Connect with us

LATEST NEWS

ಕನ್ನಡ ತಾಯಿಗೆ ಮತ್ತೆ ಅವಮಾನ : ಕನ್ನಡ ಕೊಳಕು ಭಾಷೆ ಎಂದು ಬಿಂಬಿಸಿದ ಖಾಸಗಿ ವೆಬ್ ಸೈಟ್..!

Published

on

ಬೆಂಗಳೂರು : ಕನ್ನಡ ತಾಯಿಗೆ ಪದೇ ಪದೇ ಅವಮಾನ ವಾಗುತ್ತಾಲೇ ಇದೆ. ಇದೀಗ ಯಾರೋ ಒಬ್ಬ ಧೂರ್ತ ತನ್ನ ವೆಬೈಸೈಟಿನಲ್ಲಿ ಕನ್ನಡವನ್ನು ಕೊಳಕು ಭಾಷೆ ಎಂದು ನಮೂದಿಸಿದ್ದು ಇದೀಗ ಆರು ಕೋಟಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದಕ್ಕೆ ಪೂಕ ಎಂಬಂತೆ ಗೂಗಲ್ ನಲ್ಲಿ ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು ಅಂತ ಹುಡುಕಿದಾಗ ಆಶ್ಚರ್ಯಕರಎಂಬತೆ ಕನ್ನಡ ಭಾಷೆ ಎಂಬುದಾಗಿ ಉತ್ತರ ಬಂದಿದೆ.

ಅಗ್ಲಿಯೆಸ್ಟ್ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ಕನ್ನಡ ಎಂಬ ಉತ್ತರವನ್ನು ಕಾಸಗಿ ವೆಬ್’ಸೈಟ್ ಒಂದು ನೀಡಿರುವುದು ಸದ್ಯ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅನಾವಶ್ಯಕವಾಗಿ ಕನ್ನಡಿಗರನ್ನು, ಕನ್ನಡ ಭಾಷೆಯನ್ನು ಕೀಳೆಂದು ಬಿಂಬಿಸುವ ಯತ್ನ ಮಾಡಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

“ಡೆಪ್ಟ್ ಕಾನ್ಸಲಿಡೇಶನ್ ಸ್ಕ್ವಾಡ್.com ಎಂಬ ವೆಬ್ ಸೈಟ್ ಜಾಲತಾಣದಲ್ಲಿ ಕನ್ನಡದ ಬಗ್ಗೆ ಕೀಳಾಗಿ ಬರೆಯಲಾಗಿದ್ದು, ಕನ್ನಡಿಗರು ಈ ವೆಬ್’ಪೇಜ್ ನ್ನು ರಿಪೋರ್ಟ್ ಮಾಡಿದ್ದಾರೆ.

ಜನರ ಆಕ್ರೋಶಕ್ಕೆ ಮಣಿದ ಗೂಗಲ್ ತನ್ನ ಸರ್ಚ್ಂಗ್ ನಲ್ಲಿ ವೆಬ್ ಸೈಟ್ ನ್ನ ಬ್ಲಾಕ್ ಮಾಡಿದೆ. ಹೆಚ್ಚಿನ ಜನರನ್ನು ಸೆಳೆಯುವ ಮತ್ತು ಟ್ರೆಂಡ್ ಆಗುವ ಉದ್ದೇಶದಿಂದ ವೆಬ್ ಸೈಟ್ ಇಂಥಹ ಮಾಹಿತಿ ನೀಡಿ ವಿವಾದ ಸೃಷ್ಟಿಸಿದೆ ಎಂದು ಹೇಳಲಾಗುತ್ತಿದೆ.

ಇನ್ನು ಇಂತಹ ಉತ್ತರ ನೀಡುತ್ತಿದ್ದ ವೆಬ್ ಸೈಟ್ ವಿರುದ್ಧ ಸದ್ಯ ಕನ್ನಡಿಗರು ಛೀಮಾರಿಯನ್ನ ಹಾಕ್ತಾ ಇದ್ದಾರೆ.

 ಗೂಗಲ್ ವಿರುದ್ದ ಕಾನೂನು ಕ್ರಮ…!

