಬೋಗಿಯೊಂದರಲ್ಲಿ ಭಾನುವಾರ(ಸೆ.22) ಟಿಕೇಟ್ ಇಲ್ಲದೆ ಪ್ರಯಾಣಿಸಿದ್ದು ಬೇರ್ಯಾರು ಅಲ್ಲ, ಅದೊಂದು ಹಾವು. ಸದ್ಯ ಈ ಹಾವಿನ ವೀಡಿಯೋ ವೈರಲ್ ಆಗಿದೆ.


    ವೀಡಿಯೋ ವೈರಲ್ :
    ಹಾವು ರೈಲಿನಲ್ಲಿ ಪ್ರಯಾಣಿಸಿದ ವೀಡಿಯೋ ವೈರಲ್ ಆಗಿದೆ. ರೈಲು ಜಬಲ್ಪುರದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಜಿ 3 ಬೋಗಿಯ ಮೇಲಿನ ಬಂಕ್ ನಲ್ಲಿ ಹಾವು ಪತ್ತೆಯಾಗಿದೆ.
    ವೀಡಿಯೋದಲ್ಲಿ, ಹಾವು ರೈಲಿನ ಉನ್ನತ ಬೋಗಿಯ ಹ್ಯಾಂಡಲ್ ನ ತಿರುಗುತ್ತಿರುವುದು ಕಂಡುಬಂದಿದೆ. ಪ್ರಯಾಣಿಕರು ಹಾವನ್ನು ಕಂಡು ಭಯಭೀತರಾಗಿದ್ದಾರೆ. ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
    ಪ್ರಯಾಣಿಕರನ್ನು ಮತ್ತೊಂದು ಬೋಗಿಗೆ ವರ್ಗಾಯಿಸಲಾಯಿತು. ನಂತರ, ಬೋಗಿಗಳನ್ನು ಬೇರ್ಪಡಿಸಲಾಯಿತು. ಅಲ್ಲದೇ, ರೈಲನ್ನು ಜಬಲ್ಪುರಕ್ಕೆ ಹಿಂದಿರುಗಿಸಲಾಯಿತು ಎಂದು ತಿಳಿದು ಬಂದಿದೆ.

     

    ಇದನ್ನೂ ನೋಡಿ:

    Continue Reading

    DAKSHINA KANNADA

    ಮಂಗಳೂರು: ಮುಚ್ಚುವ ಶಾಲೆಯನ್ನು ಉಳಿಸಿದ ಮುಖ್ಯಶಿಕ್ಷಕಿ; ಸ್ಲಂ ಮಕ್ಕಳ ಮನೆಮನೆಗೆ ತೆರಳಿ ಶಾಲೆಗೆ ಸೇರಿಸಿ ಕ್ರಾಂತಿ

    Published

    on

    ಮಂಗಳೂರು : ರಾಜ್ಯದಲ್ಲಿ ದಕ್ಷಿಣ ಕನ್ನಡ ಶೈಕ್ಷಣಿಕ ಕ್ರಾಂತಿ ಮಾಡಿದ ಜಿಲ್ಲೆಯೆಂದೇ ಹೆಸರುವಾಸಿ. ಈ ಕ್ರಾಂತಿಯ ಹಿಂದೆ ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ, ಶಿಕ್ಷಕ – ಶಿಕ್ಷಕಿಯರ ಪರಿಶ್ರಮವೂ ಅಷ್ಟೇ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇಲ್ಲೊಬ್ಬ ಶಿಕ್ಷಕಿ ಮಕ್ಕಳ ಪಾಲಿಗೆ ವರವಾಗಿದ್ದಾರೆ.

    ಹೌದು, ಬೋಳಾರದ ದ.ಕ.ಜಿ.ಪಂ.ಹಿ.ಪ್ರಾ‌.ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಗೀತಾ ಜುಡಿತ್ ಸಲ್ಢಾನಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಪಣತೊಟ್ಟಿದ್ದಾರೆ. ಕ್ಲಸ್ಟರ್ ಸಿ.ಆರ್.ಪಿ. ಆಗಿದ್ದ ಗೀತಾ ಜುಡಿತ್ ಸಲ್ದಾನಾ ಕೌನ್ಸೆಲಿಂಗ್‌ ಸಂದರ್ಭ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನ ಆಗಸ್ಟ್ 31ರ ವರೆಗೆ ದಾಖಲಾಗಿದ್ದ ಮಕ್ಕಳ ಸಂಖ್ಯೆ ಕೇವಲ 9. ಹಾಜರಾಗುತ್ತಿದ್ದವರು ಐದು ಅಥವಾ ಆರು ಮಂದಿ ಮಾತ್ರ. ಒಂದರ್ಥದಲ್ಲಿ ಶಾಲೆಯನ್ನು ಮುಚ್ಚುವ ಸ್ಥಿತಿಯೇ ಎದುರಾಗಿತ್ತು. ಸೆ.1 ರಂದು ಪ್ರಭಾರ ಮುಖ್ಯಶಿಕ್ಷಕಿಯಾಗಿ ಇವರು ಶಾಲೆಗೆ ಬಂದಾಗ ಇಲ್ಲಿದ್ದ ಮಕ್ಕಳ ಸಂಖ್ಯೆ ನೋಡಿ ದಂಗಾದರು.

