LATEST NEWS
Watch Video: ಮದುವೆಯಲ್ಲಿ ಹಣದ ಮಳೆ ! ಎಲ್ಲಾ 500, 200, 100 ರೂ. ನೋಟುಗಳು
Published
21 hours agoon
By
NEWS DESK2ಉತ್ತರಪ್ರದೇಶ: ಮದುವೆ ವೇಳೆ ಕುಟುಂಬಸ್ಥರು ಕಟ್ಟಡದ ಮೇಲೆ ನಿಂತು 500, 200, 100 ರೂಪಾಯಿ ನೋಟುಗಳನ್ನು ಜನರ ಮೇಲೆ ಸುರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಸಿದ್ಧಾರ್ಥನಗರದಲ್ಲಿ ನಡೆದ ಮದುವೆ ಮೆರವಣಿಗೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಸಿದ್ಧಾರ್ಥನಗರದ ದೇವಳವ ಗ್ರಾಮದಲ್ಲಿ ನಡೆದ ಮದುವೆಯ ಸಂದರ್ಭದಲ್ಲಿ ತೆಗೆದ ವಿಡಿಯೋ ಇದು. ಪ್ರಸ್ತುತ, ಈ ವೀಡಿಯೊ ಚರ್ಚೆಯ ವಿಷಯವಾಗಿದೆ. ಮದುವೆಯ ಮೆರವಣಿಗೆಯಲ್ಲಿ ಮನೆಯವರ ನೂಕು ನುಗ್ಗಲು ಇದಕ್ಕೆ ಕಾರಣವಾಗಿದ್ದು, ಸುಮಾರು ಇಪ್ಪತ್ತು ಲಕ್ಷ ರೂಪಾಯಿ ನೋಟುಗಳನ್ನು ಗಾಳಿಯಲ್ಲಿ ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಮದುವೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಮನೆಯ ಮೇಲ್ಛಾವಣಿ ಹಾಗೂ ಜೆಸಿಬಿಗಳ ಮೇಲೆ ಹತ್ತಿ ನೋಟುಗಳ ಕಟ್ಟುಗಳನ್ನು ಗಾಳಿಯಲ್ಲಿ ಎಸೆದರು. ಇದನ್ನೆಲ್ಲ ಕೆಲವರು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು ಇದೀಗ ವೈರಲ್ ಆಗಿದೆ.
ವೀಡಿಯೊದಲ್ಲಿ, ಹಲವಾರು ಜನರು ಗಾಳಿಯಲ್ಲಿ ನೋಟುಗಳನ್ನು ಎಸೆಯುತ್ತಿರುವುದನ್ನು ಕಾಣಬಹುದು. 100, 200, 500 ರೂಪಾಯಿ ನೋಟುಗಳನ್ನು ಗಾಳಿಯಲ್ಲಿ ಎಸೆಯಲಾಗಿದೆ ಎಂದು ವರದಿಯಾಗಿದೆ. ಕಟ್ಟಡದ ಮೇಲ್ಛಾವಣಿಯಲ್ಲಿ ನಿಂತು ಕರೆನ್ಸಿ ನೋಟುಗಳ ಸುರಿಮಳೆಗೈದಿದ್ದಾರೆ.. ಈ ನೋಟುಗಳನ್ನು ಸಂಗ್ರಹಿಸಲು ಹಲವರು ಮುಗಿ ಬೀಳುತ್ತಾರೆ. ಬಡವರಿಗೆ ನೆರವಾಗಬಹುದಾಗಿತ್ತು, ಈ ಹಣವನ್ನು ಯಾವುದೇ ಸ್ವಯಂಸೇವಾ ಸಂಸ್ಥೆಗೂ ನೀಡಬಹುದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕೊನೆಗೆ ಈ ವಿಡಿಯೋ ಪೊಲೀಸರಿಗೆ ತಲುಪಿದ್ದು, ಸಿದ್ಧಾರ್ಥನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ತನಿಖೆ ಕೈಗೊಂಡಿದ್ದಾರೆ. ಯಾಕೆ ಹೀಗೆ ಮದುವೆ ಮನೆಯಲ್ಲಿ ಹಣವನ್ನು ಹೀಗೆ ಮೇಲಿನಿಂದ ಎಸೆದಿದ್ದಾರೆ ಎನ್ನುವ ಕುರಿತಾಗಿ ಮಾಹಿತಿ ಇಲ್ಲ.
