Connect with us

    DAKSHINA KANNADA

    ಕಾಲಿಯಾ ರಫೀಕ್‌ ಹತ್ಯೆ ಪ್ರಕರಣ..! ಎಲ್ಲಾ 9 ಆರೋಪಿಗಳು ಖುಲಾಸೆ..!

    Published

    on

    ಮಂಗಳೂರು : ಏಳು ವರ್ಷಗಳ ಹಿಂದೆ ನಡೆದಿದ್ದ ನಟೋರಿಯಸ್ ರೌಡಿ ಕಾಲಿಯ ರಫೀಕ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ್ದ 1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಎಲ್ಲಾ 9 ಆರೋಪಿಗಳನ್ನು ನಿರ್ದೋಶಿಗಳು ಎಂದು ತೀರ್ಪು ನೀಡಿದೆ. ಸರಕಾರಿ ಅಬಿಯೋಜಕರು ಈ ಪ್ರಕರಣದ ಸಂಬಂಧ 31 ಸಾಕ್ಷಿಗಳ ವಿಚಾರಣೆ ನಡೆಸಿದ್ದರು.


    ಉಳ್ಳಾಲದ ಕೋಟೆಕಾರ್ ಬಳಿಯ ಪೆಟ್ರೋಲ್ ಪಂಪ್‌ ಬಳಿ 2017 ರಲ್ಲಿ ಕಾಲಿಯಾ ರಫೀಕ್‌ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಟಿಪ್ಪರ್ ಲಾರಿಯನ್ನು ಕಾಲಿಯಾ ರಫೀಕ್‌ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ತಪ್ಪಿಸಿಕೊಂಡು ಓಡುವ ವೇಳೆ ಪಿಸ್ತೂಲಿನಿಂದ ಗುಂಡು ಹಾರಿಸಿ ತಲವಾರಿನಿಂದ ದಾಳಿ ಮಾಡಿ ಕೊಲೆ ಮಾಡಲಾಗಿತ್ತು. ಕಾಸರಗೋಡು ಜಿಲ್ಲೆಯ ಉಪ್ಪಳದ ಹಿದಾಯತ್ ನಗರದ 9 ಜನ ಈ ಕೃತ್ಯ ನಡೆಸಿದ್ದಾಗಿ ನ್ಯಾಯಾಲಯಕ್ಕೆ ದೋಷಾರೋಪಣ ವರದಿ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳಾದ ನಂ.1 ನೂರಲಿ, ನಂ.2 ಜಿಯ @ ಇಸುಬು ಶಿಯಾದ್, ನಂ.5 ರಶೀದ್, ನಂ. 6 ಮಜಿಬ್ @ ಕಲ್ಲಟ ನಜೀಬ್ ಕೆ.ಎ. ಇವರನ್ನು ಮಾನ್ಯ ನಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ವಾದ ವಿವಾದಗಳನ್ನು ಆಲಿಸಿದ ದಕ್ಷಿಣ ಕನ್ನಡ ಗೌರವಾನ್ವಿತ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಧೀಶರಾದ ಮಲ್ಲಿಕಾರ್ಜುನ ಸ್ವಾಮಿಯವರು ಈ ಮೇಲೆ ನಮೂದಿಸಿದ ಆರೋಪಿಗಳ ವಿರುದ್ಧ ಆರೋಪಗಳನ್ನು ಸಾಬೀತು ಪಡಿಸುವರೇ ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿಗಳನ್ನು ಬಿಡುಗಡೆ ಮಾಡಿ ತೀರ್ಪನ್ನು ಕೊಟ್ಟಿರುತ್ತಾರೆ.

    DAKSHINA KANNADA

    ಲೇಖನ; ಮಂದ ದಾರಿ

    Published

    on

    ”ನೀ ಸಾಧನೆ ಮಾಡಲು ಹೊರಟಾಗ ಒಬ್ಬಂಟಿಯಾಗಿ ಹೊರಡು. ಪ್ರಯತ್ನ ಗುಟ್ಟಾಗಿರಲಿ, ಗೆದ್ದಮೇಲೆ ಯಶಸ್ಸು ಪ್ರಚರವಾಗಲಿ” ಎಂದು ಹಿರಿಯರು ಹೇಳಿದ್ದ ಮಾತು ಅವತ್ತು ನನಗೆ ಬಸ್ಸಿಗೆ ಕಾಯುತ್ತಿರುವಾಗ ಮನಸ್ಸಿಗೆ ಬಂತು. ಆದರೆ ಯಾಕಾಗಿ ಬಂತೋ ನಾನರಿಯೆ.
    ಅಂದು ಲೇಟ್ ಆಗಿತ್ತು. ಅದೇ ಲಾಸ್ಟ್ ಬಸ್ಸ್ ನಮ್ಮೂರಿಗೆ. 2 ಗಂಟೆ ಪ್ರಯಾಣವಿದ್ದ ಕಾರಣ ಹಾಗೆಯೇ ಸೀಟಿಗೆ ಒರಗುತ್ತಾ ನಿದ್ರಾ ಲೋಕಕ್ಕೆ ನಾನಿಳಿದೆ. ಅದಾಗಲೇ ಇಂಜಿನಿಯರಿಂಗ್ ಮುಗಿಸಿ 3 ತಿಂಗಳಾಗಿತ್ತು, 8 ಪ್ರಸಿದ್ಧ ಕಂಪನಿಗಳಲ್ಲಿ ಸಂದರ್ಶನವಾಗಿಯೂ ಆಯ್ಕೆಯಾಗಿರಲಿಲ್ಲ. ಏಕೆ ಎಂದು ಎಷ್ಟೇ ಹುಡುಕಿದರೂ ಉತ್ತರ ಕಂಡುಹಿಡಿಯಲು ಆಗಲಿಲ್ಲ.


    ನೃತ್ಯ , ಸಂಗೀತ , ಬರವಣಿಗೆ , ನಟನೆ ನನ್ನಾವೃತ್ತಿ. ಆದರೆ ಅದನ್ನೆಲ್ಲ ತೊರೆದು ಪಿ.ಯು.ಸಿ ನಂತರ ಇಂಜಿನಿಯರಿಂಗ್ ಫಸ್ಟ್ ರಾಂಕ್ ನಲ್ಲಿ ಪೂರ್ಣಗೊಳಿಸಿದೆ. ಎಲ್ಲೋ ಒಂದು ಕಡೆ ನನ್ನ ನಾನೆ ಕಳೆದುಕೊಂಡೆ ಅನ್ನುವ ಯೋಚನೆಯಲ್ಲೇ ಮುಳುಗಿದೆ. ತಲುಪಬೇಕಾದ ಸ್ಥಳಕ್ಕೆ ತಲುಪಿದಾಗ ಇಳಿದೆ.
    ಸುತ್ತಲೂ ಕತ್ತಲು. ದಾರಿ ಕಾಣಲಿಲ್ಲ. ಮನೆಯ ದಾರಿ ಗೊತ್ತು, ಹೋಗಲು ಮನಸಿಲ್ಲ. ಕಾರಣ ಈ ಬಾರಿಯೂ ಕೆಲಸ ಸಿಗಲಿಲ್ಲ. ಯಾವ ಮುಖ ಇಟ್ಟುಕೊಂಡು ಹೋಗುವುದು ? ಆದರೂ ಹೋದೆ! ಯಾರೇನು ಕೇಳಲಿಲ್ಲ. ಫ್ರೆಶ್ ಅಪ್ ಆದೆ.
    ಹೊಟ್ಟೆ ಹಸಿವಿಗಿಂತ ಜೀವನದ ಹಸಿವು ಹೆಚ್ಚಾಗಿ ಇರುವಾಗ ಎಲ್ಲಿಂದ ಹೊಟ್ಟೆ ಹಸಿವು? ಮತ್ತೆ ಹಾಗೆಯೇ ಬೆಡ್ ಅಲ್ಲಿ ಮಲಾಗುತ್ತಾ ನಿದ್ರಾ ಲೋಕಕ್ಕೆ ಮರಳಿದೆ. ಎಲ್ಲೋ ಅಂದಿನ ನನ್ನಾಸೆ, ಕನಸುಗಳ ಅಪ್ಪ – ಅಮ್ಮನಿಗಾಗಿ ಬಲಿಕೊಟ್ಟದುದರ ಪಶ್ಚಾತ್ತಾಪದ ಸಾಗರವೇ ಹರಿಯುತ್ತಿತ್ತು.
    ಆದರೆ ಈಗ ಸಮಯ ಸರಿದು ಹೋಗಿದೆ. ಕಳೆದ ಕಾಲವ ಮತ್ತೆ ಮರುಕಳಿಸಲು ಆಗದು. ಈಗ ಸುಮ್ಮನೆ ಇದ್ದು ಬೇರೆ ಏನಾದರೂ ದಾರಿ ಹುಡುಕಬೇಕು. ಯಾವುದೇ ಕಾರಣಕ್ಕೂ ಆವೇಶ ಸಲ್ಲದ ಮಾತು. ಒತ್ತಾಯದಿ ಕಣ್ಣ್ ಮುಚ್ಚಿದೆ, ನಿದ್ರಾ ದೇವಿಯು ನನ್ನ ಮೇಲೆ ಮುನಿಸಿಕೊಂಡತೆ ಕಾಣುತಿತ್ತು. ಎದ್ದೆ ! ಆಗ ನನ್ನಂತೆಯೇ ಕಂಡ ಒಬ್ಬ ಹೇಳಿದ…
    ಮನವು ಮುಸುಕಿರಲು ಅಂಧಕಾರದಾಗ,
    ಸುಮ್ಮನಾಗಬೇಕು ನಾವು ದಾರಿ ಕಾಣದಾಗ !

