Connect with us

    DAKSHINA KANNADA

    ಅಪ್ರಾಪ್ತೆ ದಲಿತೆಯ ಅತ್ಯಾಚಾರ ಪ್ರಕರಣ: ಆರೋಪಿ ನಾರಾಯಣ ರೈ ಕೋರ್ಟ್‌ಗೆ ಶರಣು

    Published

    on

    ಪುತ್ತೂರು: ಅಪ್ರಾಪ್ತ ವಯಸ್ಸಿನ ದಲಿತ ಯುವತಿಯ ಅತ್ಯಾಚಾರ ನಡೆಸಿ, ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಬಾಲಕಿ ಹೆಸರಿಸಿರುವ ಆರೋಪಿ ಕುದ್ಕಾಡಿ ನಾರಾಯಣ ರೈ ಇಂದು ಪುತ್ತೂರಿನ ನ್ಯಾಯಾಲಯಕ್ಕೆ ಶರಣರಾಗಿದ್ದಾನೆ.


    ನಾರಾಯಣ ರೈ ತನ್ನ ಪರ ವಕೀಲರಾದ ಮಹೇಶ್ ಕಜೆ ಜತೆ ಪುತ್ತೂರು ಸೆಷನ್ಸ್‌  ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ಶರಣರಾಗಿದ್ದಾನೆ.
    ಬಡಗನ್ನೂರಿನ 17ರ ಹರೆಯದ ದಲಿತ ಸಮುದಾಯದ ಬಾಲಕಿಯ ಸೆ.5ರಂದು ಮಗುವಿಗೆ ಜನ್ಮ ನೀಡಿದ್ದಳು.

    ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸಂತ್ರಸ್ತೆಯ ಸಹೋದರನನ್ನೇ ಈ ಪ್ರಕರಣದ ಆರೋಪಿ ಎಂದು ಬಂಧಿಸಲಾಗಿತ್ತು.

    ಆದರೆ ಸೆ.23ರಂದು ಸಂತ್ರಸ್ತೆಯು ನ್ಯಾಯಾಲಯಕ್ಕೆ ಹಾಜರಾಗಿ 164 ನಿಯಮದಡಿ ಹೇಳಿಕೆ ನೀಡಿದ್ದು, ಅದರಲ್ಲಿ ಕುದ್ಕಾಡಿ ನಾರಾಯಣ ರೈ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಳು.

    ಈ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ನಾರಾಯಣ ರೈ ತಲೆಮರೆಸಿಕೊಂಡು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ.
    ಆದರೆ ನ್ಯಾಯಾಲಯ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದೀಗ ಆರೋಪಿ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ಇದೀಗ ಆರೋಪಿಗೆ ನ್ಯಾಯಾಲಯ 2 ದಿನ ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ.

    ಈ ಮಧ್ಯೆ ನಾರಾಯಣ ರೈ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಆಗ್ರಹಿಸಿದ್ದರು. ದಲಿತ ಸಮನ್ವಯ ಸಮಿತಿಯೂ ಸಂಪ್ಯ ಠಾಣೆ ಚಲೋ ಬೃಹತ್ ಪ್ರತಿಭಟನೆಯನ್ನೂ ನಡೆಸಿತ್ತು.

