Connect with us

    LATEST NEWS

    ಅಪಹರಣವಾದ 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ನವಜಾತ ಶಿಶು

    Published

    on

    ಕಲಬುರಗಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನರ್ಸ್‌ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರು, ನವಜಾತ ಗಂಡು ಶಿಶುವನ್ನು ಅಪಹರಿಸಿದ 36 ಗಂಟೆಗಳಲ್ಲಿ ಮಗು ಮತ್ತೆ ತಾಯಿಯ ಮಡಿಲು ಸೇರಿದೆ. ಜೊತೆಗೆ ಮಗುವನ್ನು ಕಳ್ಳತನ ಮಾಡಿ 50,000ಕ್ಕೆ ಮಾರಾಟ ಮಾಡಿದ್ದ ಮೂವರು ಕಳ್ಳಿಯರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.

    ಕಲಬುರಗಿಯ ಎಂಎಸ್‌ಕೆಮಿಲ್ ಬಡಾವಣೆಯಲ್ಲಿ ಉಮೇರಾ, ನಸರೀನ್ ಹಾಗೂ ಫಾತಿಮಾ ಬಂಧಿತರು. ಬಂಧಿತರು ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಯ ಮಗುವನ್ನು ಅಪಹರಿಸಿದ್ದರು.

    ಮೂವರು ಕಳ್ಳಿಯರ ತಂಡ ನವಜಾತ ಶಿಶುವನ್ನು ಮಾರಾಟ ಮಾಡಲೆಂದು ಅಪಹರಿಸಿತ್ತು. ಬಳಿಕ ಮಗುವನ್ನು ಖೈರುನ್‌ ಎಂಬ ಮಹಿಳೆಗೆ 50 ಸಾವಿರ ರೂ.ಗೆ ಮಾರಾಟ ಕೂಡ ಮಾಡಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ಕೂಡಲೇ, ಮಗುವನ್ನು ರಕ್ಷಿಸಿ, ಕಳ್ಳಿಯರನ್ನ ಬಂಧಿಸಿದ್ದಾರೆ. ಇನ್ನು ಮಗು ಖರೀದಿಸಿದ ಆರೋಪಿ ಖೈರುನ್ ಪರಾರಿಯಾಗಿದ್ದಾಳೆ. ಆಕೆಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಬೆಚ್ಚಿ ಬೀಳಿಸಿದ ಯುವತಿ ಕೊ*ಲೆ ಪ್ರಕರಣ; ಪ್ರೇಯಸಿಯ ಶ*ವದೊಂದಿಗೆ ಒಂದು ದಿನ ಕಳೆದಿದ್ದ ಯುವಕ!

    Published

    on

    ಮಂಗಳೂರು/ಬೆಂಗಳೂರು : ರಾಜ್ಯವನ್ನೇ ಬೆಚ್ಚಿ ಬೀಳಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಸ್ಸಾಂ ಮೂಲದ ವ್ಲಾಗರೊಬ್ಬಳು  ಶ*ವವಾಗಿ ಪತ್ತೆಯಾಗಿದ್ದು, ಇದೀಗ ಕೃ*ತ್ಯ ನಡೆಸಿದ್ದು ಬೇರ್ಯಾರು ಅಲ್ಲ ಆಕೆಯ ಪ್ರಿಯತಮ ಎಂಬುದು ಬಹಿರಂಗವಾಗಿದೆ. ಮಾತ್ರವಲ್ಲ, ಆತ ಒಂದು ದಿನ ಪ್ರೇಯಸಿಯ ಶ* ವದ  ಜೊತೆ ಕಾಲ ಕಳೆದಿದ್ದ ಎಂಬ ಶಾಂ*ಕಿಂಗ್ ವಿಚಾರ ತನಿಖೆಯ ವೇಳೆ ಹೊರಬಿದ್ದಿದೆ.

