Connect with us

DAKSHINA KANNADA

ಕಾನೂನುಗಳು ರೈತ ಪರವಾಗಿಯೇ ಇದೆ,ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಡಿ; ವಿಜಯ ಕುಮಾರ್ ಹೇಳಿಕೆ

Published

on

 ಕಾನೂನುಗಳು ರೈತ ಪರವಾಗಿಯೇ ಇದೆ,ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಡಿ; ವಿಜಯ ಕುಮಾರ್ ಹೇಳಿಕೆ

ಮಂಗಳೂರು: ನ್ಯಾಯಾಂಗ ವ್ಯವಸ್ಥೆ ಕೆಟ್ಟು ಹೋಗಿದೆ ಎಂದು ಜನತೆ ಆರೋಪಿಸುತ್ತಾರೆ. ಆದರೆ ಈ ವಿಚಾರದಲ್ಲಿ ಯಾರೂ ಕೂಡಾ ನಿರಾಶರಾಗಬೇಕಾದ ಅಗತ್ಯ ಖಂಡಿತ ಇಲ್ಲ. ಜನತೆಗೆ ನ್ಯಾಯ ಕೊಡಿಸುವಲ್ಲಿ ನ್ಯಾಯಾಲಯಗಳು ಎಂದೆಂದಿಗೂ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿವೆ.ನ್ಯಾಯಾಲಯದ ಮೇಲೆ ನಂಬಿಕೆ ಇಡಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ವಕೀಲ ಕೆ ಎಂ ವಿಜಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೂಲಗೇಣಿ ಒಕ್ಕಲುಗಳ ರಕ್ಷಣಾ ವೇದಿಕೆಯ ವಾರ್ಷಿಕ ಮಹಾಸಭೆಯಲ್ಲಿ ಅವರು ಕಾನೂನು ಸಲಹೆಗಾರರಾಗಿ ಮಾತನಾಡಿದರು.ಮೂಲಗೇಣಿ ಒಕ್ಕಲುಗಳ ಸಮಸ್ಯೆ ಇಷ್ಟರಲ್ಲೇ ಬಗೆಹರಿಯಲಿದ್ದು, ಕಾನೂನು ಪ್ರಕ್ರಿಯೆಗಳು ಒಕ್ಕಲುಗಳ ಪರವಾಗಿ ನಡೆದಿದೆ. ಇದು ಕಾರ್ಯರೂಪಕ್ಕೆ ಬರುವಲ್ಲಿ ವಿಳಂಬವಾಗುತ್ತಿದೆ ಎಂದು ಯಾರೂ ಚಿಂತಿಸಬೇಕಾಗಿಲ್ಲ ಎಂದರು. ಇದೇ ವೇಳೆ ರಾಜ್ಯೋತ್ಸವ ಪುರಸ್ಕೃತರಾದ ಹಿನ್ನೆಲೆಯಲ್ಲಿ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷ ಮ್ಯಾಕ್ಸಿಂ ಡಿ ಸಿಲ್ವ ವಹಿಸಿದ್ದರು. ಮುಖ್ಯ ಅತಿಥಿ ನ್ಯಾಯಮೂರ್ತಿ ಎಂ ಆರ್ ಬಲ್ಲಾಳ್‌, ಮಾಜಿ ಎಂಎಲ್‌ಸಿ ಐವನ್‌ ಡಿ ಸೋಜಾ ವೇದಿಕೆಗೆ ಬೆಂಬಲ ನೀಡುವುದಾಗಿ ಮಾತನಾಡಿದರು.  ಖಜಾಂಚಿ ಎರಿಕ್‌ ಕೊಹಿಲೋ 2019-20ರ ಸಾಲಿನ ಆಯವ್ಯಯ ಹಾಗೂ 2020-21ನೇ ಸಾಲಿನ ಬಜೆಟ್‌ ಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸಂದೇಶ ಪ್ರಭು, ಉಪಾಧ್ಯಕ್ಷ ಎಂ ಕೆ ಯಶೋಧರ್‌, ಉಡುಪಿ ಎಂ ಜಿ ಎಂ ಕಾಲೇಜಿನ ನಿವೃತ್ತ ಉಪನ್ಯಾಸಕ  ಸುರೇಂದ್ರನಾಥ ಶೆಟ್ಟಿ ಮೊದಲಾದವರಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ನಾಲ್ಕು ತಿಂಗಳ ಮಗುವಿಗೆ ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿದ ಅಜ್ಜಿ..! ಅಜ್ಜಿ ಮಾಡಿದ ಎಡವಟ್ಟಿಗೆ ಕೋಮಾಗೆ ಜಾರಿದ ಮಗು !!

