Monday, January 24, 2022

ರಾಜ್ಯದ ಈ ಏಕೈಕ ಗ್ರಾಮದಲ್ಲಿ ಕೊರೊನಾಕ್ಕೆ ನೋಎಂಟ್ರಿ..! ಯಾಕೆ ಗೊತ್ತಾ..!?

ಬೆಳ್ತಂಗಡಿ : ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಸರಕಾರಗಳು ಇನ್ನಿಲ್ಲದ ಪ್ರಯತ್ನವನ್ನು ನಡೆಸುತ್ತಿದೆ. ಎಷ್ಟೋ ಕೊರೊನಾ ವಾರಿಯರ್ಸ್ ಗಳು ಕೊರೊನಾ ವಿರುದ್ಧ ಹೋರಾಟ ಮಾಡುತ್ತಲೇ ಪ್ರಾಣ ತೆತ್ತಿದ್ದಾರೆ.   

ನಾಡಿನಾದ್ಯಂತ ಅಸಂಖ್ಯಾತ ರೋಗಿಗಳು ಕೊರೊನಾದಿಂದ ಸಾವನ್ನಪಿದ್ದಾರೆ. ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕೊರೊನಾ ಭಾದಿಸಿದರೂ ಕರಾವಳಿ ಜಿಲ್ಲೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಬಾಂಜಾರು ಮಲೆ ಎಂಬ ಪುಟ್ಟ ಗ್ರಾಮಕ್ಕೆ ಈ ಮಹಾಮಾರಿಯ ಎಂಟ್ರಿಯೇ ಇಲ್ಲ ಅಂದ್ರೇ ನಂಬ್ತೀರಾ..?.

ನಾಡು ಹಾಗೂ ವಿಶ್ವಕ್ಕೆ ಕೊರೊನಾ ಮೊದಲನೇ ಹಾಗೂ ಇದೀಗ 2 ನೇ ಅಲೆ ಕೂಡ ಗಂಭೀರ ರೂಪದಲ್ಲಿ ಬಾಧಿಸಿದ್ದು ಅಪಾರ ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸಿದೆ ಆದ್ರೂ ಕರಾವಳಿಯ ಈ ಪುಟ್ಟ ಬಾಂಜಾರು ಮಲೆ ಗ್ರಾಮ ಮಾತ್ರ ಕೊರೊನಾ ಫ್ರೀ ಗ್ರಾಮವಾಗಿದ್ದು ಇಲ್ಲಿನ ಜನ ನೆಮ್ಮದಿಯ ಬದುಕು ಬದುಕುತ್ತಿದ್ದಾರೆ.

ಆದರೆ ಮಹಾಮಾರಿ ಕೊರೋನಾ ಸೋಂಕಿನ ವಿರುದ್ಧ ಹಳ್ಳಿಯ ಜನ ಮಾತ್ರ ಒಗ್ಗಟ್ಟಿನ ಹೋರಾಟ ಮುಂದುವರೆಸಿದ್ದಾರೆ. ಸದ್ಯ ಈ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಕುಟುಂಬಗಳು 170ಕ್ಕೂ ಹೆಚ್ಚು ಜನ ವಾಸ ಮಾಡಿಕೊಂಡಿದ್ದಾರೆ.

ಸ್ವಾವಲಂಬಿಯ ಬದುಕು ಸಾಗಿಸುತ್ತಿರುವ ಇಲ್ಲಿಯ ಜನರು ಕೊರೊನಾ ಸಾಂಕ್ರಾಮಿಕ ರೋಗದ ಕಾರಣ ಪೇಟೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಗ್ರಾಮದ ಇಬ್ಬರು ಮಾತ್ರ ಪೇಟೆಗೆ ಹೋಗಿ ಎಲ್ಲಾ ಗ್ರಾಮಸ್ಥರಿಗೆ ದಿನಸಿ ಇತರ ಅಗತ್ಯ ವಸ್ತುಗಳನ್ನು ತರುತ್ತಾರೆ.