    ತಕ್ಷಣ ಕಾರ್ಯಪ್ರವೃತ್ತರಾದ ಗೀತಾ ಜುಡಿತ್ ಸಲ್ದಾನಾ ಪರಿಸರದ ಸ್ಲಂ ಪ್ರದೇಶಗಳಲ್ಲಿ ಸರ್ವೇಗೆ ಇಳಿದರು. ಬಿಹಾರದ ವಲಸೆ ಕಾರ್ಮಿಕರು ಬೋಳಾರ ಪರಿಸರದಲ್ಲಿ ಮೀನು ಕಾರ್ಖಾನೆಯಲ್ಲಿ ಮೀನು ಕಟ್ಟಿಂಗ್ ಕೆಲಸ ಮಾಡುತ್ತಿದ್ದರು. ಇವರ ಮಕ್ಕಳು ಶಾಲೆಗೆ ಹೋಗದೆ ಅಲ್ಲಿಯೇ ಇರುತ್ತಿದ್ದರು. ಆದ್ದರಿಂದ ವಲಸೆ ಕಾರ್ಮಿಕರ ಮನವೊಲಿಸಿ ಅವರ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನ ಮಾಡಿದ್ದರು. ಪರಿಣಾಮ ಒಂದೇ ತಿಂಗಳಲ್ಲಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ 52ಕ್ಕೆ ಏರಿದೆ.

    ಇದನ್ನೂ ಓದಿ : ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಯುವಕನ ಮೇಲೆರಗಿ ಬಾಲಕಿಯ ರಕ್ಷಿಸಿದ ಕೋತಿಗಳು!

    ಸದ್ಯ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಗೀತಾ ಜುಡಿತ್ ಸೇರಿ ಇಬ್ಬರು ಶಿಕ್ಷಕಿಯರಿದ್ದಾರೆ.‌ ಅಕ್ಷರದಾಸೋಹದಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿದೆ. ಸದ್ಯ ದಾನಿಗಳ ಸಹಕಾರದಿಂದ ಸ್ಲೇಟ್, ಕಡ್ಡಿಗಳು ಮಾತ್ರ ಲಭ್ಯವಾಗಿದೆ. ಆದರೆ ಶಾಲೆಯಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು, ವಿದ್ಯಾರ್ಥಿಗಳಿಗೆ ಯೂನಿಫಾರಂ ಇಲ್ಲ. ತೊಡಲು ಬಟ್ಟೆಯಿಲ್ಲ. ಪುಸ್ತಕ, ಬ್ಯಾಗ್, ಚಪ್ಪಲಿಗಳಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ಈ ಶಾಲೆಯನ್ನು ಉಳಿಸಲು ದಾನಿಗಳ ಸಹಕಾರ ಅಗತ್ಯವಿದೆ. ದಾನಿಗಳು ಗೀತಾ ಜುಡಿತ್ ಸಲ್ದಾನಾ(9845901136) ರನ್ನು ಸಂಪರ್ಕಿಸಬಹುದು.

    Continue Reading

    LATEST NEWS

    ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಯುವಕನ ಮೇಲೆರಗಿ ಬಾಲಕಿಯ ರಕ್ಷಿಸಿದ ಕೋತಿಗಳು!

    Published

    on

    ಮಂಗಳೂರು/ಉತ್ತರಪ್ರದೇಶ : ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿವೆ. ಈ ಸಂದರ್ಭ ಹೆಣ್ಣು ತನ್ನ ರಕ್ಷಣೆಗೆ ಯಾರಾದರೂ ಬರಲಿ ಎಂದು ನಿರೀಕ್ಷಿಸುವುದು ಸಾಮಾನ್ಯ. ಇಲ್ಲಿ ಆಗಿದ್ದೂ ಅದೇ. ಬಾಲಕಿಯ ಮೇಲಾಗುತ್ತಿದ್ದ ಅತ್ಯಾಚಾರವನ್ನು ಕೋತಿಗಳು ತಪ್ಪಿಸಿರುವ ಬಗ್ಗೆ ವರದಿಯಾಗಿದೆ.
    ಈ ಘಟನೆ ನಡೆದಿರೋದು ಉತ್ತರಪ್ರದೇಶದ ಬಾಗ್ಪತ್ ನಲ್ಲಿ. 6 ವರ್ಷದ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಯತ್ನಿಸುವಾಗ ಕೋತಿಗಳು ಸಹಾಯ ಮಾಡಿವೆ.


    ಯುವಕನೊಬ್ಬ ಅತ್ಯಾಚಾರ ನಡೆಸಲು ಪ್ರಯತ್ನ ಪಡುತ್ತಿದ್ದು, ಕೋತಿಗಳ ಗುಂಪೊಂದು ಆ ವ್ಯಕ್ತಿಯ ಮೇಲೆ ದಾಳಿ ಮಾಡುವ ಮೂಲಕ ಅತ್ಯಾಚಾರ ನಡೆಯುವುದನ್ನು ತಪ್ಪಿಸಿದೆ. ಕೂಡಲೇ ಬಾಲಕಿ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿ ವಿಷಯ ತಿಳಿಸಿದ್ದಾಳೆ. ದೇವರಂತೆ ಬಂದು ಕೋತಿಗಳು ನನ್ನ ಪ್ರಾಣ ಉಳಿಸಿರುವುದಾಗಿ ಆಕೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.
    ಈ ಘಟನೆ ಸೆ.20 ರಂದು ನಡೆದಿದ್ದು. ಪರಾರಿಯಾಗಿದ್ದ ಆರೋಪಿ ವಿರುದ್ದ ಪೋಕ್ಸೋ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ,ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    Continue Reading

    LATEST NEWS

    Trending