    ಮಾಯಾ ಗೊಗೊಯ್ ಹ*ತ್ಯೆಗೀಡಾದ ವ್ಲಾಗರ್ ಆಗಿದ್ದು, ಆರವ್ ಹರ್ನಿ ಕೃ*ತ್ಯ ಎಸಗಿದ ಗೆಳೆಯ. ನವೆಂಬರ್ 23 ರಂದು ಆರವ್ ಹರ್ನಿ  ಹಾಗೂ ಮಾಯಾ ಗೊಗೊಯ್ ಇಂದಿರಾ ನಗರದ  ಸರ್ವೀಸ್ ಅಪಾರ್ಟ್ ಮೆಂಟ್ ಬುಕ್ ಮಾಡಿದ್ದರು. ಇಬ್ಬರೂ ಅಪಾರ್ಟ್ ಮೆಂಟ್ ನ ಲಾಬಿಗೆ ಪ್ರವೇಶಿಸಿರುವ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಲಭಿಸಿದೆ. ಅದರ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರ ಮುಂದೆ ಸತ್ಯ ಬಯಲಾಗಿದೆ.

    ಚಾಕು ಇರಿದು ಹ*ತ್ಯೆ :

    ಆರವ್ ಹರ್ನಿ ನವೆಂಬರ್ 25 ರಂದು ಮಾಯಾಳನ್ನು ಚಾಕುವಿನಿಂದ ಇರಿದು ಹ*ತ್ಯೆ ಮಾಡಿದ್ದಾನೆ. ಮಂಗಳವಾರ ಅಲ್ಲಿಂದ ಹೊರ ನಡೆದಿದ್ದಾನೆ. ಒಂದು ಇಡೀ ದಿನ ಆತನ ಗೆಳತಿಯ ಶ*ವದ ಜೊತೆ ಕಾಲ ಕಳೆದಿದ್ದಾನೆ. ಅಲ್ಲೇ ಸಿಗರೇಟ್ ಬೇರೆ ಸೇದಿದ್ದನಂತೆ. ಕೊ*ಲೆ ಬಳಿಕ ಆಕೆಯ ದೇಹವನ್ನು ಪೀಸ್ ಪೀಸ್ ಮಾಡುವ ಆಲೋಚನೆಯಲ್ಲಿ ಹಂ*ತಕನಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಆಮೇಲೆ ಅದೇನಾಯ್ತೋ ಗೊತ್ತಿಲ್ಲ, ಹೋಟೆಲ್ ನಲ್ಲಿಯೇ ಶ*ವ ಬಿಟ್ಟು ಆತ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ವರೆಗೂ ಹೋಗಿದ್ದಾನೆ. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ.  ಸದ್ಯ ಆರೋಪಿ ಕೇರಳಕ್ಕೆ ಪರಾರಿ ಆಗಿದ್ದಾನೆ ಎಂಬ ಅನುಮಾನ ಪೊಲೀಸರದ್ದು.

    ಪ್ರೀ ಪ್ಲಾನ್ಡ್ ಮರ್ಡರ್?
    ಹ*ತ್ಯೆಯಾಗಿರುವ ಮಾಯಾ ಅಕ್ಕ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಶುಕ್ರವಾರ ರಾತ್ರಿ ಕರೆ ಮಾಡಿದ್ದ ಮಾಯಾ,  ಆಫೀಸ್ ಪಾರ್ಟಿ ಇದೆ ಮನೆಗೆ ಬರಲ್ಲ ಎಂದಿದ್ದಳಂತೆ. ಶನಿವಾರವೂ ಹಾಗೇ ತಿಳಿಸಿದ್ದಳು. ಹಂ*ತಕ ಆರವ್ ಹಾಗೂ ಮಾಯಾ 6 ತಿಂಗಳಿಂದ ಪ್ರೀತಿಸುತ್ತಿದ್ದರು ಎಂಬುದು ಆಕೆಯ ಅಕ್ಕಳಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

