Connect with us

    LATEST NEWS

    ಭೂಕಂಪದ ಅಸಲಿ ಕಥೆ..! ಇರಾನ್‌ನಿಂದ ಪರಮಾಣು ಬಾಂಬ್‌ ಪರೀಕ್ಷೆ..!?

    Published

    on

    ಇರಾನ್‌ನಲ್ಲಿ ಅಕ್ಟೋಬರ್ 5 ರ ಸಂಜೆ ಸಂಭವಿಸಿದ ಭೂಕಂಪದ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದೆ. 4.6 ತೀವ್ರತೆಯ ಭೂಕಂಪದ ಕೇಂದ್ರಬಿಂದು ಸೆಮ್ನಾನ್ ಪ್ರಾಂತ್ಯದ ಅರಾದಾನ್ ಆಗಿದ್ದು, ಇದು 11 ಕಿಲೋ ಮೀಟರ್ ದೂರದ ಟ್ರಹ್ರಾನ್‌ವರೆಗೂ ತಲುಪಿದೆ. ಹೀಗಾಗಿ ಇದು ಸ್ವಾಭಾವಿಕವಾಗಿ ಸಂಭವಿಸಿದ ಕಂಪನ ಅಲ್ಲ ಎಂದು ಅನುಮಾನಿಸಲಾಗಿದ್ದು, ಇರಾನ್‌ ಪರಮಾಣು ಬಾಂಬ್ ಪರೀಕ್ಷೆ ನಡೆಸಿರುವ ಅನುಮಾನ ವ್ಯಕ್ತವಾಗಿದೆ.

    ಭೂಮಿಯ ಮೇಲ್ಮೈನಿಂದ ಸುಮಾರು 10 ಕಿಲೋ ಮೀಟರ್ ಆಳದಲ್ಲಿ ಈ ಸ್ಫೋಟ ನಡೆದಿದೆ. ಇರಾನ್‌ನ ಪರಮಾಣು ಶೇಖರಣಾ ಕೇಂದ್ರ ಬಳಿಯೇ ಇದು ನಡೆದಿದೆ. ಹೀಗಾಗಿ ಇದು ಪರಮಾಣು ಭೂಗತ ಪರೀಕ್ಷೆಯಾಗಿದೆ ಎಂದು ಅನುಮಾನಿಸಲಾಗಿದೆ. ಇರಾನ್ ಹಾಗೂ ಇಸ್ರೇಲ್ ನಡುವ ಯುದ್ಧದ ಕಾರ್ಮೋಡ ಕವಿದಿದ್ದು, ಇದರ ಭಾಗವಾಗಿ ಈ ಪರೀಕ್ಷೆಯನ್ನು ಇರಾನ್ ನಡೆಸಿದೆ ಎಂದು ಹೇಳಲಾಗಿದೆ.

    ಇರಾನ್‌ನ ಪರಮಾಣು ದಾಸ್ತುಗಳಲ್ಲಿ ಒಂದಾದ ನಾಥನ್ಸ್‌ ಬಳಿ 4.6 ತೀವ್ರತೆಯ ಭೂಕಂಪನ ಉಂಟಾಗಿದೆ. ಇದು ಜಗತ್ತಿಗೆ ದೊಡ್ಡ ಅಪಾಯವನ್ನು ತಂದೊಡ್ಡಬಹುದಾದ ಸಾದ್ಯತೆಯ ಬಗ್ಗೆಯೂ ಚರ್ಚೆಗಳು ನಡೆದಿದೆ. ಇದೇ ರೀತಿ 2013 ರಲ್ಲಿ ಉತ್ತರ ಕೊರಿಯಾದಲ್ಲೂ ಭೂಕಂಪ ಸಂಭವಿಸಿದ್ದು, ಬಳಿಕ ಅದು ಪರಮಾಣು ಪರೀಕ್ಷೆ ನಡೆಸಿತ್ತು ಎಂದು ವರದಿಯಾಗಿತ್ತು. ಈ ಹಿಂದೆ 2017 ರಲ್ಲಿ ಇರಾನ್‌ನಲ್ಲಿ ಇದೇ ರೀತಿ ಭೂಕಂಪನ ಆದಾಗಲೂ ಅದು ಪರಮಾಣು ಪರೀಕ್ಷೆ ಎಂಬ ವರದಿಯಾಗಿತ್ತು.

    ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಿದ್ದು ಅದು ಜಗತ್ತಿಗೆ ಅಪಾಯವಾಗಲಿದೆ ಎಂದು ಅಮೆರಿಕಾ ಈ ಹಿಂದೆಯೂ ವಾದಿಸಿತ್ತು. ಅಮೆರಿಕಾ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರ ಬಳಕೆ ಬಿಡುವುದಿಲ್ಲ ಎಂದು ಇದೀಗ ಜೋ ಬಿಡೆನ್ ಹೇಳಿದ್ದಾರೆ.

    FILM

    ಹನಿಮೂನ್ ಫೋಟೋ ಶೇರ್ ಮಾಡಿ ಪತಿಗೆ ಸೋನಲ್ ಲವ್ಲಿ ವಿಶ್

    Published

    on

    ಕಾಟೇರ, ರಾಬರ್ಟ್ ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಹನಿಮೂನ್ ಫೋಟೋ ಶೇರ್ ಮಾಡಿ ಪತಿಗೆ ಸೋನಲ್ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ.

    ತರುಣ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ, ಜಗತ್ತಿನ ಅತೀ ಹೆಚ್ಚು ಪ್ರೀತಿಸುವ, ಕಾಳಜಿ ತೋರಿಸುವ, ಕರುಣೆಯ ಮನಸಿರುವ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನನ್ನು ಪ್ರತಿದಿನ ಪ್ರೇರೆಪಿಸುವ ಹಾಗೂ ನಾನು ಜೊತೆಯಾಗಿ ನಡೆಯಲು ಬಯಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ಐ ಲವ್‌ ಯೂ ಎಂದು ಸೋನಲ್ ಅವರು ಪತಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಅದಕ್ಕೆ ತರುಣ್‌ ಕೂಡ ಪ್ರತಿಕ್ರಿಯಿಸಿ, ಥ್ಯಾಂಕ್ಯೂ ಲವ್‌ ಎಂದಿದ್ದಾರೆ.

    ಸದ್ಯ ತರುಣ್ ದಂಪತಿ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ನಟಿ ಭೇಟಿ ನೀಡಿದ್ದಾರೆ. ಅಂದಹಾಗೆ, ಆಗಸ್ಟ್‌ 11ರಂದು ತರುಣ್‌ ಮತ್ತು ಸೋನಲ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    Continue Reading

    LATEST NEWS

    ದೇವಸ್ಥಾನಗಳಲ್ಲಿ ಚಲನಚಿತ್ರ ಶೂಟಿಂಗ್…ಕೇರಳ ಹೈಕೋರ್ಟ್ ಗರಂ..!

    Published

    on

    ಮಂಗಳೂರು/ಕೇರಳ: ದೇವಸ್ಥಾನಗಳಲ್ಲಿ ಚಲನಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವ ವಿಚಾರವಾಗಿ ಕೇರಳ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ದೇವಾಲಯಗಳು ಪೂಜಾ ಸ್ಥಳವಾಗಿದ್ದು, ಚಲನಚಿತ್ರ ಚಿತ್ರೀಕರಣದ ಸ್ಥಳವಾಗಬಾರದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತ್ರಿಪ್ಪುಣಿತೂರ ಶ್ರೀ ಪೂರ್ಣತ್ರಯಿಶ ದೇವಸ್ಥಾನದಲ್ಲಿ ಸಿನೆಮಾ ಚಿತ್ರೀಕರಣಕ್ಕೆ ಅನುಮತಿ ನೀಡಿದ ವಿಚಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

    ಹಿಂದೂಯೇತರ ಧರ್ಮಗಳ ಚಿತ್ರೀಕರಣಕ್ಕೆ ದೇವಸ್ಥಾನದ ಆವರಣದ ಒಳಗೆ ಅನುಮತಿ ನೀಡಿದ ವಿಚಾರವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆ ಕಾಪಾಡುವುದು ಮುಖ್ಯವಾಗಿದ್ದು, ವಾಣಿಜ್ಯ ಕಾರಣದಿಂದ ನಡೆಯುವ ಸಿನೆಮಾ ಚಿತ್ರೀಕರಣದಿಂದ ಕ್ಷೇತ್ರಕ್ಕೆ ಅಗೌರವ ತಂದಂತಾಗುತ್ತದೆ ಎಂದು ವಾದಿಸಲಾಗಿತ್ತು. ಈ ರೀತಿ ದೇವಸ್ಥಾನಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡುವುದರಿಂದ ಭಕ್ತರ ಭಾವನೆಗೂ ಘಾಸಿ ಆಗುತ್ತದೆ. ಉತ್ಸವದ ಸಂದರ್ಭದಲ್ಲಿ ಮಾವುತರು ಮದ್ಯ ಸೇವಿಸುವುದು ಮತ್ತು ಸಂದರ್ಶಕರು ಚಪ್ಪಲಿ ಧರಿಸಿ ದೇವಾಲಯ ಪ್ರವೇಶಿಸುವುದು ಮೊದಲಾದ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲಾಗಿತ್ತು.

