Connect with us

  FILM

  ಮುಕ್ತಾಯಗೊಳ್ಳಲಿದೆ ಜನ ಮನ ಗೆದ್ದಿರುವ ಸ್ಟಾರ್ ಸುವರ್ಣ ವಾಹಿನಿಯ ಈ ಧಾರಾವಾಹಿ!

  Published

  on

  ಧಾರಾವಾಹಿ ಎಂದರೆ ಮಹಿಳೆಯರಿಗೆ ಮಾತ್ರ ಪ್ರಿಯವಾದುದಲ್ಲ, ಮಕ್ಕಳಿಂದ ಹಿಡಿದು ವೃದ್ದರ ವರೆಗೂ ಧಾರಾವಾಹಿ ನೋಡುವವರಿದ್ದಾರೆ. ಪುರುಷರೂ ಧಾರಾವಾಹಿ ನೋಡುವುದರಲ್ಲಿ ಹಿಂದೆ ಬಿದ್ದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ವಾಹಿನಿ, ಒಂದೊಂದು ಧಾರಾವಾಹಿ ಅಚ್ಚು ಮೆಚ್ಚು. ಕೆಲವೊಂದನ್ನ ಮನೆಮಂದಿಯೆಲ್ಲಾ ಕೂತು ಧಾರಾವಾಹಿ ನೋಡುವುದಿದೆ. ಇದೀಗ ಅಂತಹುದೇ ಧಾರಾವಾಹಿಯೊಂದು ಮುಕ್ತಾಯ ಹಂತದಲ್ಲಿದೆ.

  ಅಂತಿಮ ಘಟ್ಟದಲ್ಲಿ ‘ನಮ್ಮ ಲಚ್ಚಿ’:

  ಹೌದು, ಯಶಸ್ವಿ ಧಾರಾವಾಹಿಯೊಂದು ಮುಕ್ತಾಯಗೊಳ್ಳುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನರ ಅಚ್ಚುಮೆಚ್ಚಿನ ‘ನಮ್ಮ ಲಚ್ಚಿ’ ಅಂತಿಮ ಘಟ್ಟದಲ್ಲಿದೆಯಂತೆ.

  ಈ ಧಾರಾವಾಹಿ ಕಳೆದ ವರ್ಷ ಆರಂಭಕೊಂಡಿತ್ತು. ‘ಅಗ್ನಿ ಸಾಕ್ಷಿ’ ಧಾರಾವಾಹಿ ಖ್ಯಾತಿಯ ವಿಜಯ್ ಸೂರ್ಯ ಈ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ‘ಲಕ್ಷ್ಮೀ ಬಾರಮ್ಮ’ದ ಗೊಂಬೆ ನೇಹಾ ಗೌಡ ನಾಯಕಿ. ಈ ಜೋಡಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
  ‘ನಮ್ಮ ಲಚ್ಚಿ’ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬೆಂಗಾಲಿಯ ‘ಪೊಟೆಲ್ ಕುಮಾರ’ ಧಾರಾವಾಹಿಯ ರಿಮೇಕ್ ಆಗಿದೆ. ಅಪ್ಪ-ಮಗಳ ಬಾಂಧವ್ಯದ ಈ ಧಾರಾವಾಹಿ ನೋಡಲು ಪ್ರೇಕ್ಷಕ ತುದಿಗಾಲಲ್ಲಿ ನಿಲ್ಲುತ್ತಿರೋದು ಸುಳ್ಳಲ್ಲ.

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಮ್ಮ ಲಚ್ಚಿ’ ಧಾರಾವಾಹಿ ಜನಮನ ಗೆದ್ದಿರುವುದಂತೂ ಸತ್ಯ. ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ವಿಜಯ್ ಸೂರ್ಯ ನಾಯಕ ನಟನಾಗಿ, ಹಾಗೆಯೇ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಗೊಂಬೆ ಅಲಿಯಾಸ್ ನೇಹಾ ಗೌಡ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿಯ ‘ನಮ್ಮ ಲಚ್ಚಿ’ ಧಾರಾವಾಹಿ ಕಳೆದ ವರ್ಷ ಆರಂಭವಾಗಿತ್ತು. ಇನ್ನು ಲಚ್ಚಿ ಪಾತ್ರವನ್ನು ಬಾಲಕಿ ಸಾಂಗವಿ ಅದ್ಭುತವಾಗಿ ನಿರ್ವಹಿಸಿ ಜನಮನಸೂರೆಗೊಂಡಿದ್ದಾಳೆ.

