Connect with us

    FILM

    ಚಿತ್ರರಂಗದ ಖ್ಯಾತ ಹಿರಿಯ ನಟ ಇ*ನ್ನಿಲ್ಲ; ಡೆಲ್ಲಿ ಗಣೇಶ್ ವಿ*ಧಿವಶ

    Published

    on

    ಮಂಗಳುರು/ಚೆನ್ನೈ: ಸುಮಾರು 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ತಮಿಳು ಚಿತ್ರರಂಗದ ಹಿರಿಯ ಮತ್ತು ಜನಪ್ರಿಯ ನಟ ಡೆಲ್ಲಿ ಗಣೇಶ್ ನಿ*ಧನ ಹೊಂದಿದ್ದಾರೆ. ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿಯೂ ಕೆಲಸ ಮಾಡಿದ್ದ ಗಣೇಶ್‌ಗೆ, 80 ವರ್ಷ ವಯಸ್ಸಾಗಿತ್ತು.

    ಡೆಲ್ಲಿ ಗಣೇಶ್ ಪುತ್ರ ಮಹದೇವನ್ ಈ ವಿಷಯ ಖಾತ್ರಿಪಡಿಸಿದ್ದು, ‘ಡೆಲ್ಲಿ ಗಣೇಶ್ ಅವರು, ನಿನ್ನೆ (ನ.9) ರ ತಡರಾತ್ರಿ 11 ಗಂಟೆ ಸುಮಾರಿಗೆ ಮೃ*ತಪಟ್ಟಿದ್ದಾರೆ’ ಎಂದಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, 40 ವರ್ಷಗಳಿಗಿಂತಲೂ ಹೆಚ್ಚು ಸಮಯ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಗಣೇಶ್ ಅಭಿನಯಿಸಿದ್ದಾರೆ.

    ಕೆ. ಬಾಲಚಂಧರ್ ಅವರಂಥಹಾ ಮೇರು ನಿರ್ದೇಶಕರ ಸಿನಿಮಾ ಮೂಲಕ ನಟನೆ ಆರಂಭಿಸಿದ ಡೆಲ್ಲಿ ಗಣೇಶ್, ಹಲವು ಸ್ಟಾರ್ ನಟ-ನಟಿಯರೊಡನೆ ತೆರೆ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ನಾಯಕ, ಎರಡನೇ ನಾಯಕ, ವಿಲನ್​ ಪಾತ್ರಗಳಲ್ಲಿ ನಟಿಸಿದ ಡೆಲ್ಲಿ ಗಣೇಶ್, ವಯಸ್ಸಾದಂತೆ, ತಂದೆ, ಮಾವ, ಚಿಕ್ಕಪ್ಪ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಹಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ.

    1976 ರಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿರುವ ಡೆಲ್ಲಿ ಗಣೇಶ್ ತಮಿಳು, ಮಲಯಾಳ, ತೆಲುಗು ಹಾಗೂ ಕೆಲವು ಹಿಂದಿ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ನಟಿಸಿರುವ ‘ಚೆನ್ನೈ ಎಕ್ಸ್​ಪ್ರೆಸ್’ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ಸುಮಾರು 25ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಎರಡು ವೆಬ್ ಸರಣಿಗಳಲ್ಲಿಯೂ ಸಹ ಡೆಲ್ಲಿ ಗಣೇಶ್ ನಟಿಸಿದ್ದಾರೆ. ವಿಶೇಷವೆಂದರೆ ಶಂಕರ್ ನಾಗ್ ನಿರ್ದೇಶನ ಮಾಡಿರುವ ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿಯೂ ಡಬ್ಬಿಂಗ್ ಕಲಾವಿದರಾಗಿ ಕೆಲಸ ಮಾಡಿದ್ದರು.

     

    ಇದನ್ನೂ ಓದಿ : ಪಂಚಭೂತಗಳಲ್ಲಿ ಲೀನರಾದ ಗುರುಪ್ರಸಾದ್; ಬ್ರಾಹ್ಮಣ ವಿಧಿಯಂತೆ ಅಂತ್ಯಸಂಸ್ಕಾರ.!

     

    ಡೆಲ್ಲಿ ಗಣೇಶ್ ನಿ*ಧನದ ಬಗ್ಗೆ ತಮಿಳು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

    FILM

    ನಟ ಶಾರುಖ್ ಖಾನ್​ಗೆ ಜೀ*ವ ಬೆ*ದರಿಕೆಯೊಡ್ಡಿದ್ದಾತ ಅರೆಸ್ಟ್; ಬಂಧಿತ ವಕೀಲ ಹೇಳೋದೇ ಬೇರೆ!

    Published

    on

    ಮಂಗಳೂರು/ಮುಂಬೈ : ಬಾಲಿವುಡ್ ನಟ ಶಾರುಖ್​ ಖಾನ್​ಗೆ ಕೊ*ಲೆ ಬೆ*ದರಿಕೆ ಹಾಕಿದ್ದ ವ್ಯಕ್ತಿಯನ್ನು ಛತ್ತೀಸ್​ಗಢದಲ್ಲಿ ಬಂಧಿಸಲಾಗಿದೆ. ವಕೀಲ ಫೈಜಾನ್ ಖಾನ್ ಬಂಧಿತ ಆರೋಪಿ. ಛತ್ತೀಸ್‌ಗಢದ ರಾಯ್‌ಪುರದ ಆತನ ನಿವಾಸದಲ್ಲಿ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ.

    50 ಲಕ್ಷ ರೂ. ನೀಡುವಂತೆ ಬೆ*ದರಿಕೆ:

    ನವೆಂಬರ್ 7 ರಂದು ವ್ಯಕ್ತಿಯೊಬ್ಬ ಬಾಲಿವುಡ್ ನಟ ಶಾರುಖ್ ಖಾನ್‌ಗೆ ಜೀ*ವ ಬೆ*ದರಿಕೆ ಹಾಕಿದ್ದಲ್ಲದೇ, 50 ಲಕ್ಷ ರೂ. ನೀಡುವಂತೆ  ಬೇಡಿಕೆಯೊಡ್ಡಿದ್ದ. ಈ ಸಂಬಂಧ ಮುಂಬಯಿಯ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಫೋನ್ ಟ್ರ್ಯಾಕ್ ಮಾಡಿದಾಗ, ಆರೋಪಿ ಛತ್ತೀಸ್‌ಗಢ ರಾಜ್ಯದ ರಾಯ್‌ಪುರದಿಂದ ಕರೆ ಮಾಡಿರುವುದು ತಿಳಿದು ಬಂದಿತ್ತು. ಇದೀಗ ಆರೋಪಿ ವಕೀಲ ಫೈಜಲ್ ಖಾನ್‌ನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ರಾಯ್‌ಪುರದಲ್ಲಿ ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್‌ 308(4), 351(3)(4) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ನನ್ನ ವಿರುದ್ಧ ಪಿತೂರಿ ಎಂದ ವಕೀಲ :

    ಬೆ*ದರಿಕೆ ಪ್ರಕರಣಕ್ಕೆ ಸಂಬಂಧಿಸಿ ಫೈಜಲ್ ಖಾನ್‌ನ್ನು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೇನೋ ಸರಿ. ಆದರೆ, ಈ ಕೇಸ್ ಕುರಿತು ಸವಾಲು ಎದುರಾಗಿದೆ. ಅದಕ್ಕೆ ಕಾರಣ ವಕೀಲ ನೀಡಿರುವ ಹೇಳಿಕೆ.
    ಇದನ್ನೂ ಓದಿ : Watch Video: ದೇವಸ್ಥಾನದಲ್ಲೇ ಹೃದಯಾಘಾ*ತದಿಂದ ಕುಸಿದು ಬಿದ್ದು ವ್ಯಕ್ತಿ ಸಾ*ವು 

    ನವೆಂಬರ್ 2ರಂದು ತನ್ನ ಮೊಬೈಲ್ ಕಳೆದು ಹೋಗಿದ್ದು, ಈಗಾಗಲೇ ದೂರು ದಾಖಲಿಸಿದ್ದೇನೆ. ಕಳೆದು ಹೋಗಿರುವ ತನ್ನ ಫೋನ್‌ನಿಂದ ಯಾರೋ ಕಿಡಿಗೇಡಿಗಳು ಶಾರುಖ್‌ ಖಾನ್‌ಗೆ ಬೆ*ದರಿಕೆ ಕರೆ ಮಾಡಿದ್ದಾರೆ. ಇದು ನನ್ನ ವಿರುದ್ಧ ನಡೆದಿರುವ ಪಿತೂರಿಯಾಗಿದೆ ಎಂದು ಫೈಜಲ್ ಖಾನ್ ಪೊಲೀಸರಿಗೆ ತಿಳಿಸಿದ್ದಾನೆ.

