Connect with us

    LATEST NEWS

    ‘ಹಮ್ ಆಪ್ಕೆ ಹೈ ಕೌನ್’ ಖ್ಯಾತಿಯ ಗಾಯಕಿ ಇ*ನ್ನಿಲ್ಲ

    Published

    on

    ಮಂಗಳೂರು/ನವದೆಹಲಿ: ಪದ್ಮಭೂಷಣ ಪುರಸ್ಕೃತ, ‘ಹಮ್ ಆಪ್ಕೆ ಹೈ ಕೌನ್’ ಖ್ಯಾತಿಯ ಗಾಯಕಿ `ಶಾರದಾ ಸಿನ್ಹಾ’ (72) ಅವರು ಕ್ಯಾನ್ಸರ್ ನಿಂದ ನಿನ್ನೆ (ನ.5) ರಾತ್ರಿ ನಿ*ಧನರಾಗಿದ್ದಾರೆ.

    ಮೈಲೋಮಾ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದ ಗಾಯಕಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುದ್ದರು.

    ಶಾರದ ಸಿನ್ಹಾ ನವೆಂಬರ್ 1, 1952 ರಂದು ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಜನಿಸಿದರು. ‘ಕಾರ್ತಿಕ್ ಮಾಸ್ ಇಜೋರಿಯಾ’, ‘ಕೋಯಲ್ ಬಿನ್’ ಮುಂತಾದ ಜಾನಪದ ಹಾಡುಗಳೊಂದಿಗೆ ಅಪಾರ ಅಭಿಮಾನಿಗಳನ್ನು ಗಳಿಸಿದರು.

    ಖ್ಯಾತ ಗಾಯಕಿ ಗ್ಯಾಂಗ್ಸ್ ಆಫ್ ವಸ್ಸೀಪರ್-2, ಬಬಲ್, ಹಮ್ ಆಪ್ಕೆ ಹೈ ಕೌನ್ ಮುಂತಾದ ಬಾಲಿವುಡ್ ಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದು ಮಾತ್ರವಲ್ಲದೇ ಛಾತ್ ಆಚರಣೆಗಳಿಗೆ ಸಂಬಂಧಿಸಿದ ಹಾಡುಗಳಿಗೆ ಪ್ರಸಿದ್ಧರಾಗಿದ್ದಾರೆ.

    ‘ಬಿಹಾರದ ಕೋಗಿಲೆ’ ಎಂದೇ ಖ್ಯಾತರಾಗಿರುವ ಶಾರದ ಸಿನ್ಹಾ ಅವರು 1991ರಲ್ಲಿ ಪದ್ಮಶ್ರೀ ಹಾಗೂ 2018ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ. ಪತಿ ಬ್ರಜ್ ಕಿಶೋರ್ ಸಿನ್ಹಾ ಒಂದು ವಾರದ ಹಿಂದೆ ಮೆದುಳು ಹಾನಿಯಿಂದ ಕೊ*ನೆಯುಸಿರೆಳೆದಿದ್ದರು.

    ಶಾರದಾ ಸಿನ್ಹಾ ಅವರ ನಿಧನಕ್ಕೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    FILM

    ಕೋರ್ಟ್‌ ಮೆಟ್ಟಿಲೇರಿದ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌

    Published

    on

    ಸ್ಯಾಂಡಲ್‌ವುಡ್‌ನ ಹಲವು ಮಂದಿ ತಮ್ಮ ವೈವಾಹಿಕ ಜೀವನದ ಕುರಿತು ಕೋರ್ಟ್‌ ಮೆಟ್ಟಿಲೇರಿರುವ ಸಂಗತಿಗಳು ಹೆಚ್ಚಾಗಿದೆ. ಇದೀಗ ಸ್ಯಾಂಡಲ್‌ವುಡ್‌ನ ಮೋಸ್ಟ್ ಬ್ಯೂಟಿಫುಲ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್ ಕೋರ್ಟ್ ಮೆಟ್ಟಿಲೇರಿದ್ದಾರೆ. ನಿನ್ನೆವರೆಗೂ ಎಲ್ಲಾ ಚೆನ್ನಾಗೇ ಇತ್ತಲ್ಲ.. ಇವತ್ತೇನಾಯ್ತು ಅನ್ನೋರಿಗೆ ಇಲ್ಲಿದೆ ಉತ್ತರ.