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ‘ನಮ್ಮ ಲಚ್ಚಿ’ ಧಾರಾವಾಹಿ ಬೆಂಗಾಲಿಯ ‘ಪೊಟೆಲ್ ಕುಮಾರ’ ಸೀರಿಯಲ್‌ನ ರಿಮೇಕ್ ಆಗಿದೆ. ಅಪ್ಪ ಮಗಳ ಬಾಂಧವ್ಯವನ್ನು ಸಾರುವ ಈ ಧಾರಾವಾಹಿ ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

  ಇದನ್ನೂ ಓದಿ : ಅತ್ತ ಜನ ಸೇವೆ … ಇತ್ತ ಕಮಲಿ(ಭಾವನಾ)….. ಹಿಂದೆ ಲಕ್ಷ್ಮೀ ನಿವಾಸದಲ್ಲಿ ಮೋಡಿ ಮಾಡುತ್ತಿದ್ದಾರೆ ಸಿದ್ದೇಗೌಡ್ರು; ಇವರ ಬಗ್ಗೆ ನಿಮಗೆ ಗೊತ್ತಾ!?

  ಕಥೆ ಏನು?

  ನಗರದ ಗಾಯಕ ಸಂಗಮ್ ಸಂಪಿಗೆಪುರ ಎಂಬ ಹಳ್ಳಿಗೆ ಹೋಗುತ್ತಾನೆ. ಅಲ್ಲಿ ಹಳ್ಳಿ ಹುಡುಗಿಯ ಪ್ರೀತಿಗೆ ಬೀಳುತ್ತಾನೆ. ನಂತರ ಆಕೆಯನ್ನು ಮದುವೆಯೂ ಆಗುತ್ತಾನೆ. ಮತ್ತೆ ಆಕೆಯನ್ನು ಕರೆದೊಯ್ಯುವುದಾಗಿ ಹೇಳಿ ನಗರ ಸೇರಿದವನು ತನ್ನದೇ ಜಂಜಾಟದಲ್ಲಿ ಮುಳುಗಿ ಬಿಡುತ್ತಾನೆ. ಅಣ್ಣ ಸಾಗರ್ ಮಾಡಿದ ಮೋಸದಿಂದ ಪತ್ನಿಯನ್ನು ಬಿಟ್ಟು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

  ಇತ್ತ ಸಂಗಮ್‌ಗಾಗಿ ಕಾಯುವ ಗಿರಿಜಾ ಅವನ ಮಗುವಿಗೆ ಜನ್ಮ ನೀಡುತ್ತಾಳೆ. ಅತ್ತ ಹಳ್ಳಿಯ ಹೆಂಡತಿಯನ್ನು ಮರೆಯುವ ಸಂಗಮ್ ಶ್ರೀಮಂತ ಹುಡುಗಿ ದೀಪಿಕಾ ಎಂಬ ಹುಡುಗಿಯನ್ನು ಮದುವೆಯಾಗುತ್ತಾನೆ. ಇವರಿಗೆ ರಿಯಾ ಎಂಬ ಹೆಣ್ಣು ಮಗು ಜನಿಸುತ್ತದೆ.


  ಕೆಲ ದಿನಗಳ ನಂತರ ಸಂಗಮ್ ಗೆ ತನ್ನ ಹಳ್ಳಿಯ ಹೆಂಡತಿಯಿಂದ ಮಗುವಿದೆ ಎಂಬ ವಿಚಾರ ಗೊತ್ತಾಗಿ ಹಳ್ಳಿಗೆ ತೆರಳುತ್ತಾನೆ. ತನ್ನ ಮಗಳು ‘ಲಚ್ಚಿ’ ಎಂಬ ವಿಚಾರ ಗೊತ್ತಾಗುತ್ತದೆ. ಅದೇ ಸಂದರ್ಭದಲ್ಲಿ ನೆನಪಿನ ಶಕ್ತಿ ಕಳೆದುಕೊಂಡು ಜಾಜಿಯ ರೂಪದಲ್ಲಿದ್ದ ಗಿರಿಜಾಗೆ ನಿಧಾನವಾಗಿ ನೆನಪಿನ ಶಕ್ತಿ ಮರುಕಳಿಸುತ್ತದೆ. ಇತ್ತ ಪೇಟೆ ಹೆಂಡತಿ ದೀಪಿಕಾ ಮಾಡಿರುವ ಆಟ ಹಾಗೂ ಮೋಸಗೊಳನ್ನೆಲ್ಲಾ ತಿಳಿದ ಮೇಲೆ ಪೊಲೀಸರು ಆಕೆಯನ್ನು ಬಂಧಿಸುತ್ತಾರೆ.

