Connect with us

LATEST NEWS

ಕ್ರಿಯೆಗೆ-ಪ್ರತಿಕ್ರಿಯೆ ಎಂದು ಸಮರ್ಥನೆ ನೀಡಿದ್ದ ಮುಖ್ಯಮಂತ್ರಿಯೇ ಇದಕ್ಕೆ ಹೊಣೆ: ಮಾಜಿ ಸಿಎಂ ಸಿದ್ದರಾಮಯ್ಯ

Published

on

ಮಂಗಳೂರು: ಪ್ರವೀಣ್‌ ಹತ್ಯೆ ಬೆನ್ನಲ್ಲೇ ಮುಖ್ಯಮಂತ್ರಿ ಜಿಲ್ಲೆಯಲ್ಲಿರುವಾಗಲೇ ನಡೆದಿರುವ ಮತ್ತೊಂದು ಹತ್ಯೆ ಅವರ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.


ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ಸುಳ್ಯದಲ್ಲಿ ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿರುವ ಬೆನ್ನಲ್ಲಿಯೇ ಇಂದು ಸುರತ್ಕಲ್ ನಲ್ಲಿ ಫಾಝೀಲ್ ಎಂಬ ಯುವಕನ ಕೊಲೆ ನಡೆದಿರುವುದು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಕ್ಕೆ ಸಾಕ್ಷಿ.
ದಕ್ಷಿಣ ಕನ್ನಡದ ಸರಣಿ ಹತ್ಯೆಗಳನ್ನು ಖಂಡಿಸದೆ, ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಅಟ್ಟದೆ, ಅವರ ದುಷ್ಕೃತ್ಯವನ್ನು ಕ್ರಿಯೆಗೆ-ಪ್ರತಿಕ್ರಿಯೆ ಎಂಬ ಸಮರ್ಥನೆ ನೀಡಿದ್ದ ಮುಖ್ಯಮಂತ್ರಿ ಅವರೇ ಇದಕ್ಕೆ ಹೊಣೆಗಾರರು. ಅವರು ಜಿಲ್ಲೆಯಲ್ಲಿರುವಾಗಲೇ ನಡೆದಿರುವ ಹತ್ಯೆ ಅವರ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ.
ತಕ್ಷಣ ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕಿತ್ತುಹಾಕದೆ ಇದ್ದರೆ ರಾಜ್ಯದಲ್ಲಿ ಜನ ಮನೆಯಿಂದ ಹೊರಗೆ ಬರುವುದೂ ಕಷ್ಟವಾಗಬಹುದು.
ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಮತ್ತು ಜನಾಕ್ರೋಶವನ್ನು ಶಾಂತಗೊಳಿಸಲು ತನಿಖೆಯ ನೆಪದಲ್ಲಿ ಆರೋಪಿಗಳ ಹೊರತಾಗಿ ಅಮಾಯಕರಿಗೂ ಕಿರುಕುಳ ನೀಡುವುದು ಸಲ್ಲದು ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಜಾನ್ವಿ ಕಪೂರ್ ಧರಿಸಿರುವ ಈ ಮಿನಿ ಡ್ರೆಸ್ ಬೆಲೆ 1.86 ಲಕ್ಷ

Published

on

ದಿಲ್ಲಿ: ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ದುಬಾರಿ ಮಿನಿ ಉಡುಗೆ ಧರಿಸಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಸ್ಟೈಲಿಶ್ ಚೆಕ್ ಮಿನಿ ಡ್ರೆಸ್‌ನಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಈಕೆ ಯಾವುದೇ ಬಗೆಯ ಉಡುಗೆ ತೊಟ್ಟರೂ ಅದ್ಭುತವಾಗಿ ಕಾಣಿಸುತ್ತಾರೆ.

