BELTHANGADY
ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವುದನ್ನು ಸಹಿಸಲ್ಲ: ವಿಹೆಚ್‌ಪಿ ಎಚ್ಚರಿಕೆ
ಮಂಗಳೂರು: ಪುರಾಣ ಪ್ರಸಿದ್ಧ ಕ್ಷೇತ್ರವನ್ನು ಸೌಜನ್ಯ ಕೊಲೆ ಪ್ರಕರಣ ಹೋರಾಟದ ಹೆಸರಿನಲ್ಲಿ ಅವಹೇಳನ ಮಾಡುವುದು, ಅಗೌರವ ತೋರುವುದು, ಶ್ರೀ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡುತ್ತಿರುವುದನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ವಿರೋಧಿಸಿದೆ.
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಹಿಂದು ಪರಿಷತ್ ಪ್ರಾಂತ್ಯ ಕಾರ್ಯಾಧ್ಯಕ್ಷ ಎಂ ಬಿ ಪುರಾಣಿಕ್ ಅವರು, ಸೌಜನ್ಯಳಿಗೆ ನ್ಯಾಯ ಸಿಗಬೇಕೆನ್ನುವ ಆಗ್ರಹ ನಮ್ಮದು ಕೂಡಾ ಇದೆ. ಆದರೆ ಸೌಜನ್ಯ ಹೆಸರಿನಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಅವಮಾನ ಮಾಡಿದರೆ ಸಹಿಸುವುದಿಲ್ಲ,
ಸೌಜನ್ಯ ಕೊಲೆ ಪ್ರಕರಣ ಹೋರಾಟವನ್ನು ಮುಂದಿಟ್ಟುಕೊಂಡು ಕೆಲವು ಪ್ರಗತಿಪರ ಬುದ್ಧಿಜೀವಿಗಳ ಸಂಘಟನೆಗಳು ಕ್ಷೇತ್ರದ ಬಗ್ಗೆ, ಅಪಪ್ರಚಾರ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ರೀತಿಯ ಅಪಪ್ರಚಾರ, ಅವಮಾನ ಮಾಡಿದಲ್ಲಿ ಅಂತಹ ಸಂಘಟನೆಗಳಿಗೆ ವಿಶ್ವ ಹಿಂದೂ ಪರಿಷದ್ ನೇರ ಹೋರಾಟದ ಎಚ್ಚರಿಕೆಯನ್ನು ನೀಡುತ್ತದೆ ಎಂದರು.
ಅಲ್ಲದೆ ಸೌಜನ್ಯ ಕೊಲೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ಮುಖಾಂತರ ನ್ಯಾಯಾಂಗ ತನಿಖೆಗೆ ವಹಿಸಲು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ನಾವು ಆಗ್ರಹಿಸುತ್ತಿದ್ದೇವೆ. ಕ್ಷೇತ್ರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಬಹಳಷ್ಟು ಕೊಡುಗೆ ಸಂದಿದೆ. ಹೀಗಾಗಿ ಧರ್ಮಸ್ಥಳಕ್ಕೆ ಏನಾದರೂ ಅಪಚಾರ ಆದಾಗ ನಾವು ಹೋರಾಟಕ್ಕೆ ಇಳಿಯುತ್ತೇವೆ. ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ಯಾವುದೇ ಅಪಚಾರ, ಅನ್ಯಾಯವಾಗುವುದನ್ನು ವಿಶ್ವಹಿಂದು ಪರಿಷತ್ ಸಹಿಸುವುದಿಲ್ಲ.
ತುಳುನಾಡಿನಲ್ಲಿ ಅನ್ಯಾಯವಾದಾಗ ದೈವ ದೇವರು ಎಂದಿಗೂ ನಮ್ಮ ಕೈಬಿಡುವುದಿಲ್ಲ, ಯಾವುದೇ ಅನ್ಯಾಯವಾದಾಗ ದೈವ ದೇವರ ಮೊರೆ ಹೋಗುವುದು ನಮ್ಮ ಹಿರಿಯರಿಂದ ಬಂದ ವಾಡಿಕೆ ಹಾಗಾಗಿ ಕೊಲೆ ಪುಕರಣ ಆದಷ್ಟು ಬೇಗ ಇತ್ಯರ್ಥವಾಗಿ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಸ್ಥಾನ, ದೈವಸ್ಥಾನ ಹಾಗು ಮಠ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಿದ್ದೇವೆ ಎಂದರು.
ವಿಎಚ್‌ಪಿ ಮುಖಂಡರಾದ ಪುರುಷೋತ್ತಮ, ಭಾಸ್ಕರ್ ಧರ್ಮಸ್ಥಳ, ಶರಣ್ ಪಂಪ್ವೆಲ್ ಮೊದಲಾದವರಿದ್ದರು.