  ಮುಕ್ತಾಯದ ಬೇಸರ:
  ಎಲ್ಲೂ ಬೋರು ಹೊಡೆಸದೆ, ನಿತ್ಯ ಕೌತುಕತೆಯನ್ನು ಕೆರಳಿಸುತ್ತಾ ‘ನಮ್ಮ ಲಚ್ಚಿ’ ಧಾರಾವಾಹಿ ಮೋಡಿ ಮಾಡಿತ್ತು. ಇದೀಗ ಲಚ್ಚಿ ಮುಕ್ತಾಯಗೊಳ್ಳಲಿದೆ ಎಂಬುದನ್ನು ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ನಿತ್ಯ ‘ಲಚ್ಚಿ’ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯ ಸಂಗತಿಯಾಗಿದೆ.

  FILM

  ಐಶ್ವರ್ಯಾ ರೈ ಜೊತೆಗೂಡಿ ಬಿಗ್‌ ಬಿ ಫ್ಯಾಮಿಲಿ ಮತದಾನ…!

  Published

  on

  ಮಂಗಳೂರು ( ಮಹಾರಾಷ್ಟ್ರ ) : ಚುನಾವಣೆಯಲ್ಲಿ ಮತ ಚಲಾಯಿಸಿರುವ ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಜೊತೆ ಮತಕೇಂದ್ರಕ್ಕೆ ಆಗಮಿಸಿದ್ದಾರೆ. ಅಮಿತಾಬಚ್ಚನ್‌, ಜಯಾಬಚ್ಚನ್ ಜೊತೆಯಲ್ಲಿ ಒಂದೇ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿದ್ದಾರೆ. ಈ ಮೂಲಕ ಹಲವು ಸಮಯದಿಂದ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಶೇಕ್‌ ಬಚ್ಚನ್‌ ದಾಂಪತ್ಯ ವಿಚಾರವಾಗಿ ಇದ್ದ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.


  ಐದನೇ ಹಂತದ ಮತದಾನದಲ್ಲಿ ಅನೇಖ ಸೆಲಬ್ರಿಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಮತದಾನವಾಗಿದ್ದು, ಬಾಲಿವುಡ್ ನಟ ನಟಿಯರು ಮತದನಾ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಬೆಳಗ್ಗೆ 7 ಗಂಟೆಗೆ ಮತದಾನ ಕೇಂದ್ರಕ್ಕೆ ಹಾಜರಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಭಾರತೀಯ ಪೌರತ್ವ ಪಡೆದ ನಂತರ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

  ಪಿಂಕ್ ಡ್ರೆಸ್ನಲ್ಲಿ ಆಗಮಿಸಿದ ಜಾನ್ವಿ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ತೆರಳಿ ಮತಯಾಚನೆ ಮಾಡಿದರು. ಮತದಾನ ಕೇಂದ್ರದಲ್ಲಿ ಜಾನ್ವಿ ಕಪೂರ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ವಿಶೇಷ ಮಹಿಳಾ ಪೊಲೀಸರು ನಟಿ ಜಾನ್ವಿಗೆ ಭದ್ರತೆ ಒದಗಿಸಿದರು.

