Connect with us

DAKSHINA KANNADA

ಬಿಜೆಪಿ ನಾಯಕರ ಬ್ಯಾನರ್ ಗೆ ಚಪ್ಪಲಿ ಹಾರ-ಠಾಣೆಯಲ್ಲಿ ಕೂಡಿ ಹಾಕಿ ಬಿಜೆಪಿ ಕಾರ್ಯಕರ್ತರಿಗೆ ರಕ್ತ ಒಸರುವಷ್ಟು ಥಳಿತ, ಚಿತ್ರಹಿಂಸೆ..!?

Published

on

ಸಂಸದ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ವಿರುದ್ಧ ಅವಹೇಳನಕಾರಿ ಬ್ಯಾನರ್ ಅಳವಡಿಸಿ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ 9 ಮಂದಿ ಅರೋಪಿಗಳ ಮೇಲೆ ಪೊಲೀಸ್‌ ದೌರ್ಜನ್ಯ ನಡೆದಿದೆ.

ಪುತ್ತೂರು: ಸಂಸದ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ವಿರುದ್ಧ ಅವಹೇಳನಕಾರಿ ಬ್ಯಾನರ್ ಅಳವಡಿಸಿ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ 9 ಮಂದಿ ಅರೋಪಿಗಳ ಮೇಲೆ ಪೊಲೀಸ್‌ ದೌರ್ಜನ್ಯ ನಡೆದಿದೆ ಎಂದು ಬಿಂಬಿಸುವ ವೀಡಿಯೋವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದ್ದು, ಇದರ ಸತ್ಯಾಸತ್ಯತೆ ಅರಿಯಲು ವಿಚಾರಣೆ ನಡೆಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಪ್ರಕಟನೆ ತಿಳಿಸಿದೆ.

ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದು, ಇದಕ್ಕೆ ನಳಿನ್ ಕುಮಾರ್ ಕಟೀಲ್ ಮತ್ತು ಡಿ.ವಿ.ಸದಾನಂದ ಗೌಡ ಅವರೇ ಕಾರಣರು ಎಂಬಂತೆ ಬಿಂಬಿಸಿ ಅವಹೇಳನಕಾರಿ ಬ್ಯಾನರ್ನ್ ಅನ್ನು ಪುತ್ತೂರು ಬಸ್‌ ನಿಲ್ದಾಣದ ಬಳಿ ಪ್ರದರ್ಶಿಸಿ ಅದಕ್ಕೆ ಚಪ್ಪಲಿ ಹಾರ ಹಾಕಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರಸಭಾ ಆಯುಕ್ತ ಮಧು ಮನೋಹರ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೋಲೀಸರು ಒಂಭತ್ತು ಮಂದಿಯನ್ನು ವಶಕ್ಕೆ ಪಡೆದಿದ್ದರು.

ಈ ಆರೋಪಿಗಳನ್ನು ಒಂದು ದಿನ ಪೂರ್ತಿ ಠಾಣೆಯಲ್ಲಿ ಇರಿಸಿ ಪುತ್ತೂರು ಡಿವೈಎಸ್ಪಿ ನೇತೃತ್ವದಲ್ಲಿ ಥರ್ಡ್ ಡಿಗ್ರಿ ಟ್ರೀಟ್‌ ಮೆಂಟ್ ನೀಡಿ ಬಿಡುಗಡೆ ಮಾಡಲಾಗಿದೆ.

ಠಾಣೆಯಲ್ಲಿ ಆರೋಪಿಗಳ ಮೇಲೆ ಪೊಲೀಸ್‌ ದೌರ್ಜನ್ಯ ನಡೆದಿದ್ದು, ಇದರಿಂದ ಬೆನ್ನು, ಸೊಂಟದ ಹಿಂಭಾಗಕ್ಕೆ ಬಾಸುಂಡೆ ರೀತಿಯ ಗಾಯಗಳಾಗಿವೆ ಎಂಬಂತೆ ಜಾಲತಾಣದಲ್ಲಿ ಸಚಿತ್ರ ವರದಿಯನ್ನು ವೈರಲ್‌ ಮಾಡಲಾಗಿದೆ.