     

    ಬರಹ: ಅಶ್ವಿತಾ ಭಟ್

    Continue Reading

    DAKSHINA KANNADA

    ಮಂಗಳೂರಿನ ಪಡೀಲ್ ಬಳಿ ಆಂಬ್ಯುಲೆನ್ಸ್ ಪಲ್ಟಿ; ಹೃದ್ರೋಗಿ ದಾಸಪ್ಪ ರೈ ಮೃ*ತ್ಯು

    Published

    on

    ಪುತ್ತೂರು: ಪುತ್ತೂರಿನ ಆ್ಯಂಬುಲೆನ್ಸ್ ನಲ್ಲಿ ರೋಗಿಯೊಬ್ಬರನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಮಂಗಳೂರಿನಲ್ಲಿ ಪಲ್ಟಿಯಾಗಿ ಹೃದ್ರೋಗಿ ಕೃಷಿ ದಾಸಪ್ಪ ರೈ ಎಂಬವರು ಸಾವನ್ನಪ್ಪಿದ್ದಾರೆ. ಇಂದು(ಸೆ.25) ಬೆಳಿಗ್ಗೆ ನಸುಕಿನ ಜಾವ ಈ ಘಟನೆ ನಡೆದಿದೆ.

    ಗುಜರಾತ್: ದೇವಸ್ಥಾನದಿಂದ ಹಿಂದಿರುಗುವಾಗ ಟ್ರಕ್​ಗೆ ಕಾರು ಡಿಕ್ಕಿ, 7 ಮಂದಿ ಸಾ*ವು

    ರಾಮಕುಂಜ ಹಳೆನೇರೆಂಕಿ ನಿವಾಸಿ ಕೃಷಿಕ ದಾಸಪ್ಪ ರೈ  ಎಂಬವರು ಸಾವನ್ನಪ್ಪಿದವರು. ಎದೆ ನೋವು ಕಾಣಿಸಿಕೊಂಡ ದಾಸಪ್ಪ ರೈ ಅವರನ್ನು ತಡರಾತ್ರಿ ಪುತ್ತೂರು ಮಹಾವೀರ ಅಸ್ಪತ್ರೆಗೆ ಕರೆದು ಕೊಂಡು ಬಂದಾಗ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ವಠಾರದಲ್ಲಿದ್ದ ಇನ್ನೊಂದು ಆ್ಯಂಬುಲೆನ್ಸ್ ನಲ್ಲಿ – ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದು ಹೋಗುತ್ತಿರುವಾಗ ಮಂಗಳೂರು ಪಡೀಲು ಸಮೀಪ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್ ನಲ್ಲಿದ್ದ ಹೃದ್ರೋಗಿ ದಾಸಪ್ಪ ರೈ ಮೃತಪಟ್ಟಿದ್ದರು. ಜೊತೆಯಲ್ಲಿದ್ದ  ನಳಿನಿ ಎಂಬವರು ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಸಪ್ಪ ಅವರ ಪುತ್ರ ಹರ್ಷಿತ್ ಮತ್ತು ಸಂಬಂಧಿ ಅಲ್ಪಸ್ವಲ್ಪ ಗಾಯಗೊಂಡು ಪಾರಾಗಿದ್ದಾರೆ.

