Connect with us

    LATEST NEWS

    ಚಾಮರಾಜನಗರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ : ಮೂವರು ಸ್ಥಳದಲ್ಲೇ ಸಾವು..!

    Published

    on

    ಚಾಮರಾಜನಗರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ : ಮೂವರು ಸ್ಥಳದಲ್ಲೇ ಸಾವು..!

    ಚಾಮರಾಜನಗರ: ಚಾಮರಾಜನಗರ ತಾಲೂಕಿನ ಧನಗೆರೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ಮತ್ತು ಗೂಡ್ಸ್ ವಾಹನ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗಿನ ಜಾವಾ ನಡೆದಿದೆ.

    ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಡೇವಿಡ್‍ ಪೆರಿಯನಾಯಗಮ್, ಶೇಷಾ, ಸೇಟು ಎಂಬುವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. .
    ಸತ್ತೇಗಾಲ ಹಾಗೂ ಧನಗೆರೆ ಮುಖ್ಯರಸ್ತೆಯಲ್ಲಿ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬೈಕ್ ನಲ್ಲಿ ಮೂವರು ತೆರಳುತ್ತಿದ್ದರು. ಬೈಕ್ ಗೆ ಕೊಳ್ಳೇಗಾಲದಿಂದ ಸತ್ತೇಗಾಲದ ಕಡೆಗೆ ಹೋಗುತ್ತಿದ್ದ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ.

    ಬೊಲೆರೋ ಚಾಲಕ ಅಜಾಗರೂಕತೆಯಿಂದ ಬೈಕ್ ಸವಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
    ವಿಷಯ ತಿಳಿದು ಡಿವೈಎಸ್ ಪಿ ನಾಗರಾಜು, ಸರ್ಕಲ್ ಇನ್‍ಸ್ಪೆಕ್ಟರ್ ಶ್ರೀಕಾಂತ್, ಗ್ರಾಮಾಂತರ ಎಸ್‍ಐ ಅಶೋಕ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಶವಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶವಾಗಾರಕ್ಕೆ ಸಾಗಿಸಿದರು.

    ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    LATEST NEWS

    ಕಂಬಳ ಕ್ಷೇತ್ರಕ್ಕೆ ಮತ್ತೊಂದು ಅಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ

    Published

    on

    ಮಣಿಪಾಲ: ಕೆಲವು ದಿನಗಳ ಹಿಂದಷ್ಟೇ ಕಂಬಳ ಕ್ಷೇತ್ರದ ಉದಯೋನ್ಮುಖ ತಾರೆ ‘ಲಕ್ಕಿ’ಯ ಅಗಲುವಿಕೆಯಿಂದ ಬೇಸರಗೊಂಡಿದ್ದ ಕಂಬಳಾಭಿಮಾನಿಗಳಿಗೆ ಮತ್ತೊಂದು ಅಘಾ*ತ ಎದುರಾಗಿದೆ. ಉಭಯ ಜಿಲ್ಲೆಯ ಕೂಟಗಳಲ್ಲಿ ಹೆಸರು ಮಾಡಿದ್ದ ‘ನಾಗು’ ಎಂಬ ಕೋಣ ಹೃದಯಾಘಾ*ತದಿಂದ ಕೊನೆ*ಯುಸಿರೆಳೆದಿದೆ.

    ‘ನಾಗು’ ಕೋಣವು ಜಪ್ಪು ಮಂಕು ತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯಲ್ಲಿ ಹಲವು ಕಂಬಳಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.

    ಬೈಂದೂರಿನಿಂದ ಬಂಢಾರಮನೆ ಸೇರಿದ್ದ ನಾಗು, ಬಳಿಕ ಚಿತ್ಪಾಡಿ ಅಪ್ಪು ಶೆಟ್ಟಿ ಅವರ ಹಟ್ಟಿ ಸೇರಿದ್ದ. ಎರಡು ವರ್ಷಗಳ ಹಿಂದೆ ನಾಗು ಕೋಣವನ್ನು ಜಪ್ಪು ಮಂಕುತೋಟ ಅನಿಲ್ ಶೆಟ್ಟಿ ಅವರು ಖರೀದಿ ಮಾಡಿದ್ದರು.

    ಕೂಟಗಳಲ್ಲಿ ಸಕ್ರಿಯವಾಗಿದ್ದ ಎರಡು ಕೋಣಗಳನ್ನು ಎರಡು ವಾರಗಳ ಅಂತರದಲ್ಲಿ ಕಂಬಳ ಕ್ಷೇತ್ರ ಕಳೆದುಕೊಂಡಿದೆ.

    Continue Reading

    LATEST NEWS

    WATCH : UDUPI : ಮನೆಯಂಗಳದಲ್ಲಿ ಚಿರತೆ ಪ್ರತ್ಯಕ್ಷ; ರಾತ್ರಿ ಇಡೀ ಕಣ್ಮರೆಯಾಗಿದ್ದ ಸಾಕು ನಾಯಿ ಬದುಕುಳಿದಿದ್ದು ಹೇಗೆ?

    Published

    on

    ಉಡುಪಿ : ಮನೆಯೊಂದರ ಅಂಗಳದಲ್ಲಿ ಚಿರತೆಯೊಂದು ಕಾಣಿಸಿಕೊಂಡ ಘಟನೆ ಉಡುಪಿ ಪೆರಂಪಳ್ಳಿಯಲ್ಲಿ ಶುಕ್ರವಾರ(ಜು.27) ತಡರಾತ್ರಿ ನಡೆದಿದೆ. ಚಿರತೆ ಓಡಾಟದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯಂಗಳದಲ್ಲಿ ಮಲಗಿದ್ದ ನಾಯಿಯ ಬೇಟೆಗಾಗಿ ಚಿರತೆ ಬಂದಿದ್ದು, ನಾಯಿಯನ್ನು‌ ಅಟ್ಟಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.


    ನಾಯಿ ಬೊಗಳಿದರೂ ಮನೆಯವರು ಹೊರಬಂದಿಲ್ಲ. ಕೆಲವು ದಿನಗಳಿಂದ ಮಣಿಪಾಲ ಆಸುಪಾಸಿನಲ್ಲಿ ಚಿರತೆ ಓಡಾಟದ ಮಾಹಿತಿ ತಿಳಿದಿದ್ದ ಮನೆಯವರು ಸುಮ್ಮನಿದ್ದರು ಎನ್ನಲಾಗಿದೆ. ಸ್ವಲ್ಪ ಹೊತ್ತಿನಲ್ಲಿ ನಾಯಿಯ ಶಬ್ದ ಕೂಡ ಕೇಳಿರಲಿಲ್ಲ. ಬೆಳಿಗ್ಗೆ ಮನೆಯ ಸಿಸಿಟಿವಿ ದ್ರಶ್ಯಾವಳಿ ಗಮನಿಸಿದಾಗ ಚಿರತೆ ನಾಯಿಯ ಹಿಂದೆ ಹೋಗುತ್ತಿರುವ ದೃಶ್ಯ ಕಂಡು ಭಯಭೀತರಾಗಿದ್ದಾರೆ.

    ಇದನ್ನೂ ಓದಿ : ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವು
    ಆದರೆ ಅಚ್ಚರಿ ಎಂಬಂತೆ ರಾತ್ರಿ ಇಡೀ ಕಣ್ಮರೆಯಾಗಿದ್ದ ಸಾಕು ನಾಯಿ ಬೆಳಿಗ್ಗೆ ಪ್ರತ್ಯಕ್ಷವಾಗಿದೆ. ಚಿರತೆಯ ಬಾಯಿಯಿಂದ ತಪ್ಪಿಸಿಕೊಂಡು ಪ್ರಾ*ಣ ಉಳಿಸಿಕೊಂಡಿದೆ. ಈ ಘಟನೆ ಮಣಿಪಾಲ, ಪೆರಂಪಳ್ಳಿ ಭಾಗದಲ್ಲಿ ಆತಂಕ ಸೃಷ್ಟಿಸಿದೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು, ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

    Continue Reading

    DAKSHINA KANNADA

    ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವು

    Published

    on

    ತೆಲಂಗಾಣ: ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವನ್ನಪ್ಪಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಚಿಂತಕಣಿಲ್ಲಿ ಶುಕ್ರವಾರ ನಡೆದಿದೆ.

    ಅಂಜಲಿ ಕಾರ್ತಿಕಾ (9) ಮೃ*ತ ಬಾಲಕಿ. ಮೊಬೈಲ್​​​ನಲ್ಲಿ ಆಟವಾಡುತ್ತಿರುವ ವೇಳೆ ಚಾರ್ಜ್ ಖಾಲಿಯಾಗಿದ್ದು, ಅಂಜಲಿ ಮೊಬೈಲ್ ಚಾರ್ಜ್ ಮಾಡಲು ಹೋಗಿದ್ದಾಳೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿದ್ದು, ಬಾಲಕಿ ಕುಸಿದು ಬಿದ್ದಿದ್ದಾಳೆ.

    ಕುಸಿದು ಬಿದ್ದು ಒದ್ದಾಡುತ್ತಿರುವ ಬಾಲಕಿಯನ್ನು ಗಮನಿಸಿದ ಆಕೆಯ ಪೋಷಕರು ತಕ್ಷಣ ಗ್ರಾಮದ ಖಾಸಗಿ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ ಬಾಲಕಿ ಅದಾಗಲೇ ಮೃ*ತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

    ಬಾಲಕಿ ಆಟವಾಡುತ್ತಿದ್ದಂತೆ ಒದ್ದೆ ಕೈಯಲ್ಲಿ ಹೋಗಿ ವಿದ್ಯುತ್ ಸ್ಪರ್ಶಿಸಿರುವುದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಕೆಲ ಹೊತ್ತಿನ ಹಿಂದೆ ಮನೆಯಲ್ಲಿ ಕುಣಿದು ಕುಪ್ಪಳಿಸುತ್ತಾ ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಪ್ರಾ*ಣ ಕಳೆದುಕೊಂಡಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಮೃ*ತ ಬಾಲಕಿ ಅಂಜಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿ. ತಂದೆ ರಾಮಕೃಷ್ಣ ದೂರಿನ ಮೇರೆಗೆ ಎಸ್‌ಎಸ್‌ಐ ನಾಗುಲ್ಮೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    Trending