    ಇದನ್ನೂ ಓದಿ :ಬಿಗ್‌ಬಾಸ್ ಮನೆಯಲ್ಲಿ ನಾವಿನ್ನು ಯಾವ ಆಟ ಆಡಲ್ಲ ಎಂದ ಗೋಲ್ಡ್​​ ಸುರೇಶ್​!
    ಈ ವಿಚಾರವಾಗಿ ಹೈಕೋರ್ಟ್‌, ಕೇರಳ ರಾಜ್ಯ ಸರ್ಕಾರ ಮತ್ತು ಕೊಚ್ಚಿನ್ ದೇವಸ್ವಂ ಬೋರ್ಡ್‌ ನಿಂದ ವಿವರಣೆ ಕೇಳಿದೆ. ದೇವಸ್ಥಾನಗಳಲ್ಲಿ ಧಾರ್ಮೀಕೇತರ ಚಿತ್ರೀಕರಣಕ್ಕೆ ಅವಕಾಶ ನೀಡುವುದರಿಂದ ಹಿಂದೂ ದೇಗುಲಗಳ ನಿಯಮ ಉಲ್ಲಂಘಿಸಿದಂತಾಗುತ್ತದೆ. ಪೂಜೆ ಮತ್ತು ಭಕ್ತಿಯ ಮೌಲ್ಯಗಳನ್ನು ತುಂಬುವ ಜಾಗದಲ್ಲಿ ವ್ಯಾಪಾರೀಕರಣದ ಪ್ರವೃತಿ ಬೆಳೆಯಲು ಅವಕಾಶ ಹೇಗೆ ನೀಡಿದ್ದೀರಿ ಎಂದು ಹೈಕೋರ್ಟ್‌ ಪ್ರಶ್ನೆ ಮಾಡಿದೆ.

    Continue Reading

    LATEST NEWS

    ಅ.12 ರಂದು ಗೆಜ್ಜೆಗಿರಿಯಲ್ಲಿ ವಿಜಯದಶಮಿ ವಿಶೇಷ ಪೂಜೆ

    Published

    on

    ಪುತ್ತೂರು-ಬಡಗನ್ನೂರು: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದ್ದು ಸತ್ಯ ಧರ್ಮ ಚಾವಡಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಮಹಾ ಮಾತೆಯ ದರುಶನ ಪಡೆಯುತ್ತಿದ್ದಾರೆ.

    ನವರಾತ್ರಿಯ ವಿಶೇಷ ದಿನವಾದ ಅ.12 ಶನಿವಾರ ವಿಜಯದಶಮಿಯಂದು ಬೆಳಿಗ್ಗೆ 11ಗಂಟೆಗೆ ಶಾರದಾ ಪೂಜೆ, ಮಕ್ಕಳಿಗೆ ಅಕ್ಷರಾಭ್ಯಾಸ, ಅವಳಿ ಮಕ್ಕಳಿಂದ ವಿಶೇಷ ಸೇವೆ, 12.30ಕ್ಕೆ ಮಹಾಪೂಜೆ, ಪುಟಾಣಿಗಳಿಗೆ ಅನ್ನಪ್ರಾಶನ ಹಾಗೂ ಮಹಾ ಅನ್ನಸಂತರ್ಪಣೆ ಜರಗಲಿದೆ. ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ ಮಹಾಮಾತೆ ಹಾಗೂ ಕ್ಷೇತ್ರದ ಸರ್ವ ಶಕ್ತಿಗಳ ಕೃಪೆಗೆ ಪಾತ್ರರಾಗ ಬೇಕೆಂದು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Continue Reading

    LATEST NEWS

    Trending