    ಇದನ್ನೂ ಓದಿ : ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ

    ಹೋಟೆಲ್‌ಗೆ ಬರೋಕು ಮುನ್ನ ಆರವ್ ಚಾಕುವೊಂದನ್ನು ತಂದಿದ್ದ. ಹೋಟೆಲ್‌ಗೆ ಬಂದ ಬಳಿಕ ನೈಲಾನ್ ದಾರವನ್ನು ಆನ್‌ಲೈನ್ ಮೂಲಕ ಆರ್ಡರ್‌ ಮಾಡಿ ತರಿಸಿಕೊಂಡಿದ್ದ ಎಂದಬುದು ತಿಳಿದು ಬಂದಿದೆ. ಹಾಗಾಗಿ ಇದೊಂದು ಪ್ರೀ ಪ್ಲಾನ್ ಮಾಡಿ ಮಾಡಿರುವ ಹ*ತ್ಯೆ ಎಂಬುದು ಖಚಿತವಾಗಿದೆ, ಸದ್ಯ ತನಿಖೆ ಮುಂದುವರಿಸಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಆತ ಸಿಕ್ಕ ಮೇಲಷ್ಟೇ ಕೃ*ತ್ಯ ನಡೆಸಲು ಕಾರಣ ತಿಳಿದು ಬರಲಿದೆ.

    Continue Reading

    LATEST NEWS

    ಟ್ರಕ್‌ಗೆ ಸ್ಕಾರ್‌ಪಿಯೊ ಡಿ*ಕ್ಕಿ – ಭೀಕರ ಅಪಘಾ*ತಕ್ಕೆ ಐವರು ವೈದ್ಯರ ದುರ್ಮ*ರಣ

    Published

    on

    ಲಕ್ನೋ: ಸ್ಕಾರ್‌ಪಿಯೊ ಎಸ್‌ಯುವಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯರು ಸಾ*ವನ್ನಪ್ಪಿರುವ ಘಟನೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ ವೇನಲ್ಲಿ ನಡೆದಿದೆ.

    ಮೃ*ತಪಟ್ಟವರು ಉತ್ತರ ಪ್ರದೇಶದ ವೈದ್ಯಕೀಯ ವಿಜ್ಞಾನ ವಿವಿಯಲ್ಲಿ ಸ್ನಾತಕೋತರ ತರಬೇತಿ ಪಡೆದ ವೈದ್ಯರು. ದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಅಪಘಾ*ತ ಸಂಭವಿಸಿದೆ ಎಂದು ಹೇಳಲಾಗಿದೆ.

    ಮೃ*ತರನ್ನು ಆಗ್ರಾ ಮೂಲದ ಡಾ. ಅನಿರುದ್ಧ್ ವರ್ಮಾ (29), ಭದೋಹಿಯ ಡಾ. ಸಂತೋಷ್ ಕುಮಾರ್ ಮೌರ್ಯ (46), ಕನೌಜ್‌ನ ಡಾ. ಅರುಣ್ ಕುಮಾರ್ (34) ಮತ್ತು ಬರೇಲಿಯ ಡಾ. ನಾರ್ದೇವ್ (35) ನಾಲ್ವರು ವೈದ್ಯರಾಗಿದ್ದು ಹಾಗೂ ಇನ್ನೋರ್ವನ್ನು ಲ್ಯಾಬ್ ಟೆಕ್ನಿಷಿಯನ್ ಡಾ. ಜೈವೀರ್ ಸಿಂಗ್ (38) ಎಂದು ಗುರುತಿಸಲಾಗಿದೆ.

    ಪೊಲೀಸರ ಮಾಹಿತಿ ಪ್ರಕಾರ, ಅತಿವೇಗವಾಗಿ ಕಾರು ಚಾಲನೆ ಮಾಡುತ್ತಿದ್ದರಿಂದ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಕ್ಕದಲ್ಲಿದ್ದ ಟಕ್ ಗೂ ಡಿ*ಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.

    ಮೃ*ತಪಟ್ಟವರನ್ನು ಹೊರತುಪಡಿಸಿ ಇನ್ನೋರ್ವ ಗಂಭೀರ ಗಾಯಗೊಂಡಿದ್ದು, ಚಿಕಿತ್ಞೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    Continue Reading

    LATEST NEWS

    ಕುಸ್ತಿಪಟು ಬಜರಂಗ್ ಪೂನಿಯಾಗೆ 4 ವರ್ಷಗಳ ನಿಷೇಧ !

