Monday, January 24, 2022

ಕೊರೊನಾ ರೂಲ್ಸ್ ಉಲ್ಲಂಘಿಸಿ ವಿಜ್ರಂಭಣೆ ಮದುವೆ; ಅಧಿಕಾರಿಗಳ ದಾಳಿ; ವಧುವನ್ನು ಬಿಟ್ಟು ಅದೃಶ್ಯನಾದ ವರ

ಚಿಕ್ಕಮಗಳೂರು:ಕೊರೊನಾ ಸೋಂಕು ವ್ಯಾಪಕವಾಗಿ  ಹರಡುತ್ತಿದೆ. ಎಲ್ಲೆಡೆ ತಮ್ಮ ಪ್ರೀತಿ ಪಾತ್ರರನ್ನು ಬಂಧು ಬಳಗ ಸ್ನೇಹಿತರನ್ನು ಜನ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಸೋಂಕಿನ ನಿಯಂತ್ರಣಕ್ಕೆಂದು ಸರ್ಕಾರ  ಲಾಕ್​ಡೌನ್​ ಜಾರಿಗೊಳಿಸಿದೆ.ಈ ಸಮಯದಲ್ಲಿ ಯಾರೂ ಕಾರ್ಯಕ್ರಮಗಳನ್ನು ಮಾಡಬೇಡಿ  ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಿರಿ ಸಾಮಾಜಿಕ ಅಂತರ ಕಾಪಾಡಿ ಎಂದು ಸರ್ಕಾರ ಮನವಿ ಮಾಡಿದೆ.

ಈಗಾಗಲೇ ನಿಶ್ಚಯವಾಗಿರುವ ಮದುವೆಗಳಿಗೆ ಕೆಲವೇ ಕೆಲವು ಜನ ಸೇರಲು ಜಿಲ್ಲಾಡಳಿತ ಅನುಮತಿ ನೀಡಿದೆ.ಇದೆಲ್ಲ ತಿಳಿದೂ ತಿಳಿದು ಇಲ್ಲೊಂದು ಕುಟುಂಬ ನಿಯಮಗಳನ್ನು ಗಾಳಿಗೆ ತೂರಿ ಅದ್ಧೂರಿ ಮದುವೆ ನಡೆಸಿರುವ ಘಟನೆ ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದಿದೆ.

ಈ ತಾಲೂಕಿನ ಕರಿಕಲ್ಲಳಿ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ವಧು ವರನ ಮನೆಯವರು ಕೇವಲ 10 ಜನರು ಸೇರಿ ಮದುವೆ ಮಾಡುವುದಾಗಿ ಜೋಡಿಹಳ್ಳಿ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದಿದ್ದರು.

ಆದರೆ ಮದುವೆ ದಿನದಂದು ಆ ನಿಯಮವನ್ನು ಬ್ರೇಕ್​ ಮಾಡಿರುವುದು ಕಂಡುಬಂದಿದೆ. ಮದುವೆ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಜನರಿಗಾಗಿ ಕುರ್ಚಿಗಳನ್ನು ಹಾಕಿರುವುದು ಕಂಡುಬಂದಿದೆ.

ಸಾಕಷ್ಟು ಮಂದಿ ಒಟ್ಟಿಗೆ ಪಂಕ್ತಿಯಲ್ಲಿ ಕುಳಿತು ಊಟ ಮಾಡಿ ಎದ್ದಿರುವುದೂ ತಿಳಿದುಬಂದಿದೆ. ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ಜರುಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಜೋಡಿಹಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ.

ಅಲ್ಲಿ  ಮದುವೆಗಾಗಿ ನೆರೆದಿದ್ದವರನ್ನು ಬೈದು ಮನೆಗೆ ಕಳುಹಿಸಿದ್ದಾರೆ. ಅಧಿಕಾರಿಗಳನ್ನು ಕಾಣುತ್ತಿದ್ದಂತೆಯೇ ವೇದಿಕೆ ಮೇಲಿದ್ದ ವರ ಕೂಡ, ವಧುವನ್ನು ಅಲ್ಲಿಯೇ ಬಿಟ್ಟು ಫೋಟೋಗ್ರಾಫರ್​ಗಳ ಜತೆ ಕೆಳಗಿಳಿದು ಅದೃಶ್ಯರಾಗಿದ್ದಾರೆ.

ನಂತರ ವಧು ಕೂಡ ವೇದಿಕೆಯಿಂದ ಕೆಳಗಿಳಿದು ಹೋಗಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

Hot Topics

ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿ ಸುನೀಲ್‌ ಕುಮಾರ್‌-ಉಡುಪಿಗೆ ಅಂಗಾರ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್‌ ಕುಮಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ಜಿಲ್ಲೆಗಳ...

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...

“ಬಿಜೆಪಿಗರಿಗೆ ವಿಶ್ವಗುರು ನರೇಂದ್ರ ಮೋದಿ ಒಬ್ಬರೇ”

ಮಂಗಳೂರು: ಬಿಜೆಪಿಗರಿಗೆ ಇಡೀ ಪ್ರಪಂಚದಲ್ಲಿ ಏಕೈಕ ಗುರು ವಿಶ್ವಗುರು ಎನ್ನುವ ನರೇಂದ್ರ ಮೋದಿ ಬಿಟ್ಟು ಬೇರೆ ಯಾವ ಗುರುಗಳಿಗೂ ಗೌರವ ಕೊಡದಿದ್ದುದನ್ನು ನೋಡಿದ್ದೇವೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್...