Monday, May 23, 2022

ಕೋವಿಡ್‌ನಿಂದ 41 ಗರ್ಭಿಣಿಯರು, 149 ಮಂದಿ ಸೂಸೈಡ್‌: ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ

ತಿರುವನಂತಪುರಂ: ಒಂದೂವರೆ ವರ್ಷಗಳ ಹಿಂದೆ ಕೇರಳದಲ್ಲಿ ಕೋವಿಡ್‌ ಕಾಣಿಸಿಕೊಂಡಾಗಿನಿಂದ ಇಲ್ಲಿವರೆಗೆ 41 ಗರ್ಭಿಣಿಯರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಕೇರಳ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದರು.


ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಟಿ.ಜೆ. ವಿನೋದ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೋವಿಡ್‌ ದೃಢಪಟ್ಟವರಲ್ಲಿ 149 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.
ಕಾಂಗ್ರೆಸ್‌ನ ಮ್ಯಾಥ್ಯೂ ಕುಜಲನಾಡನ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ವರದಿಗಳ ಪ್ರಕಾರ, ರಾಜ್ಯ ಆರೋಗ್ಯ ಇಲಾಖೆಯು ಇತ್ತೀಚೆಗೆ ನಡೆಸಿದ ಸೆರೊ ಪ್ರೈವೆಲೆನ್ಸ್ ವೈಜ್ಞಾನಿಕ ಅಧ್ಯಯನದ ಸಂಶೋಧನೆಗಳು ಮತ್ತು ಐಸಿಎಂಆರ್‌ನ ಇಂಥದ್ದೇ ಸಮೀಕ್ಷೆಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದರು.

LEAVE A REPLY

Please enter your comment!
Please enter your name here

Hot Topics

ಆಟೋ ರಿಕ್ಷಾ- ಪಿಕಪ್ ಢಿಕ್ಕಿ: ಓರ್ವನಿಗೆ ಗಾಯ

ಬಂಟ್ವಾಳ: ಆಟೋ ರಿಕ್ಷಾ ಮತ್ತು ಪಿಕಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಕನ್ಯಾನ ಎಂಬಲ್ಲಿ ನಿನ್ನೆ ನಡೆದಿದೆ.ಅಪಘಾತದಿಂದಾಗಿ ಆಟೋ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು...

ಉಜಿರೆ SDM ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ನಿಧನ

ಬೆಳ್ತಂಗಡಿ: ಉಜಿರೆಯ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ (66) ಅನಾರೋಗ್ಯದಿಂದಾಗಿ ನಿನ್ನೆ ಮಧ್ಯರಾತ್ರಿ ಸಿಂಗಾಪುರದಲ್ಲಿ ನಿಧನರಾಗಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ...

ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿರ್ಬಂಧ ಹೇರಿದ ಸೌದಿ ಅರೇಬಿಯಾ

ಜೆದ್ದಾ: ಸೌದಿ ಅರೇಬಿಯಾದಲ್ಲಿ ಕಳೆದ ಕೆಲವು ವಾರಗಳಿಂದ ಕೋವಿಡ್ ಸೋಂಕು ಮತ್ತೆ ಏರಿಕೆ ಕಂಡುಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ದೇಶದ ನಾಗರಿಕರು ಭಾರತ ಸೇರಿದಂತೆ ಹದಿನಾರು ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.ಲೆಬನಾನ್, ಸಿರಿಯಾ, ಟರ್ಕಿ,...