kerala
ಮಳೆ ನೀರಿನಿಂದ ತುಂಬಿದ್ದ ಬಾವಿ ಕ್ಷಣಾರ್ಧದಲ್ಲೇ ಖಾಲಿ ; ಬೆಚ್ಚಿಬಿದ್ದ ಕುಟುಂಬಸ್ಥರು
ಮಂಗಳೂರು/ಕೇರಳ: ಮಳೆಯಿಂದ ತುಂಬಿದ್ದ ಬಾವಿಯೊಂದು ಕ್ಷಣಾರ್ಧದಲ್ಲೇ ಸಂಪೂರ್ಣ ಭತ್ತಿದ ಘಟನೆ ಕೇರಳದ ಎಜುಕೋನ್ ಮೂಝಿ ಪ್ರದೇಶದ ಕಲ್ಯಾಣಿಯಲ್ಲಿರುವ ಸುನಿಲ್ದತ್ ಅವರ ಮನೆಯ ಹಿತ್ತಲಿನಲ್ಲಿ ಶುಕ್ರವಾರ (ನ.01) ರಾತ್ರಿ ಎಂಟು ಗಂಟೆ ಸುಮಾರಿಗೆ ನಡೆದಿರುವುದು ವರದಿಯಾಗಿದೆ.
ಈ ವಿಚಿತ್ರ ಘಟನೆ ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿದೆ. ಹಿತ್ತಲಿನಲ್ಲಿದ್ದ ಬಾವಿಯಿಂದ ಯಾರೋ ಗೊಣಗುತ್ತಿರುವ ಶಬ್ದ ಕೇಳಿ ಗಾಬರಿಗೊಂಡ ಮನೆಯವರು, ಮೊದ ಮೊದಲು ಕೇಳಿಬಂದ ಶಬ್ದಕ್ಕೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆದರೆ ಬಳಿಕ ಗಾಬರಿಗೊಂಡಿದ್ದರು.
ಘಟನೆ ವಿವರ :
ಮನೆಯ ಬಾವಿಯ ನೀರು ಬತ್ತಿ ಹೋಗಿತ್ತು. ಆದರೆ ಈ ಸಲದ ಮಳೆಗಾಲದಲ್ಲಿ ಅದು ತುಂಬಿ ತುಳುಕಿತ್ತು. ನೀರು ಬಾವಿಯ ತುತ್ತ ತುದಿಯ ತನಕ ಬಂದಿತ್ತು. ಹೀಗಿರುವಾಗ ಮನೆಯವರಿಗೆ ಬಾವಿಯಿಂದ ಯಾರೋ ಕರೆಯುವ ಮರುಗುವ ಸದ್ದು ಕೇಳಿ ಬರುತ್ತಿತ್ತು. ಆರಂಭದಲ್ಲಿ ಆ ಕಡೆ ಅಷ್ಟು ಗಮನಕೊಡದ ಮನೆಯವರು ಒಂದು ಸಲ ಹೊರಗಡೆ ಬಂದು ಬಾವಿ ಇಣುಕಿ ನೋಡಿದಾಗ ದೊಡ್ಡ ಅಘಾತ ಕಾದಿತ್ತು. ಅದೇನೆಂದರೆ ಮಳೆಯಿಂದ ತುಂಬಿ ತುಳುಕಿದ ಬಾವಿಯಲ್ಲಿ ಒಂದು ಹನಿ ನೀರಿರಲಿಲ್ಲ.
ಮಳೆ ಸುರಿಯುತ್ತಿದ್ದ ಕಾರಣ ಮನೆಯ ಸದಸ್ಯರು ಮನೆಯೊಳಗೆ ಇದ್ದರು. ಆರಂಭದಲ್ಲಿ ಹೊರಗಿನಿಂದ ಯಾರೋ ಕೂಗುವ ಸದ್ದು ಕೇಳಿ ಬಂದಿದೆ. ತಕ್ಷಣವೇ ಅನುಮಾನಗೊಂಡ ಮನೆಯವರು, ಹೊರಗೆ ಹೋಗಿ ನೋಡಿದರೆ ಏನೂ ಪತ್ತೆಯಾಗಿಲ್ಲ. ಶಬ್ದ ಹೆಚ್ಚಾದಾಗ ಬಾವಿಯ ಒಳಗಿನಿಂದ ಕೇಳಿಬರುತ್ತಿದ್ದನ್ನು ಗಮನಿಸಿದ್ದಾರೆ. ಈ ವೇಳೆ ಮಳೆ ನೀರಿನಿಂದ ತುಂಬಿದ್ದ ಬಾವಿಯಲ್ಲಿ ಹನಿ ನೀರು ಇಲ್ಲದೆ ಇರುವುದನ್ನು ಕಂಡು ಎಲ್ಲರೂ ಒಂದು ನಿಮಿಷ ಭಾರೀ ಅಚ್ಚರಿಗೆ ಒಳಗಾಗಿದ್ದಾರೆ.
