Connect with us

LATEST NEWS

ನವದೆಹಲಿ: 6 ರಾಜ್ಯಗಳ 100ಕ್ಕೂ ಅಧಿಕ ಕಡೆ ಏಕಾಏಕಿ ಎನ್‌ಐಎ ದಾಳಿ

Published

on

ಭಯೋತ್ಪಾದಕರು ಮಾದಕ ವಸ್ತು ಕಳ್ಳಸಾಗಣೆದಾರರು ಮತ್ತು ದರೋಡೆಕೋರರ ಜೊತೆಗಿನ ನಂಟು ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ ಮತ್ತು ಮಧ್ಯ ಪ್ರದೇಶ ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ.

ನವದೆಹಲಿ: ಭಯೋತ್ಪಾದಕರು ಮಾದಕ ವಸ್ತು ಕಳ್ಳಸಾಗಣೆದಾರರು ಮತ್ತು ದರೋಡೆಕೋರರ ಜೊತೆಗಿನ ನಂಟು ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ ಮತ್ತು ಮಧ್ಯ ಪ್ರದೇಶ ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ.

ಭಯೋತ್ಪಾದನೆ ಕೃತ್ಯಗಳಿಗೆ ಹಣಕಾಸು ಸಹಾಯ ಮಾಡಿದ ಪ್ರಕರಣಗಳ ತನಿಖೆಯ ಭಾಗವಾಗಿ ಪಂಜಾಬ್‌ನ ಮೋಗಾ ಮತ್ತು ಬಟಿಂಡಾದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹರಿಯಾಣದ ಹಲವೆಡೆ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಲಾಗಿದೆ. ಪಂಜಾಬ್​ ಗಡಿ ಜಿಲ್ಲೆಯ ಮೂರು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದು ದಾಖಲೆಗಳನ್ನು ಶೋಧಿಸುತ್ತಿದೆ.

ಮುಡ್ಕಿ, ತಲವಂಡಿ ಮತ್ತು ಫಿರೋಜ್‌ಪುರದಲ್ಲಿ ಮೂವರ ಮನೆಗಳ ಮೇಲೆ ಎನ್‌ಐಎ ತಂಡ ದಾಳಿ ನಡೆಸಿದೆ.

ಎನ್‌ಐಎ ಅಧಿಕಾರಿಗಳು ಬಟಿಂಡಾದಲ್ಲಿಯೂ ಪರಿಶೀಲನೆ ನಡೆಸಿದ್ದು ಮನೆಗಳ ಒಳಗೆ ಮತ್ತು ಹೊರ ಹೋಗಲು ಯಾರಿಗೂ ಅವಕಾಶ ನೀಡುತ್ತಿಲ್ಲ.

ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವವರ ಮನೆಗಳ ಎನ್‌ಐಎ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಉಗ್ರರಿಗೆ ಹಣಕಾಸು ಸಹಾಯ ಮಾಡಿದ ಪ್ರಕರಣಗಳ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್‌ನ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತ್ತು.

ಪಾಕಿಸ್ತಾನಿ ಕಮಾಂಡರ್‌ಗಳು ಅಥವಾ ಹ್ಯಾಂಡ್ಲರ್‌ಗಳ ಆದೇಶದ ಮೇರೆಗೆ ವಿವಿಧ ನಕಲಿ ಹೆಸರುಗಳ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಒದಗಿಸಿದ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆ ಇದಾಗಿತ್ತು.

ಮೇ 9ನೇ ತಾರೀಖಿನಂದು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಪಿತೂರಿ ಕೇಸ್​ಗೆ ಸಂಬಂಧಿಸಿದಂತೆ ಜಮ್ಮುಕಾಶ್ಮೀರದ ಏಳು ಜಿಲ್ಲೆಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಶೋಧ ಕಾರ್ಯ ನಡೆಸಿತ್ತು.