    Published

    on

    ಮಂಗಳೂರು/ನವದೆಹಲಿ : 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದ ಖ್ಯಾತ ಕುಸ್ತಿ ಪಟು ಬಜರಂಗ್ ಪೂನಿಯಾ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ.


    ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿಯು ತನ್ನ ನಿಯಮ 2.3 ಅನ್ನು ಉಲ್ಲಂಘಿಸಿದ ನಂತರ ಉದ್ದೀಪನ ಮದ್ದು ತಡೆ ಸಂಸ್ಥೆ ಪೂನಿಯಾ ಮೇಲೆ ನಿಷೇಧ ಹೇರಿದೆ. ಇವರು ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಅಮಾನತ್ತಿನಿಂದಾಗಿ ಬಜರಂಗ್ ಪೂನಿಯಾ ಸ್ಪರ್ಧಾತ್ಮಕ ಕುಸ್ತಿಯಲ್ಲಿ ಭಾಗವಹಿಸಲು ಅನುಮತಿ ಇರುವುದಿಲ್ಲ.

    ಇದನ್ನೂ ಓದಿ: ಸಾವಿರ ಕೋಟಿ ಆಸ್ತಿ ಒಡೆಯನ ಮಗ ಸನ್ಯಾಸತ್ವ ಸ್ವೀಕಾರ; ಕಾರಣ ಗೊತ್ತಾ ?
    ಮಾರ್ಚ್ 10ರಂದು, ಡೋಪಿಂಗ್ ವಿರೋಧಿ ಸಂಸ್ಥೆಗೆ  ಡೋಪಿಂಗ್ ಪರೀಕ್ಷೆ ಮಾದರಿಯನ್ನು ನೀಡಲು ಪುನಿಯಾ ನಿರಾಕರಿಸಿದ್ದಕ್ಕಾಗಿ ಪೂನಿಯಾ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಏಪ್ರಿಲ್ 23 ರಂದು ಅಮಾನತುಗೊಳಿಸಿದ ಬಳಿಕ ಪೂನಿಯಾ ಅವರ ಮೇಲೆ ಈ ನಿರ್ಧಾರ ಪ್ರಕಟವಾಗಿದೆ. ಇದನ್ನು ಸಂಯುಕ್ತ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಸಂಸ್ಥೆಯೂ ಅಂಗೀಕರಿಸಿತ್ತು.

    ಬಜರಂಗ್ ಪೂನಿಯಾ ತಮ್ಮ ಮೇಲೆ ಮಂಡಳಿ ಹೇರಿದ್ದ ಅಮಾನತ್ತಿನ ವಿರುದ್ದ ನಾಡಾಕ್ಕೆ ಅರ್ಜಿ ಸಲ್ಲಿಸಿದರು. ಈ ಬಗ್ಗೆ ಕಳೆದ ಸಪ್ಟೆಂಬರ್ 20 ಹಾಗೂ ಅಕ್ಟೋಬರ್ 4 ರಂದು ಅಂತಿಮ ವಿಚಾರಣೆ ನಡೆಸಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನವೆಂಬರ್ 26 ರಂದು ಬಜರಂಗ್‌ ಪೂನಿಯಾ ಅವರನ್ನು 4 ವರ್ಷ ಕುಸ್ತಿಯಿಂದ ಅಮಾನತು ಮಾಡಿ ಕ್ರಮ ಕೈಗೊಂಡಿದೆ.

    ಬಜರಂಗ್ ಪೂನಿಯಾ ಸಾಧನೆ :
    ಬಜರಂಗ್ ಪೂನಿಯಾ ಅವರು 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 1 ಬೆಳ್ಳಿ, 3 ಕಂಚು ಗೆದ್ದಿದ್ದಾರೆ. ಇನ್ನು ಏಷ್ಯನ್ ಗೇಮ್ಸ್ ನಲ್ಲಿ 1 ಬಂಗಾರ ಹಾಗೂ 1 ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪುನಿಯಾ 2 ಬಂಗಾರ, 1 ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ.

    Continue Reading

    LATEST NEWS

    Trending