Connect with us

    BELTHANGADY

    ಮತ್ಸ್ಯ ತೀರ್ಥಕ್ಕೆ ವಿಷ ಚೆಲ್ಲಿ ಸಾವಿರಾರು ಮತ್ಸ್ಯ ಮಾರಣ ದುರಂತಕ್ಕೆ ಇಂದಿಗೆ 25 ವರ್ಷ..!

    Published

    on

    ಬೆಳ್ತಂಗಡಿ: ನಾಡಿನ ಪ್ರಸಿದ್ಧ ಮತ್ಸ್ಯ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದ ಶಿಶಿಲೇಶ್ವರನ ಸನ್ನಿಧಿಯ ಕಪಿಲಾ ನದಿಯಲ್ಲಿರುವ  ಮತ್ಸ್ಯ ಸಂಕುಲವೆಂದರೆ ಭಕ್ತರಿಗೆ ಅದೆಷ್ಟೋ ಪ್ರೀತಿ.ಶಿಶಿಲೇಶ್ವರನ ಸಾನಿಧ್ಯಕ್ಕೆ ಬರುವ ಭಕ್ತರಿಗಿಂತಲೂ ದೇವರ ಮೀನುಗಳಿಗೆ ಆಹಾರಗಳನ್ನು ಹಾಕಿ ಅದರ ನರ್ತನವನ್ನು ಕಂಡು ಖುಷಿಪಡುವವರೇ ಹೆಚ್ಚು ಎಂದರೆ ತಪ್ಪಾಗಲಾರದು.ಆದರೆ ಇಂದಿಗೆ ಸರಿಯಾಗಿ 25 ವರ್ಷಗಳ ಹಿಂದೆ ಶಿಶಿಲದ ಕಪಿಲ ನದಿಗೆ ರಾಕ್ಷಸಿ ಮನಸ್ಥಿತಿಯ ವ್ಯಕ್ತಿಗಳು ವಿಷಹಾಕಿ ಲಕ್ಷಾಂತರ ಮೀನುಗಳ ಮಾರಣಹೋಮ ನಡೆಯಿತು. ಶಿಶಿಲದಲ್ಲಿ ಅಂದು ನಡೆದಿದ್ದ ಮೀನುಗಳ ಮಾರಣಹೋಮಕ್ಕೆ ಇಂದಿಗೆ 25 ವರ್ಷ..  

    1996ರ ಮೇ 25ರಂದು ಮಧ್ಯಾಹ್ನ 12ಗಂಟೆ ಹೊತ್ತಿಗೆ ಮೀನುಗಳು ವಿಲ ವಿಲ ಒದ್ದಾಡಿ ಸಾಯುತ್ತಿದ್ದವು. ದೇವರ ಮೀನುಗಳು ಸಂಪೂರ್ಣ ನಾಶವಾಗುತ್ತಿದ್ದವು. ಹೃದಯ ವಿದ್ರಾವಕ ದೃಶ್ಯ ಕಂಡು ಸಾವಿರಾರು ಮಂದಿ ಸಂಕಟ ಪಟ್ಟಿದ್ದರು.

    ಯಾರೋ ದುಷ್ಕರ್ಮಿಗಳು ಶಿಶಿಲ ದೇವಾಲಯದ ಕಪಿಲಾ ನದಿಗೆ ವಿಷ ಹಾಕಿದ್ದರು ಎಂದು ತಡವಾಗಿ ತಿಳಿದು ಬಂದಿದೆ. ಇದರಿಂದ   ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದುವು. ಇಡೀ ಕಪಿಲಾ ನದಿಯೆ ವಿಷದಿಂದ ತುಂಬಿತ್ತು. ಪರಿಣಾಮ ಇಡೀ ಗ್ರಾಮದಲ್ಲು ವಿಷಗಾಳಿ, ಕುಡಿಯುವ ನೀರಿಗಾಗಿ ಟ್ಯಾಂಕರ್ ಗಳು ಬಂದಿತ್ತು, ದಿನ ನಿತ್ಯ ಸಾವಿರಾರು ವಾಹನಗಳು ಶಿಶಿಲದ ಪುಟ್ಟ ಗ್ರಾಮಕ್ಕೆ ಬಂದಿದ್ದುವು.ಜನಸಾಗರವೇ ದೇವಾಲಯಕ್ಕೆ ಬಂದು ದುಷ್ಕರ್ಮಿಗಳಿಗೆ ಹಿಡಿಶಾಪ ಹಾಕುತ್ತಿದ್ದರು.. ರಾಜ್ಯದಲ್ಲಿಯೆ ಅದು ದೊಡ್ದ ಸುದ್ಧಿಯಾಗಿತ್ತು. ದೇವಾಲಯದ ಆಡಳಿತ ಮಂಡಳಿ, ಮತ್ಸ್ಯ ಹಿತರಕ್ಷಣಾ ವೇದಿಕೆ, ವಿಶ್ವಹಿಂದೂ ಪರಿಷತ್ತು, ಮೊದಲಾದ ಸಂಘಟನೆಗಳು ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಹೋರಾಟದ ನೇತೃತ್ವ ವಹಿಸಿದ್ದುವು.