ಜಮ್ಮುವಿನ ಅನಂತ್ ನಾಗ್ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಶೋಪಿಯಾನ್ ಜಿಲ್ಲೆಯ ಮೂರು ಕಡೆಗಳಲ್ಲಿ ಬುದ್ಗಾಮ್ ಶ್ರೀನಗರ ಮತ್ತು ಪೂಂಚ್ ಜಿಲ್ಲೆಗಳ ತಲಾ ಎರಡು ಕಡೆ ಹಾಗೂ ಬಾರಾಮುಲ್ಲಾ ರಜೌರಿ ಜಿಲ್ಲೆಗಳ ತಲಾ ಒಂದು ಕಡೆಗಳಲ್ಲಿ ಎನ್​ಐಎ ಶೋಧ ನಡೆಸಿತ್ತು.

Click to comment

Leave a Reply

Your email address will not be published. Required fields are marked *

bangalore

ಈ ಬಾರಿ ಬಿಗ್ ಬಾಸ್ ಗೆಲ್ಲೋದು ನಾನೆ…ಎಂದು ಪಟ್ಟು ಹಿಡಿದ ಸ್ಪರ್ಧಿ ಯಾರು ಗೊತ್ತಾ..?

Published

on

Bigboss: ಬಿಗ್ ಬಾಸ್ ಮುಕ್ತಾಯಕ್ಕೆ ಇನ್ನು ಅರ್ಧ ಜರ್ನಿ ಬಾಕಿ ಇದೆ. ಆದರೆ ಇದೀಗ ಬಿಗ್ ಬಾಸ್ ಸ್ಪರ್ಧಿಗಳ ಫೈಟ್ ಜೋರಾಗಿದ್ದು, ಈ ಬಾರಿ ಬಿಗ್ ಬಾಸ್ ಗೆಲ್ಲೋದು ನಾವೇ ಎಂದು ಪಟ್ಟು ಹಿಡಿದ ಸ್ಫರ್ಧಿಗಳು ಗೆಲ್ಲುತ್ತಾರೋ ಅನ್ನೋದು ಕಾದು ನೋಡಬೇಕಿದೆ.

ಈ ವಾರ ದೊಡ್ಮನೆಯಲ್ಲಿ ವಿನಯ್ ಆರ್ಭಟ ಜೋರಾಗಿತ್ತು. ಜೊತೆಗೆ ಟೀಮ್ ನಲ್ಲಿ ಕಿತ್ತಾಟ ನಡೆದರೂ ವಿನಯ್ ಮಾತ್ರ ತಲೆಕೆಡಿಸದೆ ಈ ಬಾರಿ ಬಿಗ್ ಬಾಸ್ ಟೈಟಲ್ ನಾನೇ ಗೆಲ್ಲೋದು ಎಂದು ಹೇಳಿಕೊಂಡಿದ್ದಾರೆ.


ಈಗಾಗಲೇ ಬಿಗ್ ಬಾಸ್ ಜರ್ನಿ ಅರ್ಧ ಮುಗಿದಿದ್ದು, ಇನ್ನು ಅರ್ಧ ಬಾಕಿ ಇದೆ. ಹಾಗಾಗಿ ಇದರಲ್ಲಿ ಯಾರು ಗೆಲ್ಲೋತ್ತಾರೋ ಅನ್ನೊ ಪ್ರಶ್ನೆ ಮತ್ತೇ ಕಾಡಿದೆ. ವಾರದಿಂದ ವಾರಕ್ಕೆ ಎಲಿಮಿನೇಟ್ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಿದ್ದರೆ. ಇತ್ತ ವಿನಯ್ ಯಾರನ್ನೂ ಲೆಕ್ಕಿಸದೇ ತಾವೇ ಈ ಬಾರಿ ಫಿನಾಲೆ ಮೆಟ್ಟಿಲೇರಬೇಕು ಎಂದಾಗ ಸ್ನೇಹಿತ್ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಹಾಗಗಿ ವಿನಯ್ ಗೆ ಮತ್ತಷ್ಟು ಧೈರ್ಯ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ನಮ್ರತಾ, ಸ್ನೇಹಿತ್ ಮತ್ತು ವಿನಯ್ ಅವರದ್ದು ಒಂದು ಗುಂಪು. ಈ ಮೂವರು ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಆಟವಾಡುತ್ತಾ ಬಂದಿದ್ದಾರೆ. ಆದರೆ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ವಿನಯ್ ವಿರುದ್ಧ ನಮ್ರತಾ ಮತ ಚಲಾಯಿಸಿದ್ದಾರೆ. ಹಾಗಾಗಿ ನಮ್ರತಾ ಇವರ ಗುಂಪಿನಿಂದ ಹೊರ ನಡೆದಿದ್ದಾರೆ.


ಆ ಬಳಿಕ ವಿನಯ್ ಹಾಗೂ ಸ್ನೇಹಿತ್ ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿಕೊಂಡಿದ್ದಾರೆ. ಈ ಬಾರಿ ಫಿನಾಲೆ ವೇದಿಕೆಯ ಮೇಲೆ ನಾವೇ ಇರಬೇಕು ಅಂತಾರೆ ಸ್ನೇಹಿತ್. ನಾವೇ ಇರಬೇಕು. ಆದರೆ, ನಾನೇ ವಿನ್ ಆಗಬೇಕು ಎಂದು ವಿನಯ್ ನುಡಿಯುತ್ತಾರೆ. ಅದಕ್ಕೆ ಸ್ನೇಹಿತ್ ಖುಷಿಯಿಂದಲೇ, ನಿಜಕ್ಕೂ ಇದಕ್ಕಿಂತ ಸಂತೋಷ ಏನಿದೆ ಎನ್ನುತ್ತಾರೆ.

ಈ ಮಾತು ಕೇಳಿಸಿಕೊಂಡ ಬಿಗ್ ಬಾಸ್ ನೋಡುಗರು, ನಮ್ರತಾಗಿಂತಾನೂ ಸ್ನೇಹಿತ್ ಸಖತ್ ಚಮಚಾ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ವಿನಯ್ ನ ಕನಸು ಈಡೇರುತ್ತಾ..? ಅವರೇ ಬಿಗ ಬಾಸ್ ವಿನ್ನರ್ ಆಗುತ್ತಾರ ಎಂದು ಕಾದು ನೋಡಬೇಕಿದೆ.

Continue Reading

LATEST NEWS

ಪ್ರಧಾನಿ ಮೋದಿ ಜೊತೆ ಸೆಲ್ಫೀ ಕ್ಲಿಕ್ಕಿಸಿದ ಇಟಲಿಯ ಲೇಡಿ ಪಿಎಂ

Published

on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಕ್ಲಿಕ್ಕಿಸಿಕೊಂಡ ಸೆಲ್ಫಿ ಪೊಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಸಿಓಪಿ 28 ಶೃಂಗಸಭೆಯ ನಿಮಿತ್ತ ದುಬೈಗೆ ತೆರಳಿದ್ದ ಪ್ರಧಾನಿ ನರೇಂದ ಮೋದಿ ಅವರ ಜೊತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮಾತುಕತೆ ನಡೆಸಿ ಸೆಲ್ಫೀ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮೋದಿ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವ ಮೆಲೋನಿ ಅವರು, ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ “ಗುಡ್ ಫ್ರೆಂಡ್ಸ್ ಎಟ್ ಸಿಓಪಿ28 #ಮೆಲೋಡಿ” ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಪೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೆಲೋನಿ ಕಳೆದ ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಶೃಂಗಸಭೆ ವೇಳೆ ಮೋದಿಯವರ ಜೊತೆ ಇಟೆಲಿ ಪ್ರಧಾನಿ ನಿಯೋಗದಿಂದ ಮಾತುಕತೆ ನಡೆದಿತ್ತು. ದುಬೈಗೆ ತೆರಳಿದ್ದ ಮೋದಿಯವರು ಸಿಓಪಿ 28 ಶೃಂಗಸಭೆಯಾಗಿ ಇಂದು ದೆಹಲಿಗೆ ಮರಳಿದ್ದಾರೆ. ದುಬೈ ಭೇಟಿ ಸಂದರ್ಭದಲ್ಲಿ ಮೋದಿಯವರು, ವಿವಿಧ ರಾಷ್ಟ್ರಗಳ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿದ್ದಾರೆ.

 

ಮೋದಿಯವರು ಮೆಲೋನಿ ಅವರಲ್ಲದೆ, ಪ್ರಧಾನಿ ಮೋದಿ ಅವರು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಬ್ರೆಜಿಲ್ ಪ್ರಧಾನಿ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಬ್ರಿಟಿಷ್ ವಿದೇಶಾಂಗ ಸಚಿವ ಡೇವಿಡ್ ಕ್ಯಾಮರೂನ್, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರನ್ನು ಭೇಟಿಯಾದರು.

Continue Reading

FILM

ರಶ್ಮಿಕಾ ಮಂದಣ್ಣ ಪರಭಾಷೆ ನಟರಿಗೆ ಲಕ್ಕಿ ಚಾರ್ಮ್

Published

on

Rashmika mandanna : ಕನ್ನಡ ಬೆಡಗಿ ರಶ್ಮಿಕಾ ಮಂದಣ್ಣ ಅಂದ್ರೆ ಕೆಲವರಿಗೆ ಇಷ್ಟ, ಇನ್ನೂ ಕೆಲವರಿಗೆ ಅಷ್ಟಕಷ್ಟೆ.ಆದ್ರೆ ಬೇರೆ ಭಾಷೆಯ ನಟರಿಗೆ ರಶ್ಮಿಕಾ ಅಂದ್ರೆ ತುಂಬಾನೆ ಇಷ್ಟ ಅಂತೆ.
ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ರಶ್ಮಿಕಾ ಸದ್ಯ ಬೇಡಿಕೆಯ ನಟಿ.ಸೌತ್ ಟು ನಾರ್ತ್ ರಶ್ಮಿಕಾ ಅವರಿಗೆ ಸಿನಿಮಾರಂಗದಲ್ಲಿ ಭಾರೀ ಬೇಡಿಕೆ ಇದೆ.


ರಶ್ಮಿಕಾ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಬ್ಲಾಕ್​ ಬಸ್ಟರ್ ಹಿಟ್. ಕನ್ನಡದಲ್ಲಿ ಆ ಬಳಿಕ ಮಾಡಿದ ಚಮಕ್, ಅಂಜನಿಪುತ್ರ, ಪೊಗರು ಸಿನೆಮಾ ಬ್ಲಾಕ್ ಬಸ್ಟರ್ ಚಿತ್ರಗಳು ಎನಿಸಿಕೊಂಡಿವೆ.
ತಮಿಳು, ತೆಲುಗು ಬಾಷೆಯಲ್ಲಿ ಸತತ ಫ್ಲಾಪ್ ಕೊಡುತ್ತಿದ್ದ ಸ್ಟಾರ್ ಹೀರೋಗಳ ಜೊತೆ ಒಂದೊಂದು ಸಿನಿಮಾ ಮಾಡಿ ಅವರಿಗೆ ಬಿಗ್ ಸಕ್ಸಸ್ ಕೊಟ್ಟಿದ್ದಾರೆ.

ವಿಜಯ್, ಅಲ್ಲು ಅರ್ಜುನ್, ರಣಬೀರ್ ಕಪೂರ್​ನಂತ ಸ್ಟಾರ್ ಹೀರೋಗಳು ಸತತವಾಗಿ ಎವರೇಜ್ ಮಟ್ಟದಲ್ಲಿ ಸಿನಿಮಾ ಮಾಡುತ್ತಿದ್ದರು.ಆದ್ರೆ ರಶ್ಮಿಕಾ ಅವರ ಜೊತೆ ನಟಿಸಿ ಅವರಿಗೆ ಗೆಲುವು ತಂದುಕೊಟ್ಟಿದ್ದಾರೆ.

Continue Reading

LATEST NEWS

Trending