Watch Video:
LATEST NEWS
ಮುಖ್ಯಮಂತ್ರಿಯೊಡನೆ ಲವ್; ಮದುವೆಯಾಗದೆ ತಾಯಿಯಾದ ಆ ನಟಿ ಯಾರು ಗೊತ್ತಾ ?
Published
9 minutes agoon
21/11/2024ಜಯಲಲಿತಾ. ಪ್ರಸ್ತುತ ಯುವ ಜನಾಂಗಕ್ಕೆ ಹೆಸರು ಹೆಚ್ಚು ತಿಳಿದಿಲ್ಲ ಆದರೆ, ಜಯಲಲಿತಾ ನಾಲ್ಕೈದು ದಶಕಗಳ ಹಿಂದೆ ಪೂರ್ತಿ ಸಂಚಲನ ಮೂಡಿಸಿದ್ದ ನಟಿ. ಸ್ಟಾರ್ ಹೀರೋಗಳು ಈಕೆಯೊಂದಿಗೆ ಸಿನಿಮಾಗಳನ್ನು ಮಾಡಲು ಬಕ ಪಕ್ಷಿಗಳಂತೆ ಕಾಯುತ್ತಿದ್ದರು. ಒಂದು ಕಾಲದಲ್ಲಿ ಇಡೀ ಇಂಡಸ್ಟ್ರೀಯನ್ನೇ ಆಳಿದ್ದು ಜಯಲಲಿತಾ ಎಂದರೂ ತಪ್ಪಾಗಲಾರದು.
ಜಯಲಲಿತಾ ಸಿನಿಮಾ ಬಂತೆಂದರೆ ಜನ ಗಾಡಿ ಕಟ್ಟಿಕೊಂಡು ನೋಡಲು ಹೋಗುತ್ತಿದ್ದರು. 1965 ರಲ್ಲಿ ‘ಮನುಷ್ಯಲು ಮಮತಾಲು’ ಚಿತ್ರದ ಮೂಲಕ ಜಯಲಲಿತಾ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ನಾಯಕ ಮತ್ತು ಸಾವಿತ್ರಿ ಮುಖ್ಯ ನಾಯಕಿ. ಜಯಲಲಿತಾ ಎರಡನೇ ನಾಯಕಿಯಾಗಿ ಇಂದಿರಾ ಪಾತ್ರವನ್ನು ನಿರ್ವಹಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಇನ್ನಿಲ್ಲದ ಜನಪ್ರಿಯತೆ ಗಳಿಸಿದ ನಟಿ ನಂತರ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ನಟಿಸಿದರು.
ಸಿನಿಮಾದಲ್ಲಿ ಮಾತ್ರವಲ್ಲ, ರಾಜಕೀಯದಲ್ಲೂ ಮಿಂಚಿದ್ದ ಜಯಲಲಿತಾ ಅವರ ಹೆಸರು ನೆನಪಾದಾಗ ಎಲ್ಲರಿಗೂ ನೆನಪಾಗುವುದು ಎಂಜಿಆರ್. ಎಂಜಿಆರ್ ಜಯಲಲಿತಾ ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರು. ಜಯಲಲಿತಾ ರಾಜಕೀಯ ಪ್ರವೇಶಕ್ಕೆ ಎಂಜಿಆರ್ ಮುಖ್ಯ ಕಾರಣ. ಅವರ ಕರೆಯ ಮೇರೆಗೆ ಜಯಲಲಿತಾ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾದರು.