ಇದಕ್ಕೂ ಮುನ್ನ ಗ್ರಾಮದಲ್ಲಿ ಸಂಚಾರ ಮಾಡಿ ಮನೆ ಮನೆಗಳಿಂದ ದಿನಸಿ ಚೀಟಿ ಸಂಗ್ರಹಿಸುತ್ತಾರೆ. ಇನ್ನು ಎಷ್ಟು ಶಿಸ್ತು ಅಳವಡಿಸಿದ್ದಾರೆ ಅಂದ್ರೆ ಗ್ರಾಮದೊಳಗೆ ಹೊರಗಿನಿಂದ ಯಾರೂ ಬರುವಂತಿಲ್ಲ ಮತ್ತು ಯಾರೂ ಗ್ರಾಮಸ್ಥರು ಕೂಡ ಹೊರಹೋಗುವಂತಿಲ್ಲ.

ಈ ಸ್ವಯಂ ಶಿಸ್ತನ್ನು ಬಂಜಾರು ಗ್ರಾಮ ಪ್ರತಿಯೊಬ್ಬ ಗ್ರಾಮಸ್ಥ ಕೂಡ ಯಾತಾವತ್ತಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಇದೇ ಶಿಸ್ತು ಕೊರೊನಾ ಮುಕ್ತ ಗ್ರಾಮ ಮಾಡಲು ಸಹಕಾರಿಯಾಗಿದೆ.

ಗ್ರಾಮ ಪಾಲಿಸಿಕೊಂಡು ಬರುತ್ತಿರುವ ಸಾಮಾಜಿಕ ಕಾಳಜಿ ಕೂಡ ಎಲ್ಲೆಡೆ ಮಚ್ಚುಗೆ ಪಾತ್ರವಾಗಿದೆ…

Hot Topics

ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಧನ ಸಹಾಯ ಹಾಗೂ ಅಕ್ಕಿ ವಿತರಣೆ

ಕಾರ್ಕಳ: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್ ರವರು ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ಟ್ರಸ್ಟ್ ವತಿಯಿಂದ ಮಿತ್ತಬೈಲ್...

ಯಕ್ಷಗಾನ ಕಲಾವಿದ ಗೋವಿಂದ ಶೇರಿಗಾರ್ ನಿಧನ: ಯಕ್ಷಗಾನ ಕಲಾರಂಗ ಸಂತಾಪ

ಕುಂದಾಪುರ: ಗಂಡುಕಲೆಯಲ್ಲಿ ಸ್ತ್ರೀ ವೇಷಧಾರಿ ಪಾತ್ರ ಮಾಡುತ್ತಿದ್ದ ಮಾರ್ಗೋಳಿ ಗೋವಿಂದ ಶೇರಿಗಾರ್ (96) ನಿಧನರಾಗಿದ್ದು ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.ಬಡಗುತಿಟ್ಟು ಪುರಾಣ ಪ್ರಸಂಗಗಳಲ್ಲಿ ಅತ್ಯಂತ ಪ್ರಸಿದ್ಧವಾದ ದೇವಿ ಮಹಾತ್ಮೆ ಪ್ರಸಂಗಗಳಲ್ಲಿ ಮೊದಲು...

ಮೂಡುಬಿದಿರೆ: ಕಾರು ಢಿಕ್ಕಿ- ಪಾದಾಚಾರಿ ಸ್ಥಳದಲ್ಲೇ ಮೃತ್ಯು

ಮೂಡುಬಿದಿರೆ: ಇಲ್ಲಿನ ಕಲ್ಲಮುಂಡ್ಕೂರು ಪೇಟೆಯ ರಸ್ತೆಯಲ್ಲಿ ಪಾದಾಚಾರಿಯೋರ್ವರು ಹೋಗುತ್ತಿದ್ದಾಗ ರಿಡ್ಸ್ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಪಾದಾಚಾರಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.ಸಂಪಿಗೆಯ ಇಡ್ಡಬೆಟ್ಟು ನಿವಾಸಿ 53 ವರ್ಷದ ಹರೀಶ್...