    ಪತ್ರಿಕಾ ತಂಡಗಳು, ಟಿ ವಿ ಮಾದ್ಯಮದವರು, ಜಿಲ್ಲಾಧಿಕಾರಿ, ಸಹಾಯಕ ಕಮೀಶನರ್ ಪುತ್ತೂರು, ಜಿಲ್ಲಾ  ಪೊಲೀಸ್ ಅಧಿಕಾರಿ, ಪೊಲೀಸ್ ವ್ಯಾನ್ ಗಳು, ಸರಕಾರಿ ಅಧಿಕಾರಿಗಳು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಸುತ್ತಮುತ್ತಲಿನ ಸಾವಿರಾರು ಭಕ್ತರ ದಂಡೇ ಶಿಶಿಲಕ್ಕೆ ಆಗಮಿಸಿತ್ತು..

    ಬಾಲಕೃಷ್ಣ ಭಟ್ ವಿಧಾನ ಪರಿಷತ್ ನಲ್ಲಿ ಹೋರಾಟ ನಡೆಸಿದ್ದರು.  ಧರ್ಮಸ್ಥಳದ ಧರ್ಮಾಧಿಕಾರಿಗಳು ಆಗಮಿಸಿ ಆ ದೃಶ್ಯ ನೋಡಿ ಮಮ್ಮಲ ಮರುಗಿದ್ದರು.

    ಪೇಜಾವರ ಶ್ರೀಗಳು ಆಗಮಿಸಿ ಮತ್ಸ್ಯಗಳ ಮರು ಹುಟ್ಟಿಗೆ ಬಂದು ಕಪಿಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೇ ವೇಳೆ ದುರುಳರ ಬಂಧನಕ್ಕಾಗಿ ದೊಡ್ದ ಹೋರಾಟ ಮಾಡಲಾಗಿತ್ತು.

    ಬೆಳ್ತಂಗಡಿ ತಾಲೂಕು ಕಚೇರಿ ಮುಂದೆ ತೀವ್ರ ಹೋರಾಟ ಮಾಡಲಾಗಿತ್ತು. ಸುಮಾರು 15 ದಿನ ನಿರಂತರ ಮಡಿದ ಮತ್ಸ್ಯಗಳನ್ನು ನೀರಿನಿಂದ ತೆಗೆದು  ಶ್ರಮದಾನದ ಮೂಲಕ ಮಣ್ಣು ಮಾಡಲಾಗಿತ್ತು.ಸುಮಾರು ಒಂದು ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಈ ಕಾರ್ಯದಲ್ಲಿ ಭಾಗವಹಿಸಿದ್ದರು.  ವಿಶೇಷ ಅಂದ್ರೆ ಈಗ್ಲೂ ಮಡಿದ ಮುದ್ದು ಮತ್ಸ್ಯಗಳಿಗೆ ” ಮತ್ಸ್ಯ ಸ್ಮಾರಕ “ಮಾಡಿ  ಪೂಜೆ ಸಲ್ಲಿಸಲಾಗುತ್ತದೆ.

    ಆ 25 ವರ್ಷಗಳ ಕರಾಳ ನೆನಪು ಮಾತ್ರ ಇಂದಿಗೂ ಆ ಶಿಶಿಲ ಗ್ರಾಮಸ್ಥರಲ್ಲಿ ಜೀವಂತವಾಗಿದೆ.