ಜಾನ್ವಿ ಕಪೂರ್‌ ಈ ಫೋಟೋಗಳನ್ನು ಸೋಷಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿದ್ದಾರೆ. ಕಪ್ಪು ಮತ್ತು ಬಿಳಿ ಚೆಕ್‌ ಡ್ರೆಸ್‌ನಲ್ಲಿ ಗೊಂಬೆಯಂತೆ ಕಾಣಿಸಿದ್ದಾರೆ. ಈ ಮಿನಿ ಉಡುಗೆಯ ನೆಕ್‌ಲೈನ್‌, ಉಬ್ಬಿದ ತೋಳುಗಳು, ಬಾಡಿಕನ್‌ ಫಿಟ್‌ ವಿನ್ಯಾಸವು ಎಲ್ಲರ ಗಮನ ಸೆಳೆದಿದೆ. ಈ ಪುಟ್ಟ ಉಡುಗೆಯಲ್ಲಿ ವಿಶೇಷ ನೋಟ ಬೀರಿದ್ದಾರೆ.

ನೀವು ಜಾನ್ವಿಯ ಈ ಉಡುಪನ್ನು ಇಷ್ಟಪಟ್ಟಿರಬಹುದು. ಆದರೆ ಇದರ ಬೆಲೆ ಕೇಳಿ ಅಚ್ಚರಿ ಪಡಬೇಡಿ. ಡಿಸೈನರ್ ಬ್ರಾಂಡ್ ಅಲೆಸ್ಸಾಂಡ್ರಾ ರಿಚ್ನ ಈ ಉಡುಗೆಯ ಬೆಲೆ 2,232 ಡಾಲರ್. ಅಂದರೆ ಸುಮಾರು 1.86 ಲಕ್ಷ ರೂಪಾಯಿ.

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಮನಿಷಾ ಮೆಲ್ವಾನಿ ನೆರವಿನನಿಂದ ಒಂದು ಜೋಡಿ ಮುತ್ತು ಸ್ಟಡ್ ಕಿವಿಯೋಲೆ, ಡೈಮಂಡ್ ಸ್ಟೇಟ್ಮೆಂಟ್ ಚೈನ್ ನೆಕ್ಲೆಸ್‌, ಬಿಳಿ ಪಂಪ್‌ ಹೀಲ್ಸ್‌ ಧರಿಸಿದ್ದಾರೆ. ಈ ನೆಕ್ಲೆಸ್‌ ಅನ್ನು ಈಕೆಯ ಬಾಯ್‌ಫ್ರೆಂಡ್‌ ಶಿಖು ನೀಡಿದ್ದಾರೆ ಎಂಬ ವದಂತಿಗಳಿವೆ.

ಮೇಕಪ್ ಕಲಾವಿದೆ ತನ್ವಿ ಚೆಂಬೂರ್ಕರ್ ಅವರ ನೆರವಿನಿಂದ ಜಾನ್ವಿ ಮೇಕಪ್‌ ಮಾಡಿಕೊಂಡಿದ್ದಾರೆ. ಕಪ್ಪು ಹುಬ್ಬುಗಳು, ಕೆಂಪಾದ ಕೆನ್ನೆಗಳು, ಹೊಳೆಯುವ ಹೈಲೈಟರ್, ನೇಕ್ಡ್‌ ಲಿಪ್‌ಸ್ಟಿಕ್‌ನಿಂದ ಮುದ್ದಾಗಿ ಕಾಣಿಸುತ್ತಾರೆ.

ಹೇರ್ ಸ್ಟೈಲಿಸ್ಟ್ ಮಾರ್ಸೆ ಪೆಡ್ರೊಜೊ ಅವರ ನೆರವಿನಿಂದ ಜಾನ್ವಿ ಕಪೂರ್‌ ಗುಂಗುರು ಕೂದಲಿನ ವಿನ್ಯಾಸ ಮಾಡಿಕೊಂಡಿದ್ದಾರೆ. ಕೂದಲಿನ ಒಂದು ಭಾಗವನ್ನು ಹಿಂದಕ್ಕೆ ಪಿನ್‌ ಮಾಡಿಕೊಂಡು ಉಳಿದ ಕೂದಲುಗಳನ್ನು ಭುಜಗಳ ಕೆಳಗೆ ಸುಂದರವಾಗಿ ಹರಡಿದ್ದಾರೆ.