    ಅಂದಹಾಗೆ, ಈ ಕೋರ್ಟ್ ಕೇಸ್ ನಿಜ ಜೀವನಕ್ಕೆ ಸಂಬಂಧಿಸಿದ್ದಲ್ಲ. ನಟಿ ರಾಧಿಕಾ ಪಂಡಿತ್ ಅವರು ಒಂದು ವಿಷಯಕ್ಕೆ ಕೋರ್ಟ್​ ಕಟಕಟೆಯಲ್ಲಿ ನಿಂತಿದ್ದಾರೆ. ಅವರ ಪತಿ ಯಶ್​ ಜೋರು ಜೋರಾಗಿ ವಾದ ಮಾಡಿದ್ದಾರೆ. ಅಂದಹಾಗೆ, ಈ ಕೋರ್ಟ್ ಕೇಸ್ ನಿಜ ಜೀವನಕ್ಕೆ ಸಂಬಂಧಿಸಿದ್ದಲ್ಲ. ಇದು ಅವರಿಬ್ಬರೂ ಜೊತೆಯಾಗಿ ನಟಿಸಿರುವ ಜಾಹೀರಾತಿನ ದೃಶ್ಯ.

    ಯಶ್ ಮತ್ತು ರಾಧಿಕಾ ಪಂಡಿತ್‌ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದು, ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಯಶ್ ವಕೀಲರ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು.

    ಇದೀಗ ಆ ಜಾಹೀರಾತನ್ನು ಗಂಡ ಹೆಂಡತಿ ಇಬ್ಬರೂ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿ ರಾಧಿಕಾ ಪಂಡಿತ್ ಅವರು ಒಂದು ವಿಷಯಕ್ಕೆ ಕೋರ್ಟ್​ ಕಟಕಟೆಯಲ್ಲಿ ನಿಂತಿದ್ದಾರೆ. ಅವರ ಪತಿ ಯಶ್​ ಜೋರು ಜೋರಾಗಿ ವಾದ ಮಾಡಿದ್ದಾರೆ. ಇದರಲ್ಲಿ ರಾಧಿಕಾ ಪಂಡಿತ್ ಮೋಸಕ್ಕೆ ಒಳಗಾದ ಗ್ರಾಹಕಿಯ ಪಾತ್ರ ಮಾಡಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಬಂದ ಲಾಯರ್ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ.

    ಕಂಪನಿಯ ನಿಜವಾದ ಅಡುಗೆ ಎಣ್ಣೆ ಯಾವುದು ಎಂಬುದನ್ನು ಸಾಬೀತು ಮಾಡಲು ಯಶ್​ ಫುಲ್ ಜೋಶ್‌ನಲ್ಲಿ ವಾದ ಮಾಡಿದ್ದಾರೆ. ಇದೀಗ ನಟ ಯಶ್ ಹಾಗೂ ರಾಧಿಕಾ ಅವರ ಈ ಜಾಹೀರಾತು ಸಖತ್ ವೈರಲ್ ಆಗಿದೆ.

    Continue Reading

    BELTHANGADY

    ಬೆಳ್ತಂಗಡಿ : ಯುವಕನೊಂದಿಗೆ ಯುವತಿ ಪರಾರಿ ಶಂಕೆ; ಪ್ರಕರಣ ದಾಖಲು 

    Published

    on

    ಬೆಳ್ತಂಗಡಿ: ಕೆಲಸಕ್ಕೆ ಹೋಗಿ ಬರುವೆನೆಂದು ಹೇಳಿ ಹೋದ ಯುವತಿಯೊಬ್ಬಳು ಕಾಣೆಯಾಗಿರುವ ಘಟನೆ ವೇಣೂರು ಸಮೀಪ ಕರಿಮಣೇಲಿನಲ್ಲಿ ನಡಡೆದಿದೆ.

    ಸಂಧ್ಯಾ (22) ಕಾಣೆಯಾದ ಯವತಿ.

    ನ. 4ರಂದು  ಸಂಧ್ಯಾ ಮನೆಯಿಂದ ಕೆಲಸಕ್ಕೆ ಹೋದವಳು ಸಂಜೆ ತನ್ನ ಸಹೋದರಿಯ ಮೊಬೈಲ್‌ಗೆ ‘ನನಗೆ ಮದುವೆಯಾಗಿದೆ. ನನ್ನನ್ನು ಹುಡುಕಬೇಡಿ’ ಎಂಬುದಾಗಿ ವಾಟ್ಸಾಪ್‌ ಸಂದೇಶ ಕಳುಹಿಸಿದ್ದಾಳೆ. ಯುವಕನೊಬ್ಬನ ಜತೆ ತೆಗೆದಿರುವ ಭಾವಚಿತ್ರವನ್ನು ಸಹೋದರಿಗೆ ರವಾನಿಸಿದ್ದು, ಬಳಿಕ ಆಕೆಯ ಮೊಬೈಲ್‌ ಸ್ವಿಚ್ ಆಫ್‌ ಆಗಿದೆ.