  ಅದೇ ರೀತಿ ಶಾರುಖ್ ಖಾನ್ ಅವರು ತಮ್ಮ ಕುಟುಂಬದೊಂದಿಗೆ ಮತದಾನ ಮಾಡುತ್ತಿರುವುದು ಕಂಡುಬಂದಿದೆ. ಹೀಗೆ ಹೃತಿಕ್ ರೋಷನ್, ರಾಕೇಶ್ ರೋಷನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತದಾನ ಮಾಡಿದರು. ಇನ್ನು ವರುಣ್ ಧವನ್ ಜೊತೆಗೆ ತಂದೆ ಡೇವಿಡ್ ಧವನ್, ಧರ್ಮೇಂದ್ರ, ಆಶಾ ಭೋಂಸ್ಲೆ ಮತ್ತು ಇತರರು ಬೂತ್‌ನಲ್ಲಿ ಮತದಾನ ಮಾಡಿದರು.

  Continue Reading

  FILM

  ‘ಅಣ್ಣಾವ್ರ’ ಹಾಡು ಹಾಡಿದ ‘ಮೋಹನ್ ಲಾಲ್’; ವೀಡಿಯೋ ವೈರಲ್

  Published

  on

  ಬೆಂಗಳೂರು: ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್‌ ಲಾಲ್ ರವರು ಡಾ. ರಾಜ್‌ಕುಮಾರ್ ಜೊತೆ ಅವಿನಾಭಾವ ಸಂಬಂಧವಿತ್ತು. ಇಬ್ಬರ ನಡುವೆ ಒಂದೊಳ್ಳೆ ಬಾಂಧವ್ಯವಿತ್ತು. ಇದಕ್ಕೆ ಸಾಕ್ಷಿ ಅನ್ನುವಂತೆ ಹೊಸ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ರಾಜ್‌ಕುಮಾರ್‌ ನಟನೆಯ ‘ಎರಡು ಕನಸು’ ಸಿನೆಮಾದ ‘ಎಂದೆಂದೂ ನಿನ್ನನು ಮರೆತು ನಾನಿರಲಾರೆ..’ ಎಂಬ ಹಾಡನ್ನು ಹಾಡಲು ಪ್ರಯತ್ನಿಸಿದ್ದಾರೆ. ಇನ್ನು ಡಾ. ರಾಜ್‌ಕುಮಾರ್ ಅವರಿಗೆ ಟಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲಾ ಕಡೆ ಅಭಿಮಾನಿಗಳು ಇರುವುದು ವಿಶೇಷ.

  mohan lal

  Read More..; ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ; ಡ್ರ*ಗ್ಸ್ ಪತ್ತೆ! ಪಾರ್ಟಿಯಲ್ಲಿದ್ದರು ನಟ – ನಟಿಯರು,.!

  ಇನ್ನು ಮೋಹನ್‌ಲಾಲ್ ಕನ್ನಡ ಸಿನೆಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಲಾಲೇಟ ಎಂದೇ ಎಲ್ಲರಿಗೂ ಪ್ರೀತಿಪಾತ್ರರಾಗಿರುವ ಮೋಹನ್‌ಲಾಲ್‌ರವರ ಮೇ.21ರಂದು ಹುಟ್ಟುಹಬ್ಬ.

  Continue Reading

  FILM

  ಮತ್ತೆ ಕಿರುತೆರೆಗೆ ಲಗ್ಗೆ ಇಟ್ಟ ನಟ ರೂಪೇಶ್ ಶೆಟ್ಟಿ; ‘Huu ಅಂತೀಯಾ…Uhuu ಅಂತೀಯಾ’ ಅಂದ್ರು ರಾಕ್ ಸ್ಟಾರ್!

  Published

  on

  ಮಂಗಳೂರು : ರೂಪೇಶ್ ಶೆಟ್ಟಿ ಕೋಸ್ಟಲ್ ವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಕಲಾವಿದ. ಕನ್ನಡ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಈಗಾಗಲೇ ಕಿರುತೆರೆಗೆ ಲಗ್ಗೆ ಇಟ್ಟಿರುವ ಅವರು ಬಿಗ್ ಬಾಸ್ ಸೀಸನ್ 9 ರ ವಿಜೇತರಾಗಿ ಹೊರಹೊಮ್ಮಿದ್ದರು. ಇದೀಗ ಮತ್ತೆ ಕಿರುತೆರೆಗೆ ಲಗ್ಗೆ ಇಡುತ್ತಿದ್ದಾರೆ.