Continue Reading

LATEST NEWS

ಭಾರತದ ರೆಡ್ ಲೈಟ್ ಏರಿಯಾ.. ಒಂದು ಗಂಟೆಗೆ ಎಷ್ಟು ಹಣ ಗೊತ್ತೇ..?

Published

on

ರೆಡ್ ಲೈಟ್ ಏರಿಯಾ ಇದರ ಹೆಸರು ಕೇಳಿದರೆ ಸಾಕು ಎಲ್ಲರಲ್ಲಿ ಒಂದು ರೀತಿಯ ಭಾವ ಬರುತ್ತದೆ. ಆದರೆ ನಮ್ಮ ಭಾರತದಲ್ಲಿ ಇರುವ ಅತೀ ದೊಡ್ಡ ರೆಡ್ ಲೈಟ್ ಏರಿಯಾ ಬಗ್ಗೆ ಹೆಚ್ಚಿನವರಿಗೆ ತಿಳಿಯಲಿಕ್ಕಿಲ್ಲ. ಇಡೀ ಭಾರತದಲ್ಲಿ 1100 ರಿಜಿಸ್ಟರ್ ರೆಡ್ ಲೈಟ್ ಏರಿಯಾಗಳು ಇದೆ. ಹಾಗೆಯೇ ನಮ್ಮ ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ.

ಇನ್ನು ಈ ದಂಧೆಗೆ ಹೆಣ್ಣು ಮಕ್ಕಳನ್ನು ಹೇಗೆ ಇಳಿಸುತ್ತಾರೆ ಎಂದರೆ ಕೆಳವರ್ಗದಿಂದ ಇಲ್ಲವಾದರೆ ಬಡ ಕುಟುಂಬದಿಂದ ಹೆಣ್ಣು ಮಕ್ಕಳನ್ನ ಕಿಡ್ನಪ್ ಮಾಡಿ ಅಥವಾ ಹಣದಾಸೆ ತೋರಿಸಿ ಹೆತ್ತವರಿಂದ ಹೆಣ್ಣು ಮಕ್ಕಳನ್ನು ತೆಗೆದುಕೊಂಡು ಅವರಿಗೆ ಚಿತ್ರಹಿಂಸೆ ಮಾಡಿ ಅವರಿಗೇ ಗೊತ್ತಿಲ್ಲದ ಹಾಗೆ ಅವರು ಹುಟ್ಟಿದ್ದೇ ವೇಶ್ಯವಾಟಿಕೆ ಮಾಡುವುದಕ್ಕೆ, ಅಲ್ಲದೇ ವೇಶ್ಯವಾಟಿಕೆ ಮಾಡುವುದು ದೇವರ ಕೆಲಸ ಅನ್ನುವ ಹಾಗೆ ಅವರ ಬ್ರೈನ್ ವಾಶ್ ಮಾಡುತ್ತಾರೆ. ಹಾಗೆಯೇ ಅವರಿಗೆ ಡ್ರಗ್ಸ್, ಸಿಗರೇಟ್, ಮಧ್ಯದಂತಹ ಚಟಗಳನ್ನು ಕಲಿಸಿ ಈ ರಂಗಕ್ಕೆ ಇಳಿಸಿ ಬಿಡುತ್ತಾರೆ. ಅವರೊಂದು ಬೋಲ್ಡ್ ಅಗಿ ಬಿಹೇವ್ ಮಾಡುವ ತರ ಆಗಿ ಹೋಗುತ್ತಾರೆ.