ಬಳಿಕ ಈ ಮೊದಲೇ ಮದುವೆಯಾಗಿದ್ದ ಎಂಜಿಆರ್ ಮೇಲಿನ ಪ್ರೀತಿಯನ್ನು ಜಯಲಲಿತಾ ಬಹಿರಂಗಪಡಿಸಿದರು. ಆದರೆ, ಎಂಜಿಆರ್ ಜಯಲಲಿತಾ ಅವರಿಗೆ ಪತ್ನಿ ಸ್ಥಾನಮಾನ ನೀಡಲಿಲ್ಲ. ಆ ನಂತರ ಜಯಲಲಿತಾ ಅವರು ತಮ್ಮ ಕುಟುಂಬದ ಸ್ನೇಹಿತನ ಮಗ ಅರುಣ್ ಕುಮಾರ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಜಯಲಲಿತಾ ಮದುವೆಯಾಗಿರಲಿಲ್ಲ.
ಜಯಲಲಿತಾ ತಮ್ಮ ಸೋದರಳಿಯ ಸುಧಾಕರನ್ ಅವರನ್ನು ದತ್ತು ತೆಗೆದುಕೊಂಡು ಅವರ ಸಾಕು ತಾಯಿಯಾದರು. ನಟಿಗೆ 5000 ಕೋಟಿಗೂ ಹೆಚ್ಚು ಇದೆ ಎನ್ನಲಾಗಿದೆ. ಅಧಿಕಾರಿಗಳು ನಡೆಸಿದ ಶೋಧದಲ್ಲಿ ಜಯಲಲಿತಾ ಅವರ ಬಳಿ 10,500 ದುಬಾರಿ ಸೀರೆಗಳು, 750 ಜೋಡಿ ಚಪ್ಪಲಿಗಳು, 800 ಕೆಜಿ ಬೆಳ್ಳಿ ಮತ್ತು 28 ಕೆಜಿ ಚಿನ್ನವಿದೆ ಎಂದು ಹೇಳಲಾಗಿದೆ. 2016ರಲ್ಲಿ ಮತ್ತೊಮ್ಮೆ ಅವರ ಆಸ್ತಿಯನ್ನು ತನಿಖೆಗೆ ಒಳಪಡಿಸಿದಾಗ 1250 ಕೆಜಿ ಬೆಳ್ಳಿ ಹಾಗೂ 21 ಕೆಜಿ ಚಿನ್ನ ಪತ್ತೆಯಾಗಿತ್ತು.
LATEST NEWS
ಮದುವೆ ವಿರೋಧ ; ಶಾಲಾ ಆವರಣದಲ್ಲೇ ಶಿಕ್ಷಕಿಯ ಬ*ರ್ಬರ ಹ*ತ್ಯೆ
Published
40 minutes agoon
21/11/2024ಮಂಗಳೂರು/ತಮಿಳುನಾಡು: ಮದುವೆ ಪ್ರಸ್ತಾಪ ನಿರಾಕರಿಸಿದ ಶಿಕ್ಷಕಿಯನ್ನು ಪ್ರಿಯಕರ ಶಾಲೆಗೆ ನುಗ್ಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲೇ ಚಾ*ಕುವಿನಿಂದ ಇ*ರಿದು ಕೊ*ಲೆಗೈದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಣಂ ಸರ್ಕಾರಿ ಸೆಕೆಂಡರಿ ಶಾಲೆಯಲ್ಲಿ ನಿನ್ನೆ (ನ.20) ಈ ಘಟನೆ ನಡೆದಿದ್ದು, 26 ವರ್ಷದ ಶಿಕ್ಷಕಿ ರಮಣಿ ಹ*ತ್ಯೆಯಾಗಿದ್ದಾರೆ.
ಕೊ*ಲೆಗೈದ ಮದನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರಮಣಿ ಮತ್ತು ಮದನ್ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೆ ರಮಣಿ ಮನೆಯಲ್ಲಿ ನಿರಾಕರಿಸಿದ್ದಾರೆ. ಇದರಿಂದ ಎರಡೂ ಕುಟುಂಬಗಳ ನಡುವೆ ಅಸಮಾಧಾನ ಉಂಟಾಗಿದ್ದು, ರಮಣಿ ಮನೆಯವರ ವಿರೋಧ ಕಟ್ಟಿಕೊಳ್ಳಲು ಬಯಸದೇ ನೇರವಾಗಿ ನಿರಾಕರಿಸಿದ್ದಾರೆ.