    ಆಕೆ ಕೆಲಸ ಮಾಡುವ ಕಡೆ ವಿಚಾರಿಸಿದಾಗ ಆಕೆ ಅಂದು ಕೆಲಸಕ್ಕೆ ಬಂದಿರಲಿಲ್ಲ ಎಂಬುವುದು ತಿಳಿದಿತ್ತು. ವೇಣೂರು ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

    Continue Reading

    LATEST NEWS

    ALERT : ಮಕ್ಕಳಿಗೆ `ಜೆಲ್ಲಿ ಕ್ಯಾಂಡಿ’ ನೀಡುವ ಪೋಷಕರೇ ಎಚ್ಚರ : ಗಂಟಲಲ್ಲಿ ಸಿಲುಕಿ 4 ವರ್ಷದ ಬಾಲಕ ದುರಂತ ಸಾ*ವು!

    Published

    on

    ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದಲ್ಲಿ ಚೂಯಿಂಗ್ ಗಮ್ ತಿಂದು ನಾಲ್ಕು ವರ್ಷದ ಬಾಲಕಿ ಮೃ*ತಪಟ್ಟಿರುವ ಘಟನೆ ನಡೆದಿದೆ.

    ಬಾರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ್ರಾ ಜರೌಲಿ ಹಂತ -1 ರಲ್ಲಿ ನವೆಂಬರ್ 3 ರಂದು ಸಂಜೆ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, 4 ವರ್ಷದ ಮಗು ಫ್ರುಟೊಲಾ ಕ್ಯಾಂಡಿ ಎಂಬ ಕಣ್ಣಿನ ಆಕಾರದ ಬಬಲ್ ಗಮ್ ತಿನ್ನುತ್ತಿದ್ದಾಗ, ಅನಿರೀಕ್ಷಿತವಾಗಿ ಬಬಲ್ ಗಮ್ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಮಗು ತನ್ನ ಮನೆಯ ಹತ್ತಿರದ ಸ್ಥಳೀಯ ಅಂಗಡಿಯಲ್ಲಿ ಈ ಸಿಹಿತಿಂಡಿಯನ್ನು ಖರೀದಿಸಿದೆ.

    ಮಗುವಿನ ಗಂಟಲಿನಲ್ಲಿ ಬಬಲ್ ಗಮ್ ಸಿಲುಕಿಕೊಂಡಿದೆ ಎಂದು ಗೊತ್ತಾದ ತಕ್ಷಣ ಮಗುವಿನ ತಾಯಿ ಬಾಲಕಿಗೆ ನೀರು ಕುಡಿಸಿದ್ದಾರೆ. ಆಗ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡ ಬಬಲ್ ಗಮ್ ಗಂಟಲಿನಲ್ಲಿ ಆಳವಾಗಿ ಜಾರಿ ಹೆಚ್ಚು ಜಟಿಲವಾಗಿದ್ದು, ಮಗುವಿಗೆ ಉಸಿರಾಟದ ತೊಂದರೆ ಶುರುವಾಗಿದೆ.

    ಮಗುವಿನ ಸಂಬಂಧಿಕರು ತಕ್ಷಣ ಆಕೆಯನ್ನ ಚಿಕಿತ್ಸೆಗಾಗಿ ಮನೆಯ ಹತ್ತಿರದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದಾಗ್ಯೂ, ಮಗುವಿನ ಗಂಟಲಿನಿಂದ ಬಬಲ್ ಗಮ್ ತೆಗೆದುಹಾಕಲು ವೈದ್ಯರಿಗೆ ಸಾಧ್ಯವಾಗಿಲ್ಲ. ದೀಪಾವಳಿಗಾಗಿ ಹೆಚ್ಚಿನ ಸ್ಥಳೀಯ ಆಸ್ಪತ್ರೆಗಳು ಮುಚ್ಚಲ್ಪಟ್ಟಿದ್ದರಿಂದ ತುರ್ತು ಸಂದರ್ಭದಲ್ಲಿ ವೈದ್ಯರು ಲಭ್ಯವಿರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

    ಅವರು ಮಗುವನ್ನು ಸತತವಾಗಿ ನಾಲ್ಕು ವಿಭಿನ್ನ ಆಸ್ಪತ್ರೆಗಳಿಗೆ ಕರೆದೊಯ್ದರು. ಆದರೆ ಮಗುವಿಗೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಸುಮಾರು ಮೂರು ಗಂಟೆಗಳ ಕಾಲ ಹೋರಾಡಿದ ನಂತರ ಮಗು ಸಾ*ವನ್ನಪ್ಪಿದೆ. ಮಗುವಿನ ಸಾವಿನ ಬಗ್ಗೆ ಟಾಫಿ ಮಾದರಿಯ ಚಾಕೊಲೇಟ್ ತಯಾರಕರಿಂದ ಉತ್ತರವನ್ನ ಮೃ*ತರ ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ.

    Continue Reading

    LATEST NEWS

    Trending