ಇದನ್ನೂ ಓದಿ : ಕೇರಳದಲ್ಲೂ ವಕ್ಫ್ ಭೂ ವಿವಾದ; ಪ್ರತಿಭಟನೆಗೆ ಚರ್ಚ್‌ಗಳು ಸಾಥ್
ಬೆಚ್ಚಿ ಬಿದ್ದ ಕುಟುಂಬಸ್ಥರು, ಮಳೆ ನೀರಿನಿಂದ ತುಂಬಿದ್ದ ಬಾವಿಯಲ್ಲಿ ನೀರು ಇಲ್ಲದೆ ಇರುವುದು ಹೇಗೆ? ಇದಕ್ಕೆ ಕಾರಣವೇನು? ಅಸಲಿಗೆ ನೀರು ಖಾಲಿಯಾಗಿದ್ದೇಗೆ ಹಾಗೂ ಶಬ್ದ ಬರುತ್ತಿರುವುದು ಎಲ್ಲಿಂದ ಎಂಬ ಹತ್ತಾರು ಪ್ರಶ್ನೆಗಳಿಂದ ತಲೆಕಡಿಸಿಕೊಂಡಿದ್ದರು. ಈ ಘಟನೆ ಬಗ್ಗೆ ಮಾತನಾಡಿದ ರಜನಿ, ‘ನಾನು ಸೌಂಡ್ ಕೇಳ್ತಿದ್ದಂತೆ ಹೊರಗೆ ಓಡಿ ಬಂದೆ. ಆಗ ಬಾವಿಯ ತಳವು ಕಾಣಿಸುತ್ತಿತ್ತು. ಅಲ್ಲಿ ನೀರು ಇರಲಿಲ್ಲ, ಶಬ್ದದ ಹಿಂದಿರುವ ಕಾರಣವು ಕಂಡುಬರಲಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಲವಿಜ್ಞಾನಿ ಪರಿಶೀಲನೆ :
ಈ ಘಟನೆ ಬೆನ್ನಲ್ಲೇ ಭಯಗೊಂಡು ಅಂತರ್ಜಲ ಇಲಾಖೆಯ ಜಲವಿಜ್ಞಾನಿ ಎಸ್. ಅನುಜಾ ನೇತೃತ್ವದ ತಜ್ಞರ ತಂಡಕ್ಕೆ ಕರೆ ಮಾಡಿದ ವಾರ್ಡಂಗಂ ರಂಜಿನಿ ಅಜಯನ್, ತಕ್ಷಣವೇ ತಮ್ಮ ಮನೆಯ ಬಾವಿಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಘಟನೆಯನ್ನು ವಿವರಿಸಿದ್ದಾರೆ. ರಂಜಿನಿ ಅವರ ದೂರವಾಣಿ ಕರೆಯ ಮೇರೆಗೆ ಸ್ಥಳಕ್ಕೆ ಆಗಮಿಸಿ ಬಾವಿಯನ್ನು ಪರಿಶೀಲಿಸಿದ ಅನುಜಾ ತಂಡ, ರಚನಾತ್ಮಕ ದೋಷ ಉಂಟಾಗಿರುವ ಸುಳಿಯಲ್ಲಿ ನೀರು ಹರಿದಿದ್ದರಿಂದ ಬಾವಿಯ ಕೆಳಭಾಗದಲ್ಲಿ ಕೆಸರು ಉಂಟಾಗಿದೆ ಎಂಬುದು ಪ್ರಾಥಮಿಕ ತೀರ್ಮಾನವಾಗಿದೆ ಎಂದು ತಿಳಿಸಿದ್ದಾರೆ.