ಮದನ್ ಏಕಾಏಕಿ ಶಾಲೆಯ ಶಿಕ್ಷಕರ ಸ್ಟಾಫ್ ಕೊಠಡಿಯ ಹೊರಗೆ ರಮಣಿ ಅವರಿಗೆ ಮನ ಬಂದಂತೆ ಚಾ*ಕುವಿನಿಂದ ಇರಿದಿದ್ದಾನೆ. ಕೂಡಲೇ ಶಿಕ್ಷಕಿಯನ್ನು ರಕ್ಷಿಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಯತ್ನಿಸಿದ್ದು, ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ತೀ*ವ್ರ ರ*ಕ್ತಸ್ರಾವದಿಂದ ಆಕೆ ದಾರಿ ಮಧ್ಯದಲ್ಲೇ ಮೃ*ತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ಮದನ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
LATEST NEWS
ವಿಟ್ಲ: ಮನೆಯಲ್ಲಿ ಒಂಟಿಯಾಗಿದ್ದ ವ್ಯಕ್ತಿ ಮೃ*ತಪಟ್ಟ ಸ್ಥಿತಿಯಲ್ಲಿ ಪತ್ತೆ
Published
49 minutes agoon
21/11/2024By
NEWS DESK2ವಿಟ್ಲ: ಮನೆಯಲ್ಲಿ ಒಂಟಿಯಾಗಿದ್ದ ವ್ಯಕ್ತಿಯೊಬ್ಬರು ಮೃ*ತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವಿಟ್ಲದ ಕನ್ಯಾನದ ಪಂಜಿಗದ್ದೆ ದೇಲಂತಬೆಟ್ಟು ಎಂಬಲ್ಲಿ ನಡೆದಿದೆ.
ಮೌರಿಸ್ ಡಿಸೋಜ(61) ಮೃ*ತಪಟ್ಟವರು.
ಮೌರಿಸ್ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಇಂದು ಬೆಳಗ್ಗೆ ಕೆಲಸದವರು ಗಮನಿಸಿದಾಗ ಮೌರಿಸ್ ಮೃ*ತಪಟ್ಟಿರುವುದು ಬೆಳಕಿಗೆ ಬಂದಿದೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೌರಿಸ್ ಡಿಸೋಜ ಎರಡು ದಿನಗಳ ಹಿಂದೆಯೇ ಮೃ*ತಪಟ್ಟಿದ್ದು, ಒಂಟಿಯಾಗಿದ್ದರಿಂದ ಯಾರಿಗೂ ಇದು ತಿಳಿದುಬಂದಿಲ್ಲ.
LATEST NEWS
ಕಡಬ: ಕಾಲೇಜಿಗೆ ಬೈಕ್ ತಂದಿದ್ದಕ್ಕೆ, ವಿದ್ಯಾರ್ಥಿಗಳಿಗೆ ರಕ್ತ ಹೆಪ್ಪುಗಟ್ಟುವ ಹಾಗೆ ಥಳಿಸಿದ ಉಪನ್ಯಾಸಕ!
ಉಳ್ಳಾಲ: ಯುವತಿಯ ಮಾ*ನಭಂಗ ಯತ್ನ..!
ಕೋಟ: ಹೆಜ್ಜೇನು ದಾಳಿಗೆ ಇಬ್ಬರ ಸ್ಥಿತಿ ಗಂಭೀರ
ಮಾಜಿ ಸಚಿವ ‘ಮನೋಹರ್ ತಹಶೀಲ್ದಾರ್’ ನಿ*ಧನ
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ
ಬಿಸಿ ನೀರಿದ್ದ ಬಕೆಟ್ ಗೆ ಬಿದ್ದು 5 ವರ್ಷದ ಮಗು ಸಾ*ವು!
Trending
- LATEST NEWS3 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS4 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS19 hours ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ
- LATEST NEWS20 hours ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!