    Continue Reading

    FILM

    ಅಂಬಿ ಮನೆಗೆ ಜ್ಯೂನಿಯರ್ ಅಭಿ ಎಂಟ್ರಿ; ಗಂಡು ಮಗುವಿಗೆ ಜನ್ಮವಿತ್ತ ಅವಿವಾ

    Published

    on

    ಕನ್ನಡ ಚಿತ್ರರಂಗದ ರೆಬೆಲ್‌ ಸ್ಟಾರ್‌ ಅಂಬರೀಶ್‌ ಪುತ್ರ ಜ್ಯೂನಿಯರ್‌ ರೆಬಲ್‌ ಸ್ಟಾರ್‌ ಅಭಿಷೇಕ್‌ ಮತ್ತು ಅವಿವಾ ಬಿದ್ದಪ್ಪ ಇಂದು (ನ.12) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವಿವಾ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊಮ್ಮಗನನ್ನು ಹಿಡಿದು ಮಾಜಿ ಸಂಸದೆ ಸುಮಲತಾ ಖುಷಿ ಪಟ್ಟಿದ್ದಾರೆ.

    ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದ ಅಭಿಷೇಕ್‌ ಅಂಬರೀಶ್‌, ಅವಿವಾ ಬಿದ್ದಪ್ಪ ಜೂನ್‌ 5,2023 ರಂದು ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಸೆ.18, 2024 ರಂದು ಅವೀವಾ ಸೀಮಂತ ಅದ್ದೂರಿಯಾಗಿ ನಡೆದಿತ್ತು.

    ಅವಿವಾ ಬಿದ್ದಪ್ಪ ಫ್ಯಾಷನ್‌ ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸ್ವಿಮ್‌ ಸೂಟ್‌ ಬ್ರ್ಯಾಂಡ್‌ನ್ನು ಲಾಂಚ್‌ ಮಾಡಿದ್ದಾರೆ. ಈಗ ಗಂಡು ಮಗುವಿನ ಆಗಮನದಿಂದ ಅಂಬಿ ಕುಟುಂಬ ಸಂತೋಷದಲ್ಲಿದೆ.

    Continue Reading

    FILM

    ಅಬ್ಬಬ್ಬಾ! ಒಂದು ಹಾಡಿಗೆ ಎ.ಆರ್.ರೆಹಮಾನ್ ಇಷ್ಟೊಂದು ಡಿಮ್ಯಾಂಡ್ ಮಾಡ್ತಾರಾ?

    Published

    on

    ತಮ್ಮ ಸಂಗೀತದ ಮೂಲಕವೇ ಎಷ್ಟೋ ಸಿನಿಮಾಗಳನ್ನು ಗೆಲ್ಲಿಸಿದ್ದ ಆಸ್ಕರ್​ ಪ್ರಶಸ್ತಿ ಎ.ಆರ್.ರೆಹಮಾನ್ ಗೆ ಇರುವ ಬೇಡಿಕೆ ದೊಡ್ಡದು. ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಖ್ಯಾತಿ ಪಡೆದಿದ್ದಾರೆ. ಸಾವಿರಾರು ಸೂಪರ್​ ಹಿಟ್ ಗೀತೆಗಳನ್ನು ನೀಡುವ ಮೂಲಕ ದಕ್ಷಿಣ ಭಾರತದಲ್ಲಿ ಹಾಗೂ ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ ಎ.ಆರ್​. ರೆಹಮಾನ್ ದುಬಾರಿ ಸಂಭಾವನೆ ಪಡೆಯುತ್ತಾರೆ. ಒಂದು ಹಾಡಿಗೆ ಧ್ವನಿ ನೀಡಲು ಪಡೆಯುವ ಸಂಭಾವನೆ 3 ಕೋಟಿ ರೂಪಾಯಿ! ಸ್ಟಾರ್​ ಸಿಂಗರ್ಸ್​ ಎನಿಸಿಕೊಂಡ ಸೋನು ನಿಗಮ್, ಶ್ರೇಯಾ ಘೋಷಾಲ್ ಮುಂತಾದವರ ಸಂಭಾವನೆಗಿಂತಲೂ ಇದು 15 ಪಟ್ಟು ಅಧಿಕ ಮೊತ್ತವಾಗಿದೆ.