BELTHANGADY
ಬೆಳ್ತಂಗಡಿ: ಮನೆಗೆ ನುಗ್ಗಿ ಕಳ್ಳತನ; ಪ್ರಕರಣ ದಾಖಲು
ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಪಾಂಡೀಲು ಹೊಸಮನೆ ಎಂಬಲ್ಲಿ ಅ.27 ರಂದು ಸಂಜೆ 5 ಗಂಟೆಯಿಂದ ಅ.28 ರ ಮಧ್ಯಾಹ್ನ 12:15 ಗಂಟೆ ಮಧ್ಯ ಅವಧಿಯಲ್ಲಿ ಮನೆಯಿಂದ ಚಿನ್ನಭಾರಣ ಹಾಗೂ ನಗದು ಕಳವಾದ ಘಟನೆ ನಡೆದಿದೆ.
ಪಾಂಡೀಲು ಹೊಸ ಮನೆ ನಿವಾಸಿ ಸುಜಾತಾ (51)ಅವರು ಮನೆಗೆ ಬೀಗ ಹಾಕಿ ತನ್ನ ತವರು ಮನೆಯಾದ ಅಳಿಯೂರು ಎಂಬಲ್ಲಿಗೆ ಹೋದ ಸಮಯ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ ಕಳವು ಗೈದಿದ್ದಾರೆ.
ಮನೆಯ ಗೋದ್ರೇಜ್ ಕಪಾಟಿನಲ್ಲಿದ್ದ ನಗದು 25,000 ರೂ. ಹಾಗೂ 5 ಗ್ರಾಂ. ತೂಕದ ಬೆಂಡೋಲೆ ಒಂದು ಜತೆ ಹಾಗೂ 4 ಗ್ರಾಂ. ತೂಕದ ಚಿನ್ನದ ಉಂಗುರ ಒಂದನ್ನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತುಗಳ ನಗದು ಸೇರಿ ಒಟ್ಟು 80,000 ರೂ. ಅಂದಾಜು ಮೌಲ್ಯ ಎಂದು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
BELTHANGADY
ವೈನ್ ಶಾಪ್ ಕಳ್ಳತನ ಪ್ರಕರಣ; ಅಂತರ್ ರಾಜ್ಯ ಕಳ್ಳರ ಸೆರೆ
ಬೆಳ್ತಂಗಡಿ : ವೈನ್ಸ್ ಶಾಪ್ ಮತ್ತು ಮೊಬೈಲ್ ಶಾಪ್ ಕಳ್ಳತನ ಪ್ರಕರಣವನ್ನು ಬೆನ್ನತ್ತಿದ್ದ ಬೆಳ್ತಂಗಡಿ ಪೊಲೀಸರ ಬಲೆಯಲ್ಲಿ ಅಂತರ್ ರಾಜ್ಯ ಕಳ್ಳರು ಸೆರೆಯಾಗಿದ್ದಾರೆ.
ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ಮದ್ಯದ ಅಂಗಡಿ ಬೀಗ ಒಡೆದು ನುಗ್ಗಿದ ಕಳ್ಳರು ಹಣ ಹಾಗೂ ಮದ್ಯದ ಬಾಟಲಿ ಗಳನ್ನು ಕಳ್ಳತನ ಮಾಡಿದ ಘಟನೆ ಅ.13 ರಂದು ಭಾನುವಾರ ರಾತ್ರಿ ನಡೆದಿತ್ತು. ಅಂಗಡಿಯ ಬೀಗ ಒಡೆದು ಶಟರ್ ತೆಗೆದು ಒಳಗೆ ನುಗ್ಗಿದ ಕಳ್ಳರು ಒಳಗೆ ಇರಿಸಲಾಗಿದ್ದ ಸುಮಾರು ಒಂಬತ್ತು ಸಾವಿರ ನಗದು ಎರಡು ಬಿಯಾರ್ ಬಾಟಲ್‌ನ್ನು ಕಳ್ಳತನ ಮಾಡಲಾಗಿತ್ತು. ಜೊತೆಗೆ ಅದೇ ದಿನ ರಾತ್ರಿ ಉಜಿರೆಯ ಮೊಬೈಲ್ ಶಾಪ್ ನಲ್ಲಿ ಕೂಡ ಕಳ್ಳತನವಾಗಿ 600 ರೂಪಾಯಿಗಳನ್ನು ಕಳ್ಳರು ಎಗರಿಸಿದ್ದರು. ಈ ಕಳ್ಳತನ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಕರಣದ ಜಾಡು ಹಿಡಿದ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸೆಕ್ಟರ್ ಸುಬ್ಬಪುರ್ ಮರ್ ಮತ್ತು ಸಬ್ ಇನ್ಸೆಕ್ಟರ್ ಮುರುಳಿಧರ್ ನಾಯ್ ನೇತೃತ್ವದ ತಂಡ ಸಿಸಿಕ್ಯಾಮರಗಳ ಮೂಲಕ ಕಳ್ಳತನಕ್ಕೆ ಬಳಸಿದ ಬೈಕ್ ಪತ್ತೆ ಹಚ್ಚಿದ್ದು, ಈ ವೇಳೆ ಆರೋಪಿಗಳು ಕೊಪ್ಪಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿರುವುದು ಪತ್ತೆಯಾಗಿತ್ತು.
ಇದನ್ನು ಬೆನ್ನತ್ತಿದಾಗ ಪೊಲೀಸರಿಗೆ ಅಪ್ರಾಪ್ತ ಬಾಲಕ ಹಾಗೂ ಮತ್ತೊಬ್ಬನ ಸುಳಿವು ಸಿಕ್ಕಿತ್ತು. ಈ ಇಬ್ಬರೂ ಆರೋಪಿಗಳು ಉಡುಪಿ ಜಿಲ್ಲೆಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.16 ರಂದು ಮಧ್ಯರಾತ್ರಿ 2:45 ಕ್ಕೆ ಕೋಣಿ ಶಾಖೆಯ ಕರ್ನಾಟಕ ಬ್ಯಾಂಕ್ ಕಳ್ಳತನಕ್ಕೆ ಯತ್ನ ಮಾಡುತ್ತಿರುವಾಗ ಬ್ಯಾಂಕ್ ನ ಮಾನಿಟರಿಂಗ್ ಹೈದರಾಬಾದ್ ಸಂಸ್ಥೆ ನೋಡಿಕೊಳ್ಳುತ್ತಿದ್ದು ಅವರು ಲೈವ್ ಮೂಲಕ ಸಿಸಿಕ್ಯಾಮರದ ಮೂಲಕ ಕಳ್ಳತನ ಯತ್ನ ನೋಡುತ್ತಿದ್ದು ಈ ವೇಳೆ ಬ್ಯಾಂಕ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿ ಅಂತರ್ ರಾಜ್ಯ ಕಳ್ಳರಾದ ಆರೋಪಿಗಳಾದ ಕೊಪ್ಪಳ ಜಿಲ್ಲೆಯ ಇಂದ್ರನಗರ ನಿವಾಸಿ ಮೊಹಮ್ಮದ್ ಹುಸೇನ್(22) ಮತ್ತು ಅಪ್ರಾಪ್ತ ಬಾಲಕ ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ.
ಈ ಆರೋಪಿತರು ಕುಂದಾಪುರ ಠಾಣೆ ಮಾತ್ರವಲ್ಲದೆ, ಬೆಳ್ತಂಗಡಿ ಠಾಣೆ, ಪಡುಬಿದ್ರಿ ಠಾಣೆ, ಬಳ್ಳಾರಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಬ್ಯಾಂಕ್ ಕಳ್ಳತನ, ಬೈಕ್ ಕಳ್ಳತನ, ಅಂಗಡಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಬೆಳ್ತಂಗಡಿ ಪೊಲೀಸರು ಪ್ರಕರಣದ ತನಿಖೆ ನಡೆಸಲು ಇಬ್ಬರು ಆರೋಪಿಗಳನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಅನುಮತಿಯನ್ನು ಕೊರಿದ್ದು ಎರಡು ದಿನದಲ್ಲಿ ಆರೋಪಿಗಳನ್ನು ಉಡುಪಿ ಜೈಲಿನಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಾಗಿದೆ.
BELTHANGADY
ಬೆಳ್ತಂಗಡಿ ಮಲಂತಬೆಟ್ಟುವಿನಲ್ಲಿ ಹೆಜ್ಜೇನು ದಾಳಿ …!!
ಬೆಳ್ತಂಗಡಿ : ಸಂತ ತೆರೆಸಾ ಶಾಲೆಯ 8ನೇ ತರಗತಿ ವಿದ್ಯಾರ್ಥಿ ತೀರ್ಥೇಶ್ ಮೇಲಂತಬೆಟ್ಟು ಶಾಲೆಯಿಂದ ಮನೆ ಕಡೆ ಬರುತ್ತಿದ್ದರು. ಇವರ ಮೇಲೆ ತೀವ್ರವಾಗಿ ಹೆಜ್ಜೇನು ದಾಳಿ ನಡೆಸಿತ್ತು. ಮಗು ದಾರಿ ತೋರದೆ ಕೆಲ ಮನೆಗಳಿಗೆ ಓಡಿತ್ತು. ಭಯಭೀತಿಯಿಂದಾಗಿ ಮನೆ ಬಾಗಿಲು ಮುಚ್ಚಿತ್ತು.