    DAKSHINA KANNADA

    ಚಿಕ್ಕಮೇಳದ ಹೆಸರಿನಲ್ಲಿ ಯಕ್ಷಗಾನ ಕಲೆಗೆ ಅಪಚಾರ ಮಾಡದಿರಿ; ಒಕ್ಕೂಟ ಮನವಿ

    Published

    on

    ಮಂಗಳೂರು: ಇಂದು ದೇಶ, ವಿದೇಶಗಳಲ್ಲಿ ಯಕ್ಷಗಾನದ ಹಿರಿಮೆ ಸಾರಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಲೆಯ ಹೆಸರಿನಲ್ಲಿ ಕಲೆಯ ಗಂಧಗಾಳಿ ಇಲ್ಲದವರು ಕೂಡಾ ಯಕ್ಷ ಕಲೆಯನ್ನು ವಿರೂಪಗೊಳಿಸುತ್ತಿವುದು ವಿಷಾದನೀಯ ಸಂಗತಿ. ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ತಿರುಗಾಟದ ಇಲ್ಲದ ಸಂದರ್ಭದಲ್ಲಿ ಮನೆ ಮನೆಗೆ ಚಿಕ್ಕ ಮೇಳಗಳು ಹೊರಡುತ್ತವೆ. ಆದರೆ ಯಕ್ಷಗಾನದ ಬಾಲಪಾಠವೂ ಆಗದವರಿಂದ ಚಿಕ್ಕ ಮೇಳ ಎಂದು ಹೆಸರಿಟ್ಟುಕೊಂಡು ಅದೊಂದು ದಂಧೆಯಾಗಿ ವ್ಯಾಪಕವಾಗಿರುವುದು ನೋವಿನ ಸಂಗತಿ ಎಂದು ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರ ಸಮಿತಿ ದೂರಿದೆ.

    ಸಂಪ್ರದಾಯಕ್ಕೆ ಬದ್ಧವಾಗಿ, ಶಿಸ್ತುಬದ್ಧವಾಗಿ ಯಕ್ಷಗಾನ ಮಾಡಲು ಕಲಾವಿದರಲ್ಲಿ ಒಟ್ಟು ಮಾಡಿಕೊಂಡು ತೆಂಕುತಿಟ್ಟು ಚಿಕ್ಕಮೇಳ ಹೆಸರಿನಲ್ಲಿ ತಿರುಗಾಟವನ್ನು ಆರಂಭಿಸಲಾಗಿದೆ. ಒಕ್ಕೂಟದ ಪರವಾನಿಗೆ ಇದ್ದವರಿಗೆ ಮಾತ್ರ ಮನೆಯಲ್ಲಿ ಆಟವಾಡಿಸಲು ಜನತೆ ಅನುವು ಮಾಡಿಕೊಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ನಿಜವಾದ ಕಲಾವಿದರಿಗೆ ಅನ್ಯಾಯವಾಗಬಾರದು ಎನ್ನುವ ನಿಟ್ಟಿನಲ್ಲಿ ಒಕ್ಕೂಟವನ್ನು ರಚನೆ ಮಾಡಲಾಗಿದೆ. ಒಕ್ಕೂಟದ ಅಧಿಕೃತ ಪರವಾಣಿಗೆ ಪಡೆದು ತಿರುಗಾಟ ಮಾಡುವವರು ಸಂಜೆ 6ರಿಂದ ರಾತ್ರಿ 10.30ರವರೆಗೆ ಕನ್ನಡ ಇಲ್ಲವೇ ತುಳುಭಾಷೆಗಳ ಗರಿಷ್ಠ 20 ನಿಮಿಷಗಳ ಸಂದೇಶ ಇರುವ ಸನ್ನಿವೇಶದ ಪ್ರದರ್ಶನ ಮಾಡಲಿರುವರು ಎಂದರು.

    ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರಮೇಶ ಕುಲಶೇಖರ, ಕುಮಾರ್ ಮಾಲೆಮಾರ್‌, ದಿವಾಕರ ದಾಸ್, ಕಡಬ ದಿನೇಶ ರೈ ಮೊದಲಾದವರಿದ್ದರು.

    Continue Reading

    DAKSHINA KANNADA

    ಉಪ್ಪಿನಂಗಡಿ: ಮಹಿಳೆ ಸಾ*ವಿನಲ್ಲಿ ಅನುಮಾನ; ಕೊ*ಲೆ ಶಂಕೆ

    Published

    on

    ಉಪ್ಪಿನಂಗಡಿ : ಇಲ್ಲಿನ ಪೆರ್ನೆ ಬಳಿಯ ಬಿಳಿಯೂರು ದರ್ಖಾಸ್ ಎಂಬಲ್ಲಿ ಮಹಿಳೆಯೋರ್ವರು ಮೃ*ತಪಟ್ಟಿದ್ದು ಕೊ*ಲೆ ಶಂಕೆ ವ್ಯಕ್ತವಾಗಿದೆ. ಹೇಮಾವತಿ (37) ಮೃ*ತ ಮಹಿಳೆ.