ಇವರು ಮಾಡುವ ಕೆಲಸದಿಂದ ಬರುವ ಹಣದಿಂದ 50% ಮಾತ್ರ ಇವರಿಗೆ ಕೊಡುತ್ತಾರೆ. ಹಾಗೆಯೇ ಗಂಟೆಗೆ ಇಷ್ಟು ಎಂದು ಮಾತನಾಡಿ ಇವರನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಇನ್ನು ಉಳಿದ 50% ಅನ್ನು ಇವರು ಈ ರಂಗಕ್ಕೆ ಇಳಿಯಲು ಕಾರಣೀಕರ್ತರಾದ ಕಾಣದ ಕೈಗಳಿಗೆ ಹೋಗುತ್ತದೆ. ಆ ಕಾಣದ ಕೈಗಳು ದೊಡ್ಡ ಕೈಗಳೇ ಆಗಿರಬಹುದು. ಎಷ್ಟೋ ಜನ ಮಹಿಳೆಯರು ತಮಗೆ ಇಷ್ಟವಿಲ್ಲದಿದ್ದರೂ ಇದೇ ದಂಧೆಯಲ್ಲಿ ಕಷ್ಟಪಡುತ್ತಿದ್ದಾರೆ. ಆ ಕಡೆಯಿಂದ ಹೊರಗೂ ಬಾರದೇ ಈ ಕಡೆಯಿಂದ ಅನುಭವಿಸಲೂ ಆಗದೇ ಕಷ್ಟಪಡುತ್ತಿದ್ದಾರೆ. ಇದೇ ತರಹ ಭಾರತದಲ್ಲೂ ಕೆಲವು ಭಯಾನಕ ರೆಡ್ ಲೈಟ್ ಏರಿಯಾಗಳು ಇವೆ. ಇವುಗಳ ಬಗ್ಗೆ ತಿಳಿಯೋಣ.

1. ಸೋನಗಚಿ, ಕೋಲ್ಕತ್ತಾ

ಕೋಲ್ಕತ್ತಾದಲ್ಲಿರುವ ಸೋನಗಚಿ ಭಾರತದ ಅತಿ ದೊಡ್ಡ ರೆಡ್ ಲೈಟ್ ಏರಿಯಾಗಳಲ್ಲಿ ಒಂದು. ಹೌದು ಇಲ್ಲಿ ಒಂದು ದೊಡ್ಡ ಏರಿಯಾನೇ ಇದೆ. ದೊಡ್ಡ ದೊಡ್ಡ ಮನೆಗಳು, ಅಂಕು ಡೊಂಕಾದ ದಾರಿಗಳು, ಎಲ್ಲಿ ನೋಡಿದರೂ ಸಣ್ಣ ಸಣ್ಣ ಮನೆಗಳು, ಸೆಕ್ಸ್ ವರ್ಕರ್‌ಗಳು ಕಾಣ ಸಿಗುತ್ತಾರೆ. ಒಂದು ರೀತಿಯಲ್ಲಿ ಹೆಣ್ಣು ಮಕ್ಕಳ ಸಂತೇ ಏನೋ ಅನ್ನುವವರೆಗೆ ಇಲ್ಲಿ ರಶ್ ಆಗಿ ಇರುತ್ತದೆ ಅಂತೆ. ಈ ಏರಿಯಾದಲ್ಲಿ ಪ್ರತಿ ಗಂಟೆಗೆ 6-7 ಹೆಣ್ಣು ಮಕ್ಕಳು ಈ ರೀತಿಯ ಲೈಂಗಿಕ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ಈ ಏರಿಯಾದಲ್ಲಿ ಸುಮಾರು 16 ಸಾವಿರ ಸೆಕ್ಸ್ ವರ್ಕರ್ಸ್ ಇದ್ದಾರೆ ಅಂತೆ.