    ಎ.ಆರ್​. ರೆಹಮಾನ್ ಪೂರ್ಣಾವಧಿ ಸಿಂಗರ್ ಅಲ್ಲ. ಅಂದರೆ, ಅವರ ಮುಖ್ಯ ಕಸುಬು ಹಾಡುಗಾರಿಕೆ ಅಲ್ಲ. ಸಂಗೀತ ನಿರ್ದೇಶಕನಾಗಿ ಬ್ಯುಸಿ ಆಗಿದ್ದು, ಅಲ್ಲೊಂದು ಇಲ್ಲೊಂದು ಹಾಡುಗಳಿಗೆ ಮಾತ್ರ ಅವರು ಧ್ವನಿ ನೀಡುತ್ತಾರೆ. ಅವರಿಂದ ಒಂದು ಹಾಡು ಹಾಡಿಸಬೇಕು ಎಂದರೆ ನಿರ್ಮಾಪಕರು 3 ಕೋಟಿ ರೂಪಾಯಿ ನೀಡಬೇಕು.

    3 ಕೋಟಿ ಸಂಭಾವನೆಯ ಗುಟ್ಟು :

    ತಮ್ಮ ಬಳಿ ಯಾರೂ ಕೂಡ ಬಂದು ಹಾಡಲು ಒತ್ತಾಯ ಮಾಡಬಾರದು ಎಂಬುದು ಎ.ಆರ್​. ರೆಹಮಾನ್ ಅವರ ಉದ್ದೇಶ. ಯಾಕೆಂದರೆ, ಅವರು ಗಾಯನಕ್ಕಿಂತಲೂ ಸಂಗೀತ ನಿರ್ದೇಶನಕ್ಕೆ ಹೆಚ್ಚು ಸಮಯ ನೀಡಬೇಕು. ಆದ್ದರಿಂದ ಗಾಯನಕ್ಕಾಗಿ ತಮ್ಮನ್ನು ಯಾರೂ ಕರೆಯಬಾರದು ಎಂದು 3 ಕೋಟಿ ರೂಪಾಯಿ ಸಂಭಾವನೆಯನ್ನು ಎ.ಆರ್​. ರೆಹಮಾನ್ ನಿಗದಿ ಮಾಡಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಕೆಲವು ನಿರ್ಮಾಪಕರು ಈ ದುಬಾರಿ ಸಂಬಳ ನೀಡಿ ಎ.ಆರ್​. ರೆಹಮಾನ್ ಅವರಿಂದಲೇ ಹಾಡಿಸುತ್ತಾರೆ.

    ಭಾರತೀಯ ಚಿತ್ರರಂಗದಲ್ಲಿ ಸ್ಟಾರ್​ ಗಾಯಕರಾಗಿ ಗುರುತಿಸಿಕೊಂಡಿರುವ ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್, ಸೋನು ನಿಗಮ್ ಅವರು ಪ್ರತಿ ಹಾಡಿಗೆ ಹಲವು ಲಕ್ಷ ರೂಪಾಯಿಗಳನ್ನು ಚಾರ್ಜ್​ ಮಾಡುತ್ತಾರೆ. ಪ್ರತಿ ಹಾಡಿಗೆ ಶ್ರೇಯಾ ಘೋಷಾಲ್ ಅವರು 25 ಲಕ್ಷ ರೂಪಾಯಿ ಪಡೆಯುತ್ತಾರೆ. ಸುನಿಧಿ ಚೌಹಾಣ್ ಅವರು 18ರಿಂದ 20 ಲಕ್ಷ ರೂಪಾಯಿ ಪಡೆಯುತ್ತಾರೆ. ಅರಿಜಿತ್ ಸಿಂಗ್​ ಕೂಡ ಇಷ್ಟೇ ಪ್ರಮಾಣದ ಸಂಬಳ ಡಿಮ್ಯಾಂಡ್ ಮಾಡುತ್ತಾರೆ. ಸೋನು ನಿಗಮ್ ಅವರು ಒಂದು ಹಾಡಿಗೆ 15ರಿಂದ 18 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ. ಈಗ ಅವರೆಲ್ಲರನ್ನೂ ಮೀರಿಸಿದ ಎ.ಆರ್​. ರೆಹಮಾನ್ ಬಹಳ ಸುದ್ಧಿಯಲ್ಲಿದ್ದಾರೆ.

    Continue Reading

    LATEST NEWS

    Trending