  ನಿರೂಪಕನಾಗಿ ಎಂಟ್ರಿ:


  ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿರುವ ರೂಪೇಶ್ ಶೆಟ್ಟಿ ಕಿರುತೆರೆಗೆ ಮತ್ತೆ ಲಗ್ಗೆ ಇಡುತ್ತಿದ್ದಾರೆ. ಅದು ಹೊಸ ರಿಯಾಲಿಟಿ ಶೋನಲ್ಲಿ. ಹಾಗಂತ ಅವರು ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ನಿರೂಪಕರಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅದುವೇ ‘Huu ಅಂತೀಯಾ…Uhuu ಅಂತೀಯಾ’. ಇದೊಂದು ವಿಭಿನ್ನ ಬಗೆಯ ವಿನೂತನ ಗೇಮ್ ಶೋ ಆಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕೆಂಡ್ ನಲ್ಲಿ ಈ ಶೋ ಪ್ರಸಾರವಾಗಲಿದೆ.
  ರೂಪೇಶ್ ಶೆಟ್ಟಿ ಹಾಗೂ ಅರುಣ್ ಇಬ್ಬರು ಜೊತೆಯಾಗಿ ಈ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

  ಹೇಗಿರಲಿದೆ ಶೋ:

  ಈ ಶೋನಲ್ಲಿ ಒಟ್ಟು ಮೂರು ಸುತ್ತುಗಳು ಇರುತ್ತವೆ. ಈ ಶೋನಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳಿಗೆ ಬರೋಬ್ಬರಿ 6 ಲಕ್ಷ ರೂಪಾಯಿ ಗೆಲ್ಲುವ ಅವಕಾಶ ಇರುತ್ತದೆ.
  ಮೊದಲ ಸುತ್ತಿನಲ್ಲಿ ಸ್ಪರ್ಧಿಗಳು ಒಬ್ಬರ ನಂತರ ಒಬ್ಬರು ಆಟ ಆಡುತ್ತಾರೆ. ನಿರೂಪಕರು ನೀಡಿದ ಸತ್ಯ ಮತ್ತು ಸುಳ್ಳು ಸಂಗತಿಗಳನ್ನು ಸ್ಪರ್ಧಿಗಳು ಸರಿಯಾಗಿ ಆರಿಸಿದರೆ 1 ಲಕ್ಷ ರೂಪಾಯಿ ಗೆಲ್ಲಬಹುದು. ಎರಡನೇ ಸುತ್ತಿನಲ್ಲಿ ಸ್ಪರ್ಧಿಗಳಿಗೆ ಊಟದ ಸವಾಲು ಎದುರಾಗುತ್ತೆ. ಇದರಲ್ಲಿ ಗೆದ್ದವರಿಗೆ 2 ಲಕ್ಷ ರೂಪಾಯಿ ಸಿಗಲಿದೆ. ಹಾಗೇ ಕೊನೆಯ ಸುತ್ತಿನಲ್ಲಿ ಕೇವಲ ಇಬ್ಬರು ಸ್ಪರ್ಧಿಗಳು ಆಟ ಆಡುತ್ತಾರೆ. ಇಲ್ಲಿ ಗೆದ್ದವರಿಗೆ 3 ಲಕ್ಷ ರೂಪಾಯಿ ಸಿಗುತ್ತೆ.

  ಇದನ್ನೂ ಓದಿ : ದರ್ಶನ್ ‘ಡೆವಿಲ್’ಗೆ ಹೀರೋಯಿನ್ ಫಿಕ್ಸ್; ಡಿಬಾಸ್ ಗೆ ಜೊತೆಯಾದ್ರು ಕರಾವಳಿ ಬೆಡಗಿ!

  ಪ್ರಾರಂಭ ಯಾವಾಗ ?

  ‘Huu ಅಂತೀಯಾ…Uhuu ಅಂತೀಯಾ’ ಮೇ 19 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ. ಮೊದಲ ಸಂಚಿಕೆಯಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್ ಮೂವರು ಸೆಲೆಬ್ರೆಟಿಗಳು ಭಾಗವಹಿಸುತ್ತಿದ್ದಾರೆ.

  Continue Reading

  LATEST NEWS

  Trending