Published

on

ಮಂಗಳೂರು/ಇಟಲಿ: ಇಟಲಿಯಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಅಜ್ಜಿಯೊಬ್ಬರು ನಾಲ್ಕು ತಿಂಗಳ ಮಗುವಿಗೆ ಕುಡಿಯುವ ಹಾಲಿನಲ್ಲಿ ಆಲ್ಕೋಹಾಲ್‌ ಬೆರೆಸಿರುವ ಘಟನೆ ನಡೆದಿದೆ.

feed

ಮೊಮ್ಮಗು ಕುಡಿಯುವ ಹಾಲಿಗೆ ಅಜ್ಜಿ ತಪ್ಪಾಗಿ ಆಲ್ಕೋಹಲ್ ಬೆರೆಸಿದ್ದಾರೆ. ಮಗು ಅರ್ಧ ಹಾಲು ಕುಡಿದ ಬಳಿಕ ಮಗು ಅಳಲು ಆರಂಭಿಸಿದೆ. ಅಜ್ಜಿಗೆ ಅನುಮಾನ ಬಂದು ತಾನು ಕುಡಿಸಿದ ಹಾಲಿನ ವಾಸನೆಯನ್ನು ತೆಗೆದು ಪರಿಶೀಲನೆ ಮಾಡಿದಾಗ ಅದರಲ್ಲಿ ಆಲ್ಕೋಹಾಲ್‌ ಮಿಶ್ರಣ ಹಾಕಿರುವುದು ಬೆಳಕಿಗೆ ಬಂದಿದೆ.  ಇದರಿಂದ ಆಘಾತಕ್ಕೊಳಗಾದ ವೃದ್ಧೆ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮುಂದೆ ಓದಿ..; ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!

ಕೋಮಾಗೆ ಜಾರಿದ ಮಗು:

ಅದಾಗಲೇ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೋಮ ಸ್ಥಿತಿಗೆ ಜಾರಿತ್ತು. ಬಳಿಕ ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಮಗುವಿನ ಆರೋಗ್ಯವನ್ನು ಸಂಪೂರ್ಣ ಪರಿಶೀಲಿಸಿದ ಬಳಿಕ ಅಜ್ಜಿ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

 

Continue Reading

DAKSHINA KANNADA

ಚಲಿಸುತ್ತಿದ್ದಾಗ ಒಡೆದ ಬಸ್ಸಿನ ಗಾಜು; ಇಬ್ಬರು ಮಕ್ಕಳು, ಚಾಲಕನಿಗೆ ಗಾ*ಯ

Published

on

ವಿಟ್ಲ : ಚಲಿಸುತ್ತಿದ್ದ ಕೇರಳ ರಾಜ್ಯದ ಬಸ್ಸಿನ ಗಾಜು ಒಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಸಂಭವಿಸಿದೆ. ಪುತ್ತೂರು ಕಡೆಯಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಅದರ ಮುಂಭಾಗ ಗಾಜು ಹೊಡೆದಿದೆ.

ಇದನ್ನೂ ಓದಿ : ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೇಟಾ..! ಕಾರು ಜಖಂ

ಇದರಿಂದ ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಚಾಲಕ ಮತ್ತು ಮತ್ತೊಂದು ಮಗು ಸಣ್ಣಪುಟ್ಟವಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡ ಬಾಲಕನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಬಾಲಕ ಕೇರಳದ ಚೆರ್ಕಳ ನೆಲ್ಲಿಕಟ್ಟೆ ನಿವಾಸಿ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಿಸಿಲಿನ ತಾಪಕ್ಕೆ ಈ ಘಟನೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

 

Continue Reading

DAKSHINA KANNADA

ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೇಟಾ..! ಕಾರು ಜಖಂ

Published

on

ವಿಟ್ಲ: ನಿಯಂತ್ರಣ ತಪ್ಪಿ ಕ್ರೇಟಾ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಟ್ಲ ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ನಡೆದಿದೆ.

accident

accident

ಕಾರು ಪಲ್ಟಿಯಾದ ಪರಿಣಾಮ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಪವಾಡ ಎಂಬಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಮುಂದೆ ಓದಿ..; ಪ್ರಾಂಶುಪಾಲೆ, ಶಿಕ್ಷಕಿ ನಡುವೆ ಹೊಯ್‌ ಕೈ..!! ವೀಡಿಯೋ ವೈರಲ್

accident

Continue Reading

LATEST NEWS

Trending