    BELTHANGADY

    ಅಂತರಾಷ್ಟ್ರೀಯ ಟಾರ್ಗೆಟ್ ಬಾಲ್ ಪಂದ್ಯಾಟದಲ್ಲಿ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

    Published

    on

    ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದ ಸಿದ್ದಾರ್ಥ್ ಎಂ.ಸಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಫ್ಲಾಯ್ಡ್ ಮಿಸ್ಕಿತ್ ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನೇಪಾಳದ ಕಠ್ಮಂಡುವಿನಲ್ಲಿ ಜುಲೈ 8 ರಿಂದ ಜರುಗಿದ ಅಂತರಾಷ್ಟ್ರೀಯ ಮಟ್ಟದ ದಕ್ಷಿಣ ಏಷ್ಯಾ ಟಾರ್ಗೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

    ಫ್ಲಾಯ್ಡ್ ಮಿಸ್ಕಿತ್ ಮಡಂತ್ಯಾರು ನಿವಾಸಿ ಬೇಬಿ ಡಯಾನ ಮಿಸ್ಕಿತ್ ಹಾಗೂ ಕ್ಲೌಡಿ ಫ್ರಾನ್ಸಿಸ್ ಮಿಸ್ಕಿತ್ ದಂಪತಿಗಳ ಪುತ್ರರಾಗಿದ್ದು, ಸಿದ್ಧಾರ್ಥ್ ಎಂ.ಸಿ ಮಂಗಳೂರಿನ ಕಪಿತಾನಿಯೊ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಮಮಿತಾ ಹಾಗೂ ಬಿ.ಸಿ.ರೋಡ್ ನ ನ್ಯಾಯವಾದಿ ಪಿ.ಚೆನ್ನಪ್ಪ ಸಾಲಿಯಾನ್ ದಂಪತಿಗಳ ಪುತ್ರರಾಗಿದ್ದಾರೆ.

    ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ ವಿಟ್ಲ ತರಬೇತಿ ನೀಡಿರುತ್ತಾರೆ.

    Continue Reading

    BELTHANGADY

    ಬೆಳ್ತಂಗಡಿ: ವಿದ್ಯುತ್‌ ತಗುಲಿ ಯುವಕ ಮೃ*ತ್ಯು

    Published

    on

    ಉಪ್ಪಿನಂಗಡಿ: ಮನೆಯಲ್ಲಿ ವಿದ್ಯುತ್ ಇಲ್ಲವೆಂದು ವಿದ್ಯುತ್ ಪರಿವರ್ತಕದ ಬಳಿ ಫ್ಯೂಸ್ ಹಾಕಲು ತೆರಳಿದ ಯುವಕನೋರ್ವ ವಿದ್ಯುತ್ ಆಘಾ*ತಕ್ಕೆ ಬ*ಲಿಯಾದ ಘಟನೆ ಜು.15ರಂದು ಇಳಂತಿಲ ಗ್ರಾಮದ ಗೋಳಿತ್ತಡಿ ಎಂಬಲ್ಲಿ ನಡೆದಿದೆ.

    ಹರೀಶ (32) ಮೃ*ತ ಯುವಕ. ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದ ಈತ ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದು, ತನ್ನ ಮನೆಗೆ ವಿದ್ಯುತ್ ಬರುತ್ತಿಲ್ಲವೆಂದು ವಿದ್ಯುತ್ ಪ್ರವಹಿಸಿ ಈತ ಮೃ*ತಪಟ್ಟಿದ್ದಾರೆ.

    Continue Reading

    BELTHANGADY

    ವಿಧಾನಸಭಾ ಅಧಿವೇಶನ: ಫಝಲ್ ಕೋಯಮ್ಮ ತಂಙಳ್, ನಿರೂಪಕಿ ಅಪರ್ಣಾ ಸಹಿತ ಅಗಲಿದ ಗಣ್ಯರಿಗೆ ಸಂತಾಪ

    Published

    on

    ಬೆಂಗಳೂರು: ವಿಧಾನ ಮಂಡಲ ಉಭಯ ಸದನಗಳ ಮುಂಗಾರು ಅಧಿವೇಶನ ಇಂದು ಪೂರ್ವಾಹ್ನ 11 ಗಂಟೆಗೆ ಆರಂಭಗೊಂಡಿತು.

    ಸದನ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷರಾದ ಯು.ಟಿ.ಖಾದರ್‌ ಅವರು ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಿ, ಅಗಲಿದ ಗಣ್ಯರ ಕೊಡುಗೆಗಳನ್ನು ಸ್ಮರಿಸಿದರು.

    ಅಗಲಿದ ಗಣ್ಯರಾದ ಧಾರ್ಮಿಕ ಮುಖಂಡ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್), ನಿರೂಪಕಿ ಅಪರ್ಣಾ, ಸಾಹಿತಿ ಕಮಲಾ ಹಂಪನಾ, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಸದನಗಳ ಸದಸ್ಯರು ಸಂತಾಪ ಅರ್ಪಿಸಿದರು.

    Continue Reading

    LATEST NEWS

    Trending