kerala
ಕೇರಳದಲ್ಲೂ ವಕ್ಫ್ ಭೂ ವಿವಾದ; ಪ್ರತಿಭಟನೆಗೆ ಚರ್ಚ್‌ಗಳು ಸಾಥ್
ಕೇರಳ/ಎರ್ನಾಕುಳಂ: ಕರ್ನಾಟಕದಲ್ಲಿ ವಕ್ಫ್ ಭೂ ವಿವಾದಕ್ಕೆ ಸಂಬಂಧಿಸಿ ಆಕ್ರೋಶ ಉಂಟಾಗಿರುವಂತೆಯೇ ನೆರೆ ರಾಜ್ಯ ಕೇರಳದಲ್ಲೂ ವಿವಾದ ಆರಂಭವಾಗಿದ್ದು, ಪ್ರತಿಭಟನೆಗಳೂ ನಡೆಯುತ್ತಿವೆ.
ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ವಿಧೇಯಕ-2024ನ್ನು ಬೆಂಬಲಿಸಿ ಎರ್ನಾಕುಳಂ ಜಿಲ್ಲೆಯ ಚೆರಾಯಿ ಮತ್ತು ಮುನಾಂಬಮ್ ಗ್ರಾಮಗಳಲ್ಲಿ ಚರ್ಚ್‌ಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆದಿದೆ.
ತಲೆಮಾರುಗ ಳಿಂದ ಕ್ರಿಶ್ಚಿಯನ್ ಕುಟುಂಬಗಳು ಹೊಂದಿರುವ ಆಸ್ತಿ ಮೇಲೆ ವಕ್ಫ್ ಮಂಡಳಿ ಕಾನೂನುಬಾಹಿರವಾಗಿ ಹಕ್ಕು ಸಾಧಿಸಲು ಯತ್ನಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಶೈಕ್ಷಣಿಕ ಉದ್ದೇಶಗಳಿಗಾಗಿ 1950ರಲ್ಲಿ ಕಲ್ಲಿಕೋಟೆಯ ಫಾರೂಕ್ ಕಾಲೇಜಿಗೆ ವಕ್ಫ್ ಗೆ ಸೇರಿರದ ನಮ್ಮ ಭೂಮಿಯನ್ನು ನೀಡಲಾಗಿತ್ತು. ಸದ್ಯ ಈ ಕೇಸ್ ಹೈಕೋರ್ಟ್‌ನಲ್ಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ವಕ್ಫ್ ಮಸೂದೆ ವಿರೋಧಿಸಿ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ನಿರ್ಣಯ ಅಂಗೀಕರಿಸಿ ದ್ದವು. ಅದಾಗ್ಯೂ ಎಲ್‌ಡಿಎಫ್ ನ ಭಾಗವಾಗಿರುವ ಸಿಪಿಐನ ರಾಜ್ಯ ಕಾರ್ಯದರ್ಶಿ ಬಿನೋಯ್, ವಕ್ಫ್ ಭೂಮಿಯೇ ಆಗಿರಲಿ, ದೇವಸ್ವಂ ಭೂಮಿಯೇ ಆಗಿರಲಿ, ಬಡಜನರನ್ನು ಒಕ್ಕೆಲೆಬ್ಬಿಸಬಾರದು ಎಂದಿದ್ದಾರೆ. ವಿಪಕ್ಷ ನಾಯಕಸತೀಶನ್ ಈ ಗ್ರಾಮದ ಜಾಗ ವಕ್ಫ್ ಗೆ ಸೇರಿಲ್ಲ. ಸರಕಾರ ಮನಸ್ಸು ಮಾಡಿದಲ್ಲಿ ಈ ಸಮಸ್ಯೆಯ ನ್ನು 10 ನಿಮಿಷದಲ್ಲಿ ಬಗೆಹರಿಸಬಹುದು ಎಂದಿದ್ದಾರೆ.