    Continue Reading

    DAKSHINA KANNADA

    ಸಿನೆಮಾ ವಿಚಾರವಾಗಿ ಚರ್ಚೆಯಲ್ಲಿ ಜಾತಿ ನಿಂದನೆ ಆರೋಪ : ಪೊಲೀಸ್ ಆಯುಕ್ತರಿಗೆ ದೂರು

    Published

    on

    ಮಂಗಳೂರು:  ಕಲ್ಜಿಗ ಸಿನೆಮಾದ ಪ್ರಮೋಷನ್‌ ಮಾಡಿದ ಯೂಟ್ಯೂಬ್‌ ಚಾನೆಲ್‌ ಒಂದರಲ್ಲಿ ಜಾತಿ ನಿಂದನೆ ಮಾಡಲಾಗಿದೆ ಎಂದು ಪಂಬದ ಸಮೂದಾಯದ ಪ್ರತಿನಿಧಿಗಳು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ  ದೂರು ನೀಡಿ ಸೂಕ್ತ ಜರುಗಿಸುವಂತೆ ಮನವಿ ಮಾಡಿದ್ದಾರೆ.

    ಕಲ್ಜಿಗ ಸಿನೆಮಾ ಬಿಡುಗಡೆಗೂ ಮೊದಲೇ ವಿವಾದ ಹುಟ್ಟಿಕೊಂಡಿದ್ದು, ಸಿನೆಮಾದಲ್ಲಿ ದೈವ ನರ್ತನದ ವಿಚಾರವಾಗಿ ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಚಿತ್ರತಂಡ ವಿರೋಧಿಸಿದ ಹಲವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದು, ಸಿನೆಮಾದಲ್ಲಿ ದೈವಕ್ಕೆ ಯಾವುದೇ ರೀತಿಯ ಅವಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದಾದ ಬಳಿಕ ಚಿತ್ರ ಬಿಡುಗಡೆಗೊಂಡು ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಸಿನೆಮಾದ ವಿಶ್ಲೇಷಣೆಯ ಮೂಲಕ ಪ್ರಮೋಷನ್ ಮಾಡಿದ್ದ ಯೂಟ್ಯೂಬ್ ಚಾನೆಲ್‌ ಒಂದರಲ್ಲಿ ಪರ ವಿರೋಧದ ಚರ್ಚೆ ನಡೆದಿತ್ತು. ಚಾನೆಲ್‌ನ ಕಮೆಂಟ್ ಬಾಕ್ಸ್‌ನಲ್ಲಿ ಚರ್ಚೆಯ ವೇಳೆ ವ್ಯಕ್ತಿಯೊಬ್ಬ ದೈವ ಚಾಕರಿ ಮಾಡುವ ಪಂಬದ ಸಮೂದಾಯವನ್ನು ನಿಂದಿಸಿ ಕಮೆಂಟ್ ಹಾಕಿದ್ದ. ತೀರ ಕೀಳು ಮಟ್ಟದ ಪದ ಬಳಕೆಯ ಮೂಲಕ ಪಂಬದ ಸಮೂದಾಯಕ್ಕೆ ಅವಮಾನ ಮಾಡಿದ್ದ.

    ಕಲ್ಜಿಗದಲ್ಲಿ ದೈವಕ್ಕೆ ಯಾವುದೇ ಅಪಚಾರ ಆಗಿಲ್ಲ; ಸಿನೆಮಾ ನೋಡಿ ಆಮೇಲೆ ಮಾತನಾಡಿ ಎಂದ ಸಿನೆಮಾ ತಂಡ

    ಕಲ್ಜಿಗ ಸಿನೆಮಾ ವಿಚಾರವಾಗಿ ಆರಂಭವಾಗಿದ್ದ ಈ ವಾದ ವಿವಾದ ಕೊನೆಗೆ ವ್ಯಯಕ್ತಿಕ ಜಾತಿ ನಿಂದನೆ ತಲುಪಿದ ವಿಚಾರವಾಗಿ ಪಂಬದ ಸಮಾಜ ಅಸಮಾದಾನ ವ್ಯಕ್ತಪಡಿಸಿದೆ. ದೈವ ಚಾಕರಿಯವನ್ನು ಅಶ್ಲೀಲ ಪದಗಳಿಂದ ನಿಂದಿಸಿದ ವ್ಯಕ್ತಿಯ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

    Continue Reading

    LATEST NEWS

    Trending