ಮೇಲಂತಬೆಟ್ಟು ಗ್ರಾಮದ ಬಳಿ ಹೆಜ್ಜೇನು ಜನರ ಮೇಲೆ ದಾಳಿ ಮಾಡಿದ್ದು, ಜನ ಭಯದಿಂದ ಓಡಿ ಹೋದರು. ಸುತ್ತಲಿನ ಮನೆಯವರು ಭೀತಿಯಿಂದ ಮನೆಬಾಗಿಲು ಮುಚ್ಚಿದರು.
ಹೆಜ್ಜೇನು ದಾಳಿಯಿಂದ ನೋವು ಉರಿ ತಾಳಲಾರದೆ, ಅತ್ತು ಕರೆದರೂ ರಕ್ಷಣೆಗೆ ರಕ್ಷಣೆಗೆ ಯಾರೂ ಇಲ್ಲದಾಗ ಕೊನೆಯ ಉಪಾಯ ಇಲ್ಲದೆ ಪಂಚಾಯತ್ ಬಳಿ ಓಡಿದಾಗ ಪಂಚಾಯತ್ ಲೈಬ್ರರಿಯನ್ ಚಂದ್ರಾವತಿ ಯೊಗೀಶ್ ಪೂಜಾರಿ ಗೇರುಕಟ್ಟೆ ಬಂದು ಮುಚ್ಚಿದ ಬಾಗಿಲನ್ನು ತೆರೆದು ಮಗುವನ್ನು ಪಂಚಾಯತ್ ಒಳಗೆ ಕರೆಸಿಕೊಂಡು ಹೊದರು. ಆದರೂ ಬೆನ್ನು ಬಿಡದ ಹೆಜ್ಜೇನು ಆಗಲೂ ದಾಳಿ ನಡೆಸಿತು.
ಮುಂದಕ್ಕೆ ಅಧ್ಯಕ್ಷರ ಕೊಠಡಿಯ ಒಳಗೆ ಹೋಗಿ ಬಾಗಿಲು ಮುಚ್ಚಿ ನೋಡಿದಾಗ ಅಲ್ಲಿಯೂ ಹೆಜ್ಜೇನು ಬಂದಿತ್ತು. ಆವಾಗ ಚಂದ್ರಮತಿಯು ಪೊರಕೆ ಸಹಾಯದಿಂದ ಬಹಳಷ್ಟು ಸಂಖ್ಯೆಯಲ್ಲಿದ್ದ ಹೆಜ್ಜೇನನ್ನು ಕೊಂದು ಮಗುವಿನ ಬಟ್ಟೆ ಬಿಚ್ಚಿಸಿ ಹೆಜ್ಜೇನು ಮುಳನ್ನು ತುರ್ತಾಗಿ ತೆಗೆದು ಮನೆಯವರಿಗೆ ಸುದ್ದಿ ಮುಟ್ಟಿಸಿದರು.
ನಂತರ ಮಗುವನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಮಗು ಈಗ ಆರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾನೆ. ಪಂಚಾಯತ್ ನೌಕರ ಚಂದ್ರಾವತಿಯವರ ಸಮಯ ಪ್ರಜ್ಞೆ, ತಾಯಿ ಮಮತೆ, ಧೈರ್ಯ ಗ್ರಾಮಸ್ಥರ ಪ್ರಿತಿಗೆ ಪಾತ್ರವಾಯಿತು.
- LATEST NEWS6 days ago
ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ʼಡಿಜಿಟಲ್ ಕಾಂಡೋಮ್ʼ !! ಬಳಕೆ ಹೇಗೆ ?
- BIG BOSS7 days ago
BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??
- LATEST NEWS6 days ago
ರೀಲ್ಸ್ ರಾಣಿ ಪತಿ ಕೊ*ಲೆಯಲ್ಲಿ ಮತ್ತೊಂದು ಟ್ವಿಸ್ಟ್ : ಪ್ರತಿಮಾ ಬಳಸಿದ್ದ ವಿಷ ಯಾವುದು ಗೊತ್ತಾ ?
- BIG BOSS7 days ago
BBK 11 : ಹನುಮಂತನ ನಿಜಬಣ್ಣ ಬಯಲು ಮಾಡಿದ ಭಟ್ರು !!