ಈ ಬಗ್ಗೆ ಸತ್ಯಾoಶ ತಿಳಿದುಕೊಳ್ಳಲು ವಿಚಾರಣೆ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಪ್ರಕಟನೆ ತಿಳಿಸಿದೆ.

DAKSHINA KANNADA

ಹೆಬ್ರಿ ಮಠದ ಬೆಟ್ಟು ಬಳಿ ಸಾರ್ವಜನಿಕರ ಪ್ರತಿಭಟನೆ-ಧರ್ಮಸ್ಥಳ ಕೊಲ್ಲೂರು ರಾಜ್ಯ ಹೆದ್ದಾರಿ ಬಂದ್

Published

on

ಹೆಬ್ರಿ : ಹೆಬ್ರಿ ತಾಲೂಕಿನ ಮಠದ ಬೆಟ್ಟು ಎಂಬಲ್ಲಿ ಹಾದು ಹೋಗುವ ಕೊಲ್ಲೂರು ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿರುವ ಹಿನ್ನಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ. ಅಗಲ ಕಿರಿದಾಗಿರುವ ಕೊಲ್ಲೂರು ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿದೆ.

ಇತ್ತೀಚಿನ ವರ್ಷದಲ್ಲಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ ಕಾರಣ ಪದೇ ಪದೇ ಅಪಘಾತಗಳೂ ಕೂಡಾ ಸಂಭವಿಸ್ತಾ ಇದೆ. ಕೆಲ ದಿನಗಳ ಹಿಂದೆಯೂ ಸ್ಥಳೀಯ ದ್ವಿಚಕ್ರವಾಹನಕ್ಕೆ ಪ್ರವಾಸಿ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಯುವಕನೊಬ್ಬ ಗಂಭೀರ ಗೊಂಡಿದ್ದ. ಹೀಗಾಗಿ ಅರಣ್ಯ ಇಲಾಖೆಯೇ ರಸ್ತೆ ಅಭಿವೃದ್ದಿಗೆ ಅಡ್ಡಿ ಪಡಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ರಸ್ತೆಯ ಇಕ್ಕೆಲೆಯಲ್ಲಿ ಇರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು, ಅರಣ್ಯ ಇಲಾಖೆ ರಸ್ತೆ ಅಗಲೀಕರಣಕ್ಕೆ ಮರ ಕಡಿಯಲು ಹಾಗೂ ಅರಣ್ಯ ಭೂಮಿ ನೀಡಲು ಒಪ್ಪಿಗೆ ನೀಡಿಲ್ಲ.

ಹೀಗಾಗಿ ಹಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಸ್ಥಳೀಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪೊಲೀಸರು ಪ್ರತಿಭಟನಾಕಾರರ ಮನ ಒಲಿಸುವ ಪ್ರಯತ್ನ ನಡೆಸಿದ್ದರಾದ್ರೂ ಪ್ರಯೋಜನವಾಗಿಲ್ಲ. ಹಿರಿಯ ಅರಣ್ಯ ಅಧಿಕಾರಿಗಳು ಬರುವ ತನಕ ರಸ್ತೆ ತೆರವು ಮಾಡೋದಿಲ್ಲ ಎಂದು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಲಾಗುತ್ತಿದೆ.