    ಈಕೆ ತಾಯಿ, ಅಕ್ಕನ ಮಗನೊಂದಿಗೆ ಮನೆಯಲ್ಲಿದ್ದ ವೇಳೆ ಭಾನುವಾರ(ಜೂ.16) ರಾತ್ರಿ ಕೃತ್ಯ ನಡೆದಿದೆ. ಮೊದಲಿಗೆ ಪರಿಸರದಲ್ಲಿ ಹೃದಯಾಘಾ*ತವೆಂಬ ಸುದ್ದಿ ಹರಡಿತ್ತು. ಆದರೆ ಬಳಿಕ ಈ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

    ಇದನ್ನೂ ಓದಿ : ಕಡಬ : ವಿದ್ಯುತ್ ಶಾಕ್ ಹೊಡೆದು ಯುವಕ ಸಾ*ವು

    ವಿಚಾರಣೆಗಾಗಿ ಮೃ*ತಳ ಅಕ್ಕನ ಮಗ ಎಸ್ ಎಸ್ ಎಲ್ ಸಿ ಓದುತ್ತಿರುವ ಅಪ್ರಾಪ್ತ ಬಾಲಕನನ್ನು, ಆತನ ತಂದೆ ಶಂಕರ ಎಂಬವರನ್ನು ಕರೆದೊಯ್ದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಉಪ್ಪಿನಂಗಡಿ ಪೊಲೀಸರ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಷ್ಟೇ. ಮೃ*ತರು ಹೊಟೇಲ್ ಕಾರ್ಮಿಕೆಯಾಗಿದ್ದರು.

    Continue Reading

    DAKSHINA KANNADA

    ಕಡಬ : ವಿದ್ಯುತ್ ಶಾಕ್ ಹೊಡೆದು ಯುವಕ ಸಾ*ವು

    Published

    on

    ಕಡಬ : ವಿದ್ಯುತ್ ತಗುಲಿ ಯುವಕ ಸಾ*ವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಪಂಜದಲ್ಲಿ ನಡೆದಿದೆ. ಬೆಳ್ತಂಗಡಿಯ ಮೊಗ್ರು ಸಮೀಪದ ನಡುಎರ್ಮಲ್ ನ ಪ್ರಕಾಶ್(29) ಮೃ*ತಪಟ್ಟವರು.


    ಅಲೆಕ್ಕಾಡಿ ಸಮೀಪದ ಪಿಜಾವ್ ನಲ್ಲಿ ವಿದ್ಯುತ್ ಕಂಬ ಏರಿ ಕೆಲಸ ನಿರ್ವಹಿಸುತ್ತಿದ್ದಾಗ ದುರಂ*ತ ಸಂಭವಿಸಿದೆ. ಪ್ರಕಾಶ್ ಗುತ್ತಿಗೆದಾರರ ಅಡಿಯಲ್ಲಿ ವಿದ್ಯುತ್ ಸರಿಪಡಿಸುತ್ತಿದ್ದರು.

    ಇದನ್ನೂ ಓದಿ : ಪ್ರತಿಭಟನೆ ವೇಳೆ ಸುಸ್ತಾದ ಬಿಜೆಪಿಯ ಹಿರಿಯ ನಾಯಕ ಭಾನುಪ್ರಕಾಶ್ ನಿಧನ

    ಈ ವೇಳೆ ಪ್ರಕಾಶ್ ಗೆ ವಿದ್ಯುತ್ ಶಾ*ಕ್ ಹೊಡೆದಿದ್ದು, ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending