Connect with us

    DAKSHINA KANNADA

    ವಿದ್ಯಾರ್ಥಿಗಳ ಪೋಷಕರಿಗೆ ಬೆದರಿಕೆ ಕರೆ..! ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಹಣಕ್ಕೆ ಬೇಡಿಕೆ!

    Published

    on

    ಮಂಗಳೂರು: ಮಂಗಳೂರು ನಗರ ಮತ್ತು ಸುರತ್ಕಲ್‌ ಭಾಗದ ಕೆಲವು ಕಾಲೇಜು ವಿದ್ಯಾರ್ಥಿಗಳ ಹೆತ್ತವರಿಗೆ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದ್ದು, ಈ ಬಗ್ಗೆ ಮಂಗಳೂರಿನ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂ. 11 ಮತ್ತು 12ರಂದು ಹಲವಾರು ವಿದ್ಯಾರ್ಥಿಗಳ ಹೆತ್ತವರಿಗೆ ಅಪರಿಚಿತರು ಪೊಲೀಸ್‌ ಅಧಿಕಾರಿಗಳಂತೆ ಬಿಂಬಿಸಿಕೊಂಡು ವಾಟ್ಸ್‌ಆ್ಯಪ್‌ ಮೂಲಕ ಕರೆ ಮಾಡಿ ನಿಮ್ಮ ಮಗ/ಮಗಳನ್ನು ಬಂಧಿಸಿದ್ದೇವೆ. ಅವರ ಬಿಡುಗಡೆಗೆ ಕೂಡಲೇ ಹಣ ನೀಡಿ ಎಂದಿದ್ದಾರೆ.

    Read More..; ಮಗುವಿನಿಂದ ಬಾಂ*ಬ್‌ ಬೆದರಿಕೆ ಸಂದೇಶ..! ಮಗು ಹೇಳಿದ್ದೇನು ?

    ಹೆತ್ತವರು ಆತಂಕಿತರಾಗಿ ಶಾಲೆಗಳಲ್ಲಿ ವಿಚಾರಿಸಿದಾಗ ಅವರ ಮಕ್ಕಳು ಶಾಲೆಯಲ್ಲಿ ಸುರಕ್ಷಿತರಾಗಿರುವುದು ಗೊತ್ತಾಗಿದೆ. ನಿನ್ನೆ ಇಬ್ಬರು ಹೆತ್ತವರಿಗೆ ಇದೇ ರೀತಿಯ ಕರೆಗಳು ಬಂದಿವೆ. ಓರ್ವ ಹೆತ್ತವರಿಗೆ ಕರೆ ಮಾಡಿದ ಅಪರಿಚಿತರು ನಿಮ್ಮ ಮಗನ ಮೇಲೆ ಡ್ರಗ್ಸ್‌ ಕೇಸ್‌ ಹಾಕಿದ್ದೇವೆ. ಈತನನ್ನು ಬಿಡಿಸಿಕೊಂಡು ಹೋಗಬೇಕಾದರೆ ಕೂಡಲೇ ಹಣ ನೀಡಿ ಎಂಬುದಾಗಿ ಹೇಳಿದ್ದಾರೆ. ಮತ್ತೋರ್ವರಿಗೆ ಮಗಳನ್ನು ಅಪಹರಣ ಮಾಡಲಾಗಿದೆ ಎಂಬುದಾಗಿ ಹೇಳಿ ಹಣಕ್ಕೆ ಒತ್ತಾಯಿಸಿದ್ದಾರೆ. ಹೆತ್ತವರು ಕೂಡಲೇ ಕಾಲೇಜಿಗೆ ಕರೆ ಮಾಡಿ ಕೇಳಿದಾಗ ಇದೊಂದು ನಕಲಿ ಬೆದರಿಕೆ ಕರೆ ಎಂಬುದಾಗಿ ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು, ಕರೆ ಬಂದಿರುವ ಸಂಖ್ಯೆಗಳನ್ನು ಪರಿಶೀಲಿಸಿದಾಗ ಪೋಲಂಡ್‌, ಪಾಕಿಸ್ಥಾನ ದೇಶಗಳ ಕೋಡ್‌ ಸಂಖ್ಯೆಯನ್ನು ಹೊಂದಿರುವುದು ಕಂಡು ಬಂದಿದೆ. ನಕಲಿ ಅಧಿಕಾರಿಗಳು ಹಣ ದೋಚಲು ನಡೆಸಿರುವ ತಂತ್ರ ಇದು. ಈ ರೀತಿ ವಾಟ್ಸ್‌ಆ್ಯಪ್‌ನಲ್ಲಿ ವಿದೇಶಗಳಿಂದ ಬರುವ ಯಾವುದೇ ಅಪರಿಚಿತ ವ್ಯಕ್ತಿಗಳ ಕರೆಗಳನ್ನು ಸ್ವೀಕರಿಸಬಾರದು. ಒಂದು ವೇಳೆ ಇಂತಹ ಕರೆಗಳನ್ನು ಸ್ವೀಕರಿಸಿದರೆ ಕೂಡಲೇ ಪಕ್ಕದ ಪೊಲೀಸ್‌ ಠಾಣೆಗೆ ತಿಳಿಸ ಬೇಕು. ಶಾಲಾ ಕಾಲೇಜುಗಳು ಕೂಡಾ ಇಂತಹ ನಕಲಿ ಕರೆಗಳ ಕುರಿತು ಹೆತ್ತವರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ. ಪ್ರಥಮ ಪಿಯುಸಿಯ ಮಕ್ಕಳ ಹೆತ್ತವರ ನಂಬರ್‌ ವಂಚಕರ ಕೈಗೆ ಸಿಕ್ಕಿದ್ದು ಹೇಗೆ ಎಂಬುದು ನಿಗೂಢವಾಗಿದೆ. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    DAKSHINA KANNADA

    ಅಡುಗೆ ಮಾಡುವಾಗ ಕೈ ಸುಟ್ಟುಕೊಂಡರೆ ಮನೆಯಲ್ಲಿ ಹೀಗೆ ಮಾಡಿ..!

    Published

    on

    ಮಂಗಳೂರು: ಅಡುಗೆ ಮಾಡುವಾಗ ಗಡಿ ಬಿಡಿಯಲ್ಲಿ ಮಹಿಳೆಯರು ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳಿಂದ ಬಿಸಿ ಎಣ್ಣೆ, ಬಿಸಿ ನೀರೋ ಕೈ ಅಥವಾ ಮೈ ಮೇಲೆ ಚೆಲ್ಲುತ್ತದೆ. ಇಲ್ಲದಿದ್ದರೆ ಬಿಸಿ ಪಾತ್ರೆಯನ್ನು ಮುಟ್ಟುವುದರಿಂದ ಕೈ ಚರ್ಮ ಸುಡುತ್ತದೆ. ಇದರಿಂದ ಉಂಟಾಗುವ ಉರಿ ಹಾಗೂ ನೋವು ತೀವ್ರವಾಗಿರುತ್ತದೆ. ಹೀಗಾಗಿ ಗ್ಯಾಸ್ ಅಥವಾ ಒಲೆಯ ಮುಂದೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲುವುದಿಲ್ಲ.

    ಹೆಚ್ಚಿನವರು ಬಿಸಿ ತಾಗಿದ ತಕ್ಷಣವೇ ಕೈಯನ್ನು ನೀರಿನಲ್ಲಿ ಅದ್ದಿ ಬಿಡುತ್ತಾರೆ, ಹೀಗೆ ಮಾಡಿದ್ದಲ್ಲಿ ಸುಟ್ಟ ಗಾಯವು ಗುಣಮುಖವಾಗಲು ಸಮಯ ತೆಗೆದುಕೊಳ್ಳುತ್ತದೆ. ಸಣ್ಣಪುಟ್ಟ ಗಾಯಗಳಾದರೆ ತೊಂದರೆಯಿಲ್ಲ, ಆದರೆ ತೀವ್ರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.

    1. ಗಾಯವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಐಸ್ ಅನ್ನು ಅನ್ವಯಿಸುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ಗುಳ್ಳೆಗಳೂ ಬರುವುದಿಲ್ಲ. ಇದು ಚರ್ಮದ ಮೇಲೆ ಕಪ್ಪು ಕಲೆಗಳು ಬರದಂತೆ ತಡೆಯುತ್ತದೆ.

    2. ಸುಟ್ಟ ಜಾಗಕ್ಕೆ ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ಹಚ್ಚುವುದು ಪರಿಣಾಮಕಾರಿಯಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ಉರಿ ಉಂಟಾದರೂ ನಂತರದಲ್ಲಿ ಕಡಿಮೆಯಾಗುತ್ತದೆ, ಗುಳ್ಳೆಗಳು ಬರುವುದಿಲ್ಲ.

    3. ಅಲೋವೆರಾ ಸಹ ಸುಟ್ಟಗಾಯವನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಗಾಯದ ಮೇಲೆ ತಕ್ಷಣವೇ ಅಲೋವೆರಾವನ್ನು ಹಚ್ಚಿದರೆ ಉರಿಯೂತವು ಕಡಿಮೆಯಾಗಿ, ಯಾವುದೇ ಗುಳ್ಳೆಗಳು ಕಾಣಿಸಿಕೊಳ್ಳುವುದಿಲ್ಲ.

    4. ಜೇನುತುಪ್ಪವು ಆಂಟಿ-ಸೆಪ್ಟಿಕ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಸುಟ್ಟ ಗಾಯದ ಮೇಲೆ ತಕ್ಷಣ ಜೇನುತುಪ್ಪವನ್ನು ಹಚ್ಚುವುದರಿಂದ ಉರಿಯೂತ ಶಮನವಾಗಿ, ಗುಳ್ಳೆಗಳು ಮೂಡದಂತೆ ತಡೆಯುತ್ತದೆ. ಜೇನು ತುಪ್ಪ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡುವುದರಿಂದ ಸುಟ್ಟಗಾಯಗಳು ತ್ವರಿತವಾಗಿ ಗುಣವಾಗುತ್ತವೆ.

    Continue Reading

    DAKSHINA KANNADA

    ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ

    Published

    on

    ಮಂಗಳೂರು : ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಆರ್ಯಭಟ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಹಬ್ಬಿರುವ ದಿನೇಶ್‌ ಕೋಡಪದವು ಅವರು ಕುಸಾಲ್ದ ಗುರಿಕ್ಕಾರೆ ಎನ್ನುವ ಬಿರುದನ್ನು ಕೂಡ ಪಡೆದುಕೊಂಡಿದ್ದಾರೆ.

    ದಿನೇಶ್ ಕೋಡಪದವು ಕುರಿತು :

    ಈಶ್ವರ ಶೆಟ್ಟಿಗಾರ್ ಮತ್ತು ಲೀಲಾವತಿ ದಂಪತಿಯ ಸುಪುತ್ರರಾದ ದಿನೇಶ್ ಶೆಟ್ಟಿಗಾರ್, ಕೋಡಪದವು ಹುಟ್ಟಿದ್ದು ಒಕ್ಕೆತ್ತೂರುವಿನಲ್ಲಿಯಾದರೂ, ಪ್ರಸ್ತುತ ವಾಸ ಕೋಡಪದವಿನಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ಪಡೆಯುತ್ತಿದ್ದಂತೆ ಯಕ್ಷಗಾನ ಕೈಬೀಸಿ ಕರೆಯಿತು.

    ರತ್ನಾಕರ್ ಹೆಗ್ಡೆ ಪುತ್ತೂರು, ಸಬ್ಬಣ್ಣಕೋಡಿ ಕೃಷ್ಣ ಭಟ್ ಅಂತಹ ಮಹಾನ್ ಯಕ್ಷಗಾನ ಗುರುಗಳಿಂದ ಯಕ್ಷಗಾನ ಕಲೆಯನ್ನು ಕಲಿತು ಮಂಗಳಾದೇವಿ ಮೇಳದಲ್ಲಿ 5 ವರ್ಷ, ಸುಂಕದಕಟ್ಟೆ ಮತ್ತು ಸಸಿಹಿತ್ಲು ಮೇಳದಲ್ಲಿ 4 ವರ್ಷ, ಬಾಚಕೆರೆ ಮೇಳದಲ್ಲಿ 3 ವರ್ಷ, ಕರ್ನಾಟಕ ಮೇಳ ಹಾಗೂ ಕದ್ರಿ ಮೇಳದಲ್ಲಿ 1 ವರ್ಷ , ಪ್ರಸ್ತುತ ಬಪ್ಪನಾಡು ಮೇಳದಲ್ಲಿ 8 ವರುಷಗಳಿಂದ ಯಕ್ಷಗಾನ ತಿರುಗಾಟ ನಡೆಸುತ್ತಾ ಬಂದಿದ್ದಾರೆ.

    ಕನ್ನಡ ಭಾಷೆಯ ಯಕ್ಷಗಾನಗಳಲ್ಲಿ ಅಭಿಮನ್ಯು ಚಂಡ-ಮುಂಡ, ಸುಧನ್ವ ಬಬ್ರುವಾಹನ, ಕಮಲಧ್ವಜ, ಕೃಷ್ಣ ಬಲರಾಮ, ಪ್ರಹ್ಲಾದ, ಲೋಹಿತಾಶ್ವದಂತಹ ಪುಂಡು ವೇಷಧಾರಿಯಾಗಿಯೂ ಮಾಲಿನಿಧೂತ, ವಿದ್ಯುನ್ಮಾಲಿದೂತ, ಚಿಕ್ಕ, ದಾರುಕ, ಮಕರಂದ, ಪ್ರಾತಿಕಾಮಿಯಂತದ ಹಾಸ್ಯ ಪಾತ್ರಧಾರಿಯಾಗಿಯೂ, ನಾರದ ಮುಂತಾದ ಪುರಾಣ ಪಾತ್ರಗಳ ಮೂಲಕ ಪ್ರತಿಭೆ ಮೆರೆದಿದ್ದಾರೆ.
    ತುಳು ಭಾಷೆಯ ಯಕ್ಷಗಾನ ಪ್ರಸಂಗಗಳಾದ ಬನತ ಬಂಗಾರ್, ಬನತ ಬಬ್ಬರ್ಯೆ, ನಿಧಿ ನಿರ್ಮಲ, ಬಾಲೆ ಭಗವಂತದಂತಹ ಪ್ರಸಂಗಗಳಲ್ಲಿ ಕ್ರಮವಾಗಿ ನರಸಿಂಹ, ಪೈಕುಲ, ಚಾವುಂಡರಾಯ, ಗುಡ್ಡಪ್ಪ ಪಾತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ. ಹಲವಾರು ಹೊಸಹೊಸ ಪ್ರಸಂಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಹೆಸರುವಾಸಿಯಾಗಿದ್ದಾರೆ.

     

    ಸಂಘಟಕನಾಗಿ…ಸಮಾಜ ಸೇವಕನಾಗಿ…

    ಯಕ್ಷಗಾನದಲ್ಲಿ ಮಾತ್ರವಲ್ಲದೇ ”ತೆಲಿಕೆದ ತೇಟ್ಲ” ಎಂಬ ತಂಡ ಕಟ್ಟಿ ಹಲವಾರು ಕಡೆಗಳಲ್ಲಿ “ಯಕ್ಷ ಹಾಸ್ಯ ವೈಭವ” , ”ಯಕ್ಷಗಾನ ಹಾಸ್ಯ ಕಲಾವಿದರ ಒಕ್ಕೂಟ” ಎಂಬ ತಂಡ ಕಟ್ಟಿ “ಆಟದ ಆಯನ” ಕಾರ್ಯಕ್ರಮ ನೀಡಿರುವುದಲ್ಲದೇ ಕೊರೊನಾ ಸಮಯದಲ್ಲಿ 25ಕ್ಕೂ ಹೆಚ್ಚು ಕಲಾವಿದರಿಗೆ ಆಹಾರ ಕಿಟ್ ಗಳನ್ನು ವಿತರಿಸಿ ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡಿದ್ದಾರೆ.

    ಈ ಮೆರು ಕಲಾವಿದ “ಕುಸಲ್ದ ಗುರಿಕಾರೆ”, “ಯಕ್ಷಮಾಣಿಕ್ಯ”, ”ಹಾಸ್ಯದರಸು” ಇತ್ಯಾದಿ ಬಿರುದುಗಳಿಂದ ಮೇಳೈಸಿಕೊಂಡವರು ಯಕ್ಷಲೋಕದಲ್ಲಿ ತನ್ನದೇ ವ್ಯಕ್ತಿತ್ವದಲ್ಲಿ ಜನಮಾನದಲ್ಲಿ ಗುರುತಿಸಿಕೊಂಡವರು.

    ಇಂತಹ ಅದ್ಭುತ ಯಕ್ಷಲೋಕದಲ್ಲಿ ಮಿಂಚುತ್ತಿರುವ ಯಕ್ಷಾಭಿಮಾನಿಗಳಲ್ಲಿ ಸಂಚಲನವನ್ನುಂಟು ಮಾಡುತ್ತಿರುವ “ಯಕ್ಷಧ್ರುವತಾರೆ”ಯನ್ನು ಗುರುತಿಸಿ, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ 317ಡಿ ಕಂದಾಯ ಜಿಲ್ಲೆಗಳಾದ ದಕ್ಷಿಣಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರಿನ ಹಲವಾರು ಉನ್ನತಮಟ್ಟದ ಲಯನ್ಸ್ ಕಾರ್ಯಕ್ರಮಗಳಲ್ಲಿ ಶ್ರೀಯುತರನ್ನು ಗೌರವಿಸಿ ಸನ್ಮಾನಿಸಿದ್ದು ಅವರ ಸಾಧನೆಗೆ ಸಂದ ಗೌರವ.

    ‘ನಮ್ಮ ಕುಡ್ಲ’ದ ‘ಯಕ್ಷ ತೆಲಿಕೆ’ಯ ಹೆಮ್ಮೆಯ ಕಲಾವಿದ :

    ಕರಾವಳಿ ಕರ್ನಾಟಕದ ಪ್ರಪ್ರಥಮ ತುಳು ವಾರ್ತಾವಾಹಿನಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ನಮ್ಮಕುಡ್ಲ ವಾಹಿನಿಯಲ್ಲಿ ಕೋಡಪದವು ಸಾರಥ್ಯದಲ್ಲಿ “ಯಕ್ಷ ಹಾಸ್ಯ ಕಾರ್ಯಕ್ರಮ “ಯಕ್ಷ ತೆಲಿಕೆ” ಕಾರ್ಯಕ್ರಮವನ್ನು ಆರಂಭಿಸಿದರು. ಇಂದು ಯಕ್ಷತೆಲಿಕೆ ಕಾರ್ಯಕ್ರಮ ಕರಾವಳಿ ಮಾತ್ರವಲ್ಲದೇ ದೇಶವಿದೇಶಗಳಲ್ಲಿ ಖ್ಯಾತಿಯನ್ನು ಪಡೆದುಕೊಂಡಿದೆ.

    ಇದನ್ನೂ ಓದಿ : ಟೀಸರ್ ಮೂಲಕ ಭಾರಿ ಸದ್ದು ಮಾಡುತ್ತಿದೆ ‘ಸಾಂಕೇತ್’

    ಯಕ್ಷತೆಲಿಕೆ ಕಾರ್ಯಕ್ರಮವು ಹಾಸ್ಯದ ಜೊತೆಗೆ ಉತ್ತಮ ಸಂದೇಶವನ್ನು ನೀಡುವ ಕಾರ್ಯಕ್ರಮವಾಗಿದೆ. ಕೋಡಪದವು ಬೊಬ್ಬಿರಿದು ಗೋಗರೆಯುವ ಅಬ್ಬರದ ಗಾಂಭೀರ್ಯ ವೇಷಕ್ಕೂ ಸೈ, ವೀಕ್ಷಕರನ್ನು ನಕ್ಕುನಗಿಸುವ ಹಾಸ್ಯ ಪಾತ್ರಕ್ಕೂ ಸೈ…ಹಾಸ್ಯ ಅಂದರೆ ಕೋಡಪದವು, ಕೋಡಪದವು ಅಂದರೆ ಹಾಸ್ಯ ಎನ್ನುವಷ್ಟರ ಮಟ್ಟಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿದೆ.

    Continue Reading

    DAKSHINA KANNADA

    ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದ ಬಿ.ಎಸ್. ಯಡಿಯೂರಪ್ಪ

    Published

    on

    ಸುಬ್ರಹ್ಮಣ್ಯ: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದರು.

    ದೇವಾಲಯದ ಅರ್ಚಕರಾದ ಸತ್ಯನಾರಾಯಣ ನೂರಿತಾಯ ಅವರು ತುಲಾಭಾರ ಸೇವೆಯನ್ನು ನೆರವೇರಿಸಿದರು.

    ಬೆಳ್ಳಿಗ್ಗೆ ದೇವಾಲಯಕ್ಕೆ ಬಂದ ಯಡಿಯೂರಪ್ಪ ಅವರನ್ನು ಶಾಸಕಿ ಭಾಗೀರಥಿ ಮುರುಳ್ಯ ಸ್ವಾಗತಿಸಿದರು. ಮಾಜಿ ಸಚಿವ ಅಂಗಾರ, ಮೋಹನ್ ರಾಮ ಸುಳ್ಳಿ ಹಾಗೂ ದೇವಳ ಸಮಿತಿಯವರು ಇದ್ದರು.

    ಮಧ್ಯಾಹ್ನ ಸುಳ್ಯಕ್ಕೆ ತೆರಳುವ ಯಡಿಯೂರಪ್ಪ, ಸುಳ್ಯದ ಬಿಜೆಪಿ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.

    Continue Reading

    LATEST NEWS

    Trending