kerala
ದೇಹ ಸುಖಕ್ಕಾಗಿ 65ರ ಮಲಯಾಳಂ ನಟನನ್ನು ಮದುವೆಯಾದ ನಟಿ; ಫೋಟೋಸ್ ಫುಲ್ ವೈರಲ್
ಮಂಗಳೂರು/ಕೇರಳ: ಮಲಯಾಳಂ ಕಿರುತೆರೆಯ ಜನಪ್ರಿಯ ನಟ ವೇಣುಗೋಪಾಲ್ ಅವರ ಮದುವೆ ನಟಿ ದಿವ್ಯಾ ಶ್ರೀಧರ್ ಜೊತೆ ನಡೆದಿದೆ. ಇತ್ತೀಚೆಗೆ ಗುರುವಾಯೂರು ದೇವಸ್ಥಾನದಲ್ಲಿ ಇವರಿಬ್ಬರ ವಿವಾಹ ನಡೆದಿದ್ದು, ಅದರ ಫೋಟೋಸ್ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋಸ್ ನೋಡಿದ ಅನೇಕರು ಈ ಜೋಡಿಯ ಬಗ್ಗೆ ಕೆಟ್ಟದಾಗಿ ಕಮಂಟ್ ಮಾಡಿದ್ದಾರೆ. ಇದೊಂದು ಸೆಕ್ಸ್ ಆಸಕ್ತಿಗಾಗಿ ಬೆಸೆದ ಸಂಬಂಧ ಎಂದು ಸಾಕಷ್ಟು ಜನರು ಟೀಕೆ ಮಾಡಿದ್ದಾರೆ.
ನೂತನವಾಗಿ ಮದುವೆಯಾದ ಜೋಡಿ ಸಿನೆಮಾ ಹಿನ್ನಲೆಯವರಾಗಿದ್ದು, ನಟನೆಯ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಇದೇ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಪ್ತಪದಿ ತುಳಿದಿದ್ದಾರೆ. ಗುರುವಾಯೂರು ಶ್ರೀಕೃಷ್ಣನ ಸನ್ನಿದಿಯಲ್ಲಿ ತಮ್ಮ ಅತ್ಯಾಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ.
ನಟಿ ದಿವ್ಯಾ ಶ್ರೀಧರ್ ಅವರಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದು, ಮಕ್ಕಳೂ ಕೂಡಾ ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಕ್ರಿಸ್ ವೇಣುಗೋಪಾಲನ್ ಅವರು ಮದುವೆಯಲ್ಲಿ ಉದ್ದನೆಯ ಬಿಳಿ ಗಡ್ಡದಲ್ಲಿ ಕಾಣಿಸಿಕೊಂಡಿದ್ದು, ನಟಿ ದಿವ್ಯಾ ಅವರಿಗಿಂತ ವಯಸ್ಸಿನಲ್ಲಿ ಸಾಕಷ್ಟು ದೊಡ್ಡವರಂತೆ ಕಾಣುತ್ತಿದ್ದಾರೆ. ಹೀಗಾಗಿ ಈ ಫೋಟೋ ವೀಕ್ಷಿಸಿದ ಹಲವರು ಕೆಟ್ಟ ಕಮೆಂಟ್ ಮಾಡಿದ್ದಾರೆ.
ಜನರ ಕಮೆಂಟ್ ಬಗ್ಗೆ ತೀಕ್ಷ್ಣವಾಗಿ ಉತ್ತರ ನೀಡಿರುವ ನಟಿ ದಿವ್ಯಾ ಶ್ರೀಧರ್ ಮದುವೆ ಹಾಗೂ ವಯಸ್ಸಿನ ಬಗ್ಗೆ ಮಾತನಾಡಿದವರಿಗೆ ತಿರುಗೇಟು ನೀಡಿದ್ದಾರೆ. “ನಾನು ನನ್ನ ಮಕ್ಕಳನ್ನು ಸುರಕ್ಷಿತವಾಗಿ ಬೆಳೆಸಲು ಬಯಸುತ್ತೇನೆ ಹಾಗೂ ಮಕ್ಕಳಿಗೆ ತಂದೆ ಮತ್ತು ನನಗೆ ಗುರುತು ಹೇಳಿಕೊಳ್ಳಲು ಪತಿ ಬೇಕು” ಎಂದು ಮದುವೆಯ ಉದ್ದೇಶ ತಿಳಿಸಿದ್ದಾರೆ. ಅದೇ ರೀತಿ ಸೆಕ್ಸ್ ವಿಚಾರ ಮಾತನಾಡಿದ ಜನರಿಗೆ ಖಾರವಾಗಿ ಉತ್ತರಿಸಿರುವ ದಿವ್ಯಾ ಶ್ರೀಧರ್ “ಲೈಂಗಿಕತೆಯ ಬಗ್ಗೆ ಎಲ್ಲಾದರೂ ಬರೆಯಲಾಗಿದೆಯೇ ? ಲೈಂಗಿಕತೆ ಇಲ್ಲದೆ ಬದುಕಲು ಸಾಧ್ಯವಿಲ್ಲವೇ ? ಲೈಂಗಿಕತೆಯು ಜೀವನದ ಒಂದು ಭಾಗವಾಗಿದೆ. ನನ್ನ ಪತಿಗೆ 49 ವರ್ಷ ಹಾಗೂ ನನಗೆ 40 ವರ್ಷ ಪ್ರಾಯವಾಗಿದೆ. ನಮ್ಮ ವಯಸ್ಸಿನ ಬಗ್ಗೆ ಕೆಟ್ಟದಾಗಿ ಮಾತನಾಡುವವರು ಮಾತನಾಡಿ. 60 ವರ್ಷ ಅಥವಾ 70 ವರ್ಷವಾದ್ರೂ ಮದುವೆಯಾದರೆ ತಪ್ಪೇನಿದೆ” ? ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ, ಆಡಿಕೊಳ್ಳುವ ಬಾಯಿಯನ್ನು ಮುಚ್ಚಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
kerala
ಕಾಸರಗೋಡು : ‘ಮಗು’ ವನ್ನು ರಕ್ಷಿಸಿದ ‘ದೈವ’ನರ್ತಕ ; ವಿರೋಚಿತ ಕಥೆ !!