Continue Reading

DAKSHINA KANNADA

ಮಂಗಳೂರು: ಕಟ್ಟಡದಿಂದ ಬಿದ್ದು ಕರ್ತವ್ಯ ನಿರತ ಪೈಂಟರ್‌ ಸಾವು

Published

on

ಮಂಗಳೂರು : ಪೈಂಟ್ ಮಾಡುವ ವೇಳೆ ಕಟ್ಟಡವೊಂದರ ಎರಡನೇ ಮಹಡಿಯಿಂದ ಬಿದ್ದ ಯುವಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ. ಏಣಿಯನ್ನು ಬಳಸಿ ಪೈಂಟಿಂಗ್ ಮಾಡುತ್ತಿದ್ದ 26 ವರ್ಷ ಪ್ರಾಯದ ಮೋಹಿತ್ ಪೂಜಾರಿ ಮೃತ ದುರ್ದೈವಿ.

ಕುಡುಪು ಕೊಂಚಾಡಿ ನಿವಾಸಿಯಾಗಿದ್ದ ಮೋಹಿತ್ ಪೂಜಾರಿ ಶಕ್ತಿನಗರದ ಮನೆಯೊಂದರಲ್ಲಿ ಕಳೆದ 15 ದಿನಗಳಿಂದ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ದೀಪಕ್ ಎಂಬ ಇನ್ನೊಬ್ಬರ ಜತೆ ಮಹಡಿಯ ಹೊರಭಾಗದಲ್ಲಿ ಪೈಂಟಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಮೋಹಿತ್ ನಿಂತಿದ್ದ ಏಣಿ ಗೋಡೆಯಿಂದ ಜಾರಿದ್ದು, ಮೋಹಿತ್ ಮನೆಯ ಹೊರಭಾಗದ ರಸ್ತೆಗೆ ಎಸೆಯಲ್ಪಟ್ಟಿದ್ದರು. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆದಿತ್ತಾದ್ರೂ ಈ ವೇಳೆಗಾಗಲೇ ಮೋಹಿತ್ ಇಹಲೋಕ ತ್ಯಜಿಸಿದ್ದರು. ಈ ಕುರಿತು ಮೋಹಿತ್ ಪೈಂಟಿಂಗ್ ಮಾಡುತ್ತಿದ್ದ  ಶಕ್ತಿನಗರದ ಶಿವ ಡೆಕೊರೇಟರ್ಸ್‌ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Continue Reading

DAKSHINA KANNADA

ಅಯೋಧ್ಯಾ ರಾಮನಿಗೆ ವಿಶಿಷ್ಟ ದೀಪಸೇವೆ ಸಲ್ಲಿಸಿದ ಉದ್ಯಮಿ ನಾಗೇಂದ್ರ ಆಚಾರ್ಯ ದಂಪತಿ

Published

on

ಉಡುಪಿ ಪೇಜಾವರದ ನಾಗೇಂದ್ರ ಆಚಾರ್ಯ- ಅರುಣಾ ಆಚಾರ್ಯ ದಂಪತಿ ಅಯೋಧ್ಯಾ ರಾಮ ಲಲ್ಲಾನಿಗೆ ವಿಶಿಷ್ಟ ದೀಪಸೇವೆ ಸಲ್ಲಿಸಿದ್ದಾರೆ.

ಇವರು ಮೂಲತಃ ಉಡುಪಿಯವರಾಗಿದ್ದರೂ ಮುಂಬೈ ಉದ್ಯಮಿಯಾಗಿದ್ದಾರೆ.

ಎರಡು ಬೆಳ್ಳಿಯ ಎರಡು ಬೃಹತ್ ಕಾಲುದೀಪಗಳನ್ನು ಅಯೋಧ್ಯೆಗೆ ಅರ್ಪಿಸಿದ್ದು, ದಂಪತಿ ರಾಮ ಸೇವೆ ಮಾಡುವ ಸಂಕಲ್ಪವನ್ನು ಈಡೇರಿಸಿಕೊಂಡಿದ್ದಾರೆ. ಈ ದೀಪಗಳು ತಲಾ ಮೂರೂವರೆ ಅಡಿ ಎತ್ತರವಿದ್ದು, ತಲಾ 13.5 ಕೆ.ಜಿ.ತೂಕವಿವೆ.

Continue Reading

LATEST NEWS

Trending