ಈ ವಿಚಾರವನ್ನು ಸಚಿವ ಅರವಿಂದ ಲಿಂಬಾವಳಿ ಅವರ ಗಮನಕ್ಕೆ ತಂದಾಗ, ಅವರು ಇದು ಅತ್ಯಂತ ಖಂಡನೀಯ ಸಂಗತಿ. ಗೂಗಲ್ ಆಗಲಿ ,ಬೇರೆ ಯಾರೇ ಆಗಲಿ ಕನ್ನಡ ಭಾಷೆ ಬಗ್ಗೆ ಗೌರವವಿಲ್ಲದೆ ವರ್ತಿಸಿದರೆ ಅಥವಾ ಕನ್ನಡಕ್ಕೆ ಅಪಮಾನ ಎಸಗಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಕನ್ನಡ ಭಾಷೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ ಭಾರತದ ಶಾಸ್ತ್ರೀಯ ಭಾಷೆ ಎಂಬ ಹೆಗ್ಗಳಿಕೆ ಪಡೆದಿರುವ ಭಾಷೆಯ ಬಗ್ಗೆ ಕೀಳಾಗಿ ಮಾತಾಡಿದರೂ ಅದನ್ನು ಸಹಿಸಲಾಗುವುದಿಲ್ಲ, ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅವರಿಗೆ ಈ ಸಂಬಂಧ ಕಾನೂನು ಇಲಾಖೆಯ ಜೊತೆಗೂಡಿ ಚರ್ಚಿಸಿ ಕೂಡಲೇ ಗೂಗಲ್ ಗೆ ನೋಟಿಸ್ ನೀಡಲು ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.

ತಾನು ಮಾಡಿದ ಪ್ರಮಾದಕ್ಕೆ ಗೂಗಲ್ ಕ್ಷಮಾಯಾಚನೆ : 

ಕನ್ನಡಿಗರ ವ್ಯಾಪಕ ಆಕ್ರೋಶಕ್ಕೆ ಗುರಿಯಾದ ಗೂಗಲ್ ಬಳಿಕ ಕನ್ನಡಿಗರ ಕ್ಷಮೆಯಾಚಿಸಿದೆ. ‘ ಹುಡುಕುವುದು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ, ಕೆಲವೊಮ್ಮೆ ಇಂಟರ್ ನೆಟ್ ನಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶಗಳು ಆಶ್ಚರ್ಯವನ್ನುಂಟು ಮಾಡುತ್ತದೆ. ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು. ಆದರೆ ಯಾವುದೇ ಒಂದು ಸಮಸ್ಯೆ ಎದುರಾದಾಗ ಹಾಗೂ ಅದು ನಮ್ಮ ಗಮನಕ್ಕೆ ಬಂದಾಗ ನಾವು ಸಮರ್ಪಕ ಕ್ರಮ ಕೈಗೊಳ್ಳುತ್ತೇವೆ, ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆಯಾಚಿಸುತ್ತಿದ್ದೇವೆ’ ಎಂದು ಗೂಗಲ್ ಸ್ಪಷ್ಟನೆ ನೀಡಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

ನರ್ಸ್‌ಗೆ ಶಾಕ್ ನೀಡಿದ ಅಂಬ್ಯುಲೆನ್ಸ್‌..! ಇದು ಮನಕಲಕುವ ಘಟನೆ..!

Published

on

ನಿರಂಜಿನಿ… ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿರೋ ಆಸ್ಪತ್ರೆಯ ತುರ್ತು ಸೇವಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯುವತಿ. ಮುಂಜಾನೆ ಆಸ್ಪತ್ರೆಗೆ ಬಂದ್ರೆ ಡ್ಯೂಟಿ ಮುಗಿಸಿ ಮತ್ತೆ ಮನೆಗೆ ವಾಪಾಸಾಗೋದು ಸಂಜೆಯ ವೇಳೆಗೆ. ಆಸ್ಪತ್ರೆಯಲ್ಲಿರೋ ಆಕೆಗೆ ಸಾವು ನೋವು ಎಲ್ಲವನ್ನೂ ನೋಡಿ ಅಭ್ಯಾಸ ಆಗಿದೆ. ಆದ್ರೆ ಇಂದು ಮಾತ್ರ ಅಂಬ್ಯುಲೆನ್ಸ್‌ನಲ್ಲಿ ಬಂದಿರೋ ಮೃತ ದೇಹ ನೋಡಿ ಆಕೆಯ ಆಕ್ರಂದನ ಮುಗಿಲು ಮುಟ್ಟಿದೆ. ಆಕೆಯ ಆಕ್ರಂದನ ನೋಡಿ ಶಾಕ್ ಆದ ಇತರ ಸಿಬ್ಬಂದಿ ವಿಚಾರ ತಿಳಿದ ಬಳಿಕ ತಾವೂ ಕಂಬನಿ ಮಿಡಿದಿದ್ದಾರೆ.