ಕಾಸರಗೋಡು: ಕೇರಳ ಕಾಸರಗೋಡಿನ ನೀಲೇಶ್ವರದ ಅಂಜೂತಾಂಬಲಂ ವೀರರ್ಕಾವು ದೈವಸ್ಥಾನದಲ್ಲಿ ಸೋಮವಾರ ತಡರಾತ್ರಿ ನಡೆದ ವಾರ್ಷಿಕ ಕಳಿಯಾಟ್ಟಂ ಸಂದರ್ಭದಲ್ಲಿ ಪಟಾಕಿ ಸ್ಪೋಟದಿಂದ ಸಂಭವಿಸಿದ ಭೀಕರ ದುರಂತದಲ್ಲಿ 150 ಮಂದಿ ಗಂಭೀರ ಗಾಯಗೊಂಡಿದ್ದರೆ ಅದರಲ್ಲಿ 8 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಮಧ್ಯೆ ದುರಂತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಅನೇಕರು ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸಿದ್ದಾರೆ.
ಎಲ್ಲಕ್ಕೂ ಮಿಗಿಲಾಗಿ ‘ದೈವ ನರ್ತಕ’ನೇ ತನ್ನ ಪ್ರಾಣವನ್ನು ಒತ್ತೆ ಇಟ್ಟು ಪುಟ್ಟ ಮಗುವನ್ನು ರಕ್ಷಿಸಿದ್ದ ಘಟನೆ ನಡೆದಿದೆ. ತನ್ನ ಜೀವಕ್ಕೆ ಅಪಾಯವಿದ್ದರೂ ಲೆಕ್ಕಿಸದೆ ಬೆಂಕಿಯ ಚೆಂಡಿನ ಮಧ್ಯೆ ಸಿಕ್ಕಿಬಿದ್ದಿದ್ದ ಮಗುವೊಂದನ್ನು ರಕ್ಷಿಸಿದ್ದು ಸುದ್ದಿಯಾಗುತ್ತಿದೆ. ಮಧ್ಯರಾತ್ರಿ ಕಿವಿಗಡಚಿಕ್ಕುವ ಶಬ್ದದೊಂದಿಗೆ ದೈವಸ್ಥಾನದ ಪಕ್ಕವೇ ಇದ್ದ ಪಟಾಕಿ ದಾಸ್ತಾನು ಸಿಡಿಯಲಾರಂಭಿಸಿದಾಗ ಬೆಂಕಿಯ ಉಂಡೆಗಳು ಗಗನಕ್ಕೇರತೊಡಗಿದ್ದುವು, ಇದನ್ನು ನೋಡಿದ ಜನ, ಭಕ್ತರು ಹೆದರಿ ಧಿಕ್ಕಾಪಾಲಾಗಿ ಓಡಿದ್ದಾರೆ. ಈ ಮಧ್ಯೆ ಪುಟ್ಟ ಮಗುವೊಂದು ಬೆಂಕಿಯ ನಡುವೆ ಸಿಕ್ಕಿ ಹಾಕಿಕೊಂಡಿದೆ.
ಪಕ್ಕದಲ್ಲೇ ಇದ್ದ ದೈವ ಇದನ್ನು ಗಮನಿಸಿ ಕ್ಷಣ ಮಾತ್ರದಲ್ಲಿ ಧಾವಿಸಿ ಹೋಗಿ ಬೆಂಕಿ ಗೋಳದ ನಡುವಿನಿಂದ ಮಗುವನ್ನು ರಕ್ಷಿಸಿ ಎತ್ತಿಕೊಂಡು ಬಂದಿದೆ. ಅದೃಷ್ಟವಶಾತ್ ಮಗು ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದೆ.
ಮಗುವನ್ನು ರಕ್ಷಣೆ ಮಾಡಿದ್ದ ದೈವ ನರ್ತಕ ನಿಧಿನ್ ಪಣಿಕ್ಕರ್ ವೃತ್ತಿಯಿಂದ ಪೊಲೀಸ್ ಅಧಿಕಾರಿ. ದೈವಸ್ಥಾನದ ವಾರ್ಷಿಕ ಕಳಿಯಾಟ್ಟಂಗೆ ಅವರು ತಪ್ಪದೆ ತೆಯ್ಯಂ ಸೇವೆ ಮಾಡುತ್ತಾರೆ. ಬೆಂಕಿ ಹತ್ತಿಕೊಂಡಾಗ ಅವರ ಕರ್ತವ್ಯ ಪ್ರಜ್ಞೆ ಜಾಗೃತವಾಗಿತ್ತು. ದೈವದ ಪೋಷಾಕಿನಲ್ಲೇ ಅವರು ರಕ್ಷಣಾ ಕಾರ್ಯ ಮಾಡಿದ್ದಾರೆ. “ಎಲ್ಲೆಡೆ ಕೋಲಾಹಲ, ಬೊಬ್ಬೆ ಕೇಳಿಸಲಾರಂಭಿಸಿತು. ಜನರು ಹೆದರಿ ದಿಕ್ಕಾಪಾಲಾಗಿ ಓಡುತ್ತಿದ್ದರು. ಈ ನಡುವೆ ಬೆಂಕಿಯ ನಡುವಿನಿಂದ ಮಗುವಿನ ಅಳು ಕೇಳಿಸಿತು. ಆ ಕ್ಷಣ ನನಗೇನಾಗಬಹುದು ಎಂದು ಯೋಚಿಸಲಿಲ್ಲ. ಹೇಗಾದರೂ ಮಗುವನ್ನು ರಕ್ಷಿಸಬೇಕೆಂದು ಮಾತ್ರ ನನ್ನ ಮನಸ್ಸಿನಲ್ಲಿತ್ತು. ಹೀಗಾಗಿ ಬೆಂಕಿಯ ಮಧ್ಯೆ ನುಗ್ಗಿದೆ. ದೈವ ಕೃಪೆಯಿಂದ ನನಗೂ, ಮಗುವಿಗೂ ಹೆಚ್ಚು ಹಾನಿಯಾಗಿಲ್ಲ” ಎಂದು ನಿಧಿನ್ ಪಣಿಕ್ಕರ್ ಹೇಳಿದ್ದಾರೆ. ಮಗುವನ್ನು ರಕ್ಷಿಸಿದ ದೈವದ ವಿರೋಚಿತ ಕಥೆ ಈಗ ಎಲ್ಲರ ಬಾಯಲ್ಲೂ ಹರಿಯತೊಡಗಿದೆ.
- LATEST NEWS6 days ago
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಕ್ಕಿಯ ಜೊತೆಗೆ ಉಚಿತವಾಗಿ ಸಿಗಲಿವೆ ಈ 9 ವಸ್ತುಗಳು.!
- DAKSHINA KANNADA3 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- kerala6 days ago
ಕಾಸರಗೋಡು : ‘ಮಗು’ ವನ್ನು ರಕ್ಷಿಸಿದ ‘ದೈವ’ನರ್ತಕ ; ವಿರೋಚಿತ ಕಥೆ !!
- LATEST NEWS7 days ago
ಮಹಿಳೆಯರೇ.. ನೀವು ಈ ಪಾನೀಯ ಕುಡಿದ್ರೆ 10 ವರ್ಷ ಸಣ್ಣ ಕಾಣೋದು ಗ್ಯಾರಂಟಿ.. !!