2. ಕಾಮಟಿಪುರ, ಮುಂಬೈ

ಮುಂಬೈನಲ್ಲಿರುವ ಕಾಮಟಿಪುರ ಏಷ್ಯಾದ ಅತ್ಯಂತ ಹಳೆಯ ರೆಡ್ ಲೈಟ್ ಏರಿಯಾಗಳಲ್ಲಿ ಒಂದಾಗಿದೆ. ಸಂಜೆ ಕಳೆದು ರಾತ್ರಿಯಾಗುತ್ತಿರುವಂತೆ ಸ್ಟ್ರೀಟ್‌ಲೈಟ್ ನ ಬೆಳಕಲ್ಲಿ ದೀಪದ ಹುಳುಗಳಂತೆ ಹಲವಾರು ಹೆಣ್ಣುಗಳು ಬಂದು ನಿಲ್ಲುತ್ತಾರೆ. ಗಿರಾಕಿಯನ್ನು ಸೆಳೆಯಲು ಏನ್ನಿಲ್ಲದ ಪ್ರಯತ್ನ ಮಾಡುತ್ತಿರುತ್ತಾರೆ. ಬಡತನದ ಕಾರಣಕ್ಕೆ ಈ ವೃತ್ತಿಗಿಳಿದವರು, ಅಕ್ರಮವಾಗಿ ಯಾರಿಂದಲೋ ಇಲ್ಲಿಗೆ ಸಾಗಿಸಲ್ಪಟ್ಟವರು ಹೀಗೆ ಇಲ್ಲಿರುವ ಒಬ್ಬೊಬ್ಬ ಹೆಣ್ಣುಮಗಳದ್ದು ಒಂದೊಂದು ಕಥೆ. ಸುಮಾರು 50 ಸಾವಿರಕ್ಕೂ ಅಧಿಕ ವೇಶ್ಯೆಯರು ಇಲ್ಲಿದ್ದಾರಂತೆ.

3. ಜಿಬಿ ರಸ್ತೆ, ದೆಹಲಿ

ದೆಹಲಿಯ ಗಾರ್ಸ್ಟಿನ್ ಬಾಸ್ಟನ್ ರಸ್ತೆ, ಜಿಬಿ ರಸ್ತೆ ಎಂದು ಜನಪ್ರಿಯವಾಗಿದೆ. ಇದು ರಾಜಧಾನಿಯ ಅತಿದೊಡ್ಡ ಕೆಂಪು-ದೀಪ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಸಣ್ಣದಿಂದ ಹಿಡಿದು ದೊಡ್ಡ ವ್ಯಾಪಾರಿಗಳು, ಅಂಗಡಿಯವರು, ಕಾರ್ಮಿಕರು, ಭಿಕ್ಷುಕರು ಮತ್ತು ಜೇಬುಗಳ್ಳರು ಎಲ್ಲಾ ತರಹದ ಜನಗಳು ಈ ಜಾಗದಲ್ಲಿ ಇದ್ದಾರೆ. ಇಲ್ಲಿನ ಪ್ರತಿಯೊಂದು ಕಟ್ಟಡಗಳಿಗೆ ಮೆಟ್ಟಿಲುಗಳಿದ್ದು ಈ ಮೆಟ್ಟಿಲುಗಳ ಮುಖೇನ ಹತ್ತುವಾಗ ಹೆಂಗಸರು ಬಾಗಿಲಲ್ಲಿ ನಿಂತು ತಮ್ಮೊಂದಿಗೆ ಸಂಭೋಗಿಸಲು ಪುರುಷರನ್ನು ಪ್ರೋತ್ಸಾಹಿಸುತ್ತಿರುತ್ತಾರೆ.
ಹೀಗೆ ಭಾರತದ ಪುಣೆಯ ಬುಧ್ವರ್ ಪೇಠ್, ಅಲಹಾಬಾದ್‌ನ ಮೀರ್‌ಗಂಜ್ ಪ್ರದೇಶಗಳಲ್ಲೂ ಇಂತಹ ರೆಡ್ ಲೈಟ್ ಏರಿಯಾಗಳು ಇದೆ.

Continue Reading

DAKSHINA KANNADA

ದೇವರಿಗೆ ಇಟ್ಟ ಹೂವುಗಳನ್ನು ಒಣಗಿದ ನಂತರ ಹೀಗೆ ಮಾಡಿ..!

Published

on

ಮಂಗಳೂರು: ಹೂವುಗಳ ಅಲಂಕಾರದಿಂದ ದೇವರ ಕೋಣೆ ಸುಂದರವಾಗಿ ಕಾಣಿಸುತ್ತದೆ. ಅಲ್ಲದೇ ದೇವರ ಪೂಜೆ ಪೂರ್ಣವೆನಿಸುತ್ತದೆ. ಹೂವುಗಳು ಮನೆಯ ಶಕ್ತಿಯನ್ನು ಬದಲಾಯಿಸುತ್ತದೆ. ಆದರೆ ಅದೇ ಹೂಗಳು ನಿಮ್ಮ ಮನೆಯಲ್ಲಿ ದೋಷಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತದೆ.

