LATEST NEWS
ಕ್ಯಾಪ್ ವಿಚಾರಕ್ಕೆ ನಡೆದ ಗಲಾಟೆ ಕೊ*ಲೆಯಲ್ಲಿ ಅಂತ್ಯ ; ಅ*ಪ್ರಾಪ್ತರು ಅರೆಸ್ಟ್
ಮಂಗಳೂರು/ಹೊಸದಿಲ್ಲಿ: ಸಣ್ಣ ವಿವಾದದ ಜಗಳದ ನಂತರ 19 ವರ್ಷದ ಯುವಕನನ್ನು ಗುಂ*ಡಿಕ್ಕಿ ಹ*ತ್ಯೆ ಮಾಡಿದ ಘಟನೆ ಹೊಸದಿಲ್ಲಿಯ ಶಹದಾರಾದಲ್ಲಿ ನವೆಂಬರ್ 2 ರಂದು ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೂವರು ಅ*ಪ್ರಾಪ್ತ ವಯಸ್ಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೈಲಾಶ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು “ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಗುಂಡಿನ ದಾಳಿಯ ಕುರಿತು ಪಿಸಿಆರ್ ಕರೆ ಬಂದಿದ್ದು ಕೂಡಲೇ ಸ್ಥಳಕ್ಕೆ ಪೊಲೀಸರ ತಂಡಗಳು ದೌಡಾಯಿಸಿವೆ. ಹ*ತ್ಯೆಗೀಡಾದವ ಸೂಫಿಯಾನ್ ಎಂದು ಗುರುತಿಸಲಾಗಿದೆ. ಗಂ*ಭೀರವಾಗಿ ಗಾ*ಯಗೊಂಡಿದ್ದ ಅವರನ್ನು ಜಗ್ ಪ್ರವೇಶ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಸಾ*ವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ಯಾಪ್ ವಿಚಾರಕ್ಕೆ ಗಲಾಟೆ:
ಸೂಫಿಯಾನ್ ಮತ್ತು ಆರೋಪಿಗಳ ನಡುವೆ ಕ್ಯಾಪ್ ವಿಚಾರದಲ್ಲಿ ಜಗಳ ನಡೆದಿರುವುದು ಪೊಲೀಸರು ಕಂಡುಕೊಂಡಿದ್ದಾರೆ. ಇದರ ಮಧ್ಯೆ, ಸುಫಿಯಾನ್ ಇಬ್ಬರು ಆರೋಪಿಗಳಿಗೆ ಕ*ಪಾಳಮೋಕ್ಷ ಮಾಡಿದ್ದು, ನಂತರ ಅವರ ಕೊಲೆಗೆ ಸಂಚು ರೂಪಿಸಿದರು ಎಂದು ಅಧಿಕಾರಿ ಹೇಳಿದ್ದಾರೆ.
ದೆಹಲಿ ಮತ್ತು ಗಾಜಿಯಾಬಾದ್‌ನ ವಿವಿಧ ಸ್ಥಳಗಳಿಂದ ಪೊಲೀಸರು ಮೂವರು ಬಾಲಾಪರಾಧಿಗಳನ್ನು ವಶಕ್ಕೆ ಪಡೆದಿದ್ದಾರೆ. ಅವರ ಬಳಿ ಒಂದು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಒಬ್ಬ ಶಂಕಿತ ಮತ್ತು ಪಿಸ್ತೂಲ್ ಒದಗಿಸಲು ಸಹಾಯ ಮಾಡಿದ ಆರೋಪಿಯೋಬ್ಬನ ತಾಯಿಗಾಗಿ ಹುಡುಕುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
LATEST NEWS
‘ನಾ ಡ್ರೈವರ್’ ಹಾಡಿನ ಗಾಯಕನಿಂದ ಇಬ್ಬರ ಮೇಲೆ ಹ*ಲ್ಲೆ
ಮಂಗಳೂರು/ಬೆಳಗಾವಿ: “ನಿಧಾನಕ್ಕೆ ಕಾರು ಚಲಾಯಿಸಿ” ಎಂದಿದ್ದಕ್ಕೆ ಯುವಕ ಹಾಗೂ ಅವನ ಸಹೋದರಿ ಮೇಲೆ ‘ನಾ ಡ್ರೈವರ್’ ಹಾಡಿನ ಖ್ಯಾತಿಯ ಗಾಯಕ ಮಾಳು ನಿಪನಾಳ ಹ*ಲ್ಲೆ ನಡೆಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕ್ಕೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆಡೆಯುತ್ತಿದ್ದಾರೆ.
ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಹೊರವಲಯದಲ್ಲಿ ಯುವಕ ಹಾಗೂ ಆತನ ಸಹೋದರಿ ಬೈಕ್ ಮೇಲೆ ಸಂಚರಿಸುತ್ತಿದ್ದ ವೇಳೆ ನಾ ಡ್ರೈವರ್ ಹಾಡಿನ ಗಾಯಕ ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಕಾರಿನಲ್ಲಿ ಹೋಗುತ್ತಿದ್ದರು. ಎದುರಿಗಿದ್ದ ಯುವಕನ ಬೈಕ್ ಮೀರಿ ಜೋರಾಗಿ ಕಾರು ಬಂದಿದೆ. ಆಗ ಬೈಕ್ ಮೇಲಿದ್ದ ಮಹಿಳೆ, ‘ನೋಡಿಕೊಂಡು ಕಾರು ಓಡಿಸಿ’ ಎಂದು ಹೇಳುತ್ತಿದ್ದಂತೆ ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಹ*ಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗಾವಿ ಎಸ್ ಪಿ ಭೀಮಾಶಂಕರ ಗುಳೇದ, “ಜಾನಪದ ಕಲಾವಿದ ಮಾಳು ನಿಪನಾಳ ಎಂಬಾತ ಕೆಲವರ ಮೇಲೆ ಹ*ಲ್ಲೆ ಮಾಡಿರುವುದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ತಿಳಿದಿದೆ. ಈತ ಹಲ್ಲೆ* ಮಾಡಿದ್ದು ಮೇಲ್ನೋಟಕ್ಕೆ ನಿಜವಾಗಿದೆ. ಪ್ರಕರಣದಲ್ಲಿ ನೊಂದ ಶೇಖಪ್ಪ ಹಕ್ಯಾಗೋಳ ಹಾಗೂ ಆತನ ಸಂಬಂಧಿಕರು ಚಿಕ್ಕೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ನೊಂದವರಿಗೆ ನಮ್ಮ ಪೊಲೀಸರು ಕರೆ ಮಾಡಿ ಪ್ರಕರಣ ದಾಖಲಿಸುವಂತೆ ಹೇಳಿದ್ದಾರೆ. ಅವರು ನಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಮೇಲೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಕೈಗೆ ತೆಗೆದುಕೊಂಡರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂಬ ಎಚ್ಚರಿಕೆಯ ಮಾತುಗಳನ್ನಾಡಿರುವುದು ವರದಿಯಾಗಿದ್ದು ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ.
DAKSHINA KANNADA
ಮಂಗಳೂರು : ಹೊಸ ವಾಟರ್ ವೆುಟ್ರೋ ಕಲ್ಪನೆಗೆ ಮುಂದಾದ ಕೆಎಂಬಿ
ಮಂಗಳೂರು: ಕೊಚ್ಚಿನ್ ಮಾದರಿಯಲ್ಲಿ ವಾಟರ್ ಮೆಟ್ರೋ ವ್ಯವಸ್ಥೆ (ಎಂಡಬ್ಲ್ಯುಎಂಪಿ) ಮಂಗಳುರಿನಲ್ಲಿಯೂ ಕಲ್ಪಿಸುವುದಾಗಿ ಕರ್ನಾಟಕ ಮೆರಿಟೈಂ ಮಂಡಳಿ (ಕೆಎಂಬಿ)ಯು ಮುಂದಾಗಿದೆ.
ಈ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧ ಪಡಿಸಲು ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ನೇತ್ರಾವತಿ, ಫಲ್ಗುಣಿ ನದಿಗಳನ್ನು ಬೆಸೆದು ಬಜಾಲ್‌ನಿಂದ ಮರವೂರಿನವರೆಗೆ ಈ ವಾಟರ್ ಮೆಟ್ರೋ ಜಾಲವನ್ನು ರೂಪಿಸುವುದು ಯೋಜನೆಯ ಸಾರ.
ಹಂತಹಂತವಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಆರಂಭದಲ್ಲಿ ನೇತ್ರಾವತಿ, ಫಲ್ಗುಣಿ ನದಿಗಳ ಹಿನ್ನೀರನ್ನು ಬಳಸಿ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಈ ಜಾಲವನ್ನು ರೂಪಿಸಲಾಗುತ್ತದೆ. ಇದರಲ್ಲಿ 17ರಷ್ಟು ಮೆಟ್ರೋ ಸ್ಟೇಷನ್‌ಗಳು ಇರುತ್ತವೆ.