ಇಂದು ನಿರಂಜಿನಿ ಆಸ್ಪತ್ರೆಗೆ ಬಂದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಡ್ಯೂಟಿಯಲ್ಲಿದ್ದ ವೇಳೆ ಅಂಬ್ಯುಲೆನ್ಸ್ ಒಂದು ವೇಗವಾಗಿ ಬಂದು ಗಂಭೀರವಾಗಿದ್ದ ಇಬ್ಬರನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಶಿಫ್ಟ್‌ ಮಾಡಿದೆ. ದೇಹ ಜರ್ಜರಿತವಾಗಿದ್ದ ಒಂದು ದೇಹವನ್ನು ಅಂಬ್ಯುಲೆನ್ಸ್‌ನಿಂದ ಇಳಿಸಿದಾಗ ಅದಾಗಲೇ ಆ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮತ್ತೊಂದು ಮಹಿಳೆಯೂ ಗಂಭೀರವಾಗಿದ್ದು ತಕ್ಷಣ ಅವರನ್ನು ತುರ್ತು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಈ ವೇಳೆ ಮೃತ ದೇಹವನ್ನು ನೋಡಿದ ನಿರಂಜನಿ ಇದ್ದಕ್ಕಿದ್ದಂತೆ ಜೋರಾಗಿ ಅಳಲು ಆರಂಭಿಸಿದ್ದಾಳೆ. ಆಕೆಯ ಅಳುವಿಗೆ ಕಾರಣವಾಗಿದ್ದು ಅಲ್ಲಿದ್ದ ಮೃತ ದೇಹ ಆಕೆಯ ತಂದೆಯದೇ ಆಗಿದ್ದು.

ಮುಂಜಾನೆ ತಂದೆ ತಾಯಿ ಇಬ್ಬರೂ ಅಜ್ಜಾವರ ಗ್ರಾಮದಲ್ಲಿನ ಕೆಎಫ್‌ಡಿಸಿಗೆ ಕೆಲಸಕ್ಕೆ ಹೋಗಿ ವಾಪಾಸಾಗುವಾಗ ಜೀಪ್ ಒಂದು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.  ಜೀಪ್ ಅಡಿಗೆ ಬಿದ್ದಿದ್ದ ತಂದೆ ವಿನಾಯಕ ಮೂರ್ತಿ ಮೃ*ತ ಪಟ್ಟಿದ್ದರೆ, ತಾಯಿ ಮಂಜುಳ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ರೆ ಇದ್ಯಾವುದು ವಿಚಾರ ಗೊತ್ತಿಲ್ಲದ ನಿರಂಜಿನಿ ಎಂದಿನಂತೆ ಇದೂ ಒಂದು ಅಕ್ಸಿಡೆಂಟ್ ಕೇಸ್ ಅಂತ ಅಟೆಂಡ್ ಮಾಡಲು ಹೋಗಿದ್ದಾಳೆ. ಅಂಬ್ಯುಲೆನ್ಸ್‌ನಲ್ಲಿ ತಂದೆಯ ಮೃತ ದೇಹ ಹಾಗೂ ಪ್ರಜ್ಞಾ ಹೀನ ಸ್ಥಿತಿಯಲ್ಲಿ ತಾಯಿಯನ್ನ ನೋಡಿದ್ರೆ ಮಗಳ ಪರಿಸ್ಥಿತಿ ಹೇಗಿರಬಹುದು ಅನ್ನೋದು ಊಹಿಸಲೂ ಅಸಾದ್ಯ. ತಾಯಿ ಮಂಜುಳ ಪರಿಸ್ಥಿತಿ ಕೂಡಾ ಗಂಭೀರವಾಗಿದ್ದು, ಬೆನ್ನು ಮೂಳೆಗೆ ಗಾಯವಾದ ಮಾಹಿತಿ ಇದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

LATEST NEWS

ಹೋಟೆಲ್​ನಲ್ಲಿ ಅ*ಗ್ನಿ ದುರಂತ; 6 ಮಂದಿ ಸಜೀವ ದ*ಹನ

Published

on

ಪಾಟ್ನಾ: ಹೋಟೆಲ್​ವೊಂದರಲ್ಲಿ ಆಕಸ್ಮಿಕವಾಗಿ ಬೆಂ*ಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 6 ಜನರು ಸಜೀವವಾಗಿ ದಹನಗೊಂಡು ಸಾ*ವನ್ನಪ್ಪಿದ್ದು ಹಲವು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದ ಪಾಟ್ನಾದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ರೈಲು ನಿಲ್ದಾಣದ ಸಮೀಪದ ಹೋಟೆಲ್​ನಲ್ಲಿ ಬೆಂ*ಕಿ ಹೊತ್ತಿಕೊಂಡ ಪರಿಣಾಮ ಸ್ಥಳದಲ್ಲೇ 6 ಜನರು ಮೃ*ತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಹೋಟೆಲ್‌ ಒಳಗಿದ್ದ ಹಲವರನ್ನು ರಕ್ಷಣೆ ಮಾಡಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ. ಬೆಂ*ಕಿಯಿಂದಾಗಿ ಹೋಟೆಲ್​​ನಲ್ಲಿನ ಎಲ್ಲ ವಸ್ತುಗಳೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.

ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅ*ಗ್ನಿ ಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮಾಹಿತಿ ಪ್ರಕಾರ ಹೋಟೆಲ್​ನಲ್ಲಿನ ಸುಮಾರು 45 ಜನರನ್ನು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಂಕಿಯಿಂದಾಗಿ ಸುಟ್ಟಗಾಯಗಳಿಂದ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

ಹೋಟೆಲ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಬೆಂ*ಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅಲ್ಲದೇ ಹೋಟೆಲ್​ನಲ್ಲಿ ಸುರಕ್ಷತಾ ಮಾನದಂಡಗಳನ್ನು ಸರಿಯಾಗಿ ಅನುಸರಿಸದ ಕಾರಣ 6 ಜನರ ಸಾ*ವಿಗೆ ಕಾರಣವಾಗಿದೆ. ಸದ್ಯ ಈ ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

FILM

ಹೊಸ ಅವತಾರದಲ್ಲಿ ZEE ಕನ್ನಡ ‘ಕಾಮಿಡಿ ಕಿಲಾಡಿಗಳು’… ಸ್ಟಾರ್ ನಿರೂಪಕರು ಈಗ ಜಡ್ಜಸ್? ಏನಿದು ಟ್ವಿಸ್ಟ್?

Published

on

ಬೆಂಗಳೂರು: ಜೀ ಕನ್ನಡ ವಾಹಿನಿ ವಿಭಿನ್ನ ರೀತಿಯ ಕಥೆಗಳನ್ನೊಳಗೊಂಡ ಧಾರವಾಹಿಗಳ ಜೊತೆಗೆ ರಿಯಾಲಿಟಿ ಶೋಗಳೂ ಜನರ ಮನಸ್ಸು ಗೆದ್ದಿದೆ. ಜೀ ಕನ್ನಡ ವಾಹಿನಿಯ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಗಳಲ್ಲಿ ಜನರನ್ನು ನಕ್ಕು ನಗಿಸುವ ರಿಯಾಲಿಟಿ ಶೋ ಅಂದ್ರೆ ಅದು ಕಾಮಿಡಿ ಕಿಲಾಡಿಗಳು… ಹೌದು, ನಗುವಿನ ಅಲೆಯಲ್ಲಿ ತೇಲಿಸಿ ಮನೆಯವರೆಲ್ಲರೂ ಒಟ್ಟಾಗಿ ಕೂತು ನೋಡುವಂತಹ ಶೋ ‘ಕಾಮಿಡಿ ಕಿಲಾಡಿಗಳು’.

zee

ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದ ಕಾರ್ಯಕ್ರಮವನ್ನು  ‘ಸೈಡ್‌ಗಿಡ್ರಿ ನಿಮ್‌ ಟೆನ್ಷನ್‌ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು’ ಎಂದು ಶೋ ಆರಂಭ ಮಾಡ್ತಾ ಇದ್ದು ಕರ್ನಾಟಕವನ್ನೇ ನಗುವಿನ ಕಡಲಲ್ಲಿ ತೇಲಿಸುವುದಿತ್ತು. ಇದೀಗ ಸೀಸನ್‌ 5 ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗ ಜೀ ವಾಹಿನಿ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ʼಮೂಲಕ ನಿಮ್ಮನ್ನು ಮನರಂಜಿಸಲು ಸಿದ್ಧವಾಗಿದೆ.

ಮುಂದೆ ಓದಿ..; “ನಿತ್ಯಾಮೆನನ್” ಚಿತ್ರರಂಗದಿಂದ ‘ಬ್ಯಾನ್’ ಆಗಲು ಕಾರಣವೇನು ಗೊತ್ತಾ? ಈ ಬಗ್ಗೆ ನಿತ್ಯಾ ಹೇಳಿದ್ದೇನು?

ಪ್ರೀಮಿಯರ್ ಲೀಗ್‌ನಲ್ಲಿ ಇರಲಿದ್ದಾರೆ 5 ಜಡ್ಜಸ್..!

ಈ ಕಾಮಿಡಿ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ಐವರು ನಿರೂಪಕರು ಇರಲಿದ್ದಾರೆ. ಸ್ಟೇಜ್‌ನಲ್ಲಿ ಕಂಟೆಂಸ್ಟೆಂಟ್‌ಗಳ ಕುರಿತು ಜಡ್ಜಸ್‌ ಗಳಲ್ಲಿ ಕಮೆಂಟ್ಸ್ ಕೆಳ್ತಾ ಇದ್ದ ನಿರೂಪಕರು ಈಗ ತಾವೇ ಜಡ್ಜ್‌ಮೆಂಟ್ ನೀಡಲು ಹೊರಟಿದ್ದಾರೆ. ಹೌದು, ನಿರೂಪಕರುಗಳಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರಂತೆ.

5 ತಂಡಗಳು.. 1 ಟ್ರೋಫಿಗಾಗಿ ಗುದ್ದಾಟ..!

zee

ಮೂಲಗಳ ಪ್ರಕಾರ ಈ ಬಾರಿಯ ಶೋನಲ್ಲಿ ಟಿ-20 ರೀತಿಯಲ್ಲಿ ಹೇಗೆ ತಂಡಗಳು, ಮಾಲೀಕರು , ಕ್ಯಾಪ್ಟನ್‌ಗಳು ಇರುತ್ತಾರೋ ಅದೇ ರೀತಿ ಇಲ್ಲಿಯೂ ಇರಲಿದೆ. ಕರ್ನಾಟಕದ 31 ಜಿಲ್ಲೆಗಳಿಂದ ಆಯ್ಕೆ ಮಾಡಿ ತಂದ ಕಲಾವಿದರನ್ನು ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲಾಗುವುದು. 5 ತಂಡಗಳು 1 ಟ್ರೋಫಿಗಾಗಿ ಗುದ್ದಾಟ ನಡೆಸಲಿದೆ. ಈ ಶೋ ವಾರಾಂತ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಬರೋಬ್ಬರಿ 1 ಲಕ್ಷ ಬಹುಮಾನ ಪಡೆಯುವ ಅವಕಾಶವಿದೆ. ಈ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ʼಗೆ ಐವರು ನಿರೂಪಕರು ಹೊಸ ಜವಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಹೊಸ ನಿರೂಪಕರನ್ನು ಈ ಶೋ ಮೂಲಕ ಕರೆ ತರಲಾಗುತ್ತಿದೆ ಎಂದು ವರದಿಯಾಗಿದೆ. ಆ ನಿರೂಪಕರು ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು ಇದಕ್ಕೆ ಇದೇ ಶನಿವಾರ ಹಾಗೂ ಭಾನುವಾರು ರಾತ್ರಿ 9ಗಂಟೆಗೆ ತೆರೆ ಬೀಳಲಿದೆ.

Continue Reading

LATEST NEWS

Trending