ಒಣಗಿದ ಹೂವುಗಳನ್ನು ನಿಮ್ಮ ಮನೆಯಲ್ಲಿ ಇರಿಸಿದರೆ ಅಥವಾ ಅದನ್ನು ತೆಗೆಯದೇ ಹಾಗೇ ಬಿಟ್ಟರೆ, ಅದು ನಿಮ್ಮ ಮನೆಯ ಶಕ್ತಿಯನ್ನು ಹಾಳು ಮಾಡುತ್ತದೆ. ಹಾಗಾಗಿ ಒಣಗಿದ ಅಥವಾ ಬಾಡಿದ ಹೂವುಗಳನ್ನು ಮನೆಯಲ್ಲಿ ಇಡಬಾರದು. ದೇವರಿಗೆ ಆಗಿರಬಹುದು ಅಥವಾ ಮನೆಯಲ್ಲೇ ಆಗಿರಬಹುದು ಯಾವಾಗಲೂ ಪರಿಮಳಯಕ್ತ ಹೂವುಗಳನ್ನು ಮಾತ್ರ ಇಟ್ಟುಕೊಳ್ಳಬೇಕು.

ತಾಜಾ ಹೂವುಗಳಿಗೆ ಅದ್ಭುತವಾದ ಧನಾತ್ಮಕ ಶಕ್ತಿಯನ್ನು ಸೃಷ್ಟಿಸುವ ಸಾಮರ್ಥ್ಯವಿರುತ್ತದೆ. ಅವುಗಳಿಂದ ಉತ್ಪತ್ತಿಯಾಗುವ ಶಕ್ತಿಯು ಧನಾತ್ಮಕವಾಗಿ ನಮ್ಮ ಸುತ್ತಮುತ್ತಲಿನ ಸ್ಥಳವನ್ನು ಬದಲಾಯಿಸುತ್ತದೆ. ತಾಜಾ ಹೂವುಗಳು ಇರುವಲ್ಲೆಲ್ಲಾ ತಮ್ಮ ಸುತ್ತಲಿನ ಜೀವಿಗಳನ್ನು ಸಕಾರಾತ್ಮಕವಾಗಿರಿಸುತ್ತದೆ. ಅದೇ ಹೂವುಗಳು ಒಣಗಲು ಪ್ರಾರಂಭವಾದಾಕ್ಷಣ ಅದರಿಂದ ನಕಾರಾತ್ಮಕ ಕಂಪನಗಳು ಹರಡಲು ಪ್ರಾರಂಭವಾಗುತ್ತದೆ.

ಪೂಜೆಯಲ್ಲಿ ಒಣಗಿದ ಹೂವುಗಳನ್ನು ಬಳಸುವುದರಿಂದ ಆ ಪೂಜೆಯಿಂದ ಯಾವುದೇ ರೀತಿಯ ಫಲವನ್ನು ನಮಗೆ ಅನುಭವಿಸಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ ಪೂಜೆಯು ಯಾವುದೇ ಶುಭ ಫಲವನ್ನು ಪಡೆಯುವುದಿಲ್ಲ. ಬದಲಾಗಿ ಅಶುಭ ಫಲಗಳನ್ನು ಅನುಭವಿಸುವಂತಾಗುತ್ತದೆ.

ಅದಕ್ಕಾಗಿಯೇ ಹೂವುಗಳನ್ನು ಒಣಗುತ್ತಿದ್ದಂತೆ ಅವುಗಳನ್ನು ತಕ್ಷಣವೇ ಅಲ್ಲಿಂದ ಬದಲಾಯಿಸಬೇಕು. ಒಂದು ವೇಳೆ ಒಣಗಿದ ಹೂವುಗಳು ಇದ್ದರೆ ಅದು ಆರೋಗ್ಯದ ಮೇಲೆಯೂ ಮತ್ತಷ್ಟು ಕೆಟ್ಟ ಪರಿಣಾಮ ಬೀರಬಹುದು.

Continue Reading

LATEST NEWS

Trending