2024-25ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಈ ಯೋಜನೆಯನ್ನು ಪ್ರಕಟಿಸಿದ್ದರು. ವಿಸ್ತೃತ ಯೋಜನಾ ವರದಿ (ಡಿಪಿಆರ್)ನಲ್ಲಿ ಮೆಟ್ರೋ ಸ್ಟೇಷನ್‌ಗಳ ಬೇಡಿಕೆಯ ತಾಣಗಳು, ಭೂಮಿಯ ಲಭ್ಯತೆ, ಸಂಪರ್ಕ ಜಾಲ ಇತ್ಯಾದಿಗಳನ್ನು ಅಧ್ಯಯನ ಮಾಡಲಾಗುವುದು. ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿ ಇರುವ ದಟ್ಟಣೆಯನ್ನು ಹಗುರಗೊಳಿಸುವುದಕ್ಕೆ ರೋಲ್ ಆನ್-ರೋಲ್ ಆಫ್ ಮಾದರಿಯಲ್ಲಿ ವಾಹನಗಳ ಸಾಗಾಟದ ಬಗ್ಗೆಯೂ ಇದರಲ್ಲಿ ಸಾಧ್ಯತೆಯ ಅಧ್ಯಯನ ಇರಲಿದೆ.
ದೇಶದ ಮೊದಲ ವಾಟರ್ ಮಟ್ರೋ ಆಗಿ ಕೊಚ್ಚಿನ್ ವಾಟರ್ ಮೆಟ್ರೋ ಕಳೆದ ವರ್ಷವಷ್ಟೇ ಉದ್ಘಾಟನೆಗೊಂಡಿತ್ತು. 78 ದೋಣಿಗಳು, 38 ಜೆಟ್ಟಿಗಳನ್ನು ಒಳಗೊಂಡು 10 ದ್ವೀಪಗಳನ್ನು ಸಂಪರ್ಕಿಸುವ ವ್ಯವಸ್ಥೆ ಇದಾಗಿದೆ. ಹವಾನಿಯಂತ್ರಿತ ದೋಣಿಗಳು ಜನರಿಗೆ ಕಡಿಮೆ ಖರ್ಚಿನ ಸುರಕ್ಷಿತ ಸಾರಿಗೆ ವ್ಯವಸ್ಥೆಯಾಗಿ ಮೆಚ್ಚುಗೆ ಪಡೆದಿವೆ.
LATEST NEWS
ಉಡುಪಿ: ಪಾರ್ಟಿ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ; ಅಪಾರ ಹಾನಿ
ಉಡುಪಿ: ಪಾರ್ಟಿ ಮಾಡುತ್ತಿದ್ದ ಸಂದರ್ಭ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅಪಾರ ಪ್ರಮಾಣದ ಹಾನಿ ಉಂಟಾದ ದುರ್ಘಟನೆ ಉಡುಪಿ ಕಲ್ಸಂಕ ಸಮೀಪದ ಬಡಗುಪೇಟೆ ರಸ್ತೆಯ ಅಪಾರ್ಟ್ ಮೆಂಟ್ ನಲ್ಲಿ ಇಂದು (ನ.4) ರಾತ್ರಿ ಸಂಭವಿಸಿದೆ.
ಗ್ಯಾಸ್ ಸಿಲಿಂಡರ್ ಲೀಕ್ ಆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೂರು ಅಂತಸ್ತಿನ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಪಾರ್ಟಿ ಮಾಡುತ್ತಿರುವಾಗ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕೊಠಡಿಯಲ್ಲಿ ಇದ್ದವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಬಳಿಕ ಅಗ್ನಿ ಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸಂಭವನೀಯ ಅನಾಹುತ ತಪ್ಪಿಸಿದ್ದಾರೆ.
ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದ ಸೊತ್ತುಗಳು ಸುಟ್ಟು ಕರಕಲಾಗಿವೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
- LATEST NEWS6 days ago
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಕ್ಕಿಯ ಜೊತೆಗೆ ಉಚಿತವಾಗಿ ಸಿಗಲಿವೆ ಈ 9 ವಸ್ತುಗಳು.!
- DAKSHINA KANNADA3 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- kerala6 days ago
ಕಾಸರಗೋಡು : ‘ಮಗು’ ವನ್ನು ರಕ್ಷಿಸಿದ ‘ದೈವ’ನರ್ತಕ ; ವಿರೋಚಿತ ಕಥೆ !!
- LATEST NEWS7 days ago
ಮಹಿಳೆಯರೇ.. ನೀವು ಈ ಪಾನೀಯ ಕುಡಿದ್ರೆ 10 ವರ್ಷ ಸಣ್ಣ ಕಾಣೋದು ಗ